Shrirasthu Shubhamasthu:ಅಮ್ಮನನ್ನು ನೋಡಲು ಕೆಲಸ ಬಿಟ್ಟ ಸಮರ್ಥ್; ಅವಿ ಹಾಕಿದ ಕಂಡಿಷನ್ ಏನು?
ತುಳಸಿ ಹಾಗೂ ಪೂರ್ಣಿಮಾ ಇಬ್ಬರೂ ಸೇರಿ ತಂದೆ ಹಾಗೂ ಮಗನನ್ನು ಒಂದುಗೂಡಿಸಿದ್ದಾರೆ. ಆದರೆ ಇದೀಗ ತುಳಸಿ, ಅವಿನಾಶ್ ಬಳಿ ಸಹಾಯ ಕೇಳಿದ್ದಾಳೆ. ತನ್ನ ಮಗ ಇಲ್ಲಿಯೇ ಎಷ್ಟು ದಿನ ಕೆಲಸ ಮಾಡುತ್ತಾನೆ. ಆತ ಕೂಡ ಬೇರೆ ಕಡೆಯಲ್ಲಿ ಕೆಲಸ ಮಾಡಿ ಉತ್ತಮವಾದ ಸ್ಥಾನಕ್ಕೆ ಏರಬೇಕು ಅನ್ನುವ ಆಸೆ ವ್ಯಕ್ತಪಡಿಸುತ್ತಾರೆ.
"ಅದಕ್ಕಾಗಿ ನಾನು ಏನು ಬೇಕಾದರೂ ಮಾಡಲು ರೆಡಿ ಇದ್ದೇನೆ" ಎಂದು ತುಳಸಿ ಹೇಳಿದಾಗ, ಅವಿನಾಶ್ ತನ್ನ ತಾಯಿಯ ಬಳಿ "ಅಮ್ಮ ನೀವು ಯಾವುದಕ್ಕೂ ತಲೆ ಕೆಡಿಸಿಕೊಳ್ಳಲು ಹೋಗಬೇಡಿ. ಇದೆಲ್ಲ ಸರಿಯಾಗುತ್ತದೆ." ಎಂದು ಹೇಳಿ ಸಮಾಧಾನ ಮಾಡುತ್ತಾನೆ. "ನೀವು ಇದಕ್ಕೆಲ್ಲ ತಲೆ ಕೆಡಿಸಿಕೊಂಡರೆ ಹೇಗೆ ಎಂದು ಹೇಳಿದಾಗ ತುಳಸಿ ಕೊಂಚ ಸಮಾಧಾನವಾಗುತ್ತಾಳೆ.

ಆ ಕೂಡಲೇ ಅವಿನಾಶ್ ಒಂದು ಪ್ರತಿಷ್ಠಿತ ಕಂಪನಿಯವರಿಗೆ ಕರೆ ಮಾಡಿ ಸಮರ್ಥ್‌ಗೆ ಉತ್ತಮ ಕೆಲಸ ಕೊಡುತ್ತಾನೆ. ಸಮರ್ಥ್ ಬಹಳ ಖುಷಿಯಿಂದಲೇ ಸಿಹಿ ಹಿಡಿದುಕೊಂಡು ಮಾಧವನ ಮನೆಗೆ ಬರುತ್ತಾನೆ. ಸಮರ್ಥ್ ಮುಖದ ಖುಷಿಯನ್ನು ನೋಡಿ ಮಾಧವ ಏನೋ ಒಂದು ಖುಷಿ ಸುದ್ದಿ ತಂದಿದ್ದಾನೆ ಅಂದುಕೊಂಡಿರುತ್ತಾರೆ. ಆ ಕೂಡಲೇ ಮಾಧವ ಬಳಿಗೆ ಬಂದ ಸಮರ್ಥ್, "ಸರ್ ನನಗೆ ಒಂದು ಐಟಿ ಕಂಪನಿಯಲ್ಲಿ ಕೆಲಸ ಸಿಕ್ಕಿದೆ. ಇವತ್ತು ನಾನು ಬಹಳ ಖುಷಿಯಾಗಿ ಇದ್ದೀನಿ. ಸರ್ ಸ್ವೀಟ್ ತೆಗೆದುಕೊಳ್ಳಿ" ಎಂದು ಸ್ವೀಟ್ ಕೊಡುತ್ತಾನೆ.
ತುಳಸಿಗೆ ಸಮರ್ಥ್‌ನನ್ನು ನೋಡಿ ಬಹಳ ಖುಷಿ ಆಗುತ್ತದೆ. ಆಕೆ ಕೂಡ ಸಮರ್ಥ್‌ಗೆ ಸ್ವೀಟ್ ತಿನ್ನಿಸಲು ಬರುತ್ತಾಳೆ. ಆದರೆ ಸಮರ್ಥ್ ಅಮ್ಮ ಕೊಟ್ಟ ಸ್ವೀಟ್ ಅನ್ನು ಕೈಯಲ್ಲಿ ತೆಗೆದುಕೊಂಡು ಹೋಗಿ ಕೊಂಚ ದೂರ ಹೋಗಿ ತಿನ್ನುತ್ತಾನೆ. ಮಗ ಒಂದು ಒಳ್ಳೆಯ ಕೆಲಸಕ್ಕೆ ಸೇರಿಕೊಂಡ ಎನ್ನುವ ಖುಷಿಯಲ್ಲಿ ಇರುತ್ತಾರೆ. ಇನ್ನೂ ಸಮರ್ಥ್ ಮನೆಯಲ್ಲಂತೂ ಹಬ್ಬದ ವಾತಾವರಣ. ಮನೆಯ ಕಷ್ಟ ಈಗಲಾದರೂ ಕೊನೆ ಆಯಿತಲ್ಲ ಎನ್ನುವ ಖುಷಿಯಲ್ಲಿ ಎಲ್ಲರೂ ಇರುತ್ತಾರೆ.
ಮಗನ ಏಳಿಗೆ ಕಂಡು ತುಳಸಿಗೆ ಖುಷಿ
ಇನ್ನೂ ಸಮರ್ಥ್‌ಗೆ ಮಾತ್ರ ಬಹಳ ಬೇಸರ. "ನಾನು ಬೇರೆ ಕೆಲಸಕ್ಕೆ ಹೋದರೆ ಅಮ್ಮನನ್ನು ನೋಡುವುದಾದರೆ ಹೇಗೆ? ಅಮ್ಮನನ್ನು ನೋಡುವ ಕ್ಷಣವನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ" ಎಂಬ ಬಹಳ ಬೇಸರದಲ್ಲಿ ಇರುತ್ತಾನೆ. ವಾಪಸ್ ಮರುದಿನ ಮಾಧವನ ಮನೆಗೆ ಸಮರ್ಥ್ ಬರುತ್ತಾನೆ. "ಸರ್ ನಾನು ನಿಮ್ಮ ಮನೆಯಲ್ಲಿ ಕೆಲಸ ಮಾಡಬೇಕು ಎಂದು ಅಂದುಕೊಂಡಿದ್ದೇನೆ. ಆ ಕೆಲಸ ಮಾಡಲು ನನಗೆ ಇಷ್ಟ ಇಲ್ಲ" ಎಂದಾಗ ಕೋಪಗೊಂಡ ಅವಿನಾಶ್, ಸಮರ್ಥ್ ಬಳಿ ಕೊಂಚ ಜೋರಾಗಿ ಮಾತನಾಡುತ್ತಾನೆ. ಆದರೆ ಇದೆಲ್ಲ ನೋಡಿದ ಮಾಧವ, ಸಮರ್ಥ್‌ನ ಪರಿಸ್ಥಿತಿ ಬಗ್ಗೆ ಅರ್ಥ ಮಾಡಿಕೊಂಡು ಅವಿಗೆ ಕೂಡ ಅರ್ಥ ಮಾಡಿಸುತ್ತಾನೆ.

ಮಗನಿಗೆ ಬುದ್ದಿ ಹೇಳಿದ ತುಳಸಿ
ಅಷ್ಟರಲ್ಲಿ ಅಲ್ಲಿಗೆ ಬಂದ ತುಳಸಿ, ಮಗನಿಗೆ ಬುದ್ಧಿವಾದ ಹೇಳುತ್ತಾಳೆ. "ಯಾಕೆ ಪಾಪು ಹೀಗೆಲ್ಲ ಮಾಡುತ್ತೀಯಾ. ನೀನು ಎಷ್ಟು ಅಂತ ಇಲ್ಲಿ ದುಡಿಯಬೇಕು. ನೀನು ಆ ಕೆಲಸ ಮಾಡಿದರೆ. ನಿನ್ನ ಕೆರಿಯರ್ ಬಹಳ ಉತ್ತಮವಾಗುತ್ತೆ" ಎಂದು ಹೇಳುತ್ತಾರೆ. ಈ ಮಾತು ಕೇಳಿದ ಮಾಧವ, ತುಳಸಿಗೆ "ಇಲ್ಲಿ ಕೂಡ ಆತನ ಕೆರಿಯರ್ ಹಾಳಾಗುವುದು ಇಲ್ಲ" ಎಂದು ಹೇಳುತ್ತಾರೆ. ಆಗ ಅಲ್ಲಿಗೆ ಬಂದ ಅವಿನಾಶ್ "ನೀನು ಇಲ್ಲಿ ಕೆಲಸ ಮಾಡಬಹುದು ಸಮರ್ಥ್. ಆದರೆ ನನ್ನದು ಒಂದು ಕಂಡಿಷನ್ ಇದೆ. ನಾವು ಎಷ್ಟು ಸಂಬಳ ಕೊಡುತ್ತೇವೆ ಅಷ್ಟು ತೆಗೆದುಕೊಳ್ಳಬೇಕು. ಹಾಗೆಯೇ ಆಫೀಸ್ ಕೆಲಸಗಳನ್ನು ಮಾಡಬೇಕಾಗುತ್ತದೆ" ಎಂದು ಹೇಳುತ್ತಾನೆ .
ಅವಿ ಮಾತಿಗೆ ಒಪ್ಪಿಗೆ ಕೊಟ್ಟ ಸಮರ್ಥ್
ಹಾಗೆಯೇ ಮತ್ತೆ "ನಾವು ಹೇಳಿದ ಹಾಗೆ ನೀನು ಕೇಳಬೇಕು" ಎಂದು ಅವಿ ಹೇಳಿದಾಗ ಸಮರ್ಥ್ ಆಯಿತು ಎಂದು ತಲೆ ಅಲ್ಲಾಡಿಸುತ್ತಾನೆ . ಆತನಿಗೆ ತನ್ನ ತಾಯಿಯನ್ನು ನೋಡಬೇಕು ಎನ್ನುವ ಉದ್ದೇಶದಿಂದ ಅವಿ ಏನೇ ಕಂಡಿಷನ್ ಹಾಕಿದರು ಆಯಿತು ಎಂದು ಸಮ್ಮತಿ ಸೂಚಿಸುತ್ತಾನೆ.


Click it and Unblock the Notifications











