Shrirasthu Shubhamasthu:ಮಿತಿ ಮೀರಿದೆ ಜನಾರ್ಧನ್ ಅಟ್ಟಹಾಸ; ಮಾಧವನ ಸರ್ವನಾಶಕ್ಕೆ ಸ್ಕೆಚ್

By ಪೂರ್ವ

ಜನಾರ್ಧನ್ ಅಟ್ಟಹಾಸ ದಿನ ಹೋದ ಹಾಗೆಯೇ ಹೆಚ್ಚಾಗುತ್ತಿದೆ. ಪೂರ್ಣಿಮಾನನ್ನು ನನ್ನ ಮಗಳು ಎಂದು ಬಿಂಬಿಸಿ ಎಲ್ಲರನ್ನೂ ಮಂಗ ಮಾಡುವ ತರಾತುರಿಯಲ್ಲಿ ಇದ್ದ ಜನಾರ್ಧನ್‌ಗೆ ದತ್ತ ಸರಿಯಾದ ಪಾಠವನ್ನು ಕಳಿಸಿದ್ದಾರೆ. ವನಜಾ ತಂದೆ ಹಾಗೂ ದತ್ತ ಇಬ್ಬರೂ ಬಹಳ ಆತ್ಮೀಯ ಗೆಳೆಯರು. ಈ ವಿಚಾರ ಜನಾರ್ಧನ್‌ಗೆ ತಿಳಿದೇ ಇರುವುದಿಲ್ಲ. ನನ್ನ ದೊಡ್ಡ ಮಗಳಿಂದ ನಮಗೆ ಯಾವತ್ತಿದ್ದರೂ ತೊಡಕು ಎಂದು ಹೇಳಿ ಏನು ಅರಿಯದ ಆ ಪುಟ್ಟ ಕಂದಮ್ಮನನ್ನು ದೇವಾಲಯದ ಬಳಿ ಬಿಟ್ಟು ಹೋಗುತ್ತಾನೆ. ಆದರೆ, ಇದೀಗ ಅದೇ ಮಗು ಜನಾರ್ಧನ್‌ಗೆ ಬೇಕಾಗಿದೆ.

ಯಾಕೆಂದರೆ, ಸಮಸ್ತ ಆಸ್ತಿಗೆ ಆ ಮಗುವೇ ಒಡತಿ. ಇಲ್ಲವಾದರೆ ಅದೆಲ್ಲ ಅನಾಥ ಆಶ್ರಮದ ಪಾಲಾಗುತ್ತದೆ. ಈ ಆತಂಕದಲ್ಲಿರುವ ಜನಾರ್ಧನ್ ಪೂರ್ಣಿಮಾಳನ್ನು ತನ್ನ ಆಟಕ್ಕೆ ಬಳಸಿಕೊಳ್ಳುತ್ತಾನೆ. ಪಾಪ ಪೂರ್ಣಿಮಾ ಜನಾರ್ಧನ್ ಪ್ಲಾನ್ ಆಕೆಗೆ ಎಲ್ಲಿ ಅರ್ಥ ಆಗಬೇಕು. ಆಕೆ ಅದೆಲ್ಲವನ್ನೂ ನಿಜ ಎಂದುಕೊಂಡಿದ್ದಳು. ಕೊನೆಗೆ ಜನಾರ್ಧನ್ ಬಂಡವಾಳ ಹೊರಗೆ ಬಂದಿದೆ. ಪೂರ್ಣಿಮಾ ಅಲ್ಲಿಯೇ ಕುಸಿದು ಬಿಡುತ್ತಾಳೆ. ಪೂರ್ಣಿಮಾಗೆ ಒಂದು ಕಡೆ ನನಗೆ ಮಕ್ಕಳೇ ಆಗುವುದು ಇಲ್ಲ ಎನ್ನುವ ನೋವು ಇದ್ದರೆ, ಇತ್ತ ಜನಾರ್ಧನ್ ಮಾಡಿದ ತಪ್ಪಿಗೆ ಇನ್ನಷ್ಟು ನೋವು ಅನುಭವಿಸುವ ಹಾಗಾಗಿದೆ.

Shrirasthu Shubhamasthu serial may 27th episode update

ಹೆಂಡತಿಯನ್ನು ತಾತ್ಸರವಾಗಿ ತೆಗೆದುಕೊಂಡ ಜನಾರ್ಧನ್‌ಗೆ ಅವಿ ಸರಿಯಾದ ಉತ್ತರ ಕೊಟ್ಟರೆ. ಮಾಧವ, ಜನಾರ್ಧನ್ ಕೆನ್ನೆಗೆ ಹೊಡೆದು ಕಳುಹಿಸುತ್ತಾನೆ. ಇದೀಗ ಜನಾರ್ಧನ್ ಅಭಿಯನ್ನು ತನ್ನ ದಾಳವಾಗಿ ಮಾಡಿಕೊಂಡಿದ್ದಾನೆ. ಹೆಂಡತಿಯ ಮಾತಿನ ಮೋಡಿಗೆ ಅಭಿ ಕರಗಿ ಹೋಗಿದ್ದಾನೆ. ಆತನಿಗೆ ತನ್ನ ಮನೆಯವರಿಗಿಂತ ಆ ಜನಾರ್ಧನ್ ಕೊಡುವ ಪ್ಲಾನ್ ಹೆಚ್ಚಾಗಿದೆ. ದೀಪಿಕಾಗೆ ಮಾಧವನ ಕುಟುಂಬವನ್ನು ಹೇಗಾದರೂ ಮಾಡಿ ಸರ್ವನಾಶ ಮಾಡಬೇಕು ಎನ್ನುವ ಬಯಕೆ. ನನ್ನ ತಂದೆಗೆ ಎಲ್ಲರೆದುರು ಅವಮಾನವಾಗಿದೆ. ಇನ್ಮೇಲೆ ನಾನು ಯಾವುದೇ ಕಾರಣಕ್ಕೂ ಯಾರನ್ನು ಬಿಡುವುದು ಇಲ್ಲ ಎಂದು ಶಪಥ ಮಾಡಿದ್ದಾಳೆ. ಆದರೆ ಈ ವಿಚಾರ ಪಾಪ ಅಭಿಗೆ ತಿಳಿದಿಲ್ಲ.

ಮಾಧವನ ಆಸ್ತಿ ಮೇಲೆ ಜನಾರ್ಧನ್ ಕಣ್ಣು

ಇದೀಗ ಮಾಧವನ ಪ್ರಾಪರ್ಟಿ ಮೇಲೆ ಅಭಿ ಕಣ್ಣು ಹಾಕಿದ್ದಾನೆ. ಇದನ್ನೆಲ್ಲ ವನಜಾ ಸರಿಯಾಗಿಯೇ ಆಲಿಸಿಕೊಂಡಿದ್ದಾಳೆ. ಹೇಗಾದರೂ ಮಾಡಿ ನಮ್ಮವರು ಮಾಡುತ್ತಿರುವ ಪ್ಲಾನ್ ಅನ್ನು ತುಳಸಿಗೆ ತಿಳಿಸಬೇಕು. ಇಲ್ಲವಾದರೆ ಆ ಮನೆ ಸರ್ವನಾಶ ಆಗುವುದು ಖಚಿತ. ಇದಕ್ಕೆ ಅವಕಾಶ ಕೊಡಬಾರದು ಎಂದು ತುಳಸಿಗೆ ವನಜಾ ಕರೆ ಮಾಡುತ್ತಾಳೆ.

Shrirasthu Shubhamasthu serial may 27th episode update

ವನಜಾ ಮಾತು ಕೇಳಿ ತುಳಸಿಗೆ ಆತಂಕ

ವನಜಾ ಫೋನ್‌ನಲ್ಲಿ "ನಮ್ಮವರು ಅಭಿಯಾನ್ನು ದಾಳವಾಗಿ ಮಾಡಿಕೊಂಡು ಏನೋ ಪ್ಲಾನ್ ಮಾಡುತ್ತಿದ್ದಾರೆ. ರೆಸಾರ್ಟ್ ಪಬ್ ಅಂತ ಹೇಳುತ್ತಿದ್ದರು. ನಿಮ್ಮ ಮನೆಯವರ ಜಾಗದಲ್ಲಿ" ಎಂದು ಹೇಳಿ ಜನಾರ್ಧನ್ ಹೇಳಿದ ಮಾತುಗಳನ್ನು ತುಳಸಿ ಬಳಿ ವನಜಾ ಹೇಳುತ್ತಾಳೆ. ಆ ಮನೆಯನ್ನು ಸರ್ವನಾಶ ಮಾಡಲು ಅಭಿಯೇ ನನ್ನ ಅಸ್ತ್ರ ಎಂದು ಹೇಳುತ್ತಿದ್ದರು. ದಯವಿಟ್ಟು ಇದನ್ನು ತಡೆಯಿರಿ ಎಂದು ಹೇಳಿ, ಕರೆ ಕಟ್ ಮಾಡುತ್ತಾರೆ. ಇತ್ತ ತುಳಸಿಗೆ ಏನು ಮಾಡಬೇಕು ಎಂದು ದಿಕ್ಕೇ ತೋಚುವುದು ಇಲ್ಲ,

ದೀಪಿಕಾ ಮಸಲತ್ತು ಮನೆ ಮಂದಿ ಕಂಗಾಲು

ದೀಪಿಕಾ, ಅಭಿ ಬಳಿ ಬಂದು ತನ್ನ ತಂದೆ ಮಾಡುವುದರಲ್ಲಿ ಯಾವುದೇ ತಪ್ಪು ನನಗೆ ಕಾಣಿಸುತ್ತಿಲ್ಲ. ನನ್ನ ತಂದೆ ಯಾವುದೇ ತಪ್ಪು ಮಾಡಿಲ್ಲ ಎಂದಾಗ ಅಭಿ ಮಾತ್ರ ಆ ಮಾತನ್ನು ಒಪ್ಪುವುದಿಲ್ಲ. "ನೀನು ಏನು ಮಾತನಾಡುತ್ತಿರುವುದು ಅಂತ ನಿನಗೆ ಅರಿವಿದೆಯಾ, ನನ್ನ ಅತ್ತಿಗೆಗೆ ಅದೆಂತಹ ಮೋಸ ಮಾಡಲು ಹೊರಟಿದ್ದರು" ಎಂದಾಗ, ನನ್ನ ತಂದೆ ಪೂರ್ಣಿಮಾ ಅಕ್ಕನಿಗೆ ತಂದೆಯ ಪ್ರೀತಿಯನ್ನು ತೋರಿಸಲು ರೆಡಿ ಇದ್ದರು. ಆದರೆ, ಈ ಮನೆಮಂದಿಗೆ ಏನಾಗಿದೆಯೋ ಎಂದು ಹೇಳುತ್ತಾಳೆ. ಅಭಿ ಮುಂದೇನು ಮಾತನಾಡುವುದು ಇಲ್ಲ.

More from Filmibeat

English summary
Shrirasthu Shubhamasthu serial may 27th episode update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X