Shrirasthu Shubhamasthu:ಶಾರ್ವರಿ ಕುತಂತ್ರಕ್ಕೆ ಮನೆ ಬಿಟ್ಟು ಹೋದಳೇ ಹಿರಿ ಸೊಸೆ? ಈ ಮನೆಯಲ್ಲಿ ಏನಾಗ್ತಿದೆ?

By ಪೂರ್ವ

ಶಾರ್ವರಿ ಕುತಂತ್ರ ಮಿತಿ ಮೀರಿದೆ. ತುಳಸಿ ಮಾಧವನ ನೆಮ್ಮದಿಯನ್ನು ಕೆಡಿಸಬೇಕು ಎಂದು ಎಲ್ಲಿಲ್ಲದ ಪ್ಲಾನ್ ಮಾಡಿಕೊಂಡು ಬಂದಿದ್ದಾಳೆ. ತುಳಸಿಗೆ ಶಾರ್ವರಿ ಬಂಡವಾಳ ಏನು ಅನ್ನೋದು ಗೊತ್ತಾಗಿದೆ. ಆದರೆ ಆಕೆ ಯಾರ ಜೊತೆಗೆ ಹೇಳದೆ ತನ್ನೊಳಗೆ ಇಟ್ಟುಕೊಂಡಿದ್ದಾಳೆ. ಹೇಗಾದರೂ ಮಾಡಿ ಶಾರ್ವರಿಯ ಮುಖವಾಡವನ್ನು ಮನೆಯವರ ಮುಂದೆ ಕಳಚಿಡಬೇಕು ಅಂತ ನಿರ್ಧರಿಸಿದ್ದಾಳೆ. ಆದರೂ ಶಾರ್ವರಿಯನ್ನು ಮನೆಯಲ್ಲಿ ಬಹಳಷ್ಟು ಪ್ರೀತಿ ಮಾಡುತ್ತಾರೆ. ಆಕೆಯ ಮಾತಿಗೆ ಬೆಲೆ ಕೊಡುತ್ತಾರೆ. ಆದರೆ ಆಕೆ ಮಾಡುವ ಕೆಟ್ಟ ಕೆಲಸಗಳು ಒಂದೆರಡಲ್ಲ.

ಈಗ ದತ್ತನಿಗೆ ಏನಾದರು ತೊಂದರೆ ಕೂಡಲೇ ಬೇಕು ಎಂದು ಹೊಂಚು ಹಾಕುತ್ತಿದ್ದಾಳೆ. ಶಾರ್ವರಿಗೆ ದತ್ತ ಮಾತಿಗೆ ಎದಿರೇಟು ನೀಡಲು ಸಾಧ್ಯ ಆಗುವುದಿಲ್ಲ. ದತ್ತ ದುಷ್ಟರ ಪಾಲಿಗೆ ಅಷ್ಟೊಂದು ಕಠೋರಿ. ಯಾರಿಗೂ ಮುಲಾಜು ತೋರಿಸಲ್ಲಾ. ಹಾಗೇ ಶಾರ್ವರಿಗೆ ಪೂರ್ಣಿಮಾ ಹಾಗೂ ಅವಿನಾಶ್ ದಾಂಪತ್ಯದ ಮೇಲೆ ಕಣ್ಣು ಬಿದ್ದಿದೆ. ಅವರಿಬ್ಬರ ಜೀವನವನ್ನು ಹೇಗಾದರೂ ಮಾಡಿ ಹಾಳು ಮಾಡಲೇಬೇಕೆಂದು ನಿರ್ಧಾರ ಮಾಡಿದ್ದಾಳೆ.

Shrirasthu Shubhamasthu serial March 4th episode about Sharvari targeting Poornima

ಪೂರ್ಣಿಮಾಗೆ ಇದ್ದಕ್ಕಿದ್ದ ಹಾಗೆ ಒಂದು ಕರೆ ಬರುತ್ತೆ. ಆ ಕರೆಯನ್ನು ಸ್ವೀಕರಿಸಿದ ಪೂರ್ಣಿಮಾಗೆ ಭಯ ಆಗುತ್ತೆ. ಯಾಕೆಂದರೆ, ಆಕೆಯನ್ನು ಯಾರೋ ಬ್ಲಾಕ್ ಮೇಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಆದರೂ ಧೈರ್ಯ ಮಾಡಿ ಪೂರ್ಣಿಮಾ ಕರೆ ಸ್ವೀಕಾರ ಮಾಡುತ್ತಾಳೆ. ಅತ್ತ ಕಡೆಯಿಂದ ಹೆಂಗಸಿನ ಧ್ವನಿ ಕೇಳಿ ಪೂರ್ಣಿಮಾಗೆ ಕೊಂಚ ಗಲಿ ಬಿಲಿ ಆಗುತ್ತೆ. ಆ ಹೆಂಗಸು ಇಲ್ಲದ್ದನ್ನು ಹೇಳಿ ಪೂರ್ಣಿಮಾಗೆ ಬೇಕೆಂದೇ ಟಾರ್ಚರ್ ಮಾಡುತ್ತಿದ್ದಾಳೆ. ಆ ಹೆಂಗಸು ಬೇರೆ ಯಾರೂ ಅಲ್ಲ ಶಾರ್ವರಿ.

ಪೂರ್ಣಿಮಾ ಗೆ ಕಾಟ ಕೊಡುತ್ತಿರುವ ಶಾರ್ವರಿ

ಪೂರ್ಣಿಮಾಗೆ ಮನೆ ಬಿಟ್ಟು ಹೋಗುವಂತೆ ಶಾರ್ವರಿ ಪ್ರೇರೇಪಣೆ ನೀಡುತ್ತಿದ್ದಾಳೆ. ಪೂರ್ಣಿಮಾಗೆ ಅವಿನಾಶ್ ಬಿಟ್ಟು ಎಲ್ಲಿಗೆ ಹೋಗಲು ಇಷ್ಟವಿಲ್ಲ. ಅವಿನಾಶ್ ಮೇಲೆ ಪೂರ್ಣಿಮಾ ಜೀವವನ್ನೇ ಇಟ್ಟುಕೊಂಡಿದ್ದಾಳೆ. ಇನ್ನು ಫೋನ್‌ನಲ್ಲಿ ಮಾತನಾಡುವ ಹೆಂಗಸು ಯಾರು ಎನ್ನುವುದೇ ಪೂರ್ಣಿಮಾಗೆ ಗೊತ್ತಾಗುತ್ತಿಲ್ಲ. ಇದನ್ನು ತುಳಸಿ ದೂರದಿಂದಲೇ ಗಮನಿಸುತ್ತಿರುತ್ತಾಳೆ. ಪೂರ್ಣಿಮಾ ಮುಖದಲ್ಲಿದ್ದ ಗಾಬರಿಯನ್ನು ನೋಡಿ ಸಮಾಧಾನ ಪಡಿಸಬೇಕು ಎಂದುಕೊಳ್ಳುತ್ತಾಳೆ.

Shrirasthu Shubhamasthu serial March 4th episode about Sharvari targeting Poornima

ದೀಪಿಕಾಳನ್ನು ನೋಡಿ ಶಾಕ್ ಆದ ಶಾರ್ವರಿ

ಇನ್ನು ಶಾರ್ವರಿ ಫೋನ್‌ನಲ್ಲಿ ಮಾತನಾಡುವಾಗ ದೀಪಿಕಾ ಅದೆಲ್ಲವನ್ನೂ ಗಮನಿಸುತ್ತಾಳೆ. ಪೂರ್ಣಿಮಾಗೆ ಟಾರ್ಚರ್ ನೀಡುತ್ತಿರುವವರು ಬೇರೆ ಯಾರು ಅಲ್ಲ ಶಾರ್ವರಿ ಎನ್ನುವುದು ದೀಪಿಕಾಗೆ ಗೊತ್ತಾಗುತ್ತೆ. ದೀಪಿಕಾಗೆ ಶಾರ್ವರಿ ಅತ್ತೆ ಯಾಕೆ ಹೀಗೆ ಮಾಡುತ್ತಿದ್ದಾರೆ ಎಂದು ಅನುಮಾನ ಕಾಡುತ್ತದೆ. ಈ ಬಗ್ಗೆ ಶಾರ್ವಾರಿ ಬಳಿ ಕೇಳಿದಾಗ ಇದೆಲ್ಲ ನಿನ್ನ ಸಲುವಾಗಿ ಮಾಡುತ್ತಿರುವುದು ದೀಪಿಕಾ. ನೀನು ಚೆನ್ನಾಗಿರಲಿ ಎನ್ನುವ ಕಾರಣಕ್ಕೆ ಇದೆಲ್ಲ ಮಾಡುತ್ತಿದ್ದೇನೆ. ಪೂರ್ಣಿಮಾ ಮನೆ ಬಿಟ್ಟು ಹೋದರೆ ನಮಗೆ ಅಲ್ವಾ ಲಾಭ? ಅದಕ್ಕಾಗಿ ಆಕೆ ಮನೆ ಬಿಟ್ಟು ಹೋಗಲು ಎಂದು ಈ ರೀತಿ ಮಾಡುತ್ತಿದ್ದೇನೆ ಎಂದು ಹೇಳಿದಾಗ ದೀಪಿಕಾಗೆ ಎಲ್ಲಿಲ್ಲದ ಖುಷಿ ಆಗುತ್ತೆ.

ಅವಿಯನ್ನೂ ಅಣ್ಣ ಎಂದು ಕರೆದ ಸಮರ್ಥ್

ಇತ್ತ ಅವಿ, ಅಭಿ ಹಾಗೆಯೇ ಸಮರ್ಥ್ ಕಾರಿನಲ್ಲಿ ಹೋಗುತ್ತಿರುವಾಗ ಅವಿಯನ್ನು ಸಮರ್ಥ್ ಸರ್ ಎಂದೇ ಕರೆಯುತ್ತಾನೆ. ಆದರೆ ಅವಿಗೆ ಬಹಳ ಬೇಸರ. ಸಮರ್ಥ್ ತನ್ನನ್ನು ಅಣ್ಣ ಎಂದು ಕೂಗುತ್ತಿಲ್ವಲ್ಲ ಎನ್ನುವ ಬೇಸರ ಆತನನ್ನು ಕಾಡುತ್ತಿರುತ್ತದೆ. ಎಳ ನೀರು ಕುಡಿಯಲೆಂದು ಸಮರ್ಥ್ ಕಾರನ್ನು ಸೈಡ್‌ಗೆ ಹಾಕುತ್ತಾನೆ. ಅಭಿ ಆ ಕೂಡಲೇ ಎಳೆ ನೀರು ಕುಡಿಯಲು ಹೋದರೆ ಸಮರ್ಥ್ ಮಾತ್ರ ತಾನು ಬರುವುದಿಲ್ಲ ಎಂದು ಹಠ ಹಿಡಿದು ಕಾರಿನ ಬಳಿ ನಿಂತುಕೊಳ್ಳುತ್ತಾನೆ. ಸಮರ್ಥ್, ಅಭಿ ಜೊತೆ ಎಳ ನೀರು ಕುಡಿಯಲು ಹೋಗುತ್ತಾನೆ. ಆಗ ಅವಿ ಹಿಂದೆಯಿಂದ ಆಟೋ ರಿಕ್ಷಾ ಬಹಳ ಸ್ಪೀಡ್ ಆಗಿ ಬರುತ್ತಿರುತ್ತೆ. ಇದನ್ನು ಕಂಡ ಸಮರ್ಥ್ ಅಣ್ಣ ಎಂದು ಜೋರಾಗಿ ಕೂಗಿ ಸಮರ್ಥ್‌ನ ಜೀವ ರಕ್ಷಣೆ ಮಾಡುತ್ತಾನೆ. ಇದರಿಂದ ಅವಿಗೆ ಬಹಳ ಖುಷಿ ಆಗುತ್ತದೆ. ಅಣ್ಣ ಎಂದು ಕರೆದುಬಿಟ್ಟನಲ್ಲ ಎನ್ನುವ ಖುಷಿ ಆತನ ಮುಖದಲ್ಲಿದೆ.

More from Filmibeat

English summary
Shrirasthu Shubhamasthu serial March 4th episode about Sharvari targeting Poornima;
Read more about: serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X