"ಈ ಮನೆಯ ಆಸ್ತಿಯಲ್ಲಿ ಭಾಗ ಕೇಳ್ತೀನಿ.. ಅದೇನೇ ಆಗಲಿ"; ಸಮರ್ಥ್ ತಿರುಗೇಟಿಗೆ ಅಭಿ ಶಾಕ್
ತುಳಸಿ ಮಗಳು ಸಂಧ್ಯಾಳಿಂದ ಸಾಕಷ್ಟು ನೋವು ಅವಮಾನವನ್ನು ಅನುಭವಿಸುತ್ತಿದ್ದಾಳೆ. ಅದಕ್ಕೆ ಆಕೆಗೆ ಬಹಳ ಬೇಸರ. ತನ್ನ ಮಕ್ಕಳೇ ನನಗೆ ಈ ರೀತಿ ನೋವುಂಟು ಮಾಡುತ್ತಿದ್ದಾರಲ್ಲ ಎನ್ನುವ ಚಿಂತೆ ಕಾಡುತ್ತದೆ. ಸಂಧ್ಯಾಗೆ ಮೊದಲಿನಿಂದಲೂ ದುರಾಸೆ. ಎಷ್ಟೇ ಹಣ ಇದ್ದರೂ ಕದಿಯುವ ಚಾಳಿ ಇಟ್ಟುಕೊಂಡಿದ್ದಾಳೆ. ಆದರೆ, ಇದೀಗ ಎಲ್ಲರ ಎದುರು ಮಗಳು ಮಾಡಿದ ನಾಟಕದಿಂದ ಮನೆಯವರ ಮುಂದೆ ತಲೆ ತಗ್ಗಿಸಿ ನಿಲ್ಲುವ ಪರಿಸ್ಥಿತಿ ತುಳಸಿಗೆ ಬಂದಿದೆ.
ದತ್ತ, ಸಂಧ್ಯಾಳನ್ನು ಅಲ್ಲಿಂದ ಕರೆದುಕೊಂಡು ಬರುತ್ತಾನೆ. ದತ್ತಗೆ ಸಂಧ್ಯಾ ವರ್ತನೆಯಿಂದ ಬಹಳ ಬೇಸರ ಬಂದು ಬಿಡುತ್ತದೆ. ಸಂಧ್ಯಾ ಇನ್ನೂ ಯಾವತ್ತೂ ನನ್ನ ಮನೆಯ ಕಡೆ ಬರಲೇ ಬಾರದು ಎಂದು ಹೇಳಿ ಗಂಟು ಮೂಟೆ ಸಮೇತ ಮನೆಯಿಂದ ಹೊರಗೆ ಹಾಕಿ ಬಿಡುತ್ತಾರೆ. ಸಂಧ್ಯಾ ಗರ್ಭಿಣಿ ಎನ್ನುವ ವಿಚಾರಕ್ಕೆ ದತ್ತ, ಸಂಧ್ಯಾಳನ್ನು ಬಹಳ ಕಾಳಜಿ ಮಾಡುತ್ತಿದ್ದರು. ಆದರೆ, ಇದೀಗ ಸಂಧ್ಯಾ ಮಾಡಿದ ಕಿತಾಪತಿ ನೋಡಿ ದತ್ತಗೆ ನಾಚಿಕೆಯಾಗುತ್ತದೆ

ಇನ್ನೂ ಅಭಿಗೆ ಸಮರ್ಥ್‌ನನ್ನು ಕಂಡರೆ ಸ್ವಲ್ಪವೂ ಇಷ್ಟ ಆಗುವುದೇ ಇಲ್ಲ. ಸಮರ್ಥ್ ಏನೇ ಮಾಡಿದರೂ ಅದರಲ್ಲಿ ಒಂದು ತಪ್ಪು ಕಂಡು ಹಿಡಿದು ಆತನ ಅಭಿಪ್ರಾಯವನ್ನೇ ಉಲ್ಟಾ ಪಲ್ಟಾ ಮಾತನಾಡುತ್ತಾನೆ. ಕೊನೆಗೆ ಸಮರ್ಥ್ ಮಾತಿನೇಟಿಗೆ ಸಿಕ್ಕಿ ನಲುಗಿ ಹೋಗಿ ಬಿಡುತ್ತಾನೆ. ಇದೀಗ ಆಗಿದ್ದು ಹಾಗೆಯೇ ಸಮರ್ಥ್ ಮನೆಯಿಂದ ಕೆಲಸಕ್ಕೆ ಹೋಗುತ್ತಾನೆ. ಸಮರ್ಥ್, ಮಾಧವ ಸರ್ ಮನೆಗೆ ಬಂದು ಕಾರನ್ನು ಕೊಂಚ ಕ್ಲೀನ್ ಮಾಡುತ್ತಿರುವಾಗ ಅಭಿ ಮನೆಯೊಳಗಡೆಯಿಂದ ಬರುತ್ತಾನೆ. ಅಭಿ ಏನಾದರು ಕೊಂಕು ಮಾತುಗಳನ್ನು ಆಡುತ್ತಾನೆ ಎನ್ನುವುದು ಸಮರ್ಥ್‌ಗೆ ತಿಳಿದಿದೆ.
ಕೊಂಕು ಮಾತುಗಳಿಂದ ನಿಂದಿಸಿದ ಸಮರ್ಥ್
ಹೇಗಾದರೂ ಮಾಡಿ ಇವತ್ತು ಅಭಿ ಬಾಯಿ ಮುಚ್ಚಿಸಲೆಬೇಕು. ಹಾಗೆಯೇ ಇನ್ನೆಂದೂ ನನ್ನ ತಂಟೆಗೆ ಬಾರದೆ ಇರುವ ಹಾಗೆ ಮಾಡಬೇಕೆಂದು ಮನದಲ್ಲಿ ಯೋಚನೆ ಮಾಡುತ್ತಿರುತ್ತಾನೆ. ಇನ್ನೂ ಅಭಿ ಮನೆಯೊಳಗಡೆಯಿಂದ ಬಂದವನೇ "ಓ ಸರ್ ನೀವು ಈಗ ಬಂದ್ರಾ? ಮನೆಯಲ್ಲಿ ಎಲ್ಲಾ ಆರಾಮ. ಚಹಾ, ತಿಂಡಿ ಏನಾದರೂ ತಿನ್ನುತ್ತೀರಾ ಎಂದು ಕೊಂಕಿನಲ್ಲಿ ಕೇಳಿದಾಗ, ಸಮರ್ಥ್ "ನನ್ನದು ತಿಂಡಿ ಎಲ್ಲಾ ಆಯಿತು. ತಿಂಡಿ ಆಗಿಲ್ಲ ಎಂದರೆ ನಿಮ್ಮ ಬಳಿ ತರಿಸಿ ತಿನ್ನುತ್ತಿದ್ದೆ" ಎಂದು ಹೇಳುತ್ತಾರೆ.

ಸಮರ್ಥ್ ಮೇಲೆ ಕೋಪಿಸಿಕೊಂಡ ಅಭಿ
ಇದನ್ನು ಕೇಳಿ ಅಭಿಗೆ ಬಹಳ ಕೋಪ ಬರುತ್ತದೆ. ಸಮರ್ಥ್ ಬಳಿ ಕೋಪದಿಂದ ಹೇಳುತ್ತಾನೆ "ನಾನು ಏನೋ ಹೀಗೆ ಕೇಳಿದರೆ ನೀನು ಜೋಕ್ ಮಾಡುತ್ತಾ ಇದ್ದೀಯಾ..?" ಎಂದು ಬಯ್ಯುತ್ತಾ ಇರಬೇಕಾದರೆ, ಅಭಿಗೆ ಸಮರ್ಥ್ ಕೊಂಚ ಜೋರಾಗಿಯೇ "ನಿಮ್ಮ ಮನೆಯ ವಂಶದ ಪಟ್ಟಿಯಲ್ಲಿ ನನ್ನ ಹೆಸರು ಇದೆ. ಅದು ನಿನ್ನ ಹೆಸರಿಗಿಂತ ಮುಂಚೆ ನನ್ನ ಹೆಸರು ಇದೆ. ನೀನು ನನಗೆ ತಮ್ಮ ಆಗಬೇಕು. ನೀನು ಏನಾದರೂ ಬಾಲ ಬಿಚ್ಚಿದರೆ ನಾನು ಈ ಮನೆಯ ಆಸ್ತಿಯಲ್ಲಿ ಭಾಗ ಕೇಳುತ್ತೇನೆ. ಅದೇನೇ ಆಗಲಿ" ಎನ್ನುತ್ತಾನೆ. ಬಳಿಕ ಕಾರುಗಳನ್ನು ಅಭಿಗೆ ತೋರಿಸಿ, "ನೋಡು ಆ ಕಾರುಗಳೆಲ್ಲ ನನ್ನದೇ ಒಳಗಿರುವ ಹಣ ಕಾಸಿನಲ್ಲಿ ಕೂಡ ನನ್ನ ಪಾಲಿದೆ" ಎಂದಾಗ ಅಭಿಗೆ ಶಾಕ್ ಆಗುತ್ತದೆ.
ಸಮರ್ಥ್ ಮಾತು ಕೇಳಿ ಅಭಿ ಶಾಕ್
ಕೊನೆಗೆ ಅಭಿ ಬಳಿ ಸಮರ್ಥ್ ಜಾಣ್ಮೆಯಿಂದ ಹೇಳುತ್ತಾನೆ. "ಅಭಿ ಈ ಮನೆಯಲ್ಲಿ ನಿನಗೆ ಎಷ್ಟು ಹಕ್ಕು ಇದೆಯೋ, ಅಷ್ಟು ಹಕ್ಕು ನನಗೆ ಕೂಡ ಇದೆ" ಎಂದಾಗ ಅಭಿ ಏನು ಮಾತನಾಡದೆ ಅಲ್ಲಿಂದ ಹೋಗುತ್ತಾನೆ. ಸಮರ್ಥ್ ಮಾತ್ರ ಅಭಿಯ ಮುಖ ನೋಡಿ ಒಳಗೊಳಗೆ ನಗುತ್ತಾನೆ .


Click it and Unblock the Notifications











