Shrirasthu Shubhamasthu; ಜನಾರ್ಧನ್‌ನನ್ನು ತಂದೆ ಎಂದು ಒಪ್ಪಿಕೊಳ್ಳುತ್ತಾಳಾ ಪೂರ್ಣಿಮಾ?
ಜನಾರ್ಧನ್‌ಗೆ ಕೊನೆಗೂ ಆತನ ಮಗಳು ಸಿಕ್ಕೆ ಬಿಟ್ಟಳು. ಮೊದಲು ಮಗಳು ಎಂದರೆ ವನಜಾ ಮೇಲೆ ಸಿಟ್ಟು ಮಾಡಿಕೊಳ್ಳುತ್ತಿದ್ದ. ಇದೀಗ ಮಗಳು ಸಿಗದಿದ್ದರೆ ಆಸ್ತಿಯೆಲ್ಲ ಬೇರೆಯವರ ಪಾಲಾಗುತ್ತದೆ ಎಂದು ತಿಳಿದು ತನ್ನ ದೊಡ್ಡ ಮಗಳಿಗಾಗಿ ಹುಡುಕಾಟ ನಡೆದಿರುವುದು ಮಾತ್ರ ಸತ್ಯ. ವನಜ ತಂದೆ ಆಕೆಯ ಮೊದಲ ಮಗುವಿನ ಹೆಸರಿನಲ್ಲಿ ಆಸ್ತಿ ಬರೆದಿದ್ದರು. ಆದರೆ ಇದು ಗೊತ್ತಿಲ್ಲದೇ ಜನಾರ್ಧನ್ ಮಗಳನ್ನು ಬೀದಿಗೆ ಬಿಡುತ್ತಾನೆ. ಆತನಿಗೆ ತನ್ನ ಮಗುವಿನ ಬಗ್ಗೆ ಕಿಂಚಿತ್ತೂ ಯೋಚನೆ ಕೂಡ ಇರಲಿಲ್ಲ. ಇದೆಲ್ಲವನ್ನೂ ನೋಡಿ ವನಜಾ ತನ್ನ ಮಗಳ ಕುತ್ತಿಗೆಗೆ ಒಂದು ಸರವನ್ನೂ ಹಾಕಿರುತ್ತಾರೆ. ಅದರಿಂದ ಈಗ ಜನಾರ್ಧನ್‌ಗೆ ತನ್ನ ಮಗಳು ಪೂರ್ಣಿಮಾ ಎನ್ನುವುದು ಗೊತ್ತಾಗಿದೆ.
ಯಾಕೆಂದರೆ ತನ್ನ ಮಗಳಲ್ಲದೆ ಬೇರೆ ಯಾರ ಕುತ್ತಿಗೆಯಲ್ಲಿ ಕೂಡ ಆ ಚೈನ್ ಅನ್ನು ನೋಡಲು ಸಾಧ್ಯವಿಲ್ಲ ಎಂದು ಜನಾರ್ಧನ್ ಅಂದುಕೊಳ್ಳುತ್ತಾನೆ. ಇನ್ನೂ ದೀಪಿಕಾಗೆ ಮಾತ್ರ ತನ್ನ ಅಕ್ಕ ಸಿಗುವುದೇ ಬೇಡ. ತನ್ನ ತಂದೆ ಅಕ್ಕನ ಬಗ್ಗೆ ಇಲ್ಲ ಸಲ್ಲದನ್ನು ಹೇಳಿದಾಗಲೇ ನನಗೆ ಬಹಳ ಕೋಪ ಬರುತ್ತಿತ್ತು. ಆದರೆ ಇದೀಗ ತನ್ನ ಅಕ್ಕ ಬದುಕಿದ್ದಾಳೆ ಎಂದು ತಿಳಿದರೆ ಮಾತ್ರ ಆಕೆಯನ್ನು ಕೊಂದು ಬಿಡುವಷ್ಟು ದ್ವೇಷ ಬೆಳೆಸಿಕೊಂಡಿದ್ದಾಳೆ.

ಇನ್ನೂ ದೀಪಿಕಾಗೆ ಪೂರ್ಣಿಮಾ ತನ್ನ ಸ್ವಂತ ಅಕ್ಕ ಎನ್ನುವುದೇ ತಿಳಿದಿಲ್ಲ. ಅಭಿ ತನ್ನ ಅತ್ತಿಗೆಯ ಬಗ್ಗೆ ಕೊಂಚ ಮಾತಾಡಿದ್ದಕ್ಕೆ ಆತನ ಕೋಪ ಮಾಡಿಕೊಂಡಿದ್ದಾಳೆ. ಇನ್ನು ದೀಪಿಕಾಗೆ ಅಕ್ಕ ಸಿಕ್ಕೆ ಬಿಟ್ಟಳು ಎಂದಾಗ ಮತ್ತೆ ಎಷ್ಟು ಕೋಪ ಬರಬಹುದು. ಅಭಿಗೆ ಕೋಪದಿಂದ ಮಾತಾಡಿ ಬಾಯಿ ಹೇಳಿ ಮುಚ್ಚಿಸಬಹುದು. ಆದರೆ ಜನಾರ್ಧನ್ ಬಾಯಿ ಹೇಗೆ ಮುಚ್ಚಿಸುತ್ತಾಳೆ ಎನ್ನುವುದನ್ನು ನೋಡಬೇಕಿದೆ. ಇನ್ನೂ ಜನಾರ್ಧನ್ ಹಾಗೂ ವನಜಾ ಮಾಧವನ ಮನೆಗೆ ಬರುತ್ತಾರೆ. ಮಾಧವನ ಬಳಿ ಬಹಳ ಕುಶಲೋಪರಿ ಮಾತನಾಡುತ್ತಾರೆ. ಇನ್ನೂ ಅಲ್ಲಿಗೆ ಬಂದ ಪೂರ್ಣಿಮಾ ಜನಾರ್ಧನ್ ಕಾಲಿಗೆ ಬೀಳುತ್ತಾಳೆ ಆಗ ಆಕೆಯ ಕೊರಳಿನಲ್ಲಿದ್ದ ಚೈನ್ ಅನ್ನು ಜನಾರ್ಧನ್ ನೋಡುತ್ತಾನೆ.
ಜನಾರ್ಧನ್ ಚೈನ್ ನೋಡಿ ಏನಮ್ಮಾ ಈ ಚೈನ್ ನಿನ್ನದೇನಾ ಎಂದು ಕೇಳಿದಾಗ ಪೂರ್ಣಿಮಾ ಹೌದು ಎಂದು ಹೇಳುತ್ತಾಳೆ. ಹಾಗೆಯೇ ಮುಂದುವರೆದು "ನನ್ನ ತಂದೆ ತಾಯಿಗಳು ಹಾಕಿದ ಚೈನ್ ಇದು ಎಂದು ಆಶ್ರಮದಲ್ಲಿ ಹೇಳುತ್ತಿದ್ದರು" ಎಂದಾಗ ಜನಾರ್ಧನ್‌ಗೆ ಪಕ್ಕ ಆಗುತ್ತದೆ. ಯಾವ ವಿಚಾರ ಜನಾರ್ಧನ್ ಗೆ ತಿಳಿಯಬಾರದು ಎಂದುಕೊಂಡು ಇದ್ದೇವೋ ಆ ವಿಚಾರ ಜನಾರ್ಧನ್‌ಗೆ ತಿಳಿದು ಹೋಯಿತು ಎಂದು ಆತಂಕದಲ್ಲಿ ಇಬ್ಬರು ಮುಖ ಮುಖ ನೋಡುತ್ತಾರೆ.

ಆ ವೇಳೆ ಜನಾರ್ಧನ್ ವನಜಾಳನ್ನು ಕರೆದು ತನ್ನ ಮೊಬೈಲ್‌ನಲ್ಲಿ ಮಗುವಿನ ಫೋಟೋ ತೋರಿಸಿ "ನೋಡು ವನಜಾ ನಮ್ಮ ಮಗಳಿಗೆ ನಾವು ಚೈನ್ ಹಾಕಿದ್ದೆವು. ಅದರ ಫೋಟೋ" ಎಂದು ಹೇಳುತ್ತಾರೆ. ಆಗ ವನಜಾಗೆ ಶಾಕ್ ಆಗುತ್ತೆ. ಕೊನೆಗೆ ಜನಾರ್ಧನ್ ಪೂರ್ಣಿಮಾ ತಲೆಯ ಮೇಲೆ ಕೈ ಇರಿಸಿ ನಿಜ ಹೇಳು ವನಜಾ ಈಕೆ ನಮ್ಮ ಮಗಳು ತಾನೇ ಎಂದು ಹೇಳುತ್ತಾರೆ. ಆಗ ಏನು ಮಾಡಬೇಕೋ ತಿಳಿಯದೇ ಹೌದು ಎಂದು ಹೇಳುತ್ತಾರೆ. ಇನ್ನೂ ಪೂರ್ಣಿಮಾಗೆ ಮಾತ್ರ ತನಗೆ ಏನಾಗುತ್ತಿದೆ ಎನ್ನುವುದು ತಿಳಿಯದೇ ಇಬ್ಬರ ಮುಖ ನೋಡಿಕೊಂಡು ಇರುತ್ತಾಳೆ.
ಇತ್ತ ದೀಪಿಕಾ ಮಾತ್ರ ಕೋಪದಿಂದ ಏನು ಹೇಳುತ್ತಿದ್ದಿಯಾ ಅಪ್ಪ. ಇಲ್ಲ ಸಲ್ಲದ ಮಾತನ್ನು ಹೇಳಿ ಇನ್ನೂ ಕಂಪ್ಯೂಸ್ ಮಾಡಬೇಡ ಎಂದು ಕೋಪದಿಂದ ಹೇಳುತ್ತಾಳೆ. ಇದನ್ನೆಲ್ಲ ಕೇಳಿದ ಜನಾರ್ಧನ್ ಮಾತ್ರ ಇಲ್ಲ ಮಗಳೇ ನಿನ್ನ ಅಕ್ಕ ಪೂರ್ಣಿಮಾ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಹೇಳಿ ಬಿಡುತ್ತಾನೆ.


Click it and Unblock the Notifications











