ತುಳಸಿಯನ್ನು ಮನೆಯಿಂದ ಹೊರ ಹಾಕಲು ಶಾರ್ವರಿ ತಂತ್ರ? ಮುಗ್ಧ ತುಳಸಿ ಸಂಕಷ್ಟ ತಂದಿಡುತ್ತಾಳ ಶಾರ್ವರಿ?

By ಪೂರ್ವ

ಸಿರಿ ಹಾಗೂ ಸಂಧ್ಯಾ ತುಳಸಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ಆಕೆಯ ಮನೆಗೆ ತೆಗೆದುಕೊಂಡು ಹೋಗಬೇಕು ಅಂದುಕೊಂಡಿರುತ್ತಾರೆ. ಇದಕ್ಕೆ ಸಮರ್ಥ್ ಕೂಡ ಸಾಥ್‌ ನೀಡಿರುತ್ತಾನೆ. ಸಮರ್ಥ್‌ಗೆ ತನ್ನ ತಾಯಿ ಇನ್ನೊಂದು ಜೀವಕೆ ಜೀವ ನೀಡುತ್ತಿದ್ದಾರೆ ಎಂದು ತಿಳಿದು ಬಹಳಷ್ಟು ಖುಷಿ ಪಟ್ಟಿರುತ್ತಾನೆ. ಆತನಿಗೆ ತನ್ನ ತಾಯಿಯ ಬಗ್ಗೆ ಹೆಮ್ಮೆ, ಹಾಗೂ ಆಕೆಯ ಮೇಲೆ ಆಗಾಧವಾದ ಪ್ರೇಮ ಇರುತ್ತದೆ. ಆಕೆ ಮಾಡುತ್ತಿರುವ ತ್ಯಾಗದ ಬಗ್ಗೆ ತಿಳಿದರೆ ಇನ್ನಷ್ಟು ಖುಷಿ ಪಡುತ್ತಾರೆ ಸಮರ್ಥ್. ಮೊದಲಿಗೆ ತನ್ನ ತಾಯಿಯನ್ನು ಸಮರ್ಥ್ ತಪ್ಪಾಗಿ ತಿಳಿದುಕೊಂಡಿದ್ದರು. ಆಮೇಲೆ ಆತನಿಗೆ ತನ್ನ ತಾಯಿಯ ಒಳ್ಳೆತನದ ಬಗ್ಗೆ ಅರಿವಾಗತೊಡಗಿತು.

ತನ್ನ ತಾಯಿಗೆ ತನ್ನ ಮನೆಗಿಂತ ಆಕೆಯ ಗಂಡನ ಮನೆಯಲ್ಲಿ ಖುಷಿಯಾಗಿ ಇರುತ್ತಾಳೆ ಎನ್ನುವ ಕಾರಣಕ್ಕೆ ತುಳಸಿಯನ್ನು ಅಲ್ಲಿಯೇ ಬಿಟ್ಟು ಹೋಗುತ್ತಾನೆ. ಇದೆಲ್ಲವನ್ನ ನೋಡಿದ ಮಾಧವ, ಅಭಿ, ಅವಿಗೆ ಖುಷಿಯಾಗುತ್ತದೆ. ಇನ್ನು ಈ ಸಂದರ್ಭದಲ್ಲಿ ತುಳಸಿಗೆ ಮಾಧವನ ಅವಶ್ಯಕತೆ ಬಹಳಷ್ಟು ಇರುತ್ತೆ. ಆಕೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಬಹಳ ಮುಖ್ಯ. ಹಾಗೆಯೇ ನಿಧಿಗೆ ತನ್ನಿಂದ ಆದ ಅನ್ಯಾಯಕ್ಕೆ ಹೇಗಾದರೂ ಮಾಡಿ ಆಕೆಗೆ ನ್ಯಾಯ ಒದಗಿಸುವ ಹಾಗೆ ಮಾಡಬೇಕು. ಇಲ್ಲವಾದರೆ ಆ ಪಾಪ ಪ್ರಜ್ಞೆ ಖಂಡಿತವಾಗಿಯೂ ತನ್ನನ್ನು ಕಾಡದೆ ಬಿಡದು ಎನ್ನುವ ಕಾರಣಕ್ಕೆ ನಿಧಿಗೆ ಸಮಾಧಾನ ಹೇಳಲೆಂದು ತುಳಸಿ ಆಕೆಯ ರೂಮ್‌ಗೆ ಬರುತ್ತಾಳೆ.

Shrirasthu Shubhamasthu serial October 30th episode update

ಆದರೆ, ತುಳಸಿ ಎನಿಸಿಕೊಂಡಿದ್ದು ಒಂದು. ಅಲ್ಲಿ ಆದದ್ದೇ ಇನ್ನೊಂದು. ನಿಧಿಗೆ ಆಕೆ ಬಹಳ ಪ್ರೀತಿಸಿದ ಹುಡುಗನನ್ನು ಮದುವೆ ಆಗುವುದಕ್ಕೆ ಸಾಧ್ಯ ಇಲ್ಲ ಎಂದು ತಿಳಿದ ಬಳಿಕ ಬಹಳ ದುಃಖದಲ್ಲಿ ಇರುತ್ತಾಳೆ. ತುಳಸಿಗೆ ನಿಧಿ ಚೆನ್ನಾಗಿ ಬಯ್ಯುತ್ತಾರೆ. ಇದನ್ನು ನೋಡಿದ ತುಳಸಿ ಆಕೆಯ ಬಳಿ ಹೇಳುತ್ತಾಳೆ. "ನೀನು ಅಂದುಕೊಂಡು ಇರುವ ಹುಡುಗನ ಜೊತೆ ನಾನು ನಿನ್ನ ಮದುವೆ ಮಾಡುತ್ತೇನೆ" ಎಂದು ಹೇಳಿ ಆಕೆಯ ರೂಮ್‌ನಿಂದಾ ಹೊರಗೆ ಹೋಗುತ್ತಾಳೆ. ಇನ್ನು ನಿಧಿಯ ನೋವನ್ನು ನೋಡಿ ಶಾರ್ವರಿಗೆ ತುಳಸಿಯ ಮೇಲೆ ಬಹಳ ಸಿಟ್ಟು ಬರುತ್ತೆ.

ನಿಧಿಗೆ ತುಳಸಿಯನ್ನು ಕಂಡರೆ ಆಗುವುದೇ ಇಲ್ಲ. ಆದರೆ, ಇದೀಗ ತುಳಸಿ ಆಕೆಯ ಮದುವೆಯನ್ನು ತಪ್ಪಿಸಿ ಈಗ ಆಕೆಯ ಕೆಂಗಣ್ಣಿಗೆ ಗುರಿ ಆಗಿದ್ದಾಳೆ. ತನ್ನ ಜೀವನವನ್ನು ಎಲ್ಲರೂ ಸೇರಿ ಹಾಳು ಮಾಡಿಬಿಟ್ಟರು ಎನ್ನುವ ನೋವು ಆಕೆಗಿರುತ್ತೆ. ತುಳಸಿ ಮನೆಗೆ ಸಂಧ್ಯಾ ಹಾಗೂ ಸಿರಿ ಬರುತ್ತಾರೆ. ತುಳಸಿಗೆ ಬೇಕಾದ ಸಿಹಿ ತಿಂಡಿಗಳನ್ನ ಹಾಗೆಯೇ ಕರಿದ ತಿಂಡಿಗಳನ್ನು ಮಾಡಿಕೊಂಡು ತಂದಿರುತ್ತಾರೆ. ತುಳಸಿಗೆ ಇಬ್ಬರನ್ನ ನೋಡಿ ಬಹಳ ಖುಷಿ ಪಡುತ್ತಾಳೆ.

Shrirasthu Shubhamasthu serial October 30th episode update

ಸಿರಿ ಹಾಗೂ ಸಂಧ್ಯಾ ತನ್ನ ತಾಯಿಗೆ ತಂದಿರುವ ತಿಂಡಿಯನ್ನು ಉಣಬಡಿಸುತ್ತಾರೆ. ತಾಯಿಯನ್ನು ನೋಡಿದ ಸಿರಿ ಹಾಗೂ ಸಂಧ್ಯಾಗೆ ಬಹಳ ಖುಷಿಯೋ ಖುಷಿ. ಆಕೆಯ ಜೊತೆ ದಿನ ಕಳೆಯುವುದು ಹರಟೆ ಹೊಡೆಯುವುದು ಎಂದರೆ ಎಲ್ಲರಿಗೂ ಕೂಡ ಪಂಚ ಪ್ರಾಣ. ಅಂತಹದರಲ್ಲಿ ಇದೀಗ ಅವರ ಜೊತೆ ಕುಳಿತು ಸಣ್ಣ ಮಕ್ಕಳ ರೀತಿ ಆಟ ಆಡುವುದು ಇದೆಲ್ಲವೂ ಕೂಡ ಅವರಿಗೆ ಮತ್ತಷ್ಟು ಸೊಗಸಾಗಿ ಇರುತ್ತದೆ.

ತನ್ನ ಅತ್ತೆ ಗರ್ಭಿಣಿ ಆಗಿದ್ದಾರೆ ಎಂದು ತಿಳಿದ ಕೂಡಲೇ ಪೂರ್ಣಿಮಾ ಬಹಳಷ್ಟು ಖುಷಿ ಪಟ್ಟಿದ್ದಾಳೆ. ತನಗೆ ಮಕ್ಕಳು ಇಲ್ಲ ಎನ್ನುವ ಕಾರಣಕ್ಕೆ ಪೂರ್ಣಿಮಾ ಬಹಳ ಕೋಪ ಮಾಡಿಕೊಳ್ಳುತ್ತಿದ್ದಳು. ಆದರೆ ಇದೀಗ ತನ್ನ ಅತ್ತೆಯ ಮೂಲಕ ಈ ಮನೆಯಲ್ಲಿ ಮತ್ತೆ ಮಗುವಿನ ಕಿಲ ಕಿಲ ಸದ್ದು ಕೇಳಬಹುದು ಎಂದು ಅಂದುಕೊಂಡು ಇರುತ್ತಾಳೆ. ಇನ್ನು ಶಾರ್ವರಿ ಇದೆಲ್ಲವನ್ನೂ ನೋಡಿ ನನ್ನ ಮಗಳ ಮದುವೆ ಕೆಡಿಸಿ ಎಲ್ಲರೂ ಅದೆಷ್ಟು ಖುಷಿಯಲ್ಲಿ ಇದ್ದೀರ. ನಾನು ಯಾರನ್ನು ಸುಮ್ಮನೆ ಬಿಡುವ ಮಾತೇ ಇಲ್ಲ ಎಂದು ಹೇಳಿ ಶಾಪ ಹಾಕುತ್ತಿರುತ್ತಾಳೆ. ಹಾಗೆಯೇ ಗೂಂಡಗಳಿಗೆ ಕರೆ ಮಾಡಿ, ತುಳಸಿಯನ್ನು ಹೊರ ಹಾಕುವ ಪ್ಲಾನ್ ಅನ್ನು ಹೇಳುತ್ತಾಳೆ. ತಾನು ಹೇಳಿದ ಪ್ರಕಾರ ನಡೆದುಕೊಳ್ಳಬೇಕೆಂದು ಎಚ್ಚರಿಕೆ ನೀಡುತ್ತಾಳೆ.

More from Filmibeat

English summary
Shrirasthu Shubhamasthu serial October 30th episode update;
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X