Shrirasthu Shubhamasthu:ತುಳಸಿ ತಲೆ ತಿರುಗಿ ಬಿದ್ದಿದ್ದು ಮಕ್ಕಳ ಕಿತ್ತಾಟದಿಂದ ಅಲ್ಲ; ಮ್ಯಾಟರ್ ಬೇರೆಯಿದೆ
ತುಳಸಿಗೆ ತನ್ನ ಗಂಡನ ಮನೆಯವರನ್ನು ಬಿಡಲು ಸಾಧ್ಯ ಆಗುತ್ತಿಲ್ಲ. ಹಾಗೆಯೇ ಸಮರ್ಥ್‌ಗೆ ತನ್ನ ಅಮ್ಮನನ್ನು ಬಿಟ್ಟಿರಲು ಸಾಧ್ಯ ಆಗುತ್ತಿಲ್ಲ. ಆಕೆಗೆ ಏನು ಮಾಡಬೇಕು ಅನ್ನೋ ಗೊಂದಲ. ಸಮರ್ಥ್ ಮನೆಯಿಂದ ಈಗಾಗಲೇ ಹೊರಗೆ ಹೋಗಿರುತ್ತಾನೆ. ಸಿರಿಗೆ ಸಮರ್ಥ್ ಮೇಲೆ ಬಹಳ ಆತಂಕ ಆಗಿದೆ. ಅಭಿ ಹಾಗೂ ಅವಿಗೆ ತುಳಸಿ ತೋರಿಸುತ್ತಿರುವ ಪ್ರೀತಿ ಸಮರ್ಥ್ ಮನಸ್ಸಿಗೆ ಬಹಳಷ್ಟು ಘಾಸಿಗೊಳಿಸಿದೆ. ನನ್ನ ತಾಯಿ ಯಾಕೆ ಬೇರೆಯವರ ಮನೆಯಲ್ಲಿ ಇರಬೇಕು. ನನ್ನ ತಾಯಿ ಸದಾ ನನ್ನ ಜೊತೆಯೇ ಇರಬೇಕು. ಆಕೆಯನ್ನು ನಾನು ರಾಣಿ ಹಾಗೆಯೇ ನೋಡಿಕೊಳ್ಳುತ್ತಿದ್ದೆ. ಆದರೆ ಆಕೆಗೆ ಮದುವೆ ಮಾಡಿ ಕಳುಹಿಸುವ ಅಗತ್ಯ ಏನಿತ್ತು ಎನ್ನುವ ಪ್ರಶ್ನೆಯನ್ನೂ ದತ್ತನ ಬಳಿ ಆಗಾಗ ಮಾಡುತ್ತಿರುತ್ತಾನೆ.
ಆದರೆ ದತ್ತ ಮಾತ್ರ ತುಳಸಿ ಇಲ್ಲಿಯೇ ಇದ್ದರೇ ಆಕೆಯ ಜೀವನ ಹಾಳಾಗಿ ಬಿಡುತ್ತಿತ್ತು ಎಂದು ಹೇಳುವುದಿಲ್ಲ. "ಆಕೆಗೂ ಒಂದು ಜೀವನವಿದೆ ಎನ್ನುವುದನ್ನ ಆಕೆಗೆ ತೋರಿಸಬೇಕಾಗಿತ್ತು. ಆಕೆ ಸಣ್ಣ ವಯಸಿನಲ್ಲಿಯೇ ತನ್ನ ಗಂಡನನ್ನು ಕಳೆದುಕೊಂಡಿದ್ದಳು. ತನ್ನ ಮಕ್ಕಳನ್ನು ಕಷ್ಟಪಟ್ಟು ಸಾಕಿದ್ದಾಳೆ. ಆದರೆ ಆಕೆಗೆ ಸುಖವಿಲ್ಲದಾಗ ಹಾಗಾಯ್ತು. ಅದಕ್ಕೆ ಆಕೆಗೆ ಇನ್ನೊಂದು ಮದುವೆ ಮಾಡಿದರೆ ಹೇಗೆ ಎನ್ನುವ ಯೋಚನೆ ಕೂಡ ನನ್ನ ತಲೆಗೆ ಬಂತು. ಆದ ಕಾರಣಕ್ಕಾಗಿ ನಾನು ಆಕೆಗೆ ಮರು ಮದುವೆಯನ್ನು ಮಾಡಿದ್ದೇನೆ. ಆದರೆ, ಇದೀಗ ತುಳಸಿ ತುಂಬಾ ಚೆನ್ನಾಗಿದ್ದಾಳೆ. ಹಾಗೆಯೇ ಆ ಮನೆಗೆ ಹೊಂದಿಕೊಂಡು ಬಹಳ ಖುಷಿಯಾಗಿದ್ದಾಳೆ" ಎಂದು ದತ್ತ ಸಮರ್ಥ್‌ಗೆ ಅದಷ್ಟೇ ಹೇಳಿದರೂ ಅದ್ಯಾವುದಕ್ಕೂ ಕಿವಿ ಕೊಡಲಿಲ್ಲ.

ನನ್ನ ತಾಯಿ ತನ್ನ ಜೊತೆಯೇ ಇರಬೇಕು ಎಂದು ಹೇಳಿ ನೇರವಾಗಿ ಬಹಳ ಕೋಪದಿಂದ ಮಾಧವನ ಮನೆಗೆ ಹೋಗುತ್ತಾನೆ. ಮನೆಗೆ ಹೋದ ಕೂಡಲೇ ಎಲ್ಲರೂ ಸಮರ್ಥನನ್ನು ಆದರಿಂದ ಸ್ವಾಗತ ಮಾಡುತ್ತಾರೆ. ಸಮರ್ಥ್ ತನ್ನ ತಾಯಿಯನ್ನು ಹುಡುಕಿಕೊಂಡು ಆಕೆಯ ಬೆಡ್‌ರೂಮ್ ಬಳಿ ಹೋಗುತ್ತಾನೆ. ಆಗ ಸಮರ್ಥನ ಕಂಡು ತುಳಸಿ "ಪಾಪು ಇಲ್ಲಿ ಏನು ಮಾಡುತ್ತಿದ್ದೀಯಾ?" ಎಂದು ಕೇಳುತ್ತಾಳೆ. ಆಗ ಸಮರ್ಥ "ಅಮ್ಮ ನೀನು ಇಲ್ಲಿರುವುದು ಬೇಡ. ನೀನು ನನ್ನ ಮನೆಗೆ ಬಾ. ನನಗೆ ನೀನು ಬೇಕು" ಎಂದು ಹೇಳುತ್ತಾನೆ. ಆಗ ತುಳಸಿಗೆ ತುಂಬಾ ಶಾಕ್ ಆಗುತ್ತೆ. ಹಾಗೆಯೇ ತುಳಸಿಯ ಮಾತನ್ನು ಕೇಳದೇ ಸಮರ್ಥ್ ತುಳಸಿಯನ್ನು ಬೆಡ್‌ರೂಮ್‌ನಿಂದ ಎಳೆದುಕೊಂಡು ಬರುತ್ತಾನೆ.
ಮಗನ ವರ್ತನೆ ಕಂಡು ಬೆದರಿದ ತುಳಸಿ
ಹಾಗೆಯೇ ಮನೆ ಮಂದಿಗೆಲ್ಲಾ ಸಮರ್ಥನ ವರ್ತನೆಗೆ ಕೊಂಚ ಇರಿಸು ಮುರಿಸು ಉಂಟಾಗುತ್ತದೆ. ಮಗನ ಬರ್ತಡೆಯಂದೇ ತುಳಸಿಗೆ ಬಹಳ ಕೋಪ ಬರುತ್ತೆ. ಆಕೆ ಮಗನ ಅಥವಾ ಗಂಡನ ಎಂದು ಚೂಸ್ ಮಾಡುವ ವೇಳೆ ಆಕೆಗೆ ಗಂಡನನ್ನೇ ಆಯ್ಕೆ ಮಾಡುತ್ತಾಳೆ. ಇದನ್ನು ನೆನೆಸಿಕೊಂಡ ಸಮರ್ಥಿಗೆ ಬಹಳ ಬೇಸರವಾಗುತ್ತೆ. ಇದನ್ನು ಕಂಡು ತುಳಸಿ ತಲೆ ತಿರುಗಿ ಬೀಳುತ್ತಾಳೆ. ಆಕೆಯನ್ನು ತಕ್ಷಣಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ತುಳಸಿಗೆ ಮತ್ತೊಂದು ಶಾಕ್ ಎದುರಾಗುತ್ತೆ.
ಡಾಕ್ಟರ್ ಮಾತು ಕೇಳಿ ದಂಗಾದ ತುಳಸಿ
ತುಳಸಿಗೆ ಡಾಕ್ಟರ್ ಹೇಳುತ್ತಾರೆ. "ನಿಮಗೆ ಏನು ಆಗಿಲ್ಲ. ನೀವು ತಾಯಿ ಆಗುತ್ತಿದ್ದೀರಾ" ಎಂದು ಹೇಳಿದಾಗ ತುಳಸಿಗೆ ಬಹಳ ಶಾಕ್ ಆಗುತ್ತೆ. ಈ ವಿಚಾರವನ್ನು ಮನೆ ಮಂದಿಗೆ ಹೇಗೆ ಹೇಳುವುದು ಎಂದು ಶಾಕ್‌ನಲ್ಲಿ ಇರುತ್ತಾಳೆ. ಈ ವಯಸ್ಸಿನಲ್ಲಿ ತಾಯಿ ಆಗುತ್ತಿದ್ದೇನೆ ಎಂದು ತಿಳಿದರೆ ಅದೆಷ್ಟು ಜನ ಏನೇನೋ ಹೇಳಲು ಶುರು ಮಾಡುತ್ತಾರೆ ಎನ್ನುವುದು ಆಕೆಗೆ ಸ್ಪಷ್ಟವಾಗಿ ತಿಳಿಸಿದೆ.
ತುಳಸಿ ಮನದಲ್ಲಿ ಗೊಂದಲ
ಇನ್ನು ಈ ವಿಚಾರ ಎದೆಯೆತ್ತರಕ್ಕೆ ಬೆಳೆದ ಮಕ್ಕಳಿಗೆ ತಿಳಿದರೆ, ನಾವು ತಲೆ ಎತ್ತಿ ಹೇಗೆ ಇರುವುದು ಎಂದು ತುಳಸಿಗೆ ಬಹಳ ಸಂಕೋಚ ಆಗುತ್ತದೆ. ಆಕೆಗೆ ಏನು ಮಾಡಬೇಕು ಎಂದು ಗೊತ್ತಾಗದೆ ಬಹಳ ಬೇಸರದಲ್ಲಿ ಇರುತ್ತಾಳೆ.


Click it and Unblock the Notifications











