Shrirasthu Shubhamasthu:ದೀಪಿಕಾಗೆ ವಾರ್ನಿಂಗ್ ಕೊಟ್ಟ ತುಳಸಿ; "ಬುದ್ದಿ ಕಲಿಯಲ್ಲ ಮೇಡಂ" ಎಂದ ಫ್ಯಾನ್ಸ್

By ಪೂರ್ವ

ಪೂರ್ಣಿಮಾಗೆ ಮಕ್ಕಳಾಗುವುದು ಇಲ್ಲ ಎನ್ನುವ ಕೊರಗು ಒಂದು ಕಡೆಯಾದರೆ, ದೀಪಿಕಾ ಚುಚ್ಚು ಮಾತಿನ ನೋವು ಇನ್ನೊಂದು ಕಡೆ. ದೀಪಿಕಾ ಪೂರ್ಣಿಮಾ ಜೊತೆ ಎಲ್ಲರ ಎದುರು ಬಹಳ ಪ್ರೀತಿಯಿಂದ ನಡೆದುಕೊಳ್ಳುತ್ತಾ ಇರುತ್ತಾಳೆ. ಅದು ಅಲ್ಲದೆ ದೀಪಿಕಾ ಹೇಗಾದರೂ ಮಾಡಿ ಪೂರ್ಣಿಮಾಗೆ ಮಾನಸಿಕವಾಗಿ ತೊಂದರೆ ಕೊಡಬೇಕು ಎನ್ನುವ ನಿರ್ಧಾರ ಮಾಡಿದ್ದಾಳೆ. ಪೂರ್ಣಿಮಾ ಹಾಗೂ ದೀಪಿಕಾ ಒಂದೇ ತಾಯಿಯ ಮಕ್ಕಳಾದರೂ ಅವರಿಬ್ಬರಲ್ಲೂ ಅದೆಷ್ಟು ವ್ಯತ್ಯಾಸ ಎಂದು ಅನೇಕ ಸೀರಿಯಲ್ ಪ್ರೇಮಿಗಳ ಅಭಿಪ್ರಾಯ.

ಪ್ರತಿ ಮನೆ ಮಂದಿ ಈ ವಿಚಾರವನ್ನು ಹೇಳಿಕೊಳ್ಳುತ್ತಿದ್ದರು. ಆದರೂ ಕೂಡಾ ಯಾರ ಜೊತೆಗೆ ಎನೂ ಹೇಳಿಕೊಳ್ಳದೆ, ಯಾರ ಜೊತೆ ತನ್ನ ಮನದ ನೋವನ್ನು ಹೇಳಿಕೊಳ್ಳದ ಪೂರ್ಣಿಮಾಗೆ ತನ್ನ ಮನಸ್ಸಿಗೆ ಇಷ್ಟೆಲ್ಲ ನೋವು ಉಂಟು ಮಾಡುತ್ತಿದ್ದರೂ ಕೂಡ ಅದ್ಯಾವುದನ್ನು ಮನದಲ್ಲಿ ಇಟ್ಟುಕೊಳ್ಳದೆ ಬರೆ ನೋವನ್ನು ನೀಡುತ್ತಿದ್ದಳು.

Shrirasthu Shubhamasthu serial October 4th episode update

ಇನ್ನು ದೀಪಿಕಾ ಒಂದು ಮಗುವನ್ನು ತನ್ನ ಬೆನ್ನ ಮೇಲೆ ಕೂರಿಸಿ ಆಟ ಆಡುತ್ತಿರುತ್ತಾಳೆ. ಆಗ ಆ ಮಗು ಆಕಸ್ಮಾತ್ ಆಗಿ ಕೆಳಗೆ ಬೀಳುತ್ತದೆ. ಮಗು ಜೋರಾಗಿ ಅಳಲು ಪ್ರಾರಂಭಿಸುತ್ತದೆ. ಇದನ್ನು ನೋಡಿದ ಅವಿಗೆ ಹೆಂಡತಿಯ ಮೇಲೆ ಬಹಳ ಕೋಪ ಬರುತ್ತದೆ. ನಿನಗೆ ಮಕ್ಕಳನ್ನು ಹೇಗೆ ಆಟ ಆಡಿಸಬೇಕು ಎನ್ನುವುದು ಇನ್ನೂ ತಿಳಿದಿಲ್ಲ ಎಂದು ಹೇಳಿದಾಗ ಪೂರ್ಣಿಮಾಗೆ ಬಹಳ ಬೇಸರ ಆಗುತ್ತದೆ.

ಈ ಘಟನೆ ಬಳಿಕ ಪೂರ್ಣಿಮಾಗೆ ಮನೆ ಬಿಟ್ಟು ಹೋಗಬೇಕು ಅನಿಸುತ್ತೆ. ಕೊನೆಗೆ ಮನ:ಶಾಂತಿಗಾಗಿ ಎಲ್ಲಾದರೂ ಹೋಗಿ ಬರೋಣ ಎಂದುಕೊಂಡು ಇರುವಾಗ ಅದಕ್ಕೆ ದೀಪಿಕಾ ಕುಮ್ಮಕ್ಕು ನೀಡುತ್ತಾಳೆ. ನೋಡು ಭಾವನಿಗೆ ಮಕ್ಕಳು ಅಂದರೆ ಎಷ್ಟು ಇಷ್ಟ ಎಂದು ಮತ್ತೆ ಪೂರ್ಣಿಮಾಗೆ ಕೊಂಕು ಮಾತಿನಿಂದ ತಿವಿಯುತ್ತಾಳೆ.

ಮನೆ ಮಂದಿಗೆ ಗಾಬರಿ

ಮನೆಯಲ್ಲಿ ಪೂರ್ಣಿಮಾ ಇಲ್ಲದ್ದನ್ನು ಕಂಡು ಅವಿಗೆ ಬಹಳ ಆತಂಕ ಆಗುತ್ತದೆ. ಆತ ಹೆಂಡತಿಯನ್ನು ಕರೆಯುತ್ತಿರುವಾಗ ಮನೆಯಲ್ಲಿ ಆಕೆ ಇಲ್ಲದೆ ಇರುವುದನ್ನು ಅವಿ ಬಳಿ ದೀಪಿಕಾ ಹೇಳುತ್ತಾಳೆ. ಅಕ್ಕ ಅದ್ಯಾಕೋ ಬಹಳ ಬೇಸರ ಮಾಡಿಕೊಂಡಿದ್ದರೂ. ನೀವು ಏನಾದರೂ ಅವರಿಗೆ ಹೇಳಿದ್ದೀರಾ? ಎಂದು ಹೇಳುತ್ತಾಳೆ. ಇದನ್ನು ಕೇಳಿದ ತಕ್ಷಣ ಅವಿಗೆ ನಾನು ಪೂರ್ಣಿಗೆ ಬೈದಿದ್ದೇನೆ ಅಲ್ವಾ. ಆಕೆಗೆ ಬಹಳ ಬೇಸರ ಆಗಿರಬಹುದು ಎಂದು ತನ್ನಷ್ಟಕ್ಕೆ ಆಲೋಚನೆ ಮಾಡುತ್ತಿರುತ್ತಾನೆ. ಕೊನೆಗೆ ಅದು ಹೇಗೋ ಅವಿಗೆ ಪೂರ್ಣಿಮಾ ಸಿಕ್ಕಿ ಬಿಡುತ್ತಾಳೆ. ಆಕೆಯ ಜೊತೆ ಕ್ಷಮೆಯನ್ನು ಕೇಳುತ್ತಾನೆ.

Shrirasthu Shubhamasthu serial October 4th episode update

ಪೂರ್ಣಿಮಾ ಬಳಿ ಕ್ಷಮೆ ಕೇಳಿದ ಅವಿ

ಇನ್ನು ಎಲ್ಲಾ ಸಮಾಧಾನ ಆದ ಬಳಿಕ ದೀಪಿಕಾ ಎದುರಿನಲ್ಲಿ ಬಹಳ ಚೆನ್ನಾಗಿ ಮಾತನಾಡಿ ಹಿಂದೆಯಿಂದ ನಿಮ್ಮನ್ನು ನಾನು ಸುಮ್ಮನೆ ಬಿಡುವುದಿಲ್ಲ ಎನ್ನುವ ಹಾಗೆ ಮಾತನಾಡುತ್ತಿದ್ದಳು. ಇದೆಲ್ಲವನ್ನೂ ನೋಡಿ ತುಳಸಿ ದೀಪಿಕಾಗೆ ವಾರ್ನಿಂಗ್ ನೀಡಿದ್ದಾಳೆ. ತುಳಸಿ ಹೆಸರಿನಲ್ಲಿ ಜಾಗ ತೆಗೆದುಕೊಳ್ಳಬೇಕು ಎನ್ನುವ ವೇಳೆ ಶಾರ್ವರಿ ಷಡ್ಯಂತ್ರ ಮಾಡಿ ಅದನ್ನು ತಪ್ಪಿಸಿ ಬಿಡುತ್ತಾಳೆ. ಆದರೆ ಶಾರ್ವರಿ ಇಡುತ್ತಿರುವ ಒಂದೊಂದು ಹೆಜ್ಜೆಯನ್ನು ಕೂಡ ತುಳಸಿ ಗಮನಿಸುತ್ತಿದ್ದಾಳೆ ಎಂದು ಹೇಳಿದರೆ ತಪ್ಪಾಗದು.

More from Filmibeat

English summary
Shrirasthu Shubhamasthu serial October 4th episode update:
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X