Shrirasthu Shubhamasthu:ತುಳಸಿ ಮಾತಿಗೆ ಮಾಧವ ಸೈಲೆಂಟ್: ಗಂಡನ ಮೇಲೆ ವನಜಾಗೆ ಅನುಮಾನ

By ಪೂರ್ವ

ತುಳಸಿ ಹಾಗೂ ಮಾಧವನ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ತುಳಸಿಗೆ ಪೂರ್ಣಿಮಾ ಅಂದರೆ, ವಿಶೇಷವಾದ ಪ್ರೀತಿ ಅಕ್ಕರೆ. ಸೊಸೆಯನ್ನು ಬಹಳ ಪ್ರೀತಿಯಿಂದಲೇ ಕಾಣುವ ಈಕೆಯನ್ನು ನೋಡಿದರೆ ಮನೆ ಮಂದಿಗೂ ಬಹಳ ಖುಷಿ. ಇದೀಗ ಗಂಡನ ಮನೆಯಿಂದ ಪೂರ್ಣಿಮಾ ತವರು ಮನೆಗೆ ಹೋಗುತ್ತಾಳೆ. ಆಕೆಗೆ ತನ್ನ ತಂದೆ ತಾಯಿಯನ್ನು ನೋಡಿ ಸ್ವರ್ಗ ಸಿಕ್ಕಿದ ಹಾಗೆ ಆಗುತ್ತದೆ.

ಜನಾರ್ಧನ್ ಏನೇ ಇದ್ದರೂ ಹೇಗಾದರೂ ಮಾಡಿ ನಾಟಕವಾಡಿ ಆಸ್ತಿಯನ್ನು ತನ್ನದಾಗಿಸಿಕೊಳ್ಳಲು ಸತತ ಪ್ರಯತ್ನ ಮಾಡುತ್ತಿರುತ್ತಾನೆ. ತುಳಸಿ ಬಹಳ ಪಾಪದ ಹುಡುಗಿ ಆಕೆಗೆ ಈ ಸಮಾಜದಲ್ಲಿ ಯಾರು ಇಲ್ಲ. ಆಕೆಗೆ ತಂದೆ ತಾಯಿಯ ನೆಪದಲ್ಲಿ ಆದರೂ ಆಕೆಯ ಹೆಸರಿಗೆ ಆಸ್ತಿಯನ್ನು ಬರಿಸಿಕೊಂಡು ಆ ಬಳಿಕ ನಿಧಾನವಾಗಿ ತನ್ನ ತೆಕ್ಕೆಗೆ ಬರುವ ಹಾಗೆ ಮಾಡಬೇಕು ಎಂದು ಆಲೋಚನೆ.

Shrirasthu Shubhamasthu serial may 20th episode update

ಅದೇ ಪ್ರಕಾರವಾಗಿ ತನ್ನ ಮನೆಗೆ ಪೂರ್ಣಿಮಾಳನ್ನು ಕರೆಸುತ್ತಾನೆ. ಲಾಯರ್ ಕೂಡ ಅದೇ ವೇಳೆ ಬರುತ್ತಾರೆ. ಪೂರ್ಣಿಮಾಳನ್ನು ನೋಡಿ ಲಾಯರ್ ಹಲವು ಪ್ರಶ್ನೆ ಮಾಡುತ್ತಾರೆ. ಇವರೇ ನಿಮ್ಮ ಮಗಳು ಎಂದು ಹೇಗೆ ಹೇಳುತ್ತೀರಾ. ನಾನು ಅವರಿಗೆ ನಾಲಕ್ಕು ಪ್ರಶ್ನೆಯನ್ನು ಕೇಳುತ್ತೇನೆ ಎಂದೆಲ್ಲ ಹೇಳಿದಾಗ ಜನಾರ್ಧನ್ ಏನು ಮಾತನಾಡದೆ ಅವಕ್ಕಾಗಿ ನಿಲ್ಲುತ್ತಾನೆ. ಹಾಗೆಯೇ ಲಾಯರ್ ಪೂರ್ಣಿಮಾ ಬಳಿ ಪ್ರಶ್ನೆ ಮಾಡಲು ಶುರು ಮಾಡುತ್ತಾರೆ . ಆದರೆ, ಲಾಯರ್ ಪ್ರಶ್ನೆ ಮಾಡುವುದನ್ನು ಕಂಡು ಪೂರ್ಣಿಮಾಗೆ ಏನು ಅರ್ಥವಾಗದೆ ತನ್ನ ತಂದೆಯತ್ತ ನೋಡುತ್ತಾಳೆ. ಜನಾರ್ಧನ್ ಆ ವೇಳೆ ಪೂರ್ಣಿಮಾ ಬಳಿ ಹೇಳುತ್ತಾನೆ. ನಿಮ್ಮ ಅಜ್ಜಿಯ ಒಡವೆಗಳು ನಿನ್ನ ಹೆಸರಿನಲ್ಲಿ ಮಾಡಿದ್ದಾರೆ. ಅದಕ್ಕಾಗಿ ಲಾಯರ್ ಈ ಪ್ರಶ್ನೆ ಮಾಡುತ್ತಿದ್ದಾರೆ ಎಂದೆಲ್ಲ ಸುಳ್ಳು ಹೇಳುತ್ತಾನೆ.

ಇನ್ನೂ ಪೂರ್ಣಿಮಾ ಎಲ್ಲಾ ಕೆಲಸ ಮುಗಿಸಿಕೊಂಡು ನೇರವಾಗಿ ಗಂಡನ ಮನೆಗೆ ಹೋದಾಗ ಪೂರ್ಣಿಮಾ ಖುಷಿಯಾಗಿ ಇರುವುದನ್ನು ಕಂಡು ಮಾಧವ ಕೇಳುತ್ತಾರೆ. "ಪೂರ್ಣಿಮಾ ತವರ ಮನೆಗೆ ಹೋಗಿದ್ದಿಯಲ್ಲಾ ಖುಷಿ ಆಯಿತಾ" ಎಂದು ಕೇಳುತ್ತಾರೆ. ಇದನ್ನು ಕೇಳಿದ ಪೂರ್ಣಿಮಾ ಬಹಳ ಖುಷಿಯಿಂದ "ತವರು ಮನೆ ನನಗೆ ಕೂಡ ಇದೆ" ಎಂದು ಬಹಳ ಖುಷಿ ಪಡುತ್ತಾಳೆ. ಪೂರ್ಣಿಮಾ ಮಾತಿಗೆ ತುಳಸಿ ಕೂಡ ಹರಸುತ್ತಾಳೆ. ಪೂರ್ಣಿಮಾ ನಿನಗೆ ಹೇಗೆ ತವರು ಮನೆ ಸಿಕ್ಕಿದೆಯೋ ಹಾಗೆಯೇ ನಿನಗೆ ಆದಷ್ಟು ಬೇಗ ಮಗು ಆಗುತ್ತದೆ ಎಂದೆಲ್ಲ ಹೇಳಿದಾಗ ಬಹಳಷ್ಟು ಖುಷಿ ಪಡುತ್ತಾಳೆ ಪೂರ್ಣಿಮಾ.

ಜನಾರ್ಧನ್‌ಗೆ ಆಸ್ತಿ ಆಸೆ

ಇನ್ನೂ ಜನಾರ್ಧನ್ ಮನೆಯಲ್ಲಿ ಲಾಯರ್ ಬಂದಿರುವ ವಿಚಾರವನ್ನು ಮಾಧವನ ಮುಂದೆ ಹೇಳುತ್ತಾಳೆ. ಆದರೆ, ಇದನ್ನು ದೀಪಿಕಾ ತಡೆಯುವ ಪ್ರಯತ್ನ ಮಾಡುತ್ತಾಳೆ. ಆದರೆ, ಆಕೆಯ ಮಾತಿಗೆ ಏನು ರೆಸ್ಪಾನ್ಸ್ ಕೂಡ ಪೂರ್ಣಿಮಾ ಮಾಡುವುದಿಲ್ಲ. ಆಕೆ ಎಲ್ಲಾ ವಿಚಾರವನ್ನು ಗಂಡ ಹಾಗೂ ಮನೆಯವರ ಮುಂದೆ ಹೇಳುತ್ತಾಳೆ. ನನ್ನ ಹೆಸರಲ್ಲಿ ಅಜ್ಜಿಯ ಒಡವೆಗಳು ಇವೆಯಂತೆ ಅದನ್ನು ಬಿಡಿಸಿಕೊಳ್ಳಲು ಲಾಯರ್ ಬಂದಿದ್ದರಂತೆ ಎಂದಾಗ ಮಾಧವಗೆ ಬಹಳ ಅನುಮಾನ ಮೂಡುತ್ತದೆ. ಜನಾರ್ಧನ್ ಸಾಮಾನ್ಯದವನು ಅಲ್ಲಾ. ಆತ ಆಸ್ತಿಗಾಗಿ ಏನು ಬೇಕಾದರೂ ಮಾಡಲು ತಯಾರಿ ಇರುತ್ತಾನೆ.

Shrirasthu Shubhamasthu serial may 20th episode update

ಜನಾರ್ಧನ್ ಮಾತಿಗೆ ಮರುಳಾದ ಪೂರ್ಣಿಮಾ

ಪೂರ್ಣಿಮಾಳನ್ನು ಯಾವುದೇ ಕಾರಣಕ್ಕೆ ಬೇಕಾದರೂ ಬಳಸಿಕೊಳ್ಳಲು ಹೇಸುವವನು ಅಲ್ಲಾ. ಇನ್ನೂ ಜನಾರ್ಧನ್ ಒಬ್ಬನೇ ಕುಳಿತು ಇರುವಾಗ ವನಜಾ ಬರುತ್ತಾಳೆ. ಗಂಡ ಮಾಡುತ್ತಿರುವ ಪ್ರತಿಯೊಂದು ಕೆಲಸಕ್ಕೆ ವನಜಾ ಸಪೋರ್ಟ್ ಮಾಡುತ್ತಿರುತ್ತಾಳೆ. ಇದೀಗ ಮಗಳ ವಿಚಾರದಲ್ಲಿ ಕೂಡ ಜನಾರ್ಧನ್ ಆಸ್ತಿಗಾಗಿ ನಾಟಕ ಆಡುತ್ತಿದ್ದಾರ? ಎನ್ನುವ ಅನುಮಾನ ವನಜಾಗೆ ಮೂಡಿದೆ.

More from Filmibeat

English summary
Shrirasthu Shubhamasthu serial may 20th episode update:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X