Shrirasthu Shubhamasthu: ಅಸ್ವಸ್ಥಳಾಗಿ ಕೆಳಗೆ ಬಿದ್ದ ತುಳಸಿ; ಮಹೇಶನ ಪ್ಲಾನ್ ತಲೆಕೆಳಗಾಯ್ತು?

By ಪೂರ್ವ

ಮಾಧವನ ಮನೆಯಲ್ಲಿ ತುಳಸಿ ಬಂದ ಬಳಿಕ ಮನೆಯ ವಾತಾವರಣವೇ ಬದಲಾಗಿದೆ. ತುಳಸಿ ಏನೇ ಮಾಡಿದರೂ ಮನೆಯವರ ಉದ್ಧಾರಕ್ಕಾಗಿ ಮಾಡುತ್ತಾಳೆ. ಹಾಗೆಯೇ ಮನೆಯವರು ಚೆನ್ನಾಗಿ ಇರಬೇಕು ಎನ್ನುವ ಉದ್ದೇಶದಿಂದ ಏನು ಬೇಕಾದರೂ ಮಾಡಲು ಹಿಂದೆ ಸರಿಯುವವರು ಅಲ್ಲ.

ಇತ್ತೀಚೆಗಿನ ದಿನಗಳಲ್ಲಿ ಮಹೇಶ ತನ್ನ ಹೆಂಡತಿಯ ವಿರುದ್ದ ತಿರುಗಿ ಬಿದ್ದಿದ್ದಾನೆ. ಆತನಿಗೆ ತನ್ನ ಅಣ್ಣನ ಜೀವನದಲ್ಲಿ ಕರಾಳ ಘಟನೆ ಆಗಲು ತನ್ನ ಹೆಂಡತಿಗೆ ಕಾರಣ ಎನ್ನುವುದು ಮಾತ್ರ ತಿಳಿದಿದೆ. ಶಾರ್ವರಿ ನಿಜ ವಿಚಾರವನ್ನು ಮನೆಯವರ ಬಳಿ ಹೇಳಿ ಬಿಟ್ಟರೆ ಮನೆಯವರು ಎಚ್ಚೆತ್ತುಕೊಳ್ಳುತ್ತಾರೆ. ಜೊತೆಗೆ ಶಾರ್ವರಿ ಮಾಡಿದ ಡ್ರಾಮಾ ಎಲ್ಲರ ಮುಂದೆ ಬಯಲಾಗಿ ಬಿಡುತ್ತದೆ.

Shrirasthu Shubhamasthu serial May 4th episode update

ಶಾರ್ವರಿ ಮಾತ್ರ ಬಹಳ ಭಯಪಟ್ಟುಕೊಂಡಿದ್ದಾಳೆ. ಆಕೆಗೆ ಎಲ್ಲಿಯಾದರೂ ಮನೆಯವರಿಗೆ ನಿಜ ವಿಚಾರ ತಿಳಿದು ಹೋದರೆ, ಅಲ್ಲಿಗೆ ನನ್ನ ಕಥೆ ಮುಗಿದು ಹೋಯಿತು. ನಾನು ಏನು ಮಾಡಲು ಸಾಧ್ಯ ಇಲ್ಲ ಎನ್ನುವ ಆಲೋಚನೆಗೆ ಬರುತ್ತಾಳೆ. ಇತ್ತ ಜನಾರ್ಧನ್ ಕೂಡ ಮಹೇಶನ ತೀಕ್ಷ್ಣವಾದ ಮಾತುಗಳಿಗೆ ಕಿರಿ ಕಿರಿ ಆಗುತ್ತದೆ. ಮಹೇಶ ನಿಜ ವಿಚಾರವನ್ನು ಇಂಡೈರೆಕ್ಟ್ ಆಗಿ ಹೇಳಿರುತ್ತಾನೆ. ಆದರೆ, ಜನಾರ್ಧನ್‌ಗೆ ಮಾತ್ರ ಮಹೇಶನ ಮಾತುಗಳನ್ನು ಕೇಳುವಷ್ಟು ತಾಳ್ಮೆ ಇರುವುದು ಇಲ್ಲ.

ಇತ್ತ ಶಾರ್ವರಿ ಮನೆಯವರ ಮುಂದೆ ಎಲ್ಲಾ ವಿಚಾರ ಹೇಳಿ ಬಿಡಬೇಕು ಎನ್ನುವಾಗ ತುಳಸಿಗೆ ಉಸಿರಾಟದ ತೊಂದರೆ ಎದುರಾಗುತ್ತದೆ. ತುಳಸಿ ಒಮ್ಮೇಲೆ ಉಸಿರನ್ನು ಬಿಗಿ ಹಿಡಿಯುತ್ತಾ ಜೋರಾಗಿ ಉಸಿರು ತೆಗೆಯುತ್ತಿರುತ್ತಾಳೆ. ಆಕೆಗೆ ಉಸಿರಾಟದ ತೊಂದರೆ ಬಂದು ಬಿಡುತ್ತದೆ. ಏನು ಮಾಡುವುದು ಎಂದು ತಿಳಿಯದೇ ಮನೆಯವರು ಕಂಗಾಲಾಗುತ್ತಾರೆ. ಹಾಗೆಯೇ ಮನೆ ಮಂದಿಯೆಲ್ಲ ತುಳಸಿ ಕುಸಿದು ಬೀಳುತ್ತಿರುವುದನ್ನು ನೋಡಿ ಶಾಕ್ ಆಗುತ್ತಾರೆ.

ತುಳಸಿ ಅವರೇ ಏನಾಯಿತು ಎಂದು ಮಾಧವ ಜೋರಾಗಿ ಕಿರುಚಾಡುತ್ತಾ ಓಡೋಡಿ ಬರುತ್ತಾರೆ. ಅಷ್ಟರಲ್ಲಿ ಶಾರ್ವರಿಗೆ ಸಿಕ್ಕಾಪಟ್ಟೆ ಖುಷಿ ಆಗುತ್ತದೆ . ನಾನು ಏನೋ ನಿಜ ವಿಚಾರ ಹೇಳಬೇಕು ಅಂತ ಇದ್ದೆ. ಆದರೆ ಅಷ್ಟರಲ್ಲಿ ಹೀಗೆಲ್ಲ ನಡೆದು ಹೋಗುತ್ತಿದೆ ಎಂದುಕೊಳ್ಳುತ್ತಾಳೆ.

Shrirasthu Shubhamasthu serial May 4th episode update

ಮಾಧವನ ಮುಂದೆ ಶಾರ್ವರಿ ನಿಜ ಹೇಳ್ತಾಳಾ?

ನಾನು ನಿಜ ಹೇಳುವುದು ಆ ದೇವರಿಗೆ ಕೂಡ ಇಷ್ಟ ಇಲ್ಲ ಎಂದು ಅನ್ನಿಸುತ್ತಿದೆ ಎಂದು ಮೆತ್ತಗೆ ನಗುತ್ತಾಳೆ. ಇನ್ನೂ ಮಹೇಶ ಮಾತ್ರ ಮನಸ್ಸಿನಲ್ಲಿಯೇ ಯೋಚನೆ ಮಾಡುತ್ತಾನೆ. ಛೇ ಇಷ್ಟರಲ್ಲಿ ಹೀಗೆ ಆಗಬೇಕಾ. ಅತ್ತಿಗೆಗೆ ಏನಾಯಿತು ಛೇ..ನನ್ನ ಹೆಂಡತಿ ಏನೆಲ್ಲ ಸಂಚು ಮಾಡಿದ್ದಾಳೆ. ಅದೆಲ್ಲವೂ ಇವತ್ತು ಹೊರಗೆ ಬರುತ್ತಿತ್ತು ಎಂದು ಮನದಲ್ಲಿ ಅಂದುಕೊಂಡು ಇರುತ್ತಾನೆ. ಇತ್ತ ಶಾರ್ವರಿ, ತುಳಸಿ ಬಳಿ ಓಡೋಡಿ ಬಂದು ಹೇಳುತ್ತಾಳೆ. "ಬಾವ ತುಳಸಿ ನೀರನ್ನು ಕುಡಿಸಿ ಕೊಂಚ ಸರಿ ಹೋಗಬಹುದು" ಎಂದು ಹೇಳುತ್ತಾಳೆ.

ತುಳಸಿಗೆ ತುಳಸಿ ನೀರು ಕೊಡಲು ಹೇಳಿದ ಶಾರ್ವರಿ

ಅದೇ ರೀತಿ ತುಳಸಿ ನೀರನ್ನು ಕುಡಿಸಿದಾಗ ಕೊಂಚ ನಿರಾಳ ಆಗುತ್ತಾಳೆ . ಆ ಬಳಿಕ ಡಾಕ್ಟರ್‌ನನ್ನು ಕರೆಯಿಸಿ ತುಳಸಿಗೆ ಟ್ರೀಟ್‌ಮೆಂಟ್ ನೀಡಲಾಗುತ್ತದೆ. ಶಾರ್ವರಿ ಹಾಗೂ ಆಕೆಯ ಪತಿ ಇಬ್ಬರೂ ಮಾತನಾಡುತ್ತಿರುತ್ತಾರೆ. ಆಗ ಮಹೇಶ "ಇವತ್ತು ಏನೋ ನಿನಗೆ ನಿಜ ಹೇಳಲು ಅವಕಾಶ ಸಿಕ್ಕಿತ್ತು. ಆದರೆ ಕಾರಣಾಂತರದಿಂದ ಸಾಧ್ಯ ಆಗಿಲ್ಲ. ಮುಂದಿನ ದಿನಗಳಲ್ಲಿ ಕೂಡ ಹೀಗೆಯೇ ಇರಬಹುದು ಎಂದು ನಾನು ಹೇಳುವುದು ಇಲ್ಲ. ಹೀಗೆ ಇರಲು ಚಾನ್ಸ್ ಕೂಡ ಇಲ್ಲ" ಎಂದು ಮಹೇಶ ಹೇಳುತ್ತಾರೆ.

ಮಹೇಶನಿಗೆ ಖಡಕ್ ವಾರ್ನಿಂಗ್

"ನೋಡಿ ನೀವು ಈಗಾಗಲೇ ನಿಮ್ಮ ದೊಡ್ಡ ಅತ್ತಿಗೆಯನ್ನು ಕಳೆದುಕೊಂಡು ಸಂಕಟ ಪಡುತ್ತಿದ್ದಿರಾ. ನೀವು ನನಗೆ ಹೀಗೆಯೇ ಟಾರ್ಚರ್ ನೀಡುತ್ತಿದ್ದರೆ, ದೊಡ್ಡ ಅತ್ತಿಗೆಗೆ ಯಾವ ಸ್ಥಿತಿ ಬಂತು ಅದೇ ಸ್ಥಿತಿ ತುಳಸಿ ಅವರಿಗೂ ಬರುತ್ತದೆ" ಎಂದು ಹೇಳಿದಾಗ ಏನು ಮಾಡಬೇಕು ಎಂದು ತಿಳಿಯದೇ ಮಹೇಶ ಅಲ್ಲಿಯೇ ಸ್ತಬ್ಧವಾಯಿತು ನಿಂತು ಬಿಡುತ್ತಾನೆ.

More from Filmibeat

English summary
Shrirasthu Shubhamasthu serial May 4th episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X