Shrirasthu Shubhamasthu:ಕೂಡಿ ಹಾಕಿದ್ದ ತುಳಸಿ ಪ್ರತ್ಯಕ್ಷ; ಹೊರಬಂದಿದ್ದೇಗೆ?

By ಪೂರ್ವ

ದೀಪಿಕಾ ಉಪಾಯ ಮಾಡಿ ತುಳಸಿಯನ್ನು ಲಾಕ್ ಮಾಡಿದ್ದಾಳೆ. ತುಳಸಿ ರೂಮ್ ನೊಳಗೆ ಮೊಬೈಲ್ ಕೂಡ ಬಿಟ್ಟು ಬಂದಿರುತ್ತಾಳೆ. ಆನಿವರ್ಸರಿ ಸಂಭ್ರಮವೇ ಬೇರೆ. ಎಲ್ಲರೂ ಬಹಳ ಚೆನ್ನಾಗಿಯೇ ರೆಡಿ ಆಗಿರುತ್ತಾರೆ. ಹಾಗೆಯೇ ತುಳಸಿ ಕೂಡ ರೆಡಿ ಆಗಿರುತ್ತಾಳೆ. ಆದರೆ ದೀಪಿಕಾ ತುಳಸಿ ಬಳಿ ನಯವಾಗಿ ಮಾತನಾಡಿ ರೂಮ್‌ನ ಒಳಗಡೆ ಕಳುಹಿಸಿ ಬಿಡುತ್ತಾಳೆ. ತುಳಸಿಯನ್ನು ಅಲ್ಲಿಯೇ ಬಿಟ್ಟು ಲಾಕ್ ಹಾಕಿಕೊಂಡು ದೀಪಿಕಾ ಹೋಗುತ್ತಾಳೆ. ಆಕೆಗೆ ತುಳಸಿ ಆನಿವರ್ಸರಿ ಕಾರ್ಯಕ್ರಮಕ್ಕೆ ಬರುವುದು ಸ್ವಲ್ಪ ಕೂಡಾ ಇಷ್ಟ ಇರುವುದು ಇಲ್ಲ. ಮನೆಯಿಂದ ಎಲ್ಲರೂ ಹೊರಟು ಕಂಪನಿಯ ಆನಿವರ್ಸರಿ ಕಾರ್ಯಕ್ರಮಕ್ಕೆ ಹೋಗುತ್ತಾರೆ.

ಆದರೆ, ಸಮರ್ಥ್ ಯಾಕೋ ಕೊಂಚ ಲೇಟ್ ಆಗಿಯೇ ಹೋಗುತ್ತಾನೆ. ಆತನಿಗೆ ಆತನ ತಾಯಿ ಯಾಕೆ ಇನ್ನೂ ಕೂಡ ಬರಲಿಲ್ಲ ಎನ್ನುವ ಚಿಂತೆ ಕಾಡ ತೊಡಗಿದೆ. ಯಾಕೆಂದರೆ, ಆತನಿಗೆ ತಾಯಿ ಅಂದರೆ ಬಹಳ ಪ್ರೀತಿ . ಆದರೆ ಆತ ಅದನ್ನು ತೋರಿಸಿಕೊಳ್ಳುವುದು ಇಲ್ಲ. ಏನು ಮಾಡಬೇಕು ಎಂದು ಧಿಕ್ಕೇ ತೋಚದ ಹಾಗೆ ಆಗುತ್ತದೆ. ಸಮರ್ಥ್ ಇನ್ನೇನು ಕಾರ್ಯಕ್ರಮಕ್ಕೆ ಹೊರಡಬೇಕು ಅನ್ನುವಷ್ಟರಲ್ಲಿ ಮನೆ ಎಲ್ಲಾ ಹಿಂತಿರುಗಿ ನೋಡುತ್ತಾನೆ. ಆದರೆ, ತುಳಸಿ ಎಲ್ಲಿಯೂ ಕಾಣಿಸುವುದು ಇಲ್ಲ. ಕೊನೆಗೆ ಅದು ಹೇಗೋ ಕಿಟಕಿ ಬಾಗಿಲು ತೆರೆದುಕೊಂಡಿತು.

Shrirasthu Shubhamasthu serial june 13th episode update

ಸಮರ್ಥ್ ಎಂದು ತುಳಸಿ ಜೋರಾಗಿ ಕೂಗಿ ಕರೆಯುತ್ತಾಳೆ. ಸಮರ್ಥ್ ಒಮ್ಮೆಲೆ ಹಿಂದೆ ತಿರುಗಿ ನೋಡಿದಾಗ ತುಳಸಿ ನಿಂತಿರುತ್ತಾರೆ. ಆತನಿಗೆ ಅಮ್ಮನನ್ನು ನೋಡಿ ಮತ್ತಷ್ಟು ಖುಷಿ ಆಗುತ್ತದೆ. ಓಡಿ ಬಂದು ಲಾಕ್ ಆಗಿರುವ ಬಾಗಿಲು ತೆಗೆದು ಅಮ್ಮನನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗುತ್ತಾನೆ. ತುಳಸಿಯನ್ನು ನೋಡಿದ ಮಾಧವ "ಎಲ್ಲಿಗೆ ಹೋಗಿದ್ರಿ ತುಳಸಿ ಅವರೇ ನೀವು. ಯಾಕೆ ನೀವು ಹೇಳದೆ ಕೇಳದೆ ಹೀಗೆ ಹೋಗುತ್ತಿದ್ದೀರಿ, ಏನಾಯಿತು" ಎಂದು ಕೇಳುತ್ತಾರೆ.

ರೂಮ್ ಲಾಕ್ ಆಗಿದ್ದಕ್ಕೆ ಮನೆಮಂದಿ ಶಾಕ್

ರೂಮ್ ಲಾಕ್ ಆಗಿತ್ತು. ಸಮರ್ಥ್‌ನನ್ನನ್ನು ಕಾಪಾಡಿಲ್ಲ ಎಂದರೆ ನನಗೆ ಬಹಳ ಕಷ್ಟ ಆಗುತ್ತಿತ್ತು. ನಾನು ಇಲ್ಲಿಗೆ ಬರುತ್ತಿರಲಿಲ್ಲ ಎಂದಾಗ ಮಾಧವಗೆ ಅನುಮಾನ ಶುರುವಾಗಿ ತುಳಸಿ ಬಳಿ ಕೇಳುತ್ತಾರೆ. ಯಾರು ನಿಮ್ಮನ್ನು ರೂಮ್‌ನಲ್ಲಿ ಕೂಡಿ ಹಾಕಿದ್ದು ಎಂದಾಗ ಎದ್ದು ನಿಂತ ದೀಪಿಕಾ ಹೇಳುತ್ತಾಳೆ. "ಅಮ್ಮ ನೀವು ಬರಲಿಲ್ಲ ಎಂದು ನನಗೆ ಬಹಳ ಬೇಸರವಾಗಿತ್ತು" ಎಂದಾಗ ಮಹೇಶ, ದೀಪಿಕಾ ಕಾಲೆಳೆಯುತ್ತಾನೆ. "ಅತ್ತಿಗೆ ಇಲ್ಲ ಅಂತ ಎಲ್ಲರೂ ಬಹಳ ಗಾಬರಿ ಮಾಡಿಕೊಂಡು ಇದ್ದೆವು. ಅಣ್ಣನ ಮುಖ ಮೊದಲು ನೋಡಲು ಆಗುತ್ತಿರಲಿಲ್ಲ ಇದೀಗ ಬಂದ್ರಿ ಅಲ್ವಾ ಅಣ್ಣಗೆ ಸಮಾಧಾನ ಆಯಿತು" ಎಂದು ಹೇಳಿ ನಗುತ್ತಾನೆ.

Shrirasthu Shubhamasthu serial june 13th episode update

ಮಹೇಶನ ಮಾತು ಕೇಳಿ ನಕ್ಕ ಮಾಧವ

ಮಾಧವನಿಗೆ ಆತನ ಮಾತು ಕೇಳಿ ಇನ್ನಷ್ಟು ನಗು ಬರುತ್ತದೆ. ಇನ್ನೂ ಕಾರ್ಯಕ್ರಮಕ್ಕೆ ದತ್ತ ಸಿರಿ ಹಾಗೆಯೇ ತುಳಸಿ ಮಗಳು ಬಂದಿರುತ್ತಾರೆ. ಅವರೆಲ್ಲರನ್ನೂ ಚೆನ್ನಾಗಿ ಸ್ವಾಗತ ಮಾಡುತ್ತಾರೆ. ಮಗಳ ಮುಖ ನೋಡಿ ತುಳಸಿ ಮುಖ ಅರಳಿ ಬಿಡುತ್ತದೆ. ಇನ್ನೂ ಸ್ಟೇಜ್‌ನಲ್ಲಿ ಎಲ್ಲರೂ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಆದರೆ, ಮಾಧವಗೆ ಮಾತ್ರ ಬಹಳ ದೊಡ್ಡ ಶಾಕ್ ಆಗುತ್ತದೆ. ಯಾಕೆಂದರೆ, ತುಳಸಿ ಭರತನಾಟ್ಯ ಕಲಿತು ಎಲ್ಲರೆದುರೂ ನರ್ತನ ಮಾಡಲು ತಯಾರಾಗಿರುತ್ತಾಳೆ.

ಹಳೆ ಚಾಳಿ ಮುಂದುವರೆಸಿದ ತುಳಸಿ

ಇಲ್ಲಿಗೆ ಬಂದ ತುಳಸಿಯ ಮಗಳು ತನ್ನ ಹಳೆ ಚಾಳಿಯನ್ನು ಮತ್ತೆ ಮುಂದುವರೆಸಿದ್ದಾರೆ. ಆಸ್ತಿಯಲ್ಲಿ ಭಾಗ ಬೇಕೆ ಬೇಕು ಎಂದು ಸಂಧ್ಯಾ ಹಠ ಹಿಡಿದಿದ್ದಾರೆ. ಆದರೆ, ಈ ವಿಚಾರ ತುಳಸಿ ಮಾಧವನ ಕಿವಿಗೆ ಬಿದ್ದಿಲ್ಲ. ಅಭಿ ಆಸ್ತಿಯ ಪಾಲು ಕೇಳಲು ಕಂಪನಿಯ ಆನಿವರ್ಸರಿ ದಿನದಂದೇ ಈ ಸ್ಟೇಜ್‌ನಲ್ಲಿ ಆಸ್ತಿ ಭಾಗದ ಬಗ್ಗೆ ಮಾತನಾಡುತ್ತಿದ್ದಾನೆ. ಇದನ್ನು ನೋಡಿದ ಶಾರ್ವರಿ ಇನ್ನಷ್ಟು ಕಿವಿ ಊದುತ್ತಾರೆ. ಮಾಧವನ ನೆಮ್ಮದಿಯನ್ನು ಹೇಗಾದರೂ ಮಾಡಿ ಕೆಡಿಸಲೇ ಬೇಕು ಎಂದು ಆಲೋಚನೆ ಮಾಡುತ್ತಿರುತ್ತಾನೆ.

More from Filmibeat

English summary
Shrirasthu Shubhamasthu serial June 13th episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X