Shrirasthu Shubhamasthu:ಮನೆಯವರನ್ನೆಲ್ಲ ಎದುರು ಹಾಕಿಕೊಂಡು ಮಗಳ ಮದುವೆ ಮಾಡ್ತಾಳಾ ಶಾರ್ವರಿ?

By ಪೂರ್ವ

ಸಮರ್ಥ್‌ಗೆ ತನ್ನ ತಾಯಿಯದೆ ದೊಡ್ಡ ಚಿಂತೆ ಆಗಿರುತ್ತದೆ. ಆಕೆ ಮಾಧವ ಅವರ ಮನೆಯಲ್ಲಿ ಯಾವ ರೀತಿ ಜೀವನ ಸಾಧಿಸುತ್ತಿದ್ದಾಳೆ ಎನ್ನುವ ಭಯ ಆತನಿಗೆ ಕಾಡಿತ್ತು . ಮಾಧವ ಅವರು ತುಂಬಾ ಒಳ್ಳೆಯವರು. ಆದರೆ, ಅವರ ಮಕ್ಕಳು ಮಾತ್ರ ಕೆಟ್ಟವರು ಎಂದು ಹೇಳಲಾರೆ ಆದರೆ, ಕೆಲವೊಂದು ಬಾರಿ ಯೋಚಿಸಿದಾಗ ಹಾಗೆ ಅನ್ನಿಸುತ್ತದೆ.

ಇದೀಗ ಸಮರ್ಥ್ ತನ್ನ ತಾಯಿಯ ಬಳಿ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾನೆ. ಅಮ್ಮ ನೀನು ಮೊದಲು ಈ ಮನೆಯಲ್ಲಿ ಇರುವುದು ನನಗೆ ಯಾಕೋ ಇಷ್ಟವಿರಲಿಲ್ಲ. ಆದರೆ ಇದೀಗ ಈ ಮನೆಯವರು ನಿನ್ನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಆದ ಕಾರಣ ನೀನು ಇಲ್ಲಿಯೇ ಇರು. ದಯವಿಟ್ಟು ನೀನು ನಮ್ಮ ಮನೆಗೆ ಬರಬೇಡ ನಿನ್ನನ್ನು ಇಲ್ಲಿ ನೋಡಿಕೊಳ್ಳುವ ಹಾಗೆ ನಮ್ಮ ಮನೆಯಲ್ಲಿ ಖಂಡಿತ ನೋಡಿಕೊಳ್ಳಲು ಸಾಧ್ಯವಿಲ್ಲ. ಆದರೆ ನಿನಗೆ ಇಲ್ಲಿ ಸುರಕ್ಷಿತವಾದ ಸ್ಥಳವಿದೆ ಆದಕಾರಣ ನೀನು ಇರುವುದು ಒಳಿತು ಎಂದು ಹೇಳುತ್ತಾನೆ ಸಮರ್ಥ್.

Shrirasthu Shubhamasthu serial October 24th ep

ಸಮರ್ಥಿಗೆ ಅವಿ ಹಾಗೂ ಅಭಿಯನ್ನು ನೋಡಿ ಬಹಳ ಖುಷಿಯಾಗುತ್ತೆ. ತನ್ನ ಹೆತ್ತ ತಾಯಿಯನ್ನು ಅವರಿಬ್ಬರೂ ಅಮ್ಮಾಯಂದೇ ಪೂಜಿಸುತ್ತಿದ್ದಾರೆ. ಅಮ್ಮ ಇಲ್ಲದವರಿಗೆ ಅಮ್ಮನ ಬೆಲೆ ಗೊತ್ತಾಗುವುದು ಎಂದು ಅವರಿಬ್ಬರೂ ಆಗಾಗ ಹೇಳುತ್ತಿದ್ದರು ಕೂಡ. ಇದರಿಂದಾಗಿ ಸಮರ್ಥ್ ಬಹಳ ನೆಮ್ಮದಿಯಿಂದ ದಿನ ಕಳೆಯುವ ಹಾಗೆ ಆಗಿದೆ. ತನ್ನ ತಾಯಿ ಖುಷಿಯಾಗಿದ್ದರೆ, ನಾವೆಲ್ಲರೂ ಖುಷಿಯಾಗಿರುತ್ತೇವೆ ಎಂದು ಆತ ಅಂದುಕೊಂಡಿರುತ್ತಾನೆ.

ಆತನಿಗೆ ತನ್ನ ತಾಯಿ ಎಂದರೆ ಬಹಳ ಪ್ರೇಮ ಆಕೆಗೆ ಏನು ಆಗಬಾರದು ಎನ್ನುವುದು ಆತನ ಇಚ್ಛೆ ಕೂಡ. ನಿಧಿಯನ್ನು ನೋಡಲು ಗಂಡಿನ ಕಡೆಯವರು ಬಂದಾಗ ಗಂಡಿನ ಅಮ್ಮ ಮಾತನಾಡಿದ ರೀತಿ ಹಾಗೆ ಗಂಡಿನ ಅಪ್ಪ ಮಾತನಾಡಿದ ರೀತಿ ಯಾರಿಗೂ ಸ್ವಲ್ಪ ಕೂಡ ಹಿಡಿಸುವುದಿಲ್ಲ. ಯಾಕೆಂದರೆ ಹಿರಿಯ ವಯಸ್ಸಿನಲ್ಲಿ ತುಳಸಿ ತಾಯಿ ಆಗುತ್ತಿದ್ದಾರೆ ಎನ್ನುವ ವಿಚಾರವನ್ನು ಕೇಳಿ ಅವರೆಲ್ಲರೂ ತುಂಬಾ ಕೀಳಾಗಿ ನೋಡುತ್ತಾರೆ.

ಇದನ್ನೆಲ್ಲ ನೋಡಿದ ಅಭಿಗೆ ಬಹಳ ಸಿಟ್ಟೇರುತ್ತದೆ. ಯಾಕೆ ಹೀಗೆಲ್ಲ ಹೇಳುತ್ತಿದ್ದೀರಾ? ಈ ರೀತಿ ಮಾತನಾಡುವುದರಿಂದ ನಿಮಗೆ ಏನು ಲಾಭವಾಗುತ್ತದೆ. ನಿಮಗೆ ನನ್ನ ತಾಯಿಯ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಖಡಕ್ ಆಗಿ ವಾರ್ನಿಂಗ್ ಮಾಡುತ್ತಾನೆ. ಇದನ್ನೆಲ್ಲ ಕೇಳಿಸಿಕೊಂಡ ನಿಧಿಗೆ ಏನು ಮಾತನಾಡಬೇಕು ಎಂದು ತಿಳಿಯದೇ ಮೌನಿ ಆಗುತ್ತಾಳೆ. ಆ ಕೂಡಲೇ ನಿಧಿಯನ್ನು ನೋಡಲು ಬಂದ ಗಂಡಿನ ಕಡೆಯವರು ನಮಗೆ ಈ ಸಂಬಂಧ ಬೇಡವೇ ಬೇಡ ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾರೆ. ಇದನ್ನೆಲ್ಲ ನೋಡಿದ ಶಾರ್ವರಿಗೆ ಕೋಪ ಬರುತ್ತದೆ. ಆಗ ಅಭಿಯ ಮೇಲೆ ಆಕೆ ರೇಗಾಡಿ ಬಿಡುತ್ತಾಳೆ. ನೀನು ಈ ರೀತಿಯ ಮಾತನ್ನು ಹೇಳುತ್ತಿಯಾ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ ಎಂದಾಗ ಮಹೇಶನಿಗೆ ಕೋಪ ಬಂದು ಆತನ ಹೆಂಡತಿಗೆ ಸರಿಯಾದ ಮಾತನ್ನೇ ಹೇಳುತ್ತಾನೆ.

ಇನ್ನು ಶಾರ್ವರಿ ಬೀಗರ ಬಳಿ ಗುಟ್ಟಾಗಿ ಮಾತನಾಡುತ್ತಾಳೆ. ಹಾಗೆಯೇ ತುಳಸಿ ನಮ್ಮ ಮನೆಯಲ್ಲಿ ಇರದೇ ಇರುವ ಹಾಗೆ ನಾನು ನೋಡಿಕೊಳ್ಳುತ್ತೇನೆ. ನೀವು ಈ ಮದುವೆಗೆ ಒಪ್ಪಿಗೆಯನ್ನು ಕೊಡಬೇಕು ಇದರಿಂದಾಗಿ ನನ್ನ ಮಗಳ ಮದುವೆ ನಿರ್ವಿಘ್ನವಾಗಿ ಆಗುವ ಹಾಗೆ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ನಿಧಿ ಮಾಡುವೆಯಾಗುವವರು ಆಯಿತು ಎನ್ನುವ ಒಪ್ಪಿಗೆಯನ್ನು ನೀಡುತ್ತಾರೆ. ಇನ್ನು ದೀಪಿಕಾ ಮೇಲೆ ಅಭಿಗೆ ಸಿಕ್ಕಾಪಟ್ಟೆ ಸಿಟ್ಟು ಬರುತ್ತದೆ. ಯಾಕೆ ಹೀಗೆಲ್ಲ ಅಮ್ಮನ ಬಗ್ಗೆ ತುಚ್ಛವಾಗಿ ಮಾತನಾಡುತ್ತಿರುವೇ ಎಂದು ಸಖತ್ ಆಗಿ ಕ್ಲಾಸ್ ತೆಗೆದುಕೊಳ್ಳುತ್ತಾಳೆ.

More from Filmibeat

English summary
Shrirasthu Shubhamasthu serial October 24th episode update
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X