ವೀಕ್ಷಕರ ಮುಂದೆ ಮಾಧವ್ ಮತ್ತು ತುಳಸಿಯ ಮನದ ಮಾತುಗಳು

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿ ಆರಂಭವಾಗಿ 283 ಸಂಚಿಕೆಗಳು ಪೂರೈಸಿದ್ದು, ಇನ್ನೇನು 300 ಸಂಚಿಕೆಗಳತ್ತ ದಾಪುಗಾಲಿಟ್ಟಿದೆ. ಕಳೆದ ಒಂದು ವರ್ಷದಲ್ಲಿ ಈ ಧಾರಾವಾಹಿ ಎಲ್ಲೂ ವೀಕ್ಷಕರನ್ನು ನಿರಾಸೆಗೊಳಿಸಿಲ್ಲ.

ಧಾರಾವಾಹಿ ಆರಂಭದಿಂದಲೂ ತನ್ನದೇ ರೀತಿಯಲ್ಲಿ ಪ್ರೇಕ್ಷಕರನ್ನು ಸೆಳೆದಿದ್ದು, ಕೆಲ ಸಮಯ ಕೊಂಚ ಬೇಸರ ಮಾಡಿದ್ದೂ ಉಂಟು. ಆದರೂ ವೀಕ್ಷಕರ ಮನ ಗೆದ್ದಿದೆ. ಅದರಲ್ಲೂ ದತ್ತ ತಾತ ಮಾತ್ರ ಅಲ್ಟಿಮೇಟ್ ಆಗಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ.

Shrirasthu Shubhamasthu serial: Question and answer of Tulasi and madhav

ತುಳಸಿ ಹಾಗೂ ಮಾಧವ್‌ ಮದುವೆಯನ್ನು ಮೊದಮೊದಲು ಒಪ್ಪದ ಕೆಲವರು ಈಗ ಒಪ್ಪಿ ಜೋಡಿನ ಹಾಡಿ ಹೊಗಳುತ್ತಿದ್ದಾರೆ. ಪ್ರೀತಿ, ಮದುವೆ, ಸಂಬಂಧಗಳನ್ನು ನೋಡುವ ರೀತಿಯನ್ನೇ ಬದಲಾಯಿಸಿಕೊಂಡಿದ್ದಾರೆ.

ವಾಹಿನಿಯ ಮತ್ತೊಂದು ಹೊಸ ಪ್ರಯತ್ನ

ಜೀ ಕನ್ನಡ ವಾಹಿನಿ ಸದಾ ಹೊಸತನವನ್ನು ವೀಕ್ಷಕರ ಮುಂದಿಡುತ್ತದೆ. ಇತ್ತೀಚೆಗಷ್ಟೇ ಮಾಧವ್ ಮತ್ತು ತುಳಸಿ ಸಾಂಗ್ ಕೂಡ ಬಂದಿತ್ತು. ಇದನ್ನು ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದರು. ಧಾರಾವಾಹಿಯ ಕಥೆಯೇ ಬದಲಾಯ್ತೇನೋ ಎಂಬಂತೆ ಆಶ್ಚರ್ಯ ಪಟ್ಟಿದ್ದರು. ಅದೇ ರೀತಿಯಲ್ಲಿ ಈಗ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮಾಧವ್ ಹಾಗೂ ತುಳಸಿ ಮನದಲ್ಲಿ ಒಬ್ಬರ ಬಗ್ಗೆ ಒಬ್ಬರಿಗೆ ಯಾವ ಅಭಿಪ್ರಾಯವಿದೆ ಎಂದು ವಾಹಿನಿ ಪ್ರಶ್ನಿಸಿ ಉತ್ತರ ಪಡೆದಿದೆ. ಇಬ್ಬರೂ ಕೂಡ ಪ್ರಶ್ನೆಗಳಿಗೆ ಉತ್ತರ ಕೊಡೋದ್ರಲ್ಲೂ ಇಬ್ಬರದ್ದೂ ಒಂದೇ ದಾರಿ. ಮಾಧವ್ ಮತ್ತು ತುಲಸಿ ಪಾತ್ರಗಳಿಗೆ ತಕ್ಕಂತೆ ಉತ್ತರ ನೀಡಿದ್ದಾರೆ.

ಮಾಧವನಿಗೆ ತುಳಸಿ ಎಂದರೆ ಹೇಗೆ..?

ಮಾಧವ್‌ಗೆ ಸ್ನೇಹಿತೆಯಾಗಿ ಮತ್ತು ಹೆಂಡತಿಯಾಗಿ ತುಳಸಿಯಲ್ಲಿನ ಬದಲಾವಣೆ ಆಗಿದ್ಯಾ? ಎಂಬ ಪ್ರಶ್ನೆಗೆ ಮಾಧವ್ ಅವರು ಉತ್ತರಿಸಿದ್ದಾರೆ. ತುಳಸಿಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಎಂದು ಹೇಳಿದ್ದಾರೆ.

ಪ್ರಶ್ನೆ: ತುಳಸಿ ಅವರನ್ನ ಎಲ್ಲಿಗೆ ಕರೆದುಕೊಂಡು ಹೋಗಲು ಬಯಸುತ್ತೀರಾ..?

ಉತ್ತರ: ಬೀಚ್ ಗೆ ಕರೆದುಕೊಂಡು ಹೋಗಿ ಅವರ ಜೊತೆಗೆ ಸಂಜೆ ಹೊತ್ತಲ್ಲಿ ಹೆಜ್ಜೆ ಹಾಕಲು ಇಷ್ಟ ಎಂದಿದ್ದಾರೆ.

ಪ್ರಶ್ನೆ: ತುಳಸಿಗೆ ಯಾವ ಅಡುಗೆ ಮಾಡಿಕೊಡಲು ಆಸೆ..?

ಉತ್ತರ: ಯಾವುದಾದರೂ ಸಿಹಿ ತಿಂಡಿ.

ಪ್ರಶ್ನೆ: ತುಳಸಿ ಮಾಡುವ ಯಾವ ಅಡುಗೆ ಇಷ್ಟ?

ಉತ್ತರ: ತುಳಸಿ ಅವರು ಮಾಡುವ ಪುಳಿಯೋಗರೆ ಬಹಳ ಇಷ್ಟ.

ಪ್ರಶ್ನೆ: ತುಳಸಿ ಅವರ ಯಾವ ಗುಣ ಇಷ್ಟ.

ಉತ್ತರ: ಕಷ್ಟದಲ್ಲಿ ತಾಳ್ಮೆಯಿಂದ ನಗು ಮುಖದಲ್ಲಿ ಎದುರಿಸುವುದು ಎಂದರೆ ಇಷ್ಟ.

ಪ್ರಶ್ನೆ: ತುಳಸಿ ಅವರೊಂದಿಗೆ ಸ್ಕೂಟರ್ ಅಥವಾ ವಾಕಿಂಗ್ ಯಾವ ರೀತಿ ಹೋಗುವುದು ಇಷ್ಟ.

ಉತ್ತರ: ಸ್ಕೂಟರ್‌ನಲ್ಲಿ ಹೋಗುವುದು ಇಷ್ಟವಾಗುತ್ತದೆ. ಆದರೆ, ಅದಕ್ಕಿಂತಲೂ ಹೆಚ್ಚಾಗಿ ವಾಕ್ ಮಾಡುತ್ತಾ ಮಾತನಾಡಿಕೊಂಡು ಹೋಗುವುದು ಬಹಳ ಇಷ್ಟ.

ಪ್ರಶ್ನೆ: ತುಳಸಿ ಅವರಿಗೆ ಹೇಗೆ ಪ್ರಪೋಸ್ ಮಾಡಲು ಇಚ್ಛಿಸುತ್ತೀರಾ?

ಉತ್ತರ: ಮನೆಯವರೆಲ್ಲರೂ ಇರುವಾಗ ಅವರ ಇಷ್ಟದ ಸಿಹಿ ತಿಂಡಿ ಮಾಡಿ ಪ್ರಪೋಸ್ ಮಾಡಲು ಬಯಸುತ್ತೇನೆ.

ಪ್ರಶ್ನೆ: ತುಳಸಿ ಅನ್ನು ನಿಮ್ಮ ಮಕ್ಕಳು ಒಪ್ಪುತ್ತಾರಾ?

ಉತ್ತರ: ಖಂಡಿತವಾಗಿಯೂ ನನ್ನ ಮಕ್ಕಳು ತುಳಸಿ ಅನ್ನು ಅಮ್ಮ ಎಂದು ಒಪ್ಪಿಕೊಳ್ಳುತ್ತಾರೆ. ಆ ನಂಬಿಕೆ ನನಗೆ ಸಂಪೂರ್ಣವಾಗಿ ಇದೆ ಎಂದು ಹೇಳಿದ್ದಾರೆ.

ತುಳಸಿ ಮನದಲ್ಲಿ ಮಾಧವ್ ಎಂದರೆ..?

ಪ್ರಶ್ನೆ: ಮಾಧವ್ ಅವರ ಮೊದಲ ಪರಿಚಯ ಹೇಗಾಯ್ತು..?

ಉತ್ತರ: ದೇವಸ್ಥಾನದಲ್ಲಿ ಪುಳಿಯೋಗರೆ ಮೂಲಕ ಪರಿಚಯವಾಯ್ತು.

ಪ್ರಶ್ನೆ: ಫ್ಯಾನ್ ಆಗಿ, ಸ್ನೇಹಿತರಾಗಿ ಈಗ ಸಂಗಾತಿಯಾಗಿ ನಿಮ್ಮಿಬ್ಬರ ಸಂಬಂಧಗಳನ್ನು ಹೇಗೆ ವರ್ಣಿಸುತ್ತೀರಾ..?

ಉತ್ತರ: ಒಬ್ಬ ಸೆಲಬ್ರಿಟಿಯ ಫ್ಯಾನ್ ಆಗಿದ್ದಾಗ ಅಭಿಮಾನ ಹೆಚ್ಚಿತ್ತು. ಸ್ನೇಹಿತೆಯಾದಾಗ ತನ್ನಿಷ್ಟದ ಸೆಲಬ್ರಿಟಿ ಈಗ ಸ್ನೇಹಿತರಾಗಿದ್ದಾರೆ ಅನ್ನೋ ಆಶ್ಚರ್ಯ, ಖುಷಿ ಎಲ್ಲವನ್ನೂ ಒಪ್ಪಿಕೊಂಡು ಅರ್ಥ ಮಾಡಿಕೊಳ್ಳುವ ಮೊದಲೇ ಸಂಗಾತಿಯಾಗಿದ್ದು, ಸಂಗಾತಿಯಾದ ಮೇಲೆ ಖುಷಿ ಇದ್ದರೂ, ಸಂಬಂಧ ಸಂತಸ ತಂದಿದ್ದರೂ ಸ್ವಲ್ಪ ಸಂಕೋಚ, ಬಿಗುಮಾನ ಇದ್ದೇ ಇದೆ ಎಂದು ಹೇಳಿದ್ದಾರೆ.

ಪ್ರಶ್ನೆ: ಮಾಧವ್ ಜೊತೆ ಯಾವ ಸಿನಿಮಾ ನೋಡಲು ಇಷ್ಟ.

ಉತ್ತರ: ಹಾಲು ಜೇನು.

ಪ್ರಶ್ನೆ: ಮಾಧವ್ ಅವರ ಯಾವ ಗುಣ ಇಷ್ಟ ಹಾಗೂ ಯಾವ ಗುಣ ಇಷ್ಟವಿಲ್ಲ..?

ಉತ್ತರ: ತಾಳ್ಮೆ ಇಷ್ಟ ಜೊತೆಗೆ ಅತಿಯಾದರೆ ಆರೋಗ್ಯಕ್ಕೆ ಹಾನಿಕಾರಕ ಎಂದಿದ್ದಾರೆ.

ಪ್ರಶ್ನೆ: ಮಾಧವ್ ಅವರ ಜೊತೆಗೆ ಇಡ್ಲಿ ತಿನ್ನುವುದು ಖುಷಿ ಕೊಡುತ್ತಾ ಇಲ್ಲ ಕುಲ್ಫಿ ತಿನ್ನಲು ಬಯಸುತ್ತೀರಾ..?

ಉತ್ತರ: ಎರಡು ಇಷ್ಟ ಆಗುತ್ತೆ. ಮೀಲ್ ಮುಗಿದ ಬಳಿಕ ಡೆಸರ್ಟ್ ನಂತೆ ಕುಲ್ಫಿ ಇರಲೇಬೇಕು ಎಂದಿದ್ದಾರೆ.

ಪ್ರಶ್ನೆ: ಮಾಧವ್ ಅವರೊಂದಿಗೆ ಯಾವ ಸ್ಥಳಕ್ಕೆ ಹೋಗಲು ಬಯಸುತ್ತೀರಾ..?

ಉತ್ತರ: ಎಲ್ಲಾದರೂ ಸರಿ, ಪಿಕ್ʼನಿಕ್ ಹೋಗಲು ಖುಷಿಯಾಗುತ್ತೆ.

ಪ್ರಶ್ನೆ: ಮಾಧವ್ ಅವರ ಯಾವ ನೇಚರ್ ಇಷ್ಟವಾಗುತ್ತೆ..?

ಉತ್ತರ: ಸಾಫ್ಟ್ ನೇಚರ್ ಬಹಳ ಇಷ್ಟ ಎಂದಿದ್ದಾರೆ.

ಪ್ರಶ್ನೆ: ಮಾಧವ್ ಅವರು ಹೇಗೆ ಪ್ರಪೋಸ್ ಮಾಡಲಿ ಎಂದು ಬಯಸುತ್ತೀರಾ?

ಉತ್ತರ: ದೇವಸ್ಥಾನದಲ್ಲಿ ಮಾಡಿದ ರೀತಿಯೇ.

ಪ್ರಶ್ನೆ: ನಿಮ್ಮಿಬ್ಬರ ಸಂಬಂಧದ ಬಗ್ಗೆ ಬಂದ ಟೀಕೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು..?

ಉತ್ತರ: ಒಬ್ಬರನ್ನ ನೋಡಿಕೊಳ್ಳುವುದಕ್ಕೆ, ಇಷ್ಟಪಡುವುದಕ್ಕೆ ಪ್ರೀತಿಸೋದಕ್ಕೆ ಇತಿಮಿತಿ ಇರಬಾರದು.

ಪ್ರೇಕ್ಷಕರನ್ನು ಮೆಚ್ಚಿಸಿದ ದತ್ತ ತಾತ

ಇನ್ನು ಧಾರಾವಾಹಿಯಲ್ಲಿ ಹೈಲೈಟ್ ಎಂದರೆ ಅದು ದತ್ತ ತಾತ. ದತ್ತ ತಾತನ ಆಕ್ಟಿಂಗ್‌ಗೆ ಎಲ್ಲರೂ ಫಿದಾ ಆಗಿದ್ದಾರೆ. ನಿತ್ಯ ತಾತನ ಸನ್ನಿವೇಶಗಳಿಗಾಗಿ ಕಾಯುವ ವೀಕ್ಷಕರು ಕೂಡ ಇದ್ದಾರೆ. ಸದಾ ತಮಾಷೆ ಮಾಡುತ್ತಾ, ಸತ್ಯವಾಗಿಯೂ ಹಾಗೂ ನ್ಯಾಯವಾಗಿಯೂ ನಡೆದುಕೊಲ್ಳುವ ಅನುಭವದ ಮಾತುಗಳನ್ನಾಡುವ ತಾತನ ಪಾತ್ರವನ್ನು ಎಲ್ಲರೂ ಖುಷಿಯಿಂದ ಮೆಚ್ಚಿಕೊಂಡಿದ್ದಾರೆ. ತುಳಸಿ ಹಾಗೂ ಮಾಧವ್ ಮದುವೆಯಾದಾಗ ಹಲವರು ದತ್ತ ತಾತನ ಪಾತ್ರ ಅಂತ್ಯವಾಗುತ್ತೆ ಎಂದು ಭಾವಿಸಿದ್ದರು.

ಧಾರಾವಾಹಿ ನೋಡದವರಿಗೂ ಇಷ್ಟ

ದತ್ತ ತಾತನ ಪಾತ್ರ ಇನ್ನೂ ಮುಂದುವರೆದಿರುವುದಕ್ಕೆ ಪ್ರೇಕ್ಷಕರು ಖುಷಿಪಟ್ಟಿದ್ದಾರೆ. ನಿಜ ಹೇಳಬೇಕೆಂದರೆ, ಧಾರಾವಾಹಿ ಎಂದರೆ ಮೂಗು ಮುರಿಯುತ್ತಿದ್ದ ಗಂಡಸರು, ಯುವಕರು ಕೂಡ ಈಗ ದತ್ತ ತಾತನ ಸನ್ನಿವೇಶ ನೋಡಲು ಧಾರಾವಾಹಿಯನ್ನು ತಪ್ಪದೇ ನೋಡುತ್ತಾರೆ. ಶ್ರೀರಸ್ತು ಶುಭಮಸ್ತು ಧಾರಾವಾಹಿ ಹೀಗೆ ಮುಂದುವರೆಯಲಿ ಎಂದು ಎಲ್ಲರೂ ಇಷ್ಟ ಪಡುತ್ತಾರೆ.

More from Filmibeat

English summary
Zee kannada Shrirasthu Shubhamasthu serial madhav and tulasi Question and answer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X