ಮಾಧವ , ತುಳಸಿ ಮನೆಬಿಟ್ಟು ಹೋಗುವ ಹೊತ್ತು; ಶಾರ್ವರಿ ಮುಖವಾಡ ಮನೆಯವರ ಮುಂದೆ ಬಯಲಾಗುತ್ತಾ?
'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಇತ್ತೀಚಿನ ದಿನಗಳಲ್ಲಿ ಜನರಿಗೆ ಬಹಳ ಹತ್ತಿರ ಆಗುತ್ತಿರುವ ಧಾರಾವಾಹಿಗಳಲ್ಲಿ ಒಂದು. ಬಹಳ ಕಲರ್‌ಫುಲ್ ಆಗಿ ಮುನ್ನಡೆಯುತ್ತಿರುವ ಧಾರಾವಾಹಿ ಇತ್ತೀಚಿನ ದಿನಗಳಲ್ಲಿ ತುಳಸಿ ಗರ್ಭಿಣಿ ಎಂದು ತಿಳಿದ ಬಳಿಕ ಟ್ರೋಲ್ ಮಾಡಿದ್ದರು. ಬಳಿಕ ಅದೇ ಜನರು ತುಳಸಿಯ ಪರಿಸ್ಥಿತಿಯನ್ನು ಒಪ್ಪಿಕೊಂಡಿದ್ದರು. ಈ ಧಾರಾವಾಹಿಯ ಕಥೆ ಎತ್ತ ಕಡೆಗೆ ಸಾಗುತ್ತಿವೆ ಎಂದು ಕೊಂಡ ಜನರಿಗೆ ಇದೀಗ ತುಳಸಿಯ ಮೇಲೆ ಗೌರವ ಮೂಡುತ್ತಿದೆ.
ತುಳಸಿ ತನ್ನ ಮಗ ಹಾಗೂ ಸೊಸೆ ಚೆನ್ನಾಗಿ ಇರಲಿ ಎನ್ನುವ ಕಾರಣಕ್ಕೆ ಮಗುವಿಗೆ ಜನ್ಮ ನೀಡಲು ಸಜ್ಜಾಗಿದ್ದಾರೆ. ಊರಿನವರು ಏನೇ ಹೇಳಲಿ ನಾನು ಮಾತ್ರ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ತಾನಗೆ ಹುಟ್ಟುವ ಮಗುವನ್ನು ಪೂರ್ಣಿಮಾ ಕೈಗೆ ಒಪ್ಪಿಸಿ ಬಿಡಬೇಕು. ಆಕೆ ಖುಷಿಯಿಂದ ಕಾಲ ಕಳೆಯಬೇಕು ಎಂದು ಬಹಳ ನಿಷ್ಕಲ್ಮಷ ಪ್ರೀತಿಯಿಂದ ತನ್ನ ಮಗುವನ್ನು ಪಣಕ್ಕೆ ಇಟ್ಟು ಮಗುವಿಗೆ ಜನ್ಮ ನೀಡಲು ಹೊರಟಿದ್ದಾಳೆ. ಇತ್ತ ಶಾರ್ವರಿ ತುಳಸಿ ವಿರುದ್ದ ಹಲ್ಲು ಮಸೆಯುತ್ತಿದ್ದಾಳೆ.

ತುಳಸಿಯಿಂದಲೇ ತನ್ನ ಮಗಳಿಗೆ ಬಂದ ಸಂಬಂಧ ಹೊರಟು ಹೋಯಿತು. ತುಳಸಿ ಮಾಡಿದ ಒಂದೇ ಒಂದು ತಪ್ಪಿನಿಂದಾಗಿ ನಿಧಿಗೆ ಬಹಳ ನೋವಾಯಿತು ಎಂದು ಮನಸ್ಸಿನಲ್ಲಿಯೇ ತುಳಸಿ ವಿರುದ್ದ ಕೋಪ ಮಾಡಿಕೊಂಡಿದ್ದಾಳೆ. ತುಳಸಿಯನ್ನು ಮನೆಬಿಟ್ಟು ಹೋಗುವ ಹಾಗೆ ಮಾಡಬೇಕು ಎಂದು ಹಲವು ಬಾರಿ ಅಂದುಕೊಳ್ಳುತ್ತಾಳೆ.
ಇದೀಗ ನಾಟಕದವನನ್ನು ಕರೆದುಕೊಂಡು ಬಂದು ಆತನ ಜೊತೆ ಅಭಿನಯ ಬೇರೆ ಮಾಡಿಸುತ್ತಾಳೆ. ತುಳಸಿ ಮಗುವಿನಿಂದ ನಿಮ್ಮ ಮನೆಗೆ ಗಂಡಾಂತರ ಕಾದಿದೆ ಎಂದು ಹೇಳಿ ಮನೆ ಮಂದಿಯ ನೆಮ್ಮದಿ ಕೆಡಿಸುತ್ತಾನೆ. ಆದರೆ, ಆತ ಕೊನೆಗೆ ಮಾಧವನ ಕೈಗೆ ಸಿಕ್ಕಿ ಬೀಳುತ್ತಾನೆ. ಮಾಧವ ಆತನಿಗೆ ಫುಲ್ ಡ್ರಿಲ್ ಮಾಡುತ್ತಾನೆ. ಯಾರು ಇದೆಲ್ಲವನ್ನೂ ನಿನಗೆ ಹೇಳಿಕೊಟ್ಟಿದ್ದು? ನೀನು ಯಾಕೆ ಇದೆಲ್ಲವನ್ನೂ ಮಾಡಿದ್ದು? ನಿನ್ನ ಹಿಂದೆ ಯಾರು ಇದ್ದಾರೆ ಎಂದು ಕೇಳುತ್ತಾನೆ. ಆತನ ಮಾತು ಕೇಳುತ್ತಲೇ ಅವನಿಗೆ ಬಹಳ ಭಯ ಆಗಿ ಶಾರ್ವರಿ ಮುಖ ನೋಡುತ್ತಾನೆ.

ನಿಧಿ ದುಃಖ ನೋಡಲಾಗದೆ ಕುಳಿತ ಶಾರ್ವರಿ
ಇನ್ನು ಶಾರ್ವರಿ ಮಗಳು ನಿಧಿ ಮದುವೆಯನ್ನು ಮಾಡಲೇಬೇಕು ಎಂಬ ಕಾರಣಕ್ಕೆ ಮಾಧವ ಹಾಗೂ ತುಳಸಿ ಬೀಗರ ಬಳಿಗೆ ಬರುತ್ತಾರೆ. ತುಳಸಿ ಅವರ ಬಳಿ ಕೈ ಮುಗಿದು ಕೇಳುತ್ತಾಳೆ. ನಮ್ಮ ತಪ್ಪಿನಿಂದಾಗಿ ಮಕ್ಕಳು ನೋವು ಅನುಭವಿಸುವುದು ಎಷ್ಟು ಸರಿ. ನಾವು ಈ ಮದುವೆಯಿಂದ ತುಂಬಾ ದೂರ ಉಳಿಯುತ್ತೇವೆ. ಆದರೆ ದಯವಿಟ್ಟು ಅವರಿಬ್ಬರ ಮದುವೆಯನ್ನು ಮಾಡಿಸಿ ಎಂದು ಕೇಳಿಕೊಳ್ಳುತ್ತಾರೆ. ಅವರಿಬ್ಬರ ಮಾತು ಕೇಳಿ ನಿಧಿ ಮದುವೆಗೆ ಒಪ್ಪಿಗೆ ಸೂಚಿಸುತ್ತಾರಾ ಎನ್ನುವುದು ಇನ್ನೂ ಗೊತ್ತಾಗಬೇಕು.
ದೀಪಿಕಾ, ಜನಾರ್ಧನ್ ಹೊಸ ಆಟ ಶುರು
ಇತ್ತ ದೀಪಿಕಾ ಹಾಗೂ ಜನಾರ್ಧನ್ ಆಸ್ತಿ ಲಪಟಾಯಿಸಲು ಹೊಸ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾರೆ. ಜನಾರ್ಧನ್‌ಗೆ ಇದೀಗ ಪೂರ್ಣಿಮಾನೇ ನನ್ನ ಮಗಳು ಎನ್ನುವ ಮನೋಭಾವ ಮೂಡಿದೆ. ಆತನ ಆಸ್ತಿ ಕೈ ತಪ್ಪಿ ಹೋಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಆದ ಕಾರಣ ಮುಂದೆ ಜನಾರ್ಧನ್ ಅಸಲಿ ಆಟ ಬದಲಾಗುವ ಲಕ್ಷಣ ಕಂಡು ಬರುತ್ತಿವೆ.


Click it and Unblock the Notifications











