Shrirasthu Shubhamasthu:ಸಮರ್ಥ್ ಬಿಡಿಸಲು ಹೇಳಿಕೆ ಕೊಟ್ಟ ಸಿರಿ.. ಪರಿಗಣಿಸುತ್ತಾ ಕೋರ್ಟ್?

By ಪ್ರಿಯಾ ದೊರೆ

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ನಿಧಿ ಮಾಡಿದ ತಪ್ಪನ್ನು ತನ್ನ ಮೇಲೆ ಹಾಕಿಕೊಂಡಿರುವ ಸಮರ್ಥ್‌ನನ್ನು ಜೈಲಿನಿಂದ ಬಿಡಿಸಬೇಕು ಎಂದು ಅಭಿ, ಅವಿ ಒದ್ದಾಡುತ್ತಿದ್ದಾರೆ.

ಸಮರ್ಥ್, ದತ್ತ ತಾತ ಮತ್ತು ತುಳಸಿ ಸತ್ಯವನ್ನು ಮುಚ್ಚಿಡಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಆದರೆ, ಸಿರಿ ತನ್ನ ಗಂಡನ ಮೇಲಿರುವ ಆರೋಪವನ್ನು ಸುಳ್ಳು ಎಂದು ನಿರೂಪಿಸಲು ಮುಂದಾಗಿದ್ದಾಳೆ.

Shrirasthu Shubhamasthu serial February 5th episode Siri argument in court

ಜುಗ್ಗ ಜಗನ್ನಾಥನಿಗೆ ಈಗ ನಡೆದಿರುವ ಆಕ್ಸಿಡೆಂಟ್, ಅದರ ಆರೋಪ ಹೊತ್ತಿರುವ ಸಮರ್ಥ್ ಬಗ್ಗೆ ಅನುಮಾನಗಳು ಕಾಡುತ್ತಿದ್ದು, ಬಗೆಹರಿಸಿಕೊಳ್ಳಲಾಗದೇ ಒದ್ದಾಟದಲ್ಲಿದ್ದಾನೆ.

ಸತ್ಯ ಮುಚ್ಚಿ ಹಾಕಲು ಶಾರ್ವರಿ ಪ್ರಯತ್ನ

ನಿಧಿ ಮಾಡಿರುವ ಅಪರಾಧವನ್ನು ಸಮರ್ಥ್ ತನ್ನ ತಲೆ ಮೇಲೆ ಹೊರಿಸಿಕೊಂಡಿದ್ದನ್ನು ಅರಿತ ಶಾರ್ವರಿ ಈಗ ಆ ಸತ್ಯವನ್ನು ಕಂಪ್ಲೀಟ್ ಆಗಿ ಮುಚ್ಚಿ ಹಾಕಲು ಮುಂದಾಗಿದ್ದಾಳೆ. ಸಮರ್ಥ್ ಪರ ವಾದ ಮಾಡಲು ನೇಮಿಸಿರುವ ಲಾಯರ್‌ಗೆ ಹಣ ಕೊಟ್ಟ ಶಾರ್ವರಿ ತೀರ್ಪು ಸಮರ್ಥ್ ವಿರುದ್ಧ ಬರುವಂತೆ ಮಾಡಿದ್ದಾಳೆ. ಏನೇ ಆಗಲಿ ಸಮರ್ಥ್ ಜೈಲಿಗೆ ಹೋಗಲೇಬೇಕು. ಇಲ್ಲದೇ ಹೋದರೆ ತನ್ನ ಮಗಳು ಸಿಕ್ಕಿ ಬೀಳುವುದಂತೂ ಪಕ್ಕಾ ಎಂಬ ವಿಚಾರ ಶಾರ್ವರಿಗೆ ಗೊತ್ತಿದೆ. ಕೋರ್ಟ್‌ನಲ್ಲಿ ಸಮರ್ಥ್ ವಿಚಾರಣೆ ಇದ್ದು, ಅಲ್ಲಿ ಏನಾಗಬಹುದು ಎಂಬ ಆತಂಕ ಮತ್ತು ತಳಮಳದಲ್ಲಿ ಶಾರ್ವರಿ ಇದ್ದಾಳೆ.

ನಿಧಿಯ ಒದ್ದಾಟ ಕಂಡು ಅನುಮಾನ

ತಾನು ಮಾಡಿದ ತಪ್ಪಿನಿಂದ ಒಂದು ಜೀವವೇ ಹೋಗಿದ್ದು, ಸಮರ್ಥ್ ಕೂಡ ತನಗಾಗಿ ಜೈಲು ಸೇರುವಂತಾಗಿದೆ. ಇದು ನಿಜಕ್ಕೂ ನ್ಯಾಯವಲ್ಲ. ತಾನೇ ಜೈಲಿಗೆ ಹೋಗಬೇಕು ಎಂದು ನಿಧಿ ಕೊರಗುತ್ತಿದ್ದಾಳೆ. ಪೂರ್ಣಿಮಾ ಮತ್ತು ದೀಪಿಕಾ ನಿಧಿಗೆ ಸಾಕಷ್ಟು ಸಮಾಧಾನ ಮಾಡಿದ್ದು, ಸತ್ಯ ಗೊತ್ತಿಲ್ಲದ ಕಾರಣ ಈಗ ದೀಪಿಕಾಳಿಗೆ ನಿಧಿಯ ನಡವಳಿಕೆಯಲ್ಲಿ ಅನುಮಾನ ಮೂಡಿದೆ. ಈ ಬಗ್ಗೆ ಶಾರ್ವರಿ ಬಳಿ ವಿಚಾರಿಸಲು ಮುಂದಾಗಿದ್ದು, ಶಾರ್ವರಿಯೂ ಒದ್ದಾಡುತ್ತಿರುವುದನ್ನು ಕಂಡು ಇಲ್ಲೇನೋ ಸಮಸ್ಯೆ ಆಗಿರಬೇಕು ಎಂದು ಅನುಮಾನಗೊಂಡಿದ್ದಾಳೆ. ಹಾಗೊಂದು ವೇಳೆ, ದೀಪಿಕಾಳಿಗೆ ನಿಜ ಗೊತ್ತಾದರೆ ಏನಾಗಬಹುದು ಎಂಬ ಕುತೂಹಲ ಮೂಡಿದೆ.

Shrirasthu Shubhamasthu serial February 5th episode Siri argument in court

ಕೋರ್ಟ್‌ಗೆ ಹಾಜರಾದ ಸಮರ್ಥ್

ಸಮರ್ಥ್ ಕೋರ್ಟ್‌ಗೆ ಹಾಜರಾಗಿದ್ದು, ಸಿರಿ, ಅಭಿ, ಅವಿ, ಮಾಧವ್, ದತ್ತ ತಾತ, ತುಳಸಿ, ಸಂಧ್ಯಾ ಎಲ್ಲರೂ ಕೋರ್ಟ್‌ಗೆ ಆಗಮಿಸಿದ್ದಾರೆ. ಸಿರಿ ಎಲ್ಲರ ಬಳಿಯೂ ಸತ್ಯ ಹೇಳುವಂತೆ ಕೇಳಿಕೊಂಡಿದ್ದಾಳೆ. ಕೋರ್ಟ್‌ನಲ್ಲಿ ವಾದ ಶುರುವಾದಾಗ ಸಮರ್ಥ್ ತಾನೇ ಅಪಘಾತ ಮಾಡಿದ್ದು ಎಂದು ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆದರೆ, ಸಿರಿ ಅದು ಸುಳ್ಳು ಎಂದು ವಾದಿಸಿದ್ದಾಳೆ. ಅಭಿ, ಅವಿ ಹಾಗೂ ಮಾಧವ್ ಆಕ್ಸಿಡೆಂಟ್ ಆದ ಸಮಯದಲ್ಲಿ ಸಮರ್ಥ್ ತಮ್ಮ ಮನೆಯಲ್ಲೇ ಇದ್ದ ಎಂದು ಸತ್ಯ ಹೇಳಿದ್ದಾರೆ.

ಸತ್ಯಕ್ಕೆ ಬೆಲೆ ಸಿಗುತ್ತಾ?

ಆದರೆ, ತುಳಸಿ ಮತ್ತು ದತ್ತ ತಾತ ಇಬ್ಬರೂ ಸಮರ್ಥ್ ಹೇಳಿದ್ದೇ ಸತ್ಯ ಇರಬಹುದು ಎಂದಿದ್ದು, ಸಿರಿ ಆ ಸಮಯದಲ್ಲಿ ಸಮರ್ಥ್ ಮನೆಯಲ್ಲೇ ಇದ್ದ ಎಂದು ವಾದ ಮಾಡಿದ್ದಾಳೆ. ಅದಕ್ಕೆ ಕೆಲವೊಂದು ಸಾಕ್ಷಿಗಳನ್ನು ನೀಡಿದ್ದಾಳೆ. ಸಮರ್ಥ್ ಸುಳ್ಳು ಹೇಳಿದ್ದು ಕೋರ್ಟ್‌ಗೆ ಗೊತ್ತಾಗುತ್ತಾ..? ನಿಧಿಯೇ ಅಪರಾಧಿ ಎಂದು ಗಮನಿಸಿ ಅವಳಿಗೆ ಶಿಕ್ಷೆ ನೀಡುತ್ತಾ? ಸಿರಿಯ ಹೋರಾಟಕ್ಕೆ ಬೆಲೆ ಸಿಗುತ್ತಾ..? ಇಲ್ಲವೇ ಶಾರ್ವರಿ ತನ್ನ ಮಗಳನ್ನು ರಕ್ಷಿಸಿಕೊಳ್ಳುತ್ತಾಳಾ..? ಹಾಗೇನಾದರೂ ಸತ್ಯ ತಿಳಿದರೆ ಕಥೆ ಯಾವ ರೀತಿಯಲ್ಲಿ ಮುಂದೆ ಸಾಗಬಹುದು ಎಂಬ ಕುತೂಹಲ ಮೂಡಿದೆ.

More from Filmibeat

English summary
Shrirasthu Shubhamasthu serial February 5th episode Siri argument in court;
Read more about: tv serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X