Shrirasthu Shubhamasthu:ಪೂರ್ಣಿಮಾಳನ್ನು ಮಣಿಸಲು ದೀಪಿಕಾ ಕುತಂತ್ರ; ಬುದ್ದಿ ಹೇಳಿದ್ರೂ ಡೊಂಟ್ ಕೇರ್

By ಪೂರ್ವ

ಪೂರ್ಣಿಮಾಗೆ ದೀಪಿಕಾ ಎಂದರೆ ಬಹಳ ಪ್ರೀತಿ. ಹಾಗೆಯೇ ದೀಪಿಕಾಗೆ ಪೂರ್ಣಿಮಾ ಕಂಡರೆ ಆಗುವುದೇ ಇಲ್ಲ. ಯಾವಾಗ ನೋಡಿದರೂ ಪೂರ್ಣಿಮಾಳನ್ನು ಅನಾಥೆ ಎಂದೇ ನಿಂದನೆ ಮಾಡುತ್ತಿರುತ್ತಾರೆ. ಆದರೂ, ಪೂರ್ಣಿಮಾ ತಾನು ಆಯ್ತು, ತನ್ನ ಕೆಲಸ ಆಯ್ತು ಅಂದುಕೊಂಡಿರುತ್ತಾರೆ. ಈ ಸಂಚಿಕೆಯಲ್ಲಿ ದೀಪಿಕಾ ಹಾಲು ತೆಗೆದುಕೊಳ್ಳಬೇಕು ಎನ್ನುವ ಉದ್ದೇಶದಿಂದ ಅಡುಗೆ ಮನೆಗೆ ಹೋಗುತ್ತಾಳೆ. ಆದರೆ, ಆಕೆಯ ಉದ್ದೇಶವೇ ಬೇರೆ ಆಗಿರುತ್ತೆ.

ಇನ್ನೂ ಪೂರ್ಣಿಮಾ ಬಳಿಗೆ ಬಂದ ದೀಪಿಕಾ "ನಿನಗೆ ಅಪ್ಪ ಇಲ್ಲ ಅಮ್ಮ ಇಲ್ಲ. ಹೊಟ್ಟೆಯಲ್ಲಿ ಒಂದು ಮಗು ಕೂಡ ಇಲ್ಲ. ಹಿಂದೆ ಮುಂದೆ ಯಾರೂ ಇಲ್ಲ. ನಿನಗೆ ನೀನು ಹೇಗೆ ಈ ಮನೆಯನ್ನು ನೊಡಿಕೊಳ್ಳುತ್ತಿಯಾ? ಹಾಗೆಯೇ ನನಗೆ ಈ ಮನೆಯನ್ನು ನೋಡಿಕೋ ಎಂದು ಯಾವ ದೃಷ್ಟಿಯಿಂದ ಹೇಳುತ್ತಿದ್ದಿಯಾ?" ಎಂದು ಕೇಳುತ್ತಾಳೆ. ದೀಪಿಕಾ ಮಾತನ್ನು ಕೇಳಿದ ಬಳಿಕ ಪೂರ್ಣಿಮಾ ಕೋಪಿಸಿಕೊಳ್ಳದೆ ಹೀಗೆ ಹೇಳುತ್ತಾಳೆ.

Shrirasthu Shubhamasthu serial july 15th episode update

"ನಮ್ಮ ಜವಾಬ್ದಾರಿ ಇದೆಲ್ಲ. ನಾನು ಅನಾಥೆ ಆದರೆ ನನಗೆ ಈ ಮನೆಯಲ್ಲಿ ಅನಾಥೆ ಎನ್ನುವ ಫೀಲಿಂಗ್ ಬಂದಿಲ್ಲ. ಯಾಕೆ ಎಂದರೆ, ನಾನು ಅಷ್ಟು ಚೆನ್ನಾಗಿ ಇಲ್ಲಿ ಜೀವನ ನಡೆಸುತ್ತಿದ್ದೇನೆ. ಹಾಗೆಯೇ ನನ್ನನ್ನು ಪ್ರೀತಿ ಮಾಡುವ ಅತ್ತೆ, ಮಾವ ಹಾಗೆಯೇ ನನ್ನ ಗಂಡ ಇದರಿಂದಾಗಿ ಅನಾಥ ಪ್ರಜ್ಞೆ ಬಂದಿಲ್ಲ" ಎಂದು ನಯವಾಗಿ ಹೇಳುತ್ತಾಳೆ. ಆದರೂ ದೀಪಿಕಾ ತೀಕ್ಷ್ಣವಾಗಿ ಪೂರ್ಣಿಮಾಳನ್ನು ಕುಟುಕಲು ಹೋದಳು. ಆದರೆ, ಪೂರ್ಣಿಮಾ ಮಾತ್ರ ಆಕೆಯ ಮಾತನ್ನು ಅಷ್ಟು ಸೀರಿಯಸ್ ಆಗಿ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ.

ಬೇಸರ ಮಾಡಿಕೊಳ್ಳದ ಪೂರ್ಣಿಮಾ

ನನಗೆ ನನ್ನ ಗಂಡನೇ ಎಲ್ಲಾ ನನ್ನ ಮಗನ ಸ್ಥಾನವನ್ನು ಅಭಿಗೆ ನೀಡಿದ್ದೇನೆ. ಮಕ್ಕಳು ಅನಾಥ ಆಗುವುದು ಅವರ ತಪ್ಪಲ್ಲ. ಅದು ಅವರ ತಂದೆ ತಾಯಿಯರ ತಪ್ಪು. ತಂದೆ ತಾಯಿ ಮಾಡಿದ ತಪ್ಪಿಗೆ ಮಕ್ಕಳು ಬಲಿ ಆಗಬೇಕಾಗುತ್ತದೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ದೀಪಿಕಾ ಮಾತ್ರ ಸುಮ್ಮನೆ ಇರದೆ ಇನ್ನಷ್ಟು ಸೊಪ್ಪು ಹಾಕುತ್ತಲೇ ಇರುತ್ತಾಳೆ.

Shrirasthu Shubhamasthu serial july 15th episode update

ದೀಪಿಕಾ ಕಿತಾಪತಿಗೆ ಬೇಸರಗೊಂಡ ಪೂರ್ಣಿಮಾ

ಇನ್ನೂ ದೀಪಿಕಾಗೆ ಬಹಳ ಪ್ರೀತಿಯಿಂದ ಹಾಲು ಕೊಡುತ್ತಾಳೆ ಪೂರ್ಣಿಮಾ. ಆದರೆ, ಆ ಹಾಲಿಗೆ ನಿಂಬೆ ಹಣ್ಣನ್ನು ಕುಯ್ದು ಅದರ ರಸವನ್ನು ಹಿಂಡಿ ಬಿಡುತ್ತಾಳೆ. ಇದನ್ನು ನೋಡಿದ ಪೂರ್ಣಿಮಾಗೆ ಬೇಸರ ಆಗುತ್ತದೆ ಹಾಗೆಯೇ ಆಕೆ ಹೇಳುತ್ತಾಳೆ. ಸುಂದರವಾಗಿರುವ ನಿನ್ನ ಸಂಸಾರವನ್ನು ನೀನು ಹಾಳು ಮಾಡಿಕೊಳ್ಳಬೇಡ. ದಯವಿಟ್ಟು ಎಂದು ಬೇಡಿಕೊಳ್ಳುತ್ತಾಳೆ. ಇದನ್ನು ಕೇಳಿದ ದೀಪಿಕಾಗೆ ಏನೂ ಅನ್ನಿಸುವುದೇ ಇಲ್ಲ.

ಹಳ್ಳಿಯಲ್ಲಿ ಮಾಧವ,ತುಳಸಿ

ಇನ್ನೂ ಮಾಧವ ಹಾಗೂ ತುಳಸಿ ಹಳ್ಳಿಯಲ್ಲಿ ದಿನ ಕಳೆಯುತ್ತಿದ್ದಾರೆ. ಅವರನ್ನು ಸಾಯಿಸಲು ಕಳುಹಿಸಿದ್ದ ಶಾರ್ವರಿಯ ಗೂಂಡಾಗಳು ಮಾತ್ರ ವಾಪಸ್ಸಾಗಿದ್ದಾರೆ. ಇನ್ನೂ ತುಳಸಿಗೆ ಹಳ್ಳಿಯ ಜೀವನ ನಡೆಸಬೇಕು ಎನ್ನುವ ಆಸೆ ಇರುತ್ತದೆ. ಆ ಪ್ರಕಾರವಾಗಿ ಮಾಧವ, ತುಳಸಿಯ ಆಸೆಯನ್ನು ಈಡೇರಿಸಿದ್ದಾರೆ.

More from Filmibeat

English summary
Shrirasthu Shubhamasthu serial july 15th episode update:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X