Shrirasthu Shubhamasthu: ಪ್ರೇಕ್ಷಕರ ಒತ್ತಾಯದ ಮೇರೆಗೆ ಸ್ಟೋರಿ ಚೇಂಜ್? ಏನಂತಿದ್ದಾರೆ ನೆಟ್ಟಿಗರು?

By ಪೂರ್ವ

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಟ್ರ್ಯಾಕ್ ಈಗಾಗಲೇ ಬದಲಾಗುವಂತೆ ಕಾಣುತ್ತಿದೆ. ತುಳಸಿ ಪ್ರೆಗ್ನೆಟ್ ಎಂದು ತೋರಿಸಿದಾಗಿನಿಂದ ಸೀರಿಯಲ್ ಪ್ರೇಮಿಗಳು ಅದ್ಯಾಕೋ ಸಖತ್ ಬೇಸರ ಮಾಡಿಕೊಂಡಿದ್ದಾರೆ. ತುಳಸಿ ಹಾಗೂ ಮಾಧವ ಮದುವೆ ಆಗುತ್ತಿದ್ದಾರೆ ಎಂದು ತಿಳಿದಾಗ ಬಹಳಷ್ಟು ಜನರಿಗೆ ಖುಷಿ ಆಗಿತ್ತು. ಆದರೆ ಅವರಿಬ್ಬರಿಗೆ ಮಗು ಆಗುತ್ತಿದೆ ಎಂದು ತಿಳಿದಾಗಿನಿಂದ ನೆಟ್ಟಿಗರು ಫುಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಯಾಕಂದ್ರೆ, ತುಳಸಿ ಹಾಗೂ ಮಾಧವಗೆ ಎದೆ ಎತ್ತರ ಬೆಳೆದ ಮಕ್ಕಳಿದ್ದಾರೆ.

ಧಾರಾವಾಹಿಯ ಈ ಘಟ್ಟದಲ್ಲಿ ಹೀಗೆಲ್ಲ ತೋರಿಸಿದ್ದು ಸರಿಯಲ್ಲ ಎಂದು ಜನರು ಬಹಳ ಕೋಪಗೊಂಡಿದ್ದರು. ಆದರೆ, ಇದೀಗ ತುಳಸಿ ಹೊಟ್ಟೆಯಲ್ಲಿದ್ದ ಮಗುವನ್ನು ತೆಗೆಸಬೇಕು ಎಂದು ಡಾಕ್ಟರ್ ಹೇಳಿದ್ದಾರೆ. ಈ ಮೂಲಕ ನೆಟ್ಟಿಗರ ಆಕ್ರೋಶಕ್ಕೆ ಧಾರಾವಾಹಿ ತಂಡ ಮಣಿದಿದ್ದಾರೆ. ಇನ್ನು ದೀಪಿಕಾ ಹಾಗೂ ಪೂರ್ಣಿಮಾ ಒಳ ಜಗಳ ನಿಲ್ಲುವ ಹಾಗೆ ಕಾಣಿಸುತ್ತಿಲ್ಲ. ದೀಪಿಕಾ ಹಾಗೂ ಪೂರ್ಣಿಮಾ ಜೊತೆ ಮೇಲ್ಮೇಲೆ ನಗುತ್ತ ಮಾತನಾಡಿಸಿದರೆ ಒಳಗೊಳಗೆ ಕುದಿಯುತ್ತಿರುತ್ತಾಳೆ. ಪೂರ್ಣಿಮಾಗೆ ದೀಪಿಕಾ ಎಂದರೆ ಸ್ವಂತ ತಂಗಿಗಿಂತ ಹೆಚ್ಚು. ಆಕೆಯನ್ನು ಅದೇ ರೀತಿ ನೋಡಿಕೊಳ್ಳುತ್ತಾಳೆ ಪೂರ್ಣಿಮಾ.

Shrirasthu Shubhamasthu serial Netizens reaction on story

ಆದರೆ, ದೀಪಿಕಾ ಅದೆಷ್ಟೋ ಬಾರಿ ಪೂರ್ಣಿಮಾ ತಲೆ ಮೇಲೆ ಗೂಬೆ ಕೂರಿಸಿ ಬಿಟ್ಟಿದ್ದಾಳೆ. ಪೂರ್ಣಿಮಾ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಅಭಿ ಅವಿ ಮಧ್ಯೆ ವೈಮನಸ್ಸು ತರುವ ಪ್ರಯತ್ನವನ್ನು ದೀಪಿಕಾ ಹಲವಾರು ಬಾರಿ ಮಾಡಿದ್ದಾಳೆ. ಆದರೆ, ಆಗೆಲ್ಲ ಅಭಿಗೆ ತನ್ನ ಹೆಂಡತಿ ಬಹಳ ಒಳ್ಳೆಯವಳು. ಅತ್ತಿಗೆ ಏನೋ ತಪ್ಪು ಮಾಡಿದ್ದಾರೆ. ಅವರಿಗೆ ಯಾಕೆ ದೀಪಿಕಾ ಮೇಲೆ ಅಷ್ಟು ಸಿಟ್ಟು ಎಂದೆಲ್ಲ ಅಂದುಕೊಂಡು ಇರುತ್ತಿದ್ದ. ಆದರೆ, ಇದೀಗ ದೀಪಿಕಾ ಮೇಲೆ ಅಭಿಗೆ ಅನುಮಾನ ಶುರು ಆಗಿದೆ.

ಪೂರ್ಣಿಮಾ ಮೇಲೆ ದೀಪಿಕಾ ಕೋಪ

ವನಜಾ, ತುಳಸಿ ಮನೆಗೆ ಬರುತ್ತಾರೆ. ಪೂರ್ಣಿಮಾನನ್ನು ನೋಡಿದ ವನಜಾ ಬಾಚಿ ತಬ್ಬಿಕೊಳ್ಳುತ್ತಾರೆ. ದೀಪಿಕಾಗೆ ಅಮ್ಮನ ವರ್ತನೆ ಅಷ್ಟು ಹಿಡಿಸುವುದು ಇಲ್ಲ. ಇದೇನಪ್ಪ ಪೂರ್ಣಿಮಾ ಜೊತೆ ತೋರಿಸುವ ಪ್ರೀತಿ ನನ್ನ ಜೊತೆ ಅರ್ಧದಷ್ಟು ಕೂಡ ತೋರಿಸುವುದು ಇಲ್ಲ ಎಂದು ಬಹಳ ಕೋಪ ಮಾಡಿಕೊಳ್ಳುತ್ತಾಳೆ. ಹಾಗೆಯೇ ತನ್ನ ತಾಯಿಯ ಜೊತೆ ದೀಪಿಕಾ ಹೇಳುತ್ತಾಳೆ. ಅಮ್ಮ ನೀನು ನನ್ನನ್ನು ನೋಡಲು ಬಂದ್ಯಾ ಎಂದೆಲ್ಲ ಕೋಪದಿಂದ ಪ್ರಶ್ನೆ ಮಾಡುತ್ತಾಳೆ. ಹಾಗೆಯೇ ಅಲ್ಲಿಂದ ಕೋಪದಿಂದ ರೂಮ್ ಒಳಗೆ ಹೋಗುತ್ತಾಳೆ.

Shrirasthu Shubhamasthu serial Netizens reaction on story

ದೀಪಿಕಾ ಸ್ವಭಾವ ಅಭಿಗೆ ಅರ್ಥ ಆಗುತ್ತಾ?

ಇದನ್ನು ನೋಡಿದ ಪೂರ್ಣಿಮಾಗೆ ಆಕೆಯ ಅಸಮಾಧಾನ ಅರ್ಥ ಆಗುತ್ತದೆ . ಹಾಗೆಯೇ ಆಕೆಯನ್ನು ಸಂತೈಸಬೇಕು ಎಂದು ಆಕೆಯ ರೂಮ್‌ಗೆ ಹೋಗುತ್ತಾಳೆ. ಆದರೆ ಪೂರ್ಣಿಮಾ ಮಾತು ಕೇಳುವ ಸ್ಥಿತಿಯಲ್ಲಿ ಆಕೆ ಇರುವುದಿಲ್ಲ. ಆಕೆಯನ್ನು ಮತ್ತು ಹಿಡಿದು ರೂಮ್‌ನಿಂದಾ ಹೊರ ದಬ್ಬುತ್ತಾಳೆ. ಆ ಕೂಡಲೇ ಪೂರ್ಣಿಮಾಳನ್ನು ಅಭಿ ಹಿಡಿದುಕೊಳ್ಳುತ್ತಾನೆ. ಇದನ್ನು ನೋಡಿ ದೀಪಿಕಾಗೆ ಶಾಕ್ ಆಗುತ್ತದೆ. ಅಭಿಗೆ ತಾನು ತಳ್ಳಿದ್ದು ತಿಳಿದು ಬಿಟ್ಟಿತು ಎಂದು ಹೇಳಿ ಏನೇನೋ ಸಬೂಬು ಹೇಳಿ ತಪ್ಪಿಸಿಕೊಂಡು ಬಿಡುತ್ತಾಳೆ.

ಅಭಿಗೆ ದೀಪಿಕಾ ಮೇಲೆ ಅನುಮಾನ

ಅಭಿ ಮನದಲ್ಲಿ ಏನೆಲ್ಲ ಕೊರೆಯುತ್ತಿರುತ್ತಾಳೆ. ಆಗ ದೀಪಿಕಾ ಗಂಡನನ್ನು ಸಮಾಧಾನ ಮಾಡುತ್ತಾಳೆ. ಹಾಗಲ್ಲ ಹೀಗೆ ಎಂದೆಲ್ಲ ಹೇಳಿ ಅಭಿಗೆ ಸಮಾಧಾನ ಹೇಳುತ್ತಾರೆ. ಇನ್ನು ದೀಪಿಕಾ ಹೇಳಿದ್ದನ್ನೆಲ್ಲ ನಂಬಿ ಬಿಡುತ್ತಾನೆ. ಇದನ್ನೆಲ್ಲ ನೋಡಿದ ಸೀರಿಯಲ್ ಪ್ರೇಮಿಗಳಿಗೆ ಬಹಳಷ್ಟು ಕೋಪ ಬರುತ್ತಿದೆ. ಏನಿದು ಅಭಿಗೆ ಅಷ್ಟು ತಿಳಿಯುವುದು ಇಲ್ವಾ. ಯಾಕೆ ಹೀಗೆಲ್ಲ ಆಡುತ್ತಾರೆ. ಹೆಂಡತಿ ಹೇಳಿದ ಮಾತು ಹೆಚ್ಚು ಕೇಳುವುದು ಯಾಕೆ? ಎಂದೆಲ್ಲ ಬಹಳ ಖಡಕ್ ಆಗಿ ಅಭಿಮಾನಿಗಳು ಪ್ರಶ್ನೆ ಕೇಳುತ್ತಿದ್ದಾರೆ.

More from Filmibeat

English summary
Shrirasthu Shubhamasthu serial fans angry towards Deepika character
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X