Shrirasthu Shubhamasthu:ಮಾಧವನ ಭೇಟಿಯಾದ ತುಳಸಿ; ನೆಟ್ಟಿಗರ ಕೋಪ ಈಗ ಕಮ್ಮಿ ಆಯಿತೇ?
ತುಳಸಿಯನ್ನು ಸಮರ್ಥ್ ಆತನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ತುಳಸಿ ನನ್ನ ಅಮ್ಮ ಮಾತ್ರ ಆಕೆ ಬೇರೆ ಯಾರಿಗೂ ಅಮ್ಮ ಆಗಬೇಕು. ಹಾಗಾಗುವುದು ತನಗೆ ಇಷ್ಟವಿಲ್ಲ. ಆಕೆ ನನ್ನ ಜೊತೆ ಮಾತ್ರ ಇರಬೇಕು ಎಂದು ಸಮರ್ಥ್ ಬಯಸಿದ್ದಾನೆ. ಅದೇ ರೀತಿ ಸಮರ್ಥ್ ತನ್ನ ತಾಯಿಯ ಜೊತೆ ನಡೆದುಕೊಳ್ಳುತ್ತಾನೆ. ಆದರೆ, ತುಳಸಿಗೆ ಈಗಾಗಲೇ ಇನ್ನೊಂದು ಟೆನ್ಶನ್ ಶುರುವಾಗಿದೆ. ಆ ಟೆನ್ಶನ್‌ನಿಂದ ಪಾರಾಗುವುದು ಹೇಗೆಂದು ಯೋಚನೆ ಮಾಡುತ್ತಿದ್ದಾಳೆ.
ತುಳಸಿಗೆ ಇದೀಗ ಮೂರು ತಿಂಗಳು. ಮಾಧವನ ಜೊತೆ ಮೊದ ಮೊದಲಿಗೆ ತನಗೆ ನಿಮ್ಮ ಮೇಲೆ ಪ್ರೀತಿ ಇದೆ. ಆದರೆ ನಾವು ಯಾವತ್ತೂ ಒಂದಾಗುವುದು ಬೇಡ ಎಂದು ತುಳಸಿ ಹೇಳುತ್ತಿದ್ದಳು. ಆದರೆ ಅದಾದ ಬಳಿಕ ತುಳಸಿ ಹಾಗೂ ಮಾಧವ ನಡುವೆ ಪ್ರೀತಿ ಅಂಕುರವಾಗಿದೆ. ತುಳಸಿ ಗರ್ಭಿಣಿ ಅನ್ನೋ ವಿಷಯವನ್ನು ರಿವೀಲ್ ಮಾಡುತ್ತಿದ್ದಂತೆ 'ಶ್ರೀರಸ್ತು ಶುಭಮಸ್ತು' ಫ್ಯಾನ್ಸ್ ಕಿಡಿಕಾರುತ್ತಿದ್ದಾರೆ. ಇದೇನಿದು ಈ ವಯಸ್ಸಿನಲ್ಲಿ ಈ ರೀತಿ ಪ್ರೆಗ್ನೆನ್ಸಿ ಟ್ವಿಸ್ಟ್ ಇಟ್ಟಿದ್ದಾರಲ್ಲ ಎಂದು ಧಾರಾವಾಹಿ ಪ್ರೇಮಿಗಳು ಕೋಪಗೊಂಡಿದ್ದಾರೆ.

ಮಾಧವ ಹಾಗೂ ತುಳಸಿ ಇಬ್ಬರು ಪ್ರೀತಿ ಮಾಡುತ್ತಿದ್ದಾರೆ ನಿಜ. ಅವರಿಬ್ಬರಿಗೂ ಎದೆ ಎತ್ತರಕ್ಕೆ ಬೆಳೆದ ಮಕ್ಕಳಿದ್ದಾರೆ. ಆದರೆ, ಈಗ ತುಳಸಿ ಹಾಗೂ ಮಾಧವಗೆ ಮಕ್ಕಳು ಬೇಕಾ ಎನ್ನುವ ಪ್ರಶ್ನೆ ಅಭಿಮಾನಿಗಳು ಮುಂದಿಡುತ್ತಿದ್ದಾರೆ. ಇನ್ನು ತನ್ನ ತಾಯಿ ಗರ್ಭಿಣಿಯಾಗಿರುವ ವಿಚಾರ ಸ್ವತ: ಸಮರ್ಥ್‌ಗೆ ತಿಳಿದಿಲ್ಲ. ಆಕೆ ಯಾರ ಬಳಿ ಕೂಡ ಈ ವಿಚಾರವನ್ನು ಪ್ರಸ್ತಾಪ ಮಾಡಬಾರದು ಎಂದು ಡಾಕ್ಟರ್ ಬಳಿ ಹೇಳಿರುತ್ತಾಳೆ. ಇನ್ನು ಈ ವಿಚಾರಕ್ಕೆ ತುಳಸಿ ಬಹಳ ಆತಂಕಗೊಂಡು ಇರುತ್ತಾಳೆ. ಏನು ಮಾಡಬೇಕು ಎಂದು ತಿಳಿಯದೆ ಕಂಗಾಲಾಗಿ ಹೋಗಿದ್ದಾಳೆ.
ಮಾಧವನ ಬಳಿ ನಿಜ ಹೇಳಲು ಬಿಡದ ಸಮರ್ಥ್
ಮಾಧವನ ಬಳಿ ಹೇಳಬೇಕು ಎಂದು ನೋಡಿದರೆ, ಇತ್ತ ಸಮರ್ಥ್ ಆತನ ಮೊಂಡಾಟವನ್ನು ಹೆಚ್ಚು ಮಾಡಿಕೊಂಡಿದ್ದಾನೆ. ಹೇಗೆ ಹೇಳುವುದು ಎಂದು ಗೊತ್ತಾಗದೆ ತುಳಸಿ ತಲೆಕೆಡಿಸಿಕೊಂಡಿದ್ದಾಳೆ. ದತ್ತನ ಮನೆಗೆ ಬಂದ ತುಳಸಿಯನ್ನು ಬಹಳ ಪ್ರೀತಿಯಿಂದ ಸಮರ್ಥ ನೋಡಿಕೊಳ್ಳುತ್ತಿರುತ್ತಾನೆ. ತುಳಸಿ ಊಟ ಬೇಡ ಎಂದು ಹೇಳಿದರೂ ಕೂಡ ನೀನು ಊಟ ಮಾಡಲೇಬೇಕೆಂದು ಬಹಳ ಒತ್ತಾಯದಿಂದ ಊಟವನ್ನು ಮಾಡಿಸುತ್ತಾನೆ. ಇನ್ನು ತುಳಸಿಗೆ ಈ ವಿಚಾರವನ್ನು ಮಾಧವನ ಬಳಿ ಹೇಳುವವರೆಗೆ ಕೂಡ ಆಕೆಗೆ ನೆಮ್ಮದಿ ಇಲ್ಲ.

ತುಳಸಿ ನೋಡಲು ಹೊರಟ ಮಾಧವನ ಕುಟುಂಬ
ಇನ್ನು ಮಾಧವನ ಮನೆಯಲ್ಲಿ ಆತನ ಮಕ್ಕಳು ಹಾಗೆ ಮಾಧವ ಎಲ್ಲರೂ ಮಾತನಾಡುತ್ತಿರುತ್ತಾರೆ. ತುಳಸಿ ನನ್ನ ಬಳಿ ಏನೋ ಹೇಳಬೇಕು ಎಂದು ಅಂದುಕೊಂಡಿದ್ದರು. ಆದರೆ ಯಾವ ವಿಚಾರ ಎನ್ನುವುದು ನನಗೆ ತಿಳಿಯುತ್ತಿಲ್ಲ ಎಂದು ಹೇಳಿದಾಗ, ಅವಿ ಕೂಡ ಆ ಮಾತನ್ನು ಹೇಳುತ್ತಾನೆ. "ಹೌದು ಅಮ್ಮ ಏನೋ ಹೇಳಬೇಕು ಎಂದು ಅಂದುಕೊಂಡಿದ್ದರು. ಆಗ ಸಮರ್ಥ್ ಬಂದು ಎಲ್ಲಾ ಕೆಡಿಸಿಬಿಟ್ಟ. ಏನೋ ಮುಖ್ಯವಾದ ವಿಚಾರಣೆ ಇರಬೇಕು" ಎಂದು ಹೇಳುತ್ತಾನೆ. ಅವರೆಲ್ಲರೂ ಕೂಡ ತುಳಸಿಯನ್ನು ಹೇಗೆ ಭೇಟಿಯಾಗಿ ಮಾತನಾಡಿಸುವುದು ಎಂದು ಯೋಚನೆ ಮಾಡುತ್ತಿರುತ್ತಾರೆ.
ಅಭಿ ಮಾತಿಗೆ ಖುಷಿ ಪಟ್ಟ ಮನೆಮಂದಿ
ಇನ್ನು ಅಭಿ "ನಾವು ಯಾಕೆ ಹೀಗೆ ಮಾಡಬಾರದು. ತುಳಸಿ ಅಮ್ಮನನ್ನು ಭೇಟಿಯಾಗಲು ನಮಗೆ ದತ್ತ ಅವರು ಖಂಡಿತವಾಗಿಯೂ ಕೂಡ ಸಪ್ಪೋರ್ಟ್ ಮಾಡುತ್ತಾರೆ. ನಾವು ಯಾಕೆ ಅವರ ಸಪೋರ್ಟ್ ತೆಗೆದುಕೊಂಡು ತುಳಸಿಯವರನ್ನು ಭೇಟಿ ಆಗಬಾರದು" ಎಂದು ಹೇಳಿದಾಗ ಮನೆಯವರಿಗೆಲ್ಲ ಅಭಿಯ ಮಾತು ಇಷ್ಟವಾಗುತ್ತದೆ. ಅಭಿ ಕೂಡ ಈಗ ಐಡಿಯಾ ಕೊಡುವ ಲೆವೆಲ್‌ಗೆ ಬಂದುಬಿಟ್ಟ ಎಂದು ಖುಷಿ ವ್ಯಕ್ತ ಪಡಿಸುತ್ತಾರೆ. ದತ್ತನ ಮನೆಗೆ ಹೋದ ಮಾಧವ ಕುಟುಂಬ ತುಳಸಿಯನ್ನೇನೋ ಭೇಟಿಯಾಗಿ ಮಾತುಕತೆ ನಡೆಸುತ್ತಾರೆ. ಆದರೆ ಸಮರ್ಥ್ ಕೈಗೆ ಎಲ್ಲಿ ಸಿಕ್ಕಿ ಬೀಳುತ್ತೇವೆ ಎನ್ನುವ ಭಯವು ಅವರಲ್ಲಿರುತ್ತದೆ.


Click it and Unblock the Notifications











