Shrirasthu Shubhamasthu:ಮಾಧವನಿಗೆ ಅವಮಾನ ಮಾಡಿದ ಸಮರ್ಥ್; ಮೊಮ್ಮಗನ ಕೋಪಕ್ಕೆ ಬೆಚ್ಚಿದ ದತ್ತ
ಮಾಧವ ಹಾಗೂ ಅವಿ ಪ್ಲಾನ್‌ನಂತೆ ಪಬ್ ಹಾಗೂ ರೆಸಾರ್ಟ್ ಮಾಡುವ ಕನಸನ್ನು ಅಭಿ ಕೈ ಬಿಟ್ಟಿದ್ದಾನೆ. ಆತನಿಗೆ ಭಯ ಶುರು ಆಗಿದೆ. ಮಾವ ಮಾಡಿದ ಪ್ಲಾನ್‌ನಿಂದಾಗಿ ನಾನು ಜೈಲಿಗೆ ಹೋಗುತ್ತೇನೆ ಎನ್ನುವ ಭಯ ಅಭಿಗೆ ಶುರು ಆಗಿದೆ.
ಹೀಗಾಗಿ ತನ್ನ ತಂದೆಯ ಬಳಿ ಬಂದು "ಡ್ಯಾಡಿ ನಾನು ರೆಸಾರ್ಟ್ ಮಾಡುತ್ತಿರುವ ಬಳಿ ಯಾರೋ ಡ್ರಗ್ಸ್ ಮಾಡುತ್ತಿದ್ದರಂತೆ. ಪೊಲೀಸ್ ನನಗೆ ಕರೆ ಮಾಡಿದ್ದರು. ನನಗೆ ಭಯ ಆಗುತ್ತಿದೆ. ನಾನು ಅಂತಹ ತಪ್ಪು ಏನು ಮಾಡಿಲ್ಲ. ಆದರೂ ಯಾಕೆ ಸಮಸ್ಯೆ ನನ್ನನ್ನು ಬೆನ್ನು ಬಿಡುತ್ತಿಲ್ಲ ಎನ್ನುವುದು ಮಾತ್ರ ನನಗೆ ತಿಳಿಯುತ್ತಿಲ್ಲ" ಎಂದು ಮನಸ್ಸಿನ ನೋವನ್ನು ಹೇಳಿಕೊಳ್ಳುತ್ತಾನೆ.

ಇದನ್ನೆಲ್ಲ ಕೇಳಿದ ಅವಿ ಹಾಗೂ ಮಾಧವ ಒಳಗೊಳಗೇ ನಗುತ್ತಾರೆ. ಇನ್ಮೇಲೆ ನಾನು ಪಬ್ ಹಾಗೂ ರೆಸ್ಟೋರೆಂಟ್ ಅನ್ನು ಮುಂದುವರೆಸುವ ಯೋಜನೆಗೆ ಕೈ ಹಾಕಲ್ಲ. ಇನ್ಮೇಲೆ ಎಲ್ಲರೂ ನಿರ್ಲಿಪ್ತರಾಗಿರಿ ಎಂದು ಹೇಳುತ್ತಾನೆ. ಇದನ್ನು ಕೇಳಿದ ಮನೆ ಮಂದಿಗೆ ಖುಷಿ ಆಗುತ್ತದೆ. ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ ಎಂದುಕೊಂಡು ಇರುತ್ತಾರೆ. ಇನ್ನೂ ಮಾಧವಗೆ ಸಮರ್ಥ್ ಹೆಂಡತಿ ಸಿರಿ ಗರ್ಭಿಣಿ ಆಗಿರುವ ವಿಚಾರ ತಿಳಿಯುತ್ತದೆ.
ಇದಕ್ಕೂ ಮುಂಚೆ ಸಿರಿಗೆ ಬಗೆ ಬಗೆಯಾದ ಆಹಾರವನ್ನು ಉಣಬಡಿಸಿದ್ದಾನೆ. ಇದನ್ನು ಕಂಡ ಸಮರ್ಥ್ ಬಹಳ ಕೆಂಡಾಮಂಡಲಗೊಂಡಿದ್ದಾರೆ. "ಯಾಕೆ ಹೀಗೆಲ್ಲ ಉಪಚಾರ ಮಾಡುತ್ತಿದ್ದೀರಾ. ನೀವು ನನ್ನ ಬಾಸ್. ಹಾಗೆಯೇ ಇರಿ" ಎಂದು ಹೇಳಿದಾಗ ದತ್ತ ಏನೋ ಒಂದು ಸಮಜಾಯಿಷಿ ನೀಡಿ ಮತ್ತೆ ಸಮರ್ಥ್ ಮನಸನ್ನು ಕೊಂಚ ಕೋಪದಿಂದ ಹತೋಟಿಗೆ ತಂದಿರುತ್ತಾರೆ. ಹಾಗೆಯೇ ಈ ರೀತಿ ಅಡುಗೆಯನ್ನು ಯಾರು ಮಾಡಿಕೊಡುತ್ತಾರೆ. ಈ ಮನೆಯಲ್ಲಿ ಎಂದು ಬಹಳ ಕೋಪದಿಂದ ಹೇಳಿರುತ್ತಾರೆ.
ದತ್ತನ ಮಾತು ಕೇಳಿ ತೆಪ್ಪಗಾದ ಸಮರ್ಥ್
ಇದನ್ನು ಕೇಳಿದ ಸಮರ್ಥ್ ತೆಪ್ಪಗೆ ಇರುತ್ತಾನೆ. ಇದೀಗ ಸಿರಿಗೆ ಬೇಕಾದ ವಸ್ತುಗಳನ್ನು ಮಾಧವ ಮನೆಗೆ ತಂದಿರುತ್ತಾರೆ. ಇದನ್ನು ನೋಡಿದ ಸಿರಿ "ಏನು ಮಾವ ಇದೆಲ್ಲ. ನೀವು ಯಾಕೆ ಕಷ್ಟ ತೆಗೆದುಕೊಂಡು ಬಿಟ್ಟಿರಿ. ಇದರ ಬಗ್ಗೆ ನೀವೇನು ತೊಂದರೆ ತೆಗೆದುಕೊಳ್ಳುವುದು ಬೇಡ ಎಂದಾಗ ಮಾಧವ, ಸಿರಿ ಬಳಿ ಹೇಳುತ್ತಾನೆ. ಗರ್ಭಿಣಿ ಹೆಂಗಸರಿಗೆ ಸಾಕಷ್ಟು ಆಸೆ ಇರುತ್ತದೆ. ಹಾಗೆಯೇ ಉತ್ತಮವಾಗಿ ನಿಮ್ಮನ್ನು ನೋಡಿಕೊಳ್ಳಬೇಕು ಎನ್ನುವುದು ನಿಮ್ಮ ಗಂಡಂದಿರಿಗೆ ಇರುತ್ತದೆ" ಎನ್ನುತ್ತಾರೆ

ಮಾವನ ಕರ್ತವ್ಯ ಮಾಡಲು ಬಂದ ಮಾಧವ
"ಮಾವನಾಗಿ ನನ್ನ ಕರ್ತವ್ಯ ಮಾಡಲು ಬಂದಿದ್ದೇನೆ. ನಿಮಗೆ ಏನೆಲ್ಲ ಬೇಕು ಅದನ್ನು ನಾನು ತಂದಿದ್ದೇನೆ" ಎಂದು ಹೇಳಿ ಖರ್ಚಿಗೆ ಹಣ ಕೊಡುತ್ತಾರೆ. ಇದನ್ನು ದೂರದಿಂದ ನೋಡಿದ ಸಮರ್ಥ್ "ಏನು ಇದೆಲ್ಲ, ನಾನು ನಿಮ್ಮ ಮನೆಯ ಡ್ರೈವರ್. ನೀವು ಡ್ರೈವರ್ ಮನೆಗೆ ಬಂದು ಈ ರೀತಿ ಯಾರಾದರೂ ಬಂದು ಹಣ ಕೊಡುತ್ತಾರಾ? ನಿಮ್ಮ ಬಳಿ ಇದನ್ನು ತರಲು ಹೇಳಿದ್ದಾದರು ಯಾರು?" ಎಂದು ಖಡಕ್ ಆಗಿ ಹೇಳುತ್ತಾರೆ.
ಸಮರ್ಥ್ ಮಾತಿಗೆ ನಕ್ಕ ಮಾಧವ
ಇದನ್ನು ಕೇಳಿದ ಮಾಧವ ಮಾತ್ರ ನಗುತ್ತಾಲೆ ಬಹಳ ತಾಳ್ಮೆಯಿಂದ ಉತ್ತರವನ್ನು ನೀಡುತ್ತಾರೆ. ಆದರೆ ಅದನ್ನೆಲ್ಲ ಕೇಳುವ ಪುರುಸೋತ್ತು, ಹಾಗೆಯೇ ತಾಳ್ಮೆ ಆತನಲ್ಲಿ ಇರುವುದಿಲ್ಲ. ಮಾಧವ ಇನ್ನೇನು ಮನೆಯಿಂದ ಹೊರಗೆ ಹೋಗಬೇಕು ಎನ್ನುವಷ್ಟರಲ್ಲಿ ಅಲ್ಲಿಗೆ ದತ್ತ ಬರುತ್ತಾರೆ. ಸಮರ್ಥ್ ಇತ್ತೀಚೆಗಿನ ದಿನಗಳಲ್ಲಿ ಬಹಳ ಕೋಪದಿಂದ ಮಾಧವನ ಜೊತೆ ನಡೆದುಕೊಳ್ಳುತ್ತಿದ್ದಾನೆ. ಯಾಕೆಂದರೆ, ಆತನಿಗೆ ತನ್ನ ತಾಯಿ ಈ ವಯಸ್ಸಿನಲ್ಲಿ ಕೂಡ ಇನ್ನೊಂದು ಮದುವೆ ಆಗಿದ್ದಾರಲ್ಲ ಎನ್ನುವ ಕೋಪ. ಇತ್ತ ಶಾರ್ವರಿ ಆಟ ಮಿತಿ ಮೀರುತ್ತಿದೆ. ಆಕೆಗೆ ಮಹೇಶ ಎಲ್ಲಾದರೂ ನಿಜ ಹೇಳಿದರೆ, ಮೊದಲ ಟಾರ್ಗೆಟ್ ತುಳಸಿ. ಆ ಬಳಿಕ ಮಾಧವ. ಅಣ್ಣನಿಗೆ ಏನಾದರು ಆದರೆ ಎನ್ನುವ ಭಯ ಆಕೆಗೆ ಇರುತ್ತದೆ.


Click it and Unblock the Notifications











