Shrirasthu Shubhamasthu:ಅಭಿ ತಲೆ ಕೆಡಿಸಿದ ಶಾರ್ವರಿ; ಆಸ್ತಿ ಪಾಲು ಆಗುತ್ತಾ?

By ಪೂರ್ವ

ಶಾರ್ವರಿ ಹಾಗೂ ದೀಪಿಕಾ ಅದೆಷ್ಟೇ ಅಭಿ ತಲೆ ಕೆಡಿಸಿದರೂ, ಆತ ಮಾತ್ರ ಯೋಚನೆ ಮಾಡುವುದಕ್ಕೆ ಶುರು ಮಾಡಿದ್ದಾನೆ. ತುಳಸಿ ಕೂಡ ಅಭಿ ಬಳಿ ಬಂದು ನೀನು ಈ ಮನೆಯನ್ನು ಇಬ್ಭಾಗ ಮಾಡಬೇಡ ಎಂದಿದ್ದಾರೆ.

"ನಿನಗೆ ನನ್ನ ಮೇಲೆ ಕೋಪ ಇದೆ ಎಂಬುವುದು ಗೊತ್ತಿದೆ. ಆದರೆ, ಅದರಿಂದ ಈ ಮನೆ ಹಾಳಾಗುತ್ತದೆ ಎಂದರೆ ಖಂಡಿತವಾಗಿಯೂ ನಾನು ಅದಕ್ಕೆ ಅವಕಾಶ ಕೊಡುವುದು ಇಲ್ಲ. ನಾನೇ ಈ ಮನೆಬಿಟ್ಟು ಹೋಗುತ್ತೇನೆ. ಮತ್ತೆ ಯಾವತ್ತೂ ಯಾರಿಗೂ ಕಾಣಿಸುವುದು ಇಲ್ಲ" ಎಂದು ಹೇಳುತ್ತಾರೆ.

Shrirasthu Shubhamasthujune 6th episode

ಇದನ್ನು ಕೇಳಿದ ಅಭಿ ಸುಮ್ಮನೆ ಇರುತ್ತಾನೆ. ಆತನಿಗೆ ತುಳಸಿ ಹೇಳಿದ ಮಾತು ನಾಟಕೀಯವಾಗಿದೆ ಎಂದು ಅನ್ನಿಸಲಿಲ್ಲ. ಹಾಗೆಯೇ ತನ್ನ ಅಣ್ಣ ಅಭಿ ಬಂದು ಈ ಆಸ್ತಿ ಎಲ್ಲಾ ನಿನ್ನ ಹೆಸರಿಗೆ ಮಾಡಿಕೋ, ನನಗೆ ಒಂದು ಬಿಡಿಗಾಸು ಬೇಡ. ಆದರೆ, ನಾವೆಲ್ಲ ಮಾಡುತ್ತಿರುವುದು ನಿನ್ನ ಒಳ್ಳೆಯದಕ್ಕೆ ಅದನ್ನು ನೆನಪಿನಲ್ಲಿ ಇಟ್ಟುಕೋ ಅಭಿ ಎಂದು ಹೇಳಿ ಅಲ್ಲಿಂದ ಹೋಗುತ್ತಾನೆ. ಹಾಗೆಯೇ ಮಹೇಶ ಸಾಕಷ್ಟು ಬುದ್ದಿ ಮಾತನ್ನು ಹೇಳುತ್ತಾರೆ.

"ಅಭಿ ನೀನು ಇಷ್ಟರವರೆಗೆ ನಿನ್ನ ತಂದೆಗೆ ಬಹಳ ನೋವನ್ನು ನೀಡುತ್ತಲೇ ಬಂದೆ. ಇನ್ನಾದರೂ ಆತನನ್ನು ಖುಷಿಯಾಗಿ ಇಟ್ಟುಕೊಳ್ಳಿ. ಆತ ನಿಮಗಾಗಿ ಅದೆಷ್ಟು ಕಷ್ಟ ಪಟ್ಟಿದ್ದಾರೆ. ನೀವು ಚಿಕ್ಕ ವಯಸ್ಸಿನಿಂದ ಆತನನ್ನು ದ್ವೇಷ ಮಾಡುತ್ತಲೇ ಬಂದಿದ್ದೀರಿ. ಆದರೆ, ಆತ ಪಟ್ಟ ಶ್ರಮ ಯಾರಿಗೂ ಬೇಡ. ಆದರೆ, ಆತ ಮಾಡಿದ ಹಣ ಆಸ್ತಿ ಪಾಸ್ತಿ ಬೇಕು. ಚಿಕ್ಕ ವಯಸ್ಸಿನಿಂದಲೂ ಆತನ ಜೊತೆ ಒಳ್ಳೆಯ ಮಾತುಗಳನ್ನು ಆಡಿದ್ದೇ ಇಲ್ಲ. ಆದರೆ ಅಣ್ಣ ಮಾತ್ರ ನೀವು ಚೆನ್ನಾಗಿ ಇರಲಿ ಎಂದಷ್ಟೇ ಬಯಸುತ್ತಿದ್ದಾರೆ. ಇದು ನಿಮಗೆ ಸ್ವಲ್ಪ ಕೂಡ ಅರ್ಥ ಆಗುತ್ತಿಲ್ಲ ಎನ್ನುವುದೇ ನನ್ನ ಬೇಸರ. ಇನ್ನಾದರೂ ಎಲ್ಲರ ಜೊತೆ ಚೆನ್ನಾಗಿ ಇರು ಅಭಿ" ಎಂದು ಹೇಳಿ ಅಲ್ಲಿಂದ ಹೋಗುತ್ತಾರೆ.

ಮಗನಿಗೆ ಬುದ್ದಿ ಹೇಳಿದ ಮಾಧವ

ಮಾಧವ, ಅಭಿ ಬಳಿ ಬಂದು "ನಾನು ಯಾವತ್ತೂ ನಿಮ್ಮ ಕೆಟ್ಟದನ್ನು ಇದೂವರೆಗೆ ಬಯಸಿಲ್ಲ. ನಿಮಗೆ ಒಳ್ಳೆಯದಾಗಲಿ ಎಂದು ಅದೆಷ್ಟೋ ದೇವರ ಬಳಿ ಕೇಳಿಕೊಂಡಿದ್ದೇನೆ. ಆದರೆ, ಏನು ಮಾಡುವುದು? ಆಸ್ತಿಯಲ್ಲಿ ಭಾಗ ಬೇಕು ಎಂದು ಕೆಳುತ್ತಿದ್ದಿಯಾ. ನೀನು ಈ ನಿಲುವನ್ನು ಬದಲಾಯಿಸು ಅಭಿ" ಎಂದು ಹೇಳುತ್ತಾರೆ. ಇನ್ನೂ ಅಭಿ ಒಬ್ಬನೇ ಕುಳಿತು ಯೋಚನೆ ಮಾಡುತ್ತಿರುವಾಗ ಶಾರ್ವರಿ ಹಾಗೂ ದೀಪಿಕಾ ಅಲ್ಲಿಗೆ ಬರುತ್ತಾರೆ.

Shrirasthu Shubhamasthujune 6th episode

ಎಲ್ಲರ ಮಾತು ಕೇಳಿ ಮಂಕಾದ ಅಭಿ

"ಯಾಕೆ ಅಭಿ ಏನಾಯಿತು ಯಾಕೆ ಹೀಗೆ ಸುಮ್ಮನೆ ಕುಳಿತು ಬಿಟ್ಟಿದ್ದಿಯಾ? ಎಂದು ಕೇಳಿದಾಗ ಅಭಿ "ನನಗೆ ಅಣ್ಣ ಸುಳ್ಳು ಹೇಳುತ್ತಿದ್ದಾನೆ ಎಂದು ಅನ್ನಿಸುತ್ತಿಲ್ಲ. ಹಾಗೆಯೇ ತುಳಸಿ ಅಮ್ಮ ಕೂಡ ಮನೆ ಬಿಟ್ಟು ಹೋಗುತ್ತೇನೆ ಎಂದು ಹೇಳುತ್ತಾರೆ. ಇದೆಲ್ಲ ನನಗೆ ನೋಡಿದರೆ ನಾನು ತಪ್ಪು ಮಾಡುತ್ತಿದ್ದೇನೆ ಅನ್ನಿಸುತ್ತಿದೆ" ಎಂದು ಹೇಳಿದಾಗ ಶಾರ್ವರಿಗೆ ಶಾಕ್ ಆಗುತ್ತದೆ.

ಶಾರ್ವರಿ ಪ್ಲಾನ್ ಸಕ್ಸಸ್

ಶಾರ್ವರಿಗೆ ಒಟ್ಟಿನಲ್ಲಿ ಈ ಮನೆ ಇಬ್ಬಾಗ ಆಗಬೇಕು. ಇದರಿಂದ ಮಾಧವ ಒಳ್ಳೆಯ ಪಾಠ ಕಲಿಯಬೇಕು ಎಂದು ಯೋಚಿಸುತ್ತಿದ್ದರೆ, ಅಭಿ ಮೆತ್ತಗಾಗುತ್ತಿರುವುದನ್ನು ಕಂಡು ಹೇಗಾದರೂ ಮಾಡಿ ಅಭಿ ಮನಸ್ಸನ್ನು ಕೆಡಿಸಿ ಬಿಡಬೇಕು ಎನ್ನುವ ಆಲೋಚನೆಯಲ್ಲಿ ಇರುತ್ತಾಳೆ. ಇದೀಗ ಅಭಿ ಮಾತನ್ನು ಕೇಳಿದ ಶಾರ್ವರಿ ಆತನ ಬಳಿ ನಯವಾಗಿ ಮಾತನಾಡಿ ಆಸ್ತಿಯಲ್ಲಿ ಭಾಗ ಕೇಳಬೇಡ ಎಂದು ಹೇಳುತ್ತಾರೆ. ಇದನ್ನು ಕೇಳಿದ ಅಭಿ "ನನಗೆ ನನ್ನದೇ ಆದ ಉತ್ತಮ ಕೆಲಸ ಮಾಡಬೇಕು. ನಾನು ಯಾರ ಎದುರು ಕೂಡ ತಲೆ ತಗ್ಗಿಸುವುದು ಇಲ್ಲ. ತಲೆ ಎತ್ತಿ ಬದುಕಬೇಕು ಎನ್ನುವುದು ನನ್ನ ಆಸೆ. ಅದಕ್ಕಾಗಿ ನನಗೆ ಆಸ್ತಿಯಲ್ಲಿ ಭಾಗ ಬೇಕೆ ಬೇಕು" ಎಂದು ಹೇಳುತ್ತಾನೆ. ಅಲ್ಲಿಗೆ ಶಾರ್ವರಿ ಮಾಡಿದ ಪ್ಲಾನ್ ವರ್ಕ್ ಆಗಿದೆ.

More from Filmibeat

English summary
Shrirasthu Shubhamasthu serial june 6th episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X