Shrirasthu Shubhamasthu:ತುಳಸಿಯಲ್ಲಿ ತಾಯಿ ಪ್ರೀತಿ ಕಂಡ ಮಾಧವನ ಮಗ; ಅಮ್ಮನನ್ನು ನೆನೆದು ಕಣ್ಣೀರು
ಅಭಿ ಮಾಡುತ್ತಿರುವ ಮೊಂಡಟಕ್ಕೆ ಮಹೇಶ ಸರಿಯಾಗಿಯೇ ಅಭಿಗೆ ಹೊಡೆದಿದ್ದಾನೆ. ಇವತ್ತು ಸರಿ ಹೋಗುತ್ತಿಯಾ, ನಾಳೆ ಸರಿ ಹೋಗುತ್ತಿಯಾ ಎಂದು ಅನೇಕ ಕನಸುಗಳನ್ನು ನಾನು ಕಟ್ಟಿಕೊಂಡು ಇದ್ದೆ. ಆದರೆ, ನೀನು ಮಾಡಿದ್ದು ಏನು ಎನ್ನುವ ಅರಿವು ನಿನಗೆ ಇದೆಯಾ? ಯಾವತ್ತೂ ಹುಡುಗಾಟ ನಿನಗೆ. ನಿನಗೆ ಹೆಣ್ಣು ಕೊಟ್ಟ ಮಾವ ಆಗಿರಬಹುದು, ಆದರೆ ನೀನು ಮಾಡುವ ಕೆಲಸ ಸರಿಯಾಗಿ ಇಲ್ಲ. ಅದಕ್ಕಾಗಿ ಮನೆ ಮಂದಿ ನಿನಗೆ ಬುದ್ದಿ ಹೇಳುತ್ತಿರುವುದು. ಇದರ ಅರಿವು ನಿನಗೆ ಇದೆಯಾ? ಎಂದು ಏರು ಧ್ವನಿಯಲ್ಲಿ ಮಹೇಶ, ಅಭಿಗೆ ತಿಳಿಸುವ ಪ್ರಯತ್ನ ಮಾಡಿದ್ದಾನೆ.
ಇದಕ್ಕೆ ಅಭಿ ಅಷ್ಟೆ ಏರು ಧ್ವನಿಯಲ್ಲಿ "ನೀವು ಈ ರೀತಿ ನನ್ನನ್ನು ಹೆದರಿಸಿದರೆ, ನಾನು ಆ ಜಾಗಕ್ಕೆ ಕೊಟ್ಟ ಪರ್ಮಿಷನ್ ಹಿಂದೆಕ್ಕೆ ತೆಗೆದುಕೊಳ್ಳಬೇಕಾ? ಖಂಡಿತವಾಗಿಯೂ ನಾನು ಆ ಜಾಗಕ್ಕೆ ನೀಡಿದ ಪರ್ಮಿಷನ್ ಹಿಂದೆ ತೆಗೆದುಕೊಳ್ಳುವುದು ಇಲ್ಲ" ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ.

ಆದರೆ ಈ ಮಾತುಗಳನ್ನು ಕೇಳಿದ ಅವಿ ಹಾಗೂ ಮಾಧವ ಬಹಳ ಬೇಸರದಿಂದ ಮುಖ ಮುಖ ನೋಡಿಕೊಳ್ಳುತ್ತಾರೆ. ಯಾಕೆಂದರೆ, ಜನಾರ್ಧನ್ ಆಡಿದ ಹಾಗೆ ಅಭಿ ಆಡುತ್ತಿದ್ದಾನೆ. ಆತನಿಗೆ ಎಷ್ಟೇ ತಿಳಿ ಹೇಳುವ ಪ್ರಯತ್ನ ಮಾಡಿದರೂ ಅದನ್ನು ಕೇಳುವ ತಾಳ್ಮೆ ಆತನಿಗೆ ಇಲ್ಲ.
ಇತ್ತ ತುಳಸಿ ಪ್ರಪಂಚವೇ ಬೇರೆ. ಅಡುಗೆ ಮನೆಯಲ್ಲಿ ಬಗೆ ಬಗೆಯ ವಿಶೇಷ ಖಾದ್ಯಗಳನ್ನು ಮಾಡಿ ಬಡಿಸುವುದಲ್ಲೇ ತುಳಸಿಗೆ ಖುಷಿ. ಅಡುಗೆ ಮನೆಯಲ್ಲಿ ತುಳಸಿಗೆ ಸಾಥ್ ಕೊಡೋದು ಪೂರ್ಣಿಮಾ. ಈ ಧಾರಾವಾಹಿ ಇಂತಹದ್ದೊಂದು ಟ್ರ್ಯಾಕ್ ನಡೆಯುತ್ತಿದೆ. ಒಂದು ಕಡೆ ಜನಾರ್ಧನ್ ಮಸಲತ್ತು ಸಿಟ್ಟು ತರಿಸಿದರೆ, ಇತ್ತ ತುಳಸಿ ಸಂಸಾರದಲ್ಲಿನ ಅನ್ಯೋನ್ಯತೆ ವೀಕ್ಷಕರಿಗೆ ಇಷ್ಟ ಆಗುತ್ತಿದೆ.
ಗಂಡನಿಗಾಗಿ ಐಸ್ ಕ್ರೀಮ್
ಅಡುಗೆ ಮನೆಗೆ ಬಂದ ಅವಿ ತನ್ನ ಪತ್ನಿಗೆ "ನೋಡು ಪೂರ್ಣಿಮಾ, ಅಮ್ಮ ಅಪ್ಪನಿಗೋಸ್ಕರ ಯೂಟ್ಯೂಬ್ ನೋಡಿ ಐಸ್ ಕ್ರೀಮ್ ಮಾಡುತ್ತಿದ್ದಾರೆ. ನೀನು ಇದ್ದೀಯಾ ಎಂದು ಪೂರ್ಣಿಮಾ ಕಾಲು ಎಳೆಯುತ್ತಾನೆ. ಇದನ್ನು ಕೇಳಿ ಪೂರ್ಣಿಮಾ, ಹುಸಿ ಮುನಿಸು ಮಾಡಿಕೊಂಡು ತುಳಸಿಗೆ ದೂರು ನೀಡುತ್ತಾಳೆ.

ಅವಿಗೆ ಮೆತ್ತಗೆ ರೇಗಿದ ತುಳಸಿ
"ಏಯ್ ಯಾಕೋ ನನ್ನ ಮುದ್ದು ಸೊಸೆಯನ್ನು ಹಂಗಿಸುತ್ತಿಯಾ?" ಎಂದು ಅವಿಗೆ ಮತ್ತೆಗೆ ರೇಗುತ್ತಾರೆ. ಅವಿ ಮಾತ್ರ "ಏನು ಈ ತರ ನನ್ನ ಹೆದರಿಸಿದರೆ, ನಾನು ಹೆದರಿಕೊಂಡು ಬಿಡಬೇಕಾ? ಹೀಗೆಲ್ಲ ನಾನು ಹೆದರುವುದು ಇಲ್ಲ" ಎಂದಾಗ ಪೂರ್ಣಿಮಾ ತಗಾದೆ ತೆಗೆಯುತ್ತಾಳೆ. ಆಗ ತುಳಸಿ "ಹೂ ಮತ್ತೆ ಹೆಂಗಸರ ಮುಂದೆ ನಿಂತುಕೊಳ್ಳುವುದು ಒಂದೇ.. ಐಸ್ ಕ್ರೀಮ್‌ನ ಬೆಂಕಿ ಮೇಲೆ ಇಡುವುದು ಕೂಡ ಒಂದೇ.. ಕರಗಿ ಹೋಗ್ತಿಯಾ ಹುಷಾರು" ಎನ್ನುತ್ತಾರೆ ತುಳಸಿ. ಇಂತಹ ಸೀನ್‌ಗಳು ವೀಕ್ಷಕರಿಗೆ ಇಷ್ಟ ಆಗುತ್ತಿದೆ.
ಅಮ್ಮನ ನೆನದ ಅವಿ
"ಹೌದೌದು ನೀವು ಹೆಂಗಸರು ಕೋಪ ಮಾಡಿಕೊಂಡರೆ, ಕರಗಲು ಬೇಕು, ಕೊರಗಲು ಬೇಕು" ಎಂದು ಹೇಳಿದಾಗ ಪೂರ್ಣಿಮಾಗೆ ನಕ್ಕು ಸುಮ್ಮನಾಗುತ್ತಾಳೆ. ಅವಿ ಹೀಗೆ ಕಾಮಿಡಿ ಮಾಡಿಕೊಂಡು ಇದ್ದಾಗ ಸಡನ್ ಆಗಿ ಗಂಭೀರ ಆಗುತ್ತಾನೆ. ಆತನಿಗೆ ಹಳೆಯದ್ದು ಒಮ್ಮೆಗೆ ನೆನೆಪಿಗೆ ಬರುತ್ತದೆ. ಅದನ್ನು ನೋಡಿ ತುಳಸಿಗೆ ಭಯ ಆಗುತ್ತೆ. ತಾನು ಹೊಡೆದ ಪೆಟ್ಟು ಜೋರಾಗಿಯೇ ಬಿತ್ತು ಅಂದುಕೊಳ್ಳುತ್ತಾರೆ. ಅವಿ ಬಳಿ ಬಂದು "ಏನಾಯಿತು ಅವಿ ನಿನಗೆ ಬೇಜಾರಾಯ್ತಾ? ಅದು ನಾನು ತಮಾಷೆಗೆ" ಎಂದಾಗ ಅವಿ, ತುಳಸಿಯ ಮಾತನ್ನು ಅರ್ಧಕ್ಕೆ ನಿಲ್ಲಿಸುತ್ತಾನೆ. "ಅಮ್ಮ ನಾನು ಈ ತರ ಪೆಟ್ಟು ತಿಂದು 15 ವರುಷ ಆಗಿತ್ತು. ತಾಯಿ ಆಡುವ ಪ್ರೀತಿಗಿಂತ, ತಾಯಿ ಕೊಡುವ ಪುಟ್ಟ ಪೆಟ್ಟುಗಳು ಬಹಳ ಹಿತವಾಗಿ ಇರುತ್ತದೆ" ಎಂದು ತುಳಸಿಯ ಕೈ ಹಿಡಿದು ಕೆನ್ನೆಗೆ ಇಟ್ಟುಕೊಳ್ಳುತ್ತಾನೆ ಅವಿ. ಇದನ್ನು ನೋಡಿದ ತುಳಸಿ ಹಾಗೂ ಪೂರ್ಣಿಮಾಗೆ ಅವರಿಗೆ ಅರಿವಿಲ್ಲದ ಹಾಗೆ ಕಣ್ಣೀರು ಜಾರುತ್ತದೆ.


Click it and Unblock the Notifications











