Shrirasthu Shubhamasthu:ಜೊತೆಗಿದ್ದವರನ್ನು ಅಪ್ಪ- ಅಮ್ಮ ಎಂದು ಒಪ್ಪಿಕೊಳ್ಳಲಾಗದೇ ಒದ್ದಾಡುತ್ತಿರುವ ಪೂರ್ಣಿ

By ಪ್ರಿಯಾದೊರೆ

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ದತ್ತ ತಾತ ಹೇಳುವ ಎಲ್ಲಾ ಕೆಲಸವನ್ನೂ ಜುಗ್ಗ ಮಾಡುತ್ತಿದ್ದಾನೆ. ಫ್ರೀಯಾಗಿ ಊಟ ಮಾಡಲು ಜುಗ್ಗ ಹೀಗೆಲ್ಲಾ ಮಾಡುತ್ತಿದ್ದಾನೆ.

ಅದಾಗಲೇ ಬಿಸಿನೆಸ್ ಮಾಡಲೆಂದು ಜುಗ್ಗ ಮತ್ತು ಸಂಧ್ಯಾ ಸೇರಿಕೊಂಡು ಅನಾಥ ಹೆಣವೊಂದನ್ನು ಸುಟ್ಟು, ಡೆತ್ ಸರ್ಟಿಫಿಕೇಟ್‌ಗಾಗಿ ಕಾಯುತ್ತಿದ್ದಾರೆ.

Shrirasthu Shubhamasthu serial May 17th episode update

ಹೇಗಾದರೂ ಮಾಡಿ ತಮ್ಮ ಆಸೆಯನ್ನು ನೆರವೇರಿಸಿಕೊಳ್ಳಬೇಕು ಎಂಬುದು ಜುಗ್ಗನ ಪ್ಲಾನ್. ಸುಖವಾಗಿರಬೇಕೆಂದು ಸಂಧ್ಯಾ ಕೂಡ ಮಾವನ ಜೊತೆಗೆ ಕೈ ಜೋಡಿಸಿದ್ದಾಳೆ.

ಡೆತ್ ಸರ್ಟಿಫಿಕೆಟ್ ಪಡೆದ ಜುಗ್ಗ

ಹಲವು ದಿನಗಳಿಂದ ಕಾಯುತ್ತಿದ್ದ ಜುಗ್ಗನಿಗೆ ಈಗ ದತ್ತ ತಾತನ ಹೆಸರಲ್ಲಿ ಡುಪ್ಲಿಕೇಟ್ ಡೆತ್ ಸರ್ಟಿಫಿಕೇಟ್ ಸಿಕ್ಕಾಗಿದೆ. ಇದನ್ನು ನೋಡುತ್ತಾ ಸಂಧ್ಯಾ ಮತ್ತು ಜುಗ್ಗ ಇಬ್ಬರೂ ಪ್ರಪಂಚವನ್ನೇ ಮರೆತಿದ್ದಾರೆ. ದತ್ತ ತಾತನ ಹೆಸರಲ್ಲಿರುವ ಮನೆಯನ್ನು ಸಂಧ್ಯಾ ಹೆಸರಿಗೆ ಬದಲಾಯಿಸಬೇಕು. ಬಳಿಕ ಆ ಮನೆಯಿಂದ ಲೋನ್ ಪಡೆದು ರಿಯಲ್ ಎಸ್ಟೇಟ್ ಬಿಸಿನೆಸ್ ಅನ್ನು ಶುರು ಮಾಡಬೇಕು ಎಂದುಕೊಂಡಿದ್ದಾರೆ. ಆ ಬಿಸಿನೆಸ್‌ನಿಂದಾಗಿ ನಾಲ್ಕು ಪಟ್ಟು ಹೆಚ್ಚು ಲಾಭ ಪಡೆದು ಆದಷ್ಟು ಬೇಗ ಶ್ರೀಮಂತರಾಗಬಹುದು ಎಂದು ಕನಸು ಕಂಡಿದ್ದಾರೆ. ತಾತ ದತ್ತ ಮತ್ತು ಸಿರಿ ಇಬ್ಬರಿಗೂ ಸಂಧ್ಯಾ ಹಾಗೂ ಜುಗ್ಗ ಸೇರಿಕೊಂಡು ಏನೋ ಎಡವಟ್ಟು ಪ್ಲಾನ್ ಮಾಡಿದ್ದಾರೆ ಎಂಬ ಅನುಮಾನ ಮೂಡಿದೆ. ಆದರೆ, ಇಬ್ಬರಿಗೂ ಸತ್ಯ ಗೊತ್ತಾಗಿಲ್ಲ. ಮುಂದೆ ಇನ್ನೂ ಏನೇನು ಆಗುತ್ತದೆಯೋ.

ಪೂರ್ಣಿ ಆತಂಕಕ್ಕೆ ಜೊತೆಯಾದ ಕುಟುಂಬ

ವನಜಾ ಮತ್ತು ಜನಾರ್ಧನ್ ಮನೆಗೆ ಬಂದು ಇದ್ದಕ್ಕಿದ್ದ ಹಾಗೆಯೇ ನಾವೇ ನಿನ್ನ ತಂದೆ-ತಾಯಿ. ನಿನ್ನನ್ನು ಆಶ್ರಮಕ್ಕೆ ಬಿಟ್ಟಿದ್ದು ನಾವೇ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ತಮ್ಮನ್ನು ತಂದೆ-ತಾಯಿ ಎಂದು ಒಪ್ಪಿಕೋ ಎಂದಿದ್ದಾರೆ. ಇದೆಲ್ಲವೂ ಪೂರ್ಣಿಮಾಳನ್ನು ಮತ್ತಷ್ಟು ಕುಗ್ಗಿಸಿದ್ದು, ಗೊಂದಲಕ್ಕೊಳಗಾಗಿದ್ದಾಳೆ. ಜೊತೆಗಿದ್ದವರೇ ತನ್ನ ತಂದೆ-ತಾಯಿ ಎಂಬುದನ್ನು ನಂಬಲಾಗದೇ ಒದ್ದಾಡುತ್ತಿದ್ದಾಳೆ. ಪೂರ್ಣಿ ಒದ್ದಾಟದಲ್ಲಿ ಅವಳೊಬ್ಬಳನ್ನೇ ಬಿಡದೇ, ಕುಟುಂಬದವರು ಕೂಡ ಸೇರಿಕೊಂಡಿದ್ದಾರೆ. ಜನಾರ್ಧನ್ ಹೇಳಿದ್ದು ಎಷ್ಟು ಸತ್ಯ? ಪೂರ್ಣಿಗೆ ನಿಜವಾಗಲೂ ತಂದೆ-ತಾಯಿ ಸಿಕ್ಕಿದ್ದಾರಾ? ಎಂದು ತೋಯ್ದಾಡುತ್ತಿದ್ದಾರೆ. ಪೂರ್ಣಿಮಾಳೇ ಈ ಬಗ್ಗೆ ನಿರ್ಧಾರವನ್ನು ಸಂಪೂರ್ಣವಾಗಿ ಅವಳೇ ತೆಗೆದುಕೊಳ್ಳಲಿ ಎಂದು ಬಿಟ್ಟಿದ್ದಾರೆ.

Shrirasthu Shubhamasthu serial May 17th episode update

ಅಪ್ಪ ಜನಾರ್ಧನ್ ಪರ ನಿಂತ ದೀಪಿಕಾ

ಮನೆಯಲ್ಲಿ ಎಲ್ಲರೂ ಮಾತನಾಡುವಾಗ ಜನಾರ್ಧನ್ ಇಷ್ಟು ಬೇಗ ಬದಲಾದನಾ..? ಅಷ್ಟು ಕಲ್ಲು ಮನಸ್ಸು ಮಾಡಿಕೊಂಡು ಮಗುವನ್ನು ಬಿಟ್ಟು ಬಂದವನು 24 ವರ್ಷದ ಬಳಿಕ ಮನಸ್ಸು ಬದಲಾಯಿಸಲು ಕಾರಣವೇನು ಎಂದು ಯೋಚಿಸುತ್ತಿದ್ದಾರೆ. ಮಾಧವ್ ಮತ್ತು ಮಹೇಶನಿಗೆ ಜನಾರ್ಧನ್ ಬಗ್ಗೆ ಗೊತ್ತಿರುವುದರಿಂದ ಈ ಬಗ್ಗೆ ಕೊಂಚ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ದೀಪಿಕಾಳಿಗೆ ಇದನ್ನು ಕೇಳಿಸಿಕೊಂಡು ಸುಮ್ಮನಿರಲು ಆಗುವುದಿಲ್ಲ. ದೀಪಿಕಾ ಇಲ್ಲ ಅಕ್ಕನಿಗೂ ಅವರ ಮನೆಯವರು ಸಿಕ್ಕಿದ್ದಾರೆ. ಅಪ್ಪನಿಗೂ ಮಗಳಿಂದ ದೂರ ಇದ್ದ ದುಃಖವಿದೆ ಎಂದು ಸಮರ್ಥಿಸಿಕೊಂಡಿದ್ದಾಳೆ.

ಮನಸ್ಡು ಬಿಚ್ಚಿ ಮಾತನಾಡಿದ ವನಜಾ

ಇನ್ನು ವನಜಾ ಮತ್ತು ಜನಾರ್ಧನ್ ಮತ್ತೆ ಮನೆಗೆ ಬಂದಿದ್ದು, ಪೂರ್ಣಿಮಾ ತಮ್ಮನ್ನು ಒಪ್ಪಿಕೊಂಡಿದ್ದಾಳಾ ಎಂಬುದನ್ನು ತಿಳಿದುಕೊಳ್ಳಲು ಆಗಮಿಸಿದ್ದಾರೆ. ತುಳಸಿ, ವನಜಾ ಮತ್ತು ಪೂರ್ಣಿಮಾ ಮಾತನಾಡಿಕೊಳ್ಳಲಿ ಎಂದು ಬಿಟ್ಟಿದ್ದಾರೆ. ವನಜಾ ತನ್ನ ಮನದ ಆತಂಕ, ಈಗ ಮಗಳು ಸಿಕ್ಕಿರುವ ಖುಷಿ ಎಲ್ಲವನ್ನು ಮನ ಬಿಚ್ಚಿ ಮಾತನಾಡಿದ್ದು, ನಿನಗೆ ಒಪ್ಪಿಗೆ ಆದಾಗಲೇ ನನ್ನನ್ನು ಅಮ್ಮ ಎಂದು ಕರಿ ಎಂದಿದ್ದಾಳೆ. ಪೂರ್ಣಿಮಾ ಇನ್ನೂ ಗೋಮದಲದಲ್ಲಿದ್ದು, ಅವರನ್ನು ಒಪ್ಪಿಕೊಳ್ಳುತ್ತಾಳಾ ಎಂದು ಕಾದು ನೋಡಬೇಕಿದೆ.

More from Filmibeat

English summary
Shrirasthu Shubhamasthu serial May 17th episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X