Shrirasthu Shubhamasthu:ಮಾಧವನ ಮನೆಗೆ ಜನಾರ್ಧನ್ ಎಂಟ್ರಿ ಇನ್ನೇನು ಹಂಗಾಮ ಆಗುತ್ತೋ?
ತುಳಸಿ ಹಾಗೂ ಮಾಧವ ಒಬ್ಬರನ್ನೊಬ್ಬರು ಬಹಳ ಇಷ್ಟ ಪಡುತ್ತಾರೆ. ಹಾಗೆಯೇ ಒಬ್ಬರನ್ನೊಬ್ಬರು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಇತ್ತ ಮಹೇಶ, ಶಾರ್ವರಿಯನ್ನು ಕರೆದುಕೊಂಡು ಎಲ್ಲರ ಮುಂದೆ ಬರುತ್ತಾನೆ. ಮನೆ ಮಂದಿ ದೇವರ ಪೂಜೆಗೆ ಬಂದಿರಬಹುದು ಎಂದುಕೊಳ್ಳುತ್ತಾರೆ. ಆದರೆ, ಅಲ್ಲೇ ಇರುವುದು ಟ್ವಿಸ್ಟ್.
ಮಹೇಶ ತನ್ನ ಪತ್ನಿ ಶಾರ್ವರಿಗೆ ನಿಜ ಹೇಳುವಂತೆ ಆಗಾಗ ಒತ್ತಡ ಹಾಕುತ್ತಿರುತ್ತಾರೆ. ಮಹೇಶನಿಗೆ ಶಾರ್ವರಿಯ ನಿಜವಾದ ಬಣ್ಣ ಗೊತ್ತಾಗಿ ಹೋಗಿದೆ. ಆದರೆ, ಅದನ್ನು ಮನೆಯವರಿಗೆ ತಿಳಿಸಬೇಕು. ಇಲ್ಲವಾದರೆ ಬಹಳ ಕಷ್ಟ ಆಗುತ್ತದೆ. ಮುಂದೆ ಆಗುವ ಅನಾಹುತಕ್ಕೆ ನನ್ನ ಹೆಂಡತಿ ಕಾರಣ ಆಗಿ ಬಿಡುತ್ತಾಳೆ ಎನ್ನುವುದು ಮಹೇಶನ ಗಮನಕ್ಕೆ ಬರುತ್ತದೆ.

ಈ ಕಾರಣಕ್ಕೆ ಆಕೆಗೆ ಬಹಳಷ್ಟು ಕೋಪ ಬಂದಿದೆ. ಆದರೆ, ಮಹೇಶನ ಮುಂದೆ ಕೋಪ ತೋರಿಸಿದರೆ ಏನು ವರ್ಕೌಟ್ ಆಗುವುದು ಇಲ್ಲ ಎನ್ನುವ ವಿಚಾರ ಶಾರ್ವರಿಗೆ ತಿಳಿದಿದೆ. ಮಹೇಶನ ಮಾತಿಗೆ ಆಯಿತು. ನಾನು ಮನೆಯವರ ಮುಂದೆ ನಿಜ ಒಪ್ಪಿಕೊಳ್ಳುತ್ತೇನೆ ಎಂದು ಮನದ ಮಾತನ್ನು ಹೇಳುತ್ತಾಳೆ.
ಇನ್ನೇನು ಎಲ್ಲರೂ ಹೊರಡಬೇಕು ಎನ್ನುವಷ್ಟರಲ್ಲಿ ಮಾಧವನನ್ನು ಶಾರ್ವರಿ ಕರೆಯುತ್ತಾಳೆ. ಬಾವ ನಿಮ್ಮ ಜೊತೆ ಮಾತನಾಡಬೇಕಿತ್ತು. ಹಾಗೆಯೇ ನಿಮಗೆ ಎಂದು ವಿಚಾರ ಹೇಳಬೇಕಾಗಿತ್ತು ಎಂದಾಗ ಮಾಧವ "ಏನದು ಶಾರ್ವರಿ? ನನ್ನ ಬಳಿ ಏನು ಮಾತನಾಡಬೇಕಾಗಿತ್ತು?" ಎಂದಾಗ ಶಾರ್ವರಿಗೆ ತಲೆ ಕೆಟ್ಟು ಹೋಗುತ್ತದೆ. ಇದೇ ವೇಳೆ ಮಾಧವನ ಮನೆಗೆ ಜನಾರ್ಧನ್ ಬರುತ್ತಾನೆ. ಅದು ಅಳಿಯ ಮಗನ ಜೊತೆ. ಜನಾರ್ಧನನ್ನು ನೋಡಿದ ಮಹೇಶ ಕೊಂಚ ವ್ಯಂಗ್ಯವಾಗಿ ಮಾತನಾಡುತ್ತಾನೆ.
ಮಹೇಶನ ಮಾತಿಗೆ ಕೋಪಗೊಂಡ ಜನಾರ್ಧನ್
"ಏನೋ ನಿಂದು.. ಮಾವಯ್ಯ ಇದ್ದಾರೆ ಎಂದು ಫುಲ್ ಸೈಲೆಂಟ್ ಆಗಿದ್ದೀಯಾ. ಬಿಡು ನಿನ್ನ ಮಾವಯ್ಯನಿಗೆ ಜ್ಯೂಸ್ ಮಾಡಿ ಕೊಡಲು ಹೇಳುತ್ತೇನೆ ಕುಡಿದುಕೊಂಡು ಹೋಗಲಿ. ನಾನು ನಿನ್ನ ಬಳಿ ಮಾತನಾಡಬೇಕಾಗಿತ್ತು" ಎಂದು ಹೇಳುತ್ತಾರೆ. ಅಭಿಯನ್ನ ಜನಾರ್ಧನ್ ಮುಂದೆಯಿಂದ ಕರೆದುಕೊಂಡು ಹೋಗುತ್ತಾನೆ ಮಹೇಶ. ಇತ್ತ ದೀಪಿಕಾಗೆ ಇದು ಒಂದು ಚೂರೂ ಸರಿ ಎನಿಸುವುದು ಇಲ್ಲ. ದೀಪಿಕಾ ಬಳಿ ಜನಾರ್ಧನ್ "ಈ ಮಹೇಶನಿಗೆ ಹಳೆಯ ನೆನಪು ಯಾಕಾದರೂ ಬಂತೋ. ಏನಾದರು ಉಲ್ಟಾ ಮಾತನಾಡುತ್ತಲೇ ಇರುತ್ತಾನೆ" ಎಂದು ಹೇಳುತ್ತಾನೆ.

ಅಪ್ಪನ ಮುಂದೆ ದೀಪಿಕಾ ಕಣ್ಣೀರು
ಅಷ್ಟರಲ್ಲಿ ಅಲ್ಲಿಗೆ ಜ್ಯೂಸ್ ಹಿಡಿದುಕೊಂಡು ಪೂರ್ಣಿಮಾ ಬರುತ್ತಾಳೆ. ಪೂರ್ಣಿಮಾಳನ್ನು ನೋಡಿದ ದೀಪಿಕಾಗೆ ಮತ್ತಷ್ಟು ಸಿಟ್ಟು ಬರುತ್ತದೆ. ಇದೆಲ್ಲವೂ ಪೂರ್ಣಿಮಾಳಿಂದಾಗಿ ಆಗುತ್ತಿರುವುದು ಎಂದು ತಂದೆಯ ಬಳಿ ಪೂರ್ಣಿಮಾ ಎದುರಲ್ಲೇ ಕಂಪ್ಲೇಂಟ್ ಮಾಡುತ್ತಾಳೆ. ಈ ಮನೆಯಲ್ಲಿ ಅನಾಥೆ ಎಂದು ಎಲ್ಲರಿಗೆ ತಿಳಿದಿದೆ. ಅದೇ ಎಲ್ಲರ ಮನದಲ್ಲೂ ಕೂತಿದೆ. ಎಲ್ಲರೂ ಸಿಂಪತಿ ಗಿಟ್ಟಿಸಿಕೊಂಡು ಈಕೆ ಬಹಳ ಮೆರೆಯುತ್ತಿದ್ದಾರೆ. ನನಗೆ ಈ ಮನೆಯಲ್ಲಿ ಕಿಮ್ಮತ್ತಿನ ಬೆಲೆ ಇಲ್ಲ. ಆದರೆ ಈಕೆಗೆ ಮರ್ಯಾದೆ ಜಾಸ್ತಿ ಎಂದೆಲ್ಲ ಇಲ್ಲ ಸಲ್ಲಾದನ್ನು ಹೇಳಿದರೂ ದೀಪಿಕಾಗೆ ಅಳು ಬರುತ್ತದೆ.
ಅಪ್ಪನ ಬಳಿ ಪೂರ್ಣಿಮಾ ಬಗ್ಗೆ ದೂರು
ಅಪ್ಪ ನನಗೆ ಈ ಮನೆಯಲ್ಲಿ ಈಕೆಯಿಂದ ಬಹಳ ಕಷ್ಟ ಆಗುತ್ತಿದೆ ಎಂದಾಗ ಪೂರ್ಣಿಮಾ ಜೊತೆ ಬಹಳ ಜನಾರ್ಧನ್ ನಡೆದುಕೊಳ್ಳುತ್ತಾನೆ. ಜನಾರ್ಧನ್ ಮಾತಿಗೆ ಪೂರ್ಣಿಮಾ ಸಿಕ್ಕಾಪಟ್ಟೆ ಬೇಸರ ಮಾಡಿಕೊಂಡಿದ್ದಾಳೆ. ಮುಂದೇನಾಗುತ್ತೇ ನೋಡಬೇಕಿದೆ.


Click it and Unblock the Notifications











