Shrirasthu Shubhamasthu: ಅಮ್ಮನಿಗೆ ಪ್ರೀತಿಯಿಂದ ಗಿಫ್ಟ್ ತಂದ ಮಗ; ಅಭಿಯ ಪ್ರೀತಿಗೆ ತುಳಸಿ ಫುಲ್ ಖುಷ್
ತುಳಸಿ ಎಂದರೆ ಅಭಿಗೆ ಬಹಳ ಅಚ್ಚುಮೆಚ್ಚು. ಅಭಿ ಮನದಲ್ಲಿ ತುಳಸಿಗೆ ವಿಶೇಷವಾದ ಸ್ಥಾನಮಾನ ಇದೆ. ಆಕೆಗಾಗಿ ಏನು ಬೇಕಾದರೂ ಮಾಡಲು ಸೈ. ಇದೇ ಪ್ರೀತಿಯಿಂದ ತುಳಸಿಗಾಗಿ ಅಭಿ ಬಳೆಯನ್ನು ತಂದಿರುತ್ತಾನೆ. ಆತ ಮೊದಲಿಗೆ ಈ ವಿಚಾರವನ್ನು ತನ್ನ ಹೆಂಡತಿಯ ಬಳಿಯಲ್ಲಿ ಪ್ರಸ್ತಾಪ ಮಾಡುತ್ತಾನೆ. ದೀಪಿಕಾಗೆ ಮೊದಲೇ ತುಳಸಿ ಎಂದರೆ ಅಷ್ಟಕಷ್ಟೇ. ಮೊದಲಿಗೆ ಅಭಿ ಬಳೆಯನ್ನು ಮಾತ್ರ ತೋರಿಸುತ್ತಾನೆ. ಆಗ ದೀಪಿಕಾ ಬಹಳ ಖುಷಿ ಪಡುತ್ತಾಳೆ. ನನಗಾಗಿ ನೀನು ಬಳೆಗಳನ್ನು ತಂದಿದ್ದಿಯಾ ಎಂದು ಖುಷಿಯಿಂದ ಹೇಳಿದಾಗ ಅಭಿ "ಸಾರಿ ದೀಪಿಕಾ ಇದು ನಿನಗಲ್ಲ. ಇದು ಅಮ್ಮನಿಗೋಸ್ಕರ. ತುಳಸಿ ಅಮ್ಮ ತಾಯಿ ಆಗುತ್ತಿದ್ದಾರೆ. ಈ ವೇಳೆ ಅವರು ಬಹಳ ಖುಷಿಯಾಗಿ ಇರಬೇಕು. ಅವರನ್ನು ಖುಷಿಯಿಂದ ನೋಡಿಕೊಳ್ಳುವ ಜವಾಬ್ಧಾರಿ ನನ್ನದು. ಅವರ ಪ್ರೀತಿಗೆ ನನ್ನದೊಂದು ಸಣ್ಣ ಉಡುಗೊರೆ" ಎಂದು ಹೆಂಡತಿಯ ಬಳಿ ಹೇಳುತ್ತಾನೆ.
ದೀಪಿಕಾಗೆ ಈ ಮಾತನ್ನು ಕೇಳಿ ಬಹಳ ಕೋಪ ಬರುತ್ತದೆ. "ನಾನು ಹೆಂಡತಿ.. ನನಗೆ ಇಷ್ಟು ದಿನದವರೆಗೂ ಏನನ್ನು ಕೊಡಿಸಿಲ್ಲ. ಆದರೆ ಇತ್ತೀಚೆಗೆ ಮನೆಗೆ ಬಂದ ತುಳಸಿನೇ ಹೆಚ್ಚಾಗಿ ಹೋದ್ರಾ" ಎಂದು ಆಲೋಚನೆ ಮಾಡುತ್ತಿರುತ್ತಾಳೆ. ಇತ್ತ ಅಭಿ ದೀಪಿಕಾಗೆ ಮಾತನಾಡಲು ಬಿಡದೆ ನೇರವಾಗಿ ತುಳಸಿ ಅವರನ್ನು ಹುಡುಕಿಕೊಂಡು ಬರುತ್ತಾನೆ. ಆಗ ಅಲ್ಲಿ ಅವಿ ಹಾಗೂ ಪೂರ್ಣಿಮಾ ಕುಳಿತು ಮಾತನಾಡುತ್ತಿರುತ್ತಾರೆ. ಆಗ ಅಲ್ಲಿಗೆ ಬಂದ ಅಭಿಗೆ ಪೂರ್ಣಿಮಾ ನೋವಿನಲ್ಲಿರುವ ವಿಷಯ ತಿಳಿಯುತ್ತೆ.

ಇನ್ನು ಅಭಿ ತಾನು ತುಳಸಿ ಅಮ್ಮನಿಗೆ ಅಂತ ತಂದಿದ್ದ ಬಳೆಯನ್ನು ಕೊಡುವುದಕ್ಕೆ ಅಂತ ಬರುತ್ತಾನೆ. ಅಭಿ ಬಂದ ವೇಳೆಗೆ ಸಮರ್ಥ್ ಕೂಡ ಬರುತ್ತಾನೆ. ತುಳಸಿ ಮುಂದೆನೇ ಕೋಳಿ ಜಗಳನೂ ಶುರುವಾಗುತ್ತೆ. ಇಬ್ಬರ ಜಗಳವನ್ನು ನೋಡಿ ತುಳಸಿಗೆ ನಗು. ಇಬ್ಬರ ಕೋಳಿ ಜಗಳವನ್ನು ನಿಲ್ಲಿಸಿ ಅವರಿಬ್ಬರೂ ಬಂದ ಉದ್ದೇಶವನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತಾಳೆ. ಆಗ ಅಭಿ ಕೈಯಲ್ಲಿ ತುಳಸಿಗಾಗಿ ತಂದ ಗಿಫ್ಟ್ ಖುಷಿ ಕೊಡುತ್ತೆ.
ತುಳಸಿಗೆ ಮಗನ ಕೈಯಲ್ಲಿರುವ ಉಡುಗೊರೆ ನೋಡಿ ಬಹಳ ಖುಷಿ ಆಗುತ್ತದೆ. ತುಳಸಿಗೆ ಹಸಿರು ಗಾಜಿನ ಬಳೆಗಳು ಅಂದರೆ ಬಲು ಇಷ್ಟ. ಇದನ್ನು ಅಮ್ಮನಿಗೆ ಕೊಡಲೇಬೇಕು ಅಂತ ಇಷ್ಟ ಅಲ್ಲಿಗೆ ಬಂದಿದ್ದಾನೆ. ಆದರೆ ತುಳಸಿಗೆ, ಪೂರ್ಣಿಮಾ ವಿಚಾರವೇ ಬಹಳ ಮರುಕ ಹುಟ್ಟಿಸುತ್ತೆ. ಪೂರ್ಣಿಮಾಗೆ ಆಕೆಯ ತಂದೆ ತಾಯಿ ಇಬ್ಬರೂ ಸಿಕ್ಕರೂ ಆಕೆಗೆ ಅನಾಥೆ ಎನ್ನುವ ಭಾವನೆ ಇನ್ನೂ ಹೋಗಿಲ್ಲ.
ಜನಾರ್ಧನ್ ಮಾಡಿದ ಕೆಲಸಕ್ಕೆ ತನ್ನ ತಂದೆ ಸತ್ತು ಹೋಗಿದ್ದಾರೆ ಎಂದು ತುಳಸಿ ಬಹಳ ಬೇಸರದಿಂದ ಹೇಳುತ್ತಾಳೆ. ಆಕೆಗೆ ತನ್ನ ಗಂಡ ಸರ್ವಸ್ವ ಆಗಿರುತ್ತಾನೆ. ತನಗೆ ಅಮ್ಮ ತುಳಸಿ ಹಾಗೂ ತಂದೆ ಮಾಧವ ಎಂದು ಮನಸ್ಸಿನಲ್ಲಿಯೇ ಡಿಸೈಡ್ ಮಾಡಿಕೊಳ್ಳುತ್ತಾಳೆ.


Click it and Unblock the Notifications











