ದೀಪಿಕಾ ಮಸಲತ್ತು ಪೂರ್ಣಿಮಾಗೆ ನುಂಗಲಾರದ ಬಿಸಿ ತುತ್ತು ; ಏನಿದು ಆರೋಪ?
'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಸಾಕಷ್ಟು ಟ್ವಿಸ್ಟ್ ಅಂಡ್ ಟರ್ನ್‌ಗಳನ್ನು ಕಾಣುತ್ತಿದೆ. ಸದ್ಯ ಈ ಧಾರಾವಾಹಿಯಲ್ಲಿ ಪೂರ್ಣಿಮಾ ಮೇಲೆ ದೀಪಿಕಾ ಬಹಳ ದೊಡ್ಡ ಆರೋಪ ಮಾಡುತ್ತಿದ್ದಾಳೆ. ದೀಪಿಕಾಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ. ಆದರೂ ಎಲ್ಲರ ಮನಸನ್ನು ಹೇಗಾದರೂ ಮಾಡಿ ಗೆಲ್ಲಲೇ ಬೇಕು ಎಂದು ಆಲೋಚಿಸಿ ಸಮಯ ನೋಡಿ ಸುಳ್ಳು ಹೇಳುತ್ತಾಳೆ.
ದೀಪಿಕಾಗೆ ಸುಳ್ಳು ಹೇಳುವುದು ಬಹಳ ಸುಲಭ. ಹೀಗಾಗಿ ಲೀಲಾಜಾಲವಾಗಿ ಸುಳ್ಳು ಹೇಳುತ್ತಾಳೆ. ಆದರೆ, ಆ ಒಂದು ಸುಳ್ಳಿನಿಂದ ಪೂರ್ಣಿಮಾಗೆ ಬಹಳ ದೊಡ್ಡ ಸಂಕಷ್ಟ ಎದುರಾಗಿದೆ. ತುಳಸಿ ಮಾಡಿದ ಅಡುಗೆಯನ್ನು ದೀಪಿಕಾ ಕೆಡಿಸಿ ಬಿಡುತ್ತಾಳೆ. ಅದನ್ನು ನೋಡಿದ ಪೂರ್ಣಿಮಾ ಮೇಲೆ ದೀಪಿಕಾ ಆರೋಪ ಮಾಡುತ್ತಾಳೆ. ಆದರೆ, ಮನೆಯವರ ಮುಂದೆ ದೀಪಿಕಾ ಬುದ್ದಿಯನ್ನು ಹೇಳಿ ಬಿಡುತ್ತೇನೆ ಎಂದು ಹೇಳಿದಾಗ ಆತಂಕ ಶುರು ಆಗುತ್ತದೆ.

ಹೀಗೆಲ್ಲ ಆದರೆ ನನ್ನ ನಿಜವಾದ ಬಣ್ಣ ಎಲ್ಲರ ಮುಂದೆ ರಿವೀಲ್ ಆಗುವುದಂತು ಸತ್ಯ ಎಂದು ಕೊಂಡು ಪೂರ್ಣಿಮಾ ಬಳಿ ಬೆದರಿಕೆ ಹಾಕುತ್ತಾಳೆ. ಎಲ್ಲಾದರೂ ನೀವು ಸತ್ಯ ಹೇಳುತ್ತೀರಿ ಎಂದಾದರೆ ನಾನು ಮಾತ್ರ ಈ ಮನೆಯಲ್ಲಿ ಖಂಡಿತ ಇರುವುದು ಇಲ್ಲ. ಹಾಗೆಯೇ ಮತ್ತೆ ಯಾವತ್ತೂ ಈ ಮನೆಯತ್ತ ತಿರುಗಿ ಕೂಡ ನೋಡುವುದು ಇಲ್ಲ ಎಂದು ಹೇಳುತ್ತಾಳೆ. ದೀಪಿಕಾ ಮಾತು ಕೇಳಿ ಪೂರ್ಣಿಮಾಗೆ ಬಹಳ ದಿಗಿಲು ಆಗುತ್ತದೆ. ನಿಜ ವಿಚಾರ ಹೇಳಲು ಆಗದೆ , ನುಂಗಲು ಆಗದೆ ಬಿಸಿ ತುಪ್ಪದ ಹಾಗಾಗುತ್ತದೆ.
ದೀಪಿಕಾ ಮಾತಿಗೆ ಸುಮ್ಮನಾದ ಪೂರ್ಣಿಮಾ
ದೀಪಿಕಾ ಮಾತಿಗೆ ಏನು ಹೇಳದೆ ಪೂರ್ಣಿಮಾ ಸುಮ್ಮನೆ ಆಗುತ್ತಾಳೆ . ಕೊನೆಗೆ ಪೂರ್ಣಿಮಾ ರಸಂ ,ಪಲ್ಯ ಎಲ್ಲಾ ಮಾಡಿ ಟೇಬಲ್‌ನಲ್ಲಿ ಇಡುತ್ತಾಳೆ. ಇನ್ನೂ ತುಳಸಿ ಅನ್ನ ಬಡಿಸಲು ನಿಂತಿರುತ್ತಾರೆ. ಆದರೆ, ದೀಪಿಕಾ ನೈಸ್ ಮಾತುಗಳನ್ನು ಹೇಳಿ ತುಳಸಿಯನ್ನು ಚೇರ್ ಮೇಲೆ ಕೂರಿಸುತ್ತಾರೆ. ಹಾಗೆಯೇ ದೀಪಿಕಾ ಎಲ್ಲರಿಗೂ ಬಡಿಸುತ್ತಾರೆ.

ಎಲ್ಲರೆದುರು ದೀಪಿಕಾಗೆ ಅವಮಾನ
ರಸಂ ಹಾಗೂ ತರಕಾರಿ ಪಲ್ಯವನ್ನು ಟೇಸ್ಟ್ ಮಾಡಿದ ಮನೆ ಮಂದಿ ಬಹಳ ಖುಷಿ ಪಡುತ್ತಾರೆ. ಆದರೆ ಗೊಜ್ಜು ಮಾಡಿರುವುದು ನೋಡಿ ಇದ್ಯರು ಮಾಡಿರುವುದು ಎಂದು ಕೇಳುತ್ತಾರೆ. ಆದರೆ ದೀಪಿಕಾ ಮಾತ್ರ ನಾನು ರಸಂ ಹಾಗೂ ಪಲ್ಯ ಮಾಡಿರುವುದು . ತರಕಾರಿ ಗೊಜ್ಜು ಮಾಡಿರುವುದು ಅಕ್ಕ ಎಂದಾಗ ಪೂರ್ಣಿಮಾಗೆ ಸಿಡಿಲು ಬಡಿದ ಹಾಗೆ ಆಗುತ್ತದೆ. ಆಗ ಪೂರ್ಣಿಮಾ ಕೊಂಚ ಜೋರಾಗಿಯೇ ಹೇಳುತ್ತಾಳೆ. ನಾನೇ ರಸಂ ಹಾಗೂ ತರಕಾರಿ ಪಲ್ಯ ಮಾಡಿದ್ದು, ನೀನು ಮಾಡಿದ್ದು ಗೊಜ್ಜು. ಆದರೆ ಇದೀಗ ನೀನು ಉಲ್ಟಾ ಹೊಡೆಯುತ್ತಾ ಇದ್ದೀಯಾ . ಯಾಕೆ ಹೀಗೆ ಮಾಡುತ್ತಾ ಇದ್ದಿ ಎಂದಾಗ ದೀಪಿಕಾ ಆಳುವ ಹಾಗೆ ನಾಟಕ ಮಾಡುತ್ತಾಳೆ.
ದೀಪಿಕಾ ನಾಟಕಕ್ಕೆ ಮನೆ ಮಂದಿ ಶಾಕ್
ಆ ವೇಳೆ ಮನೆ ಮಂದಿಯೆಲ್ಲ ಪೂರ್ಣಿಮಾ ಕಡೆ ನೋಡುತ್ತಾರೆ. ಆದರೆ ಪೂರ್ಣಿಮಾ ಹೇಳಿರುವ ನಿಜ ಯಾರಿಗೂ ಅರ್ಥ ಆಗುವುದೇ ಇಲ್ಲ.


Click it and Unblock the Notifications











