Shrirasthu Shubhamasthu: ಜುಗ್ಗ ಮಾಡುತ್ತಿರುವ ಕಿತಾಪತಿ ಬಹಿರಂಗ; ಕಪಾಳಮೋಕ್ಷ ಮಾಡಿದ ಮಾಧವ

By ಪೂರ್ವ

ದತ್ತನ ಮನೆಯಲ್ಲಿ ಇದ್ದುಕೊಂಡು ಜುಗ್ಗ ಒಂದಲ್ಲ ಒಂದು ಕಿತಾಪತಿ ಮಾಡುತ್ತಿರುತ್ತಾನೆ. ಆತನಿಗೆ ದತ್ತನ ಮನೆಯ ಮೇಲೆ ಕಣ್ಣು ಬಿದ್ದಿದೆ. ದತ್ತನ ಬಳಿ ಇದ್ದ ಹಣ ಹಾಗೆಯೇ ಜಾಗವನ್ನು ಹೇಗಾದರೂ ಮಾಡಿ ನನ್ನ ವಶ ಮಾಡಿಕೊಳ್ಳಬೇಕು ಅಂತ ಜುಗ್ಗ ಪ್ಲಾನ್ ಮಾಡುತ್ತಿರುತ್ತಾನೆ. ಅದಕ್ಕಾಗಿ ಸಂಧ್ಯಾ ಹಾಗೂ ಜುಗ್ಗ ಇಬ್ಬರೂ ಕೂಡ ಏನೇನೋ ಪ್ಲಾನ್ ಮಾಡುತ್ತಿರುತ್ತಾರೆ. ಕೊನೆಗೆ ಒಂದು ಆಸ್ತಿ ಪತ್ರವನ್ನು ರೆಡಿ ಮಾಡಿಕೊಂಡು ಇರುತ್ತಾರೆ. ಇದನ್ನೆಲ್ಲ ನೋಡಿದ ಮಾಧವನಿಗೆ ಅದ್ಯಾಕೋ ಡೌಟ್ ಬರುತ್ತದೆ. ಹೀಗಾಗಿ ದತ್ತನ ಮನೆಗೆ ಮಾಧವ ಬರುತ್ತಾರೆ. ಮಾಧವನನ್ನು ಕಂಡ ದತ್ತನಿಗೆ ಮಾತ್ರ ಫುಲ್ ಖುಷಿ. ಆದರೆ, ಜುಗ್ಗನಿಗೆ ಮಾತ್ರ ಮಾಧವ ಯಾಕಾದರೂ ಬಂದು ಬಿಟ್ಟ ಎಂದೆನಿಸಿದೆ.

ಇನ್ನೂ ಜುಗ್ಗನ ಕೈಯಲ್ಲಿ ಇದ್ದ ಪೇಪರನ್ನು ಕಿತ್ತುಕೊಂಡು ಎಳೆದಾಡುತ್ತಾನೆ. ಆಗ ಪೇಪರ್ ಹರಿದು ಹೋಗುತ್ತದೆ. ಆಗ ಜುಗ್ಗನಿಗೆ ತಲೆಬಿಸಿ ಆಗುತ್ತದೆ. ಏನು ಮಾಡಬೇಕು ಎಂದು ತಿಳಿಯದೇ ಕಂಗಾಲಾಗುತ್ತಾನೆ. ಇತ್ತ ಜುಗ್ಗ ಮೆಲ್ಲಗೆ ಹೋಗಿ ಯಾರನ್ನೋ ಭೇಟಿ ಮಾಡುತ್ತಾನೆ. ಇದನ್ನು ಮಾಧವ ನೋಡುತ್ತಾ ಇರುತ್ತಾನೆ. ಜುಗ್ಗ ಬಳಿ ಆತ ಹೇಳುತ್ತಾನೆ. ದತ್ತ ಅವರ ಡೆತ್ ಸರ್ಟಿಫಿಕೇಟ್ ಇದ್ದರೆ ಇದೆಲ್ಲ ಮಾಡಲು ಸಾಧ್ಯ. ಅದಕ್ಕಾಗಿ ನೀವು ಡೆತ್ ಸರ್ಟಿಫಿಕೇಟ್ ಮಾಡಿಸಿಕೊಂಡು ಬನ್ನಿ. ಉಳಿದ ಕೆಲಸವನ್ನು ನಾನು ಮಾಡಿಕೊಡುತ್ತೇನೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಮಾಧವನಿಗೆ ದತ್ತನ ಪ್ಲಾನ್ ಅರ್ಥವಾಗುತ್ತದೆ.

Shrirasthu Shubhamasthu serial June 9th episode update

ಅದೇ ವೇಳೆ ಜುಗ್ಗನ ಬಳಿಗೆ ಮಾಧವ ಬರುತ್ತಾನೆ. ಮಾದವನನ್ನು ನೋಡಿದ ಜುಗ್ಗನಿಗೆ ಶಾಕ್ ಆಗುತ್ತದೆ. ಆತನ ಎದುರು ಏನೇನೋ ಮಾತನಾಡಲು ತೊಡಗುತ್ತಾನೆ. ಇದನ್ನು ನೋಡಿದ ಮಾಧವ, ಜುಗ್ಗನ ಕಾಪಳಕ್ಕೇ ಹೊಡೆಯುತ್ತನೆ. ದತ್ತ ನಿಮಗೆ ಇರಲು ನೆಲೆ ಮಾಡಿಕೊಟ್ಟಿದ್ದಾರೆ. ಆದರೆ, ನೀವು ಮಾಡುತ್ತಿರುವುದು ಏನು? ದತ್ತನನ್ನು ಮನೆಯಿಂದ ಹೊರಗೆ ಹಾಕಲು ನೋಡುತ್ತಿದ್ದೀರಾ. ಇದು ಸರಿಯಾ? ಎಂದು ಹೇಳಿ ಜುಗ್ಗನಿಗೆ ವಾರ್ನಿಂಗ್ ಮಾಡಿ ಅಲ್ಲಿಂದ ಹೋಗುತ್ತಾನೆ.

ಆಫೀಸ್ ಆನಿವರ್ಸರಿ ಸೆಲೆಬ್ರೆಷನ್‌ಗೆ ತಯಾರಿ

ಆಫೀಸ್ ಆನಿವರ್ಸರಿ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಮಾಡಬೇಕು ಎಂದು ಎಲ್ಲರೂ ಯೋಚನೆ ಮಾಡುತ್ತಿರುತ್ತಾರೆ. ಆಗ ಮಹೇಶ "ವಾಣಿ ಅತ್ತಿಗೆ ಇರಬೇಕಾದರೆ ಬಹಳ ಅದ್ದೂರಿಯಾಗಿ ಕಾರ್ಯಕ್ರಮ ನಡೆಯುತ್ತಿತ್ತು ಹಾಗೆಯೇ ಡ್ಯಾನ್ಸ್ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಬೇಕು. ನಾವು ಡ್ಯಾನ್ಸ್ ಮಾಡಬೇಕು" ಎಂದು ಖುಷಿಯಲ್ಲಿ ಹೇಳುತ್ತಾನೆ. ಡ್ಯಾನ್ಸ್ ಕಲಿಸುವ ತರಬೇತಿದಾರರನ್ನು ಕರೆಸುತ್ತಾರೆ. ಇದನ್ನೆಲ್ಲ ನೋಡಿದ ಅಭಿ ಮಾತ್ರ ನಾನು ಡಾನ್ಸ್ ಮಾಡುವುದು ಇಲ್ಲ ಎಂದು ಖಡಕ್ ಆಗಿ ಹೇಳುತ್ತಾನೆ.

ಅಭಿ ಮನವೊಲಿಸಿದ ಶಾರ್ವರಿ

ಇದನ್ನು ಕೇಳಿದ ಮಹೇಶ ಹಾಗೂ ಶಾರ್ವರಿ ಅಭಿ ಮನಸನ್ನು ಹೇಗಾದರೂ ತಣ್ಣಗಾಗಿಸಿ ಕಾರ್ಯಕ್ರಮದಲ್ಲಿ ಎಲ್ಲರ ಜೊತೆ ಬೆರೆಯುವ ಹಾಗೆ ಮಾಡಬೇಕು. ಡ್ಯಾನ್ಸ್ ಮಾಡಿಸಬೇಕು ಅಂದುಕೊಂಡಿರುತ್ತಾರೆ. ಶಾರ್ವರಿಯ ಮಾತು ಕೇಳಿದ ಅಭಿ ತನ್ನ ನಿಲುವನ್ನು ಬದಲಾಯಿಸಿಕೊಳ್ಳುತ್ತಾರೆ. ಪೂರ್ಣಿಮಾ ತನ್ನ ತಾಯಿ ನನಗೆ ಸಿಕ್ಕಿಯೇ ಸಿಗುತ್ತಾರೆ ಎನ್ನುವ ಭರವಸೆಯಲ್ಲಿ ಇರುತ್ತಾಳೆ

Shrirasthu Shubhamasthu serial June 9th episode update

ನೃತ್ಯ ಅಭ್ಯಾಸ ಮಾಡುತ್ತಿರುವ ಪೂರ್ಣಿಮಾ

ಪೂರ್ಣಿಮಾಗೆ ನೃತ್ಯ ಅಭ್ಯಾಸ ಮಾಡುವುದು ಎಂದರೆ ಪ್ರಾಣ. ನೃತ್ಯ ಮಾಡುತ್ತಲೇ ದೀಪಿಕಾ ತಾಯಿ ವನಜಾ ಮಾತನ್ನು ಮನಸ್ಸಿನಲ್ಲಿಯೇ ಯೋಚನೆ ಮಾಡುತ್ತಿರುತ್ತಾಳೆ. ವನಜಾ ಅವರ ಬಳಿ ಮಾತನಾಡಿದಾಗ ತನ್ನ ತಾಯಿಯ ನೆನಪಾಗುತ್ತದೆ ಎಂದು ಪೂರ್ಣಿಮಾ ಪದೇ ಪದೆ ಹೇಳುತ್ತಿರುತ್ತಾಳೆ. ವನಜಾ ಕೂಡ ಪೂರ್ಣಿಮಾಗೆ ಆಗಾಗ ಕರೆ ಮಾಡಿ ಕ್ಷೇಮ ಸಮಾಚಾರ ವಿಚಾರಣೆ ಮಾಡುತ್ತಾಳೆ.

More from Filmibeat

English summary
Shrirasthu Shubhamasthu serial June 9th episode update:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X