Shrirasthu Shubhamasthu:ಮಾಧವನಿಗೆ ಟೆನ್ಷನ್; ಮತ್ತೆ ಶಾರ್ವರಿ ಆಟ ಶುರು

By ಪೂರ್ವ

ಮಾಧವನ ಮನದಲ್ಲಿ ನೂರಾರು ಆಲೋಚನೆಗಳು ಬಂದು ಹೋಗುತ್ತಿದೆ. ಜನಾರ್ಧನ್ ಮಾಡಿದ ಆ ಒಂದು ತಪ್ಪು ಕೆಲಸದಿಂದಾಗಿ ಮಾಧವನ ಮನೆಯ ನೆಮ್ಮದಿ ಹೊರಟು ಹೋಗಿದೆ. ಪೂರ್ಣಿಮಾಗೂ ಬಹಳ ನೋವಾಗಿದೆ. ಕಳೆದು ಹೋದ ಹೆತ್ತವರು ಇನ್ನೇನು ಕೈ ಗೆ ಸಿಕ್ಕಿಬಿಟ್ಟರು ಎಂದುಕೊಂಡಾಗಲೇ ಜನಾರ್ಧನ್ ಅಸಲಿ ಮುಖ ಅನಾವರಣ ಆಗಿ ಬಿಟ್ಟಿದೆ. ಹೀಗಾಗಿ ಪೂರ್ಣಿಮಾ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದಾಳೆ. ಆಕೆಗೆ ತನ್ನ ತಂದೆ ತಾಯಿಯನ್ನು ಹುಡುಕುವ ಬದಲು ತನ್ನ ಅತ್ತೆ ಹಾಗೂ ಮಾವ ಇಬ್ಬರಲ್ಲಿ ಆ ಪ್ರೀತಿಯನ್ನು ಕಾಣುವುದಕ್ಕೆ ಹೊರಟಿದ್ದಾಳೆ.

ಹೆತ್ತ ತಂದೆ ತಾಯಿಗಿಂತ ಹೆಚ್ಚು ಪ್ರೀತಿಯನ್ನು ಅತ್ತೆ, ಮಾವ ನೀಡುತ್ತಿದ್ದರು. ಆದರೆ ಇದೀಗ ನನಗೆ ಇನ್ಮೇಲೆ ಯಾರು ಬೇಡ. ನನಗೆ ನನ್ನ ತಂದೆ, ತಾಯಿ ಎಲ್ಲಾ ಅತ್ತೆ, ಮಾವ ಮಾತ್ರ ಎಂದು ಪೂರ್ಣಿಮಾ ಹೇಳುತ್ತಾಳೆ. ಇದರಿಂದಾಗಿ ಮಾಧವನ ಮನಸ್ಸು ಬಹಳ ವಿಚಲಿತಗೊಂಡಿತು. ಏನು ಮಾಡಬೇಕು ಎಂದು ತಿಳಿಯದೆ ದಿಕ್ಕೇ ತೋಚದ ಹಾಗೆ ಆಗುತ್ತದೆ.

Shrirasthu Shubhamasthu serial may 25th episode update

ಆಗ ತುಳಸಿ "ನೀವು ಯಾಕೆ ಹೀಗೆ ತಲೆ ಬಿಸಿ ಮಾಡಿಕೊಂಡು ಇರುವುದು. ನೀವು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ . ಪೂರ್ಣಿಮಾ ನಮ್ಮ ಜವಾಬ್ದಾರಿ. ಇನ್ನೂ ಮೇಲೆ ಯಾರನ್ನು ಸುಲಭದಲ್ಲಿ ನಾನು ನಂಬುವುದಿಲ್ಲ ಎಂದು ಹೇಳುತ್ತಾಳೆ. ಹಾಗೆಯೇ ಮಾಧವನಿಗೆ "ನನಗೆ ಸಮಾಧಾನ ಬರುವುದು ಎಲ್ಲಾದರೂ ಹೋಗಿ ನೆಮ್ಮದಿಯಿಂದ ಕುಳಿತುಕೊಂಡಾಗ" ಎಂದಾಗ ತುಳಸಿ ಹೇಳುತ್ತಾರೆ.

ಮಾಧವನ ಮಾತಿಗೆ ನಕ್ಕ ತುಳಸಿ

"ಬನ್ನಿ ನಾನೇ ಕರೆದುಕೊಂಡು ಹೋಗುತ್ತೇನೆ" ಎಂದು ತುಳಸಿ ಹೇಳುತ್ತಾರೆ. ಇದನ್ನು ಕೇಳಿದ ಮಾಧವಗೆ ಕೊಂಚ ಮಟ್ಟಿಗೆ ಶಾಕ್ ಆಗುತ್ತದೆ. ಹಾಗೆಯೇ ತುಳಸಿ ಕಾರನ್ನು ಚಲಾಯಿಸಲು ಹೋಗುತ್ತಾರೆ. ಇನ್ನೂ ಶಾರ್ವರಿ ಹಾಗೂ ಮಹೇಶ ಎದುರಾಗಿ ಮಾತನಾಡುವ ಸಂದರ್ಭ ಬರುತ್ತೆ. ಮಹೇಶ ತನ್ನ ಹೆಂಡತಿಯನ್ನು ಪ್ರಶ್ನೆ ಮಾಡುತ್ತಾನೆ. ಏನು ಶಾರ್ವರಿ ಬ್ಯುಸಿನೆಸ್‌ಗಾಗಿ ನೀನು ಹೋಗಿದ್ದೆ, ಆದರೆ ಅದು ಎರಡೇ ದಿನದಲ್ಲಿ ಮುಗಿದು ಹೋಯಿತು. ಆದರೆ ಉಳಿದ ನಾಲ್ಕು ದಿನ ಮನೆಗೆ ಬಂದಿಲ್ಲ. ನೀನು ಎಲ್ಲಿಗೆ ಹೋಗಿದ್ದೆ ಎಂದಾಗ ಶಾರ್ವರಿ ನಾಟಕೀಯವಾಗಿ ಮಾತನಾಡುತ್ತಾಳೆ.

ಮಹೇಶನಿಗೆ ಉತ್ತರಿಸಲು ತಡವರಿಸಿದ ಶಾರ್ವರಿ

ಆದರೂ ಮಹೇಶನಿಗೆ ಶಾರ್ವರಿ ಏನು ಮಾತನಾಡುತ್ತಾಳೆ ಗೊತ್ತಾಗುತ್ತಿಲ್ಲ. ಶಾರ್ವರಿಯ ಬಳಿ ಮಹೇಶ "ನಿನಗೆ ನಿನ್ನ ತವರು ಮನೆ ಎಂದು ಹೇಳಲು ಕೂಡ ಯಾರು ಇಲ್ಲ. ಹಾಗಾದರೆ ನೀನು ಇಷ್ಟು ದಿನ ಎಲ್ಲಿದ್ದೆ?" ಎಂದು ಕೇಳಿದಾಗ ಶಾರ್ವರಿ ಹೇಳುತ್ತಾಳೆ "ನೀವು ಹಾಗೆ ಅಂದುಕೊಂಡರೆ ನಾನು ಏನು ಮಾಡಲು ಆಗುವುದಿಲ್ಲ. ನಾನು ಎಲ್ಲಿಗೆ ಹೋಗಿದ್ದೆ, ಏನು ಮಾಡುತ್ತಿದ್ದೆ ಎನ್ನುವುದು ಸ್ವಲ್ಪ ದಿನ ಆದ ಬಳಿಕ ತಿಳಿಯುತ್ತದೆ. ನನ್ನ ಕುಟುಂಬ ನಾಶ ಮಾಡಲು ಹೊರಟ ಯಾರನ್ನು ನಾನು ಸುಮ್ಮನೆ ಬಿಡುವುದು ಇಲ್ಲ" ಎಂದು ಖಡಕ್ ಆಗಿ ಹೇಳಿದಾಗ ಮಹೇಶನಿಗೆ ಏನು ಹೇಳಬೇಕು ಎಂಬುವುದು ತಿಳಿಯದಾಗುತ್ತದೆ.

Shrirasthu Shubhamasthu serial may 25th episode update

ಪೂರ್ಣಿಮಾಗೆ ಸಮಾಧಾನ ಹೇಳಿದ ಅವಿ

ಅವಿ ಪೂರ್ಣಿಮಾಗೆ ಸಮಾಧಾನ ಹೇಳುವ ಸಣ್ಣ ಪ್ರಯತ್ನ ಮಾಡುತ್ತಾನೆ. "ನಿನಗೆ ನಾನೇ ಇದ್ದೇನೆ ಅಲ್ವಾ. ನೀನು ಖಂಡಿತವಾಗಿಯೂ ನಮ್ಮ ಮನೆಯಲ್ಲಿ ರಾಣಿಯ ಹಾಗೆ ಇರುತ್ತಿಯ ಹಾಗೆ ನೋಡಿಕೊಳ್ಳುತ್ತೇನೆ. ನಿನಗೆ ಯಾರು ಇಲ್ಲ ಎಂದು ಮಾತ್ರ ಅಂದುಕೊಳ್ಳಬೇಡಿ" ಎಂದು ಹೇಳಿದಾಗ ಪೂರ್ಣಿಮಾ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ.

More from Filmibeat

English summary
Shrirasthu Shubhamasthu serial may 25th episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X