Shrirasthu Shubhamasthu: ಜನಾರ್ಧನ್ ಮಗಳಾಗಿದ್ಯಾವಾಗ ಪೂರ್ಣಿಮಾ? ಏನಿದು ಮಾಸ್ಟರ್ ಪ್ಲಾನ್‌?

By ಪೂರ್ವ

ಮಾಧವನ ಮನೆಯಲ್ಲಿ ಅವಿನಾಶ್ ತುಳಸಿಯನ್ನು ಸರ್ಪ್ರೈಸ್ ಆಗಿ ಕರೆದು ಅಮ್ಮಂದಿರ ದಿನಾಚರಣೆಯನ್ನು ಆಚರಣೆ ಮಾಡುತ್ತಾನೆ. ಹಾಗೆಯೇ ಅವಿನಾಶ್ ಕೇಕ್ ಕಟ್ ಮಾಡಿಸುತ್ತಾನೆ. ತುಳಸಿಗೆ ಅವಿ ವಿಶ್ ಮಾಡಿದ್ದನ್ನು ನೋಡಿ ಬಹಳ ಖುಷಿ ಆಗುತ್ತೆ. ಅವಿಗೆ ತುಳಸಿ ಅಂದರೆ ಅದೇನೋ ಬಹಳ ಪ್ರೀತಿ. ತುಳಸಿ ಜೊತೆ ಅದೇನೋ ಉತ್ತಮ ಸಂಭಂದವನ್ನು ಇಟ್ಟುಕೊಂಡಿದ್ದಾನೆ. ಇದರಿಂದಾಗಿ ಮಾಧವನ ಜೊತೆ ಇದ್ದ ಕೊಂಚ ಮನಸ್ತಾಪ ಕಡಿಮೆ ಆಗಿದೆ. ಇನ್ನೂ ತುಳಸಿಗೆ ಅವಿನಾಶ್ ಒಂದು ಗಿಫ್ಟ್ ಕೊಡುತ್ತಾನೆ . ಆ ಗಿಫ್ಟ್ ಓಪನ್ ಮಾಡಿ ನೋಡಿದಾಗ ತುಳಸಿಗೆ ಶಾಕ್ ಆಗುತ್ತದೆ. ಅದರಲ್ಲಿ ಗೋಲ್ಡ್ ಚೈನ್ ಇರುತ್ತೆ.

ಅದನ್ನು ನೋಡಿದ ತುಳಸಿ "ಈ ಚೈನ್ ಬಹಳ ಚೆನ್ನಾಗಿದೆ. ಇದೆಲ್ಲ ಯಾಕೆ ತರಲು ಹೋದೆ" ಎಂದಾಗ ಅವಿನಾಶ್ ಮಾತ್ರ ನಿಮಗಿಂತ ಇದ್ಯಾವುದೂ ದೊಡ್ಡದಲ್ಲ ಅನ್ನುವ ರೀತಿ ಮಾತನಾಡುತ್ತಾನೆ. ಆ ವೇಳೆ ಅಲ್ಲಿಗೆ ಅಮ್ಮನಿಗೆ ವಿಶ್ ಮಾಡಬೇಕು ಎಂದು ಸಮರ್ಥ್ ಬರುತ್ತಾನೆ. ಸಮರ್ಥ್ ಅವಿ ಕೊಟ್ಟ ಗಿಫ್ಟ್ ನೋಡಿ ಹಿಂದೆ ಸರಿಯುತ್ತಾನೆ. ಮಗನನ್ನು ನೋಡಿದ ತುಳಸಿ ಸಮರ್ಥ್ ಬಾ ಎಂದು ಕರೆಯುತ್ತಾರೆ. ಆದರೆ ಸಮರ್ಥ್ ನನಗೆ ಬೇರೆ ಕೆಲಸ ಇದೆ ಎಂದು ಅಲ್ಲಿಂದ ಹೊರಟು ಹೋಗುತ್ತಾನೆ. ತುಳಸಿಗೆ ಅದು ನೋವು ಆಗುತ್ತೆ. ಅವಿ, ತುಳಸಿಗೆ ಧೈರ್ಯ ಹೇಳುತ್ತಾನೆ. ತುಳಸಿ ಮಗನ ಹಿಂದೆಯೇ ಹೋಗುತ್ತಾಳೆ.

Shrirasthu Shubhamasthu serial may 15th episode update

ಸಮರ್ಥ್‌ಗೆ ಯಾಕೆ ಅಷ್ಟು ನೋವು ಆಯಿತು ಎಂದರೆ, ಅಮ್ಮ ಇದೀಗ ದೊಡ್ಡ ಶ್ರೀಮಂತರ ಮಗನ ತಾಯಿ. ಆಕೆಗೆ ನಾನು ಕೊಡುವ ಗಿಫ್ಟ್ ಚಿಕ್ಕದು. ಆಕೆ ಅದನ್ನು ಹೇಗೆ ಸ್ವೀಕರಿಸುತ್ತಾಳೆ ಎನ್ನುವ ಅಳುಕು ಇರುತ್ತೆ. ತುಳಸಿಗೆ ಮಗನ ಬಾಯಿಂದಲೇ ಅಮ್ಮಂದಿರ ದಿನಾಚರಣೆಗೆ ಶುಭ ಕೋರುವುದನ್ನು ಕೇಳಲು ಬಹಳ ಇಷ್ಟ. ಆದರೆ, ಅದನ್ನು ಕೇಳಿಸಲು ಅವಿ ಹಾಗೂ ಮಾಧವ ಬಹಳ ಕಷ್ಟ ಪಡುತ್ತಿರುತ್ತಾರೆ. ಕೊನೆಗೆ ಅವಿ, ಸಮರ್ಥ್‌ಗೆ ಆರ್ಡರ್ ಮಾಡುತ್ತಾನೆ. ಸಮರ್ಥ್ "ನೀನು ತುಳಸಿ ಅಮ್ಮನಿಗೆ ವಿಶ್ ಮಾಡಲೇ ಬೇಕು" ಎಂದು ಖಡಕ್ ಆಗಿ ಹೇಳಿದಾಗ ಸಮರ್ಥ್ ಮನಸ್ಸಿನಲ್ಲಿ ಅಮ್ಮ ನಾನು ಯಾರ ಒತ್ತಾಯಕ್ಕೆ ಈ ಮಾತು ಹೇಳುತ್ತಿಲ್ಲ ಎಂದು "ಹ್ಯಾಪಿ ಮದರ್ಸ್ ಡೇ" ಎಂದು ಹೇಳುತ್ತಾನೆ. ಇದನ್ನು ಕೇಳಿ ತುಳಸಿಗೆ ಬಹಳ ಖುಷಿ ಆಗುತ್ತದೆ.

ಮಾಧವನ ಮನೆಯವರಿಗೆ ಶಾಕ್‌

ಆತನಿಗೆ ತನ್ನ ಆಸ್ತಿ ಎಲ್ಲಿ ಅನಾಥ ಆಶ್ರಮಕ್ಕೆ ಹೋಗುತ್ತದೆ ಎನ್ನುವುದೇ ಬಹಳ ದೊಡ್ಡ ಭಯ. ಜನಾರ್ಧನ್‌ಗೆ ಬಹಳ ಪಾಪದ ಹುಡುಗಿಯನ್ನು ದಾಳ ಮಾಡಿಕೊಂಡರೆ, ಆಸ್ತಿಯೆಲ್ಲ ನನ್ನ ಪಾಲು ಮಾಡಿಕೊಳ್ಳಬಹುದು ಅಂದುಕೊಂಡಿದ್ದಾನೆ. ಅದೇ ರೀತಿ ಮಾಡುತ್ತಾನೆ ಕೂಡ. ಜನಾರ್ಧನ್ ಹಾಗೂ ವನಜಾ ದಂಪತಿಯನ್ನು ಬಹಳ ಪ್ರೀತಿಯಿಂದ ಮನೆ ಮಂದಿ ಸ್ವಾಗತ ಮಾಡುತ್ತಾರೆ. ದೀಪಿಕಾಗೆ ಈ ಪ್ಲಾನ್ ಮೊದಲೇ ತಿಳಿದಿರುವುದರಿಂದ ಆಕೆ ಫುಲ್ ಸೈಲೆಂಟ್ ಆಗಿ ಇರುತ್ತಾಳೆ . ಹೇಗಾದರೂ ಮಾಡಿ ಆಸ್ತಿಯನ್ನು ಅಪ್ಪನ ಕೈ ಸೇರಲಿ ಎಂದುಕೊಳ್ಳುತ್ತಾಳೆ. ಇದಕ್ಕೆ ಪೂರ್ಣಿಮಾ ಬಲಿ ಪಶು ಆಗಲಿ ಎನ್ನುವುದೇ ಆಕೆಯ ಮಹದಾಸೆ.

Shrirasthu Shubhamasthu serial may 15th episode update

ಅಪ್ಪನ ಮಾತಿಗೆ ನಕ್ಕಿದ್ದೇಕೆ ದೀಪಿಕಾ?

ಇನ್ನೂ ಜನಾರ್ಧನ್, ಪೂರ್ಣಿಮಾಳನ್ನು ಕರೆಯುತ್ತಾನೆ. ಆಕೆಯನ್ನು ನೋಡಿದ ಜನಾರ್ಧನ್ "ನನ್ನ ದೊಡ್ಡ ಮಗಳನ್ನು ನಾವು 25 ವರ್ಷಗಳ ಹಿಂದೆ ಒಂದು ದೇವಾಲಯದಲ್ಲಿ ಬಿಟ್ಟು ಹೋಗಿದ್ದೆವು. ಆಕೆ ಬೇರೆ ಯಾರು ಅಲ್ಲ ಅದು ನೀನೇ ಪೂರ್ಣಿಮಾ. ನೀನೇ ನನ್ನ ದೊಡ್ಡ ಮಗಳು ಎಂದು ಹೇಳಿದಾಗ ಪೂರ್ಣಿಮಾಗೆ ಶಾಕ್ ಆಗುತ್ತದೆ. ಮಾಧವ ಬೆರಗಾಗಿ ಬಿಡುತ್ತಾರೆ. ಇದೇನಿದು ಇಷ್ಟು ದಿನ ತಿಳಿಯದೇ ಇರುವ ಸತ್ಯ. ಇದೀಗ ಒಂದೊಂದಾಗಿಯೇ ಬೆಳಕಿಗೆ ಬರುತ್ತಿದೆ ಅಲ್ವಾ" ಎಂದು ಮನದಲ್ಲಿ ಯೋಚನೆ ಮಾಡುತ್ತಾರೆ.

ಜನಾರ್ಧನ್ ಮಾತಿಗೆ ಮೌನಿ ಆದ ಪೂರ್ಣಿಮಾ

"ಏನು ಹೇಳುತ್ತಿದ್ದೀರಿ ಜನಾರ್ಧನ್ ಅದು ಹೇಗೆ ಪೂರ್ಣಿಮಾ ನಿಮ್ಮ ಮಗಳಾಗಲು ಸಾಧ್ಯ? ಎಂದು ಮಾಧವ ಕೇಳಿದಾಗ, ಜನಾರ್ಧನ್ "ಪೂರ್ಣಿಮಾ ನನ್ನ ಮಗಳೇ ಮಾಧವ ಅವರೇ" ಎಂದು ಹೇಳುತ್ತಾನೆ. ಇದನ್ನು ಕೇಳಿದ ಪೂರ್ಣಿಮಾ ಹಾಗೂ ಮನೆ ಮಂದಿ ಬಹಳ ಶಾಕ್‌ನಲ್ಲಿ ಇದ್ದಾರೆ. ಇದು ಹೇಗೆ ಸಾಧ್ಯ ಎನ್ನುವ ಮನಸ್ಥಿತಿ ಎಲ್ಲರಲ್ಲೂ ಮೂಡಿದೆ.

More from Filmibeat

English summary
Shrirasthu Shubhamasthu serial may 15th episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X