Shrirasthu Shubhamasthu:ಅಭಿಗೆ ಬುದ್ದಿ ಕಲಿಸಲು ಮುಂದಾದ ಮಾಧವ: ನಷ್ಟದಲ್ಲಿರೋ ಕಂಪನಿ ಉಳಿಯುತ್ತಾ?
ಮಾಧವನಿಗೆ ಮಗ ಮಾಡಿದ ಕೆಲಸದಿಂದಾಗಿಇದೀಗ ದಿಕ್ಕೇ ತೋಚದಂತಾಗಿದೆ. ತನ್ನ ಮನೆಯನ್ನು ದುಷ್ಟರಿಂದ ಹೇಗೆ ಕಾಪಾಡಿಕೊಳ್ಳಬೇಕು? ಹಾಗೆಯೇ ತಮಗೆ ಯಾರೂ ಕೇಡು ಬಯಸುತ್ತಾರೋ ಅವರ ಸಂಘಕ್ಕೆ ನಾವು ಹೋಗ ಬಾರದು ಎನ್ನುವುದು ಮಾಧವನ ಪಾಲಿಸಿ. ಒಮ್ಮೆ ಶತ್ರುವಾದವ ಮತ್ತೆ ಮಿತ್ರನಾಗಲು ಸಾಧ್ಯವೇ ಇಲ್ಲ. ಹಾಗೆಯೇ ಜನಾರ್ಧನ್ ಇದೀಗ ನನ್ನ ಮೇಲಿನ ದ್ವೇಷದಿಂದ ನನ್ನ ಮನೆಯನ್ನು ಓಡೆಯಲು ಪಣ ತೊಟ್ಟಿರುವ ವಿಚಾರ ಮಾಧವನಿಗೆ ಈಗಾಗಲೇ ತಿಳಿದು ಹೋಗಿದೆ.
ಮಾಧವ ಈ ವಿಚಾರವನ್ನು ಯಾರ ಬಳಿಯೂ ಹೇಳುವುದು ಇಲ್ಲ. ಇದೀಗ ಅಭಿ ಜೊತೆ ಜನಾರ್ಧನ್ ಬೆನ್ನೆಲುಬಾಗಿ ನಿಂತಿದ್ದಾರೆ. ಅಭಿಗೆ ಇದರಿಂದ ಯಾವತ್ತಾದರೂ ತೊಂದರೆ ಆಗುತ್ತದೆ ಎನ್ನುವುದು ಮಾತ್ರ ಖಚಿತವಾಗಿತ್ತು. ಆದರೆ, ಅದನ್ನು ಮಾಧವ ಆಗಲಿ, ಅವಿ ಆಗಲಿ, ಅಭಿಗೆ ಆಗಲಿ ಹೇಳಲಲ್ಲ. ಒಂದಲ್ಲ ಒಂದು ದಿನ ಕಾಲವೇ ಉತ್ತರ ಕೊಡುತ್ತದೆ ಎನ್ನುವ ಭರವಸೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಇದೀಗ ಅಭಿಯಿಂದಾಗಿ ಕಂಪನಿಗೆ ನಷ್ಟ ಆಗಿದೆ. ಅಭಿಯನ್ನು ಯಾವತ್ತೂ ಆ ಕಂಪನಿಯ ಮುಖ್ಯಸ್ಥರನ್ನಾಗಿ ಮಾಡಿದರೋ ಆ ಆವತ್ತಿನಿಂದ ಅಭಿ ಮೇಲೆ ಅವಿ ಕಣ್ಣು ಇಟ್ಟಿದ್ದ.

ಒಂದು ಬಾರಿ ಕಂಪನಿ ಲಾಸ್ ಆಗಿದ್ದನ್ನು ನೋಡಿದ ಅವಿ, ಅಭಿಗೆ ಬುದ್ದಿ ಹೇಳಿದ್ದ . ನೀನು ಈ ರೀತಿ ಮಾಡಿದರೆ ಖಂಡಿತವಾಗಿಯೂ ಕಂಪನಿಗೆ ಖಂಡಿತ ತೊಂದರೆ ಎಂದು ಹೇಳಿರುತ್ತಾನೆ. ಆದರೆ, ಅವಿ ಮಾತನ್ನು ಅಭಿ ನೆಗ್ಲೆಕ್ಟ್ ಮಾಡಿರುತ್ತಾನೆ. ಇದೀಗ ಮಾಧವನ ಹತ್ತಿರ ಕಂಪನಿ ಲಾಸ್‌ನಲ್ಲಿ ಇರುವ ವಿಚಾರ ಹೇಳುತ್ತಾನೆ. ಇದನ್ನು ಕೇಳಿದ ಮಾಧವನಿಗೆ ಟೆನ್ಶನ್ ಆಗುತ್ತೆ. "ಇನ್ನೂ ಮೇಲೆ ನೀನೇನು ಆಫೀಸ್ ಹತ್ತಿರ ಹೋಗುವುದು ಬೇಡ" ಎಂದು ಹೇಳಿದಾಗ ಅಭಿಗೆ ಕೋಪ ಬರುತ್ತೆ. ಅಲ್ಲಿಂದ ಹೊರಟು ಹೋಗುತ್ತಾನೆ. ಇನ್ನೂ ಅವಿ, ಶಾರ್ವರಿ, ಮಹೇಶ, ಮಾಧವ ಕಂಪನಿಯನ್ನು ಹೇಗೆ ಮುಂಚಿನ ಹಾಗೆ ಬೆಳೆಸುವುದು, ಇನ್ನೂ ಮೇಲೆ ಲಾಸ್ ಎನ್ನುವ ಪದನೇ ನಮ್ಮ ಬಳಿ ಸುಳಿಯಬಾರದು. ಅದಕ್ಕೆ ಏನಾದರೂ ಮಾಡಬೇಕು ಎಂದು ಹೇಳಿ ಮನಸ್ಸಿನಲ್ಲಿಯೇ ಯೋಚನೆ ಮಾಡುತ್ತಾ ಇರುತ್ತಾನೆ.
ಮನೆ ಮಂದಿಯೊಂದಿಗೆ ಮಾಧವ ಚರ್ಚೆ
ಹಾಗೆಯೇ ಈ ವಿಚಾರವನ್ನು ಎಲ್ಲರ ಬಳಿ ಚರ್ಚೆ ಮಾಡಿದಾಗ ಅವಿ "ನನಗೆ ನನ್ನ ಕಂಪನಿಯ ಕೆಲಸವೇ ಸಾಕಷ್ಟು ಇದೆ. ಅದರ ಜೊತೆಗೆ ಇದೀಗ ಈ ಕೆಲಸವು ಬಂದರೆ ನನಗೆ ಬಹಳ ಕಷ್ಟ ಆಗುತ್ತದೆ" ಎನ್ನುತ್ತಾನೆ. ಆಗ ಶಾರ್ವರಿ "ಬಾವ ನಾನು ಆ ಕಂಪನಿಯನ್ನು ನೋಡಿಕೊಳ್ಳಬಹುದು" ಎಂದು ಹೇಳಿದಾಗ ಶಾರ್ವರಿ ನಾನೊಬ್ಬಳೇ ಆಫೀಸ್ ಅನ್ನು ನೋಡಿಕೊಳ್ಳಲು ಹೋದರೆ ಅಭಿ ಕೂಡ ಇದರಲ್ಲಿ ಭಾಗಿ ಆಗುವ ಸಂದರ್ಭ ಬಂದೆ ಬರುತ್ತದೆ. ಇದಕ್ಕೆ ಸೂಕ್ತ ವ್ಯಕ್ತಿ ಯಾರೆಂದರೆ ಅದು ಸಮರ್ಥ್ ಅಂದುಕೊಳ್ಳುತ್ತಾರೆ.

ಆಫೀಸ್ ಕೆಲಸ ಮಾಡಲು ಒಪ್ಪದ ಸಮರ್ಥ್
ಆತ ಮುಂಚೆ ಆಫೀಸ್‌ನಲ್ಲಿ ಕೆಲಸ ಮಾಡಿದ ಅನುಭವ ಇದೆ. ಆತನನ್ನು ಹೇಗಾದರೂ ಮಾಡಿ ಒಪ್ಪಿಸಿ ಕಂಪನಿ ಕೆಲಸಕ್ಕೆ ಮಾಡಲು ಪ್ರೇರೇಪಿಸಬೇಕು ಎಂದು ಹೇಳಿದಾಗ ಶಾರ್ವರಿಗೆ ಶಾಕ್ ಆಗುತ್ತದೆ. ಇತ್ತ ಅವಿಗೆ ಬಹಳ ಖುಷಿ ಆಗುತ್ತದೆ. ಸಮರ್ಥ್‌ನನ್ನು ಹೊರಗಿನಿಂದ ಕರೆದುಕೊಂಡು ಬಂದು ವಿಸ್ತೃತವಾಗಿ ಹೇಳುತ್ತಾನೆ. ಸಮರ್ಥ್ ಇನ್ನೂ ಮೇಲೆ ನೀನು ಕಾರು ಡ್ರೈವರ್ ಆಗಿ ಕೆಲಸ ಮಾಡಿದ್ದು ಸಾಕು. ಇನ್ನೂ ಮೇಲೆ ನೀನು ಆಫೀಸ್ ಕೆಲಸಗಳನ್ನು ಮಾಡಬೇಕು ಎಂದಾಗ ಮೊದಲು ಸಮರ್ಥ್ ಇದಕ್ಕೆ ಒಪ್ಪುವುದು ಇಲ್ಲ. ಕೊನೆಗೆ ಮಹೇಶನ ಒತ್ತಾಯದ ಮೇರೆಗೆ ಕೆಲಸಕ್ಕೆ ಸೇರುತ್ತಾನೆ.
ಅಭಿ ಕೆಟ್ಟ ಕೆಲಸಕ್ಕೆ ಸಾಥ್ ನೀಡದ ಅವಿ
ಆಗಿನಿಂದಲೇ ಕೆಲಸ ಮಾಡಲು ಶುರು ಮಾಡುತ್ತಾನೆ. ಇದನ್ನು ನೋಡಿ ಮನೆ ಮಂದಿ ಬಹಳ ಖುಷಿ ಪಡುತ್ತಾರೆ. ಇತ್ತ ಸಮರ್ಥ್ ಒಬ್ಬನೇ ಕೆಲಸ ಮಾಡುತ್ತಿರುವಾಗ ಅಲ್ಲಿಗೆ ಅಭಿ ಬರುತ್ತಾನೆ. ಸಮರ್ಥ್‌ನನ್ನು ನೋಡಿದ ಅಭಿ "ಏನೋ, ನೀನು ಇಲ್ಲಿ ಕುಳಿತಿದ್ದಿಯಾ? ಇಲ್ಲಿಂದ ಈಗಲೇ ಹೋಗು" ಎಂದಾಗ ಸಮರ್ಥ್ "ನಾನು ಹೋಗುವುದು ಇಲ್ಲ" ಎಂದು ಹೇಳಿದಾಗ ಅಭಿಗೆ ಸಿಟ್ಟು ಬಂದು ಸಮರ್ಥ್‌ನನ್ನು ಜೋರಾಗಿ ತಳ್ಳುತ್ತಾನೆ. ಇದನ್ನು ನೋಡಿದ ಅವಿ ಬೀಳುತ್ತಿದ್ದ ಸಮರ್ಥ್‌ನನ್ನು ಹಿಡಿದುಕೊಂಡು ಅಭಿಯತ್ತ ಕೆಕ್ಕರಿಸಿ ನೋಡುತ್ತಾನೆ.


Click it and Unblock the Notifications











