Shrirasthu Shubhamasthu: ಸಮರ್ಥ್ ಕೈಗೆ ಸಿಕ್ಕಿ ಹಾಕಿಕೊಂಡ ಮಾಧವನ ಕುಟುಂಬ; ಮುಂದೇನಾಯ್ತು?

By ಪೂರ್ವ

ಸಮರ್ಥ್ ಇತ್ತೀಚೆಗಿನ ದಿನಗಳಲ್ಲಿ ತನ್ನ ತಾಯಿ ನನ್ನ ಜೊತೆ ಇರಬೇಕು. ಹಾಗೆ ಆಕೆ ಯಾವತ್ತಿದ್ದರೂ ನನ್ನ ಅಮ್ಮನೇ. ಬೇರೆಯವರ ಅಮ್ಮ ಆಗಲು ನಾನು ಆಕೆಗೆ ಅವಕಾಶವನ್ನು ಕೊಡುವುದಿಲ್ಲ. ನನಗೆ ನನ್ನ ಅಮ್ಮ ಬೇಕು ಎನ್ನುವ ಮನಸ್ಥಿತಿಯಲ್ಲಿ ಇದ್ದಾನೆ. ಸಮರ್ಥ್ ತನ್ನ ತಾಯಿಯ ಮೇಲಿರುವ ಪ್ರೀತಿಯನ್ನು ತನ್ನ ಮನಸ್ಸಿನಲ್ಲಿ ಹುದುಗಿಸಿಟ್ಟುಕೊಂಡಿದ್ದಾನೆ. ಇದೀಗ ತನ್ನ ತಾಯಿಯ ಪ್ರೀತಿಗಾಗಿ ಹಂಬಲಿಸುತ್ತಿದ್ದಾನೆ.

ಸಮರ್ಥ್ ಎಂದರೆ ತುಳಸಿಗೆ ಬಹಳ ಪ್ರೀತಿ. ಆದರೆ, ಇದೀಗ ತುಳಸಿಯ ಪರಿಸ್ಥಿತಿ ಕೂಡ ಬದಲಾಗಿ ಹೋಗಿದೆ. ತುಳಸಿ ಇದೀಗ ಮಾಧವನ ಹೆಂಡತಿ. ಆತನ ಮಗುವಿಗೆ ಇದೀಗ ತಾಯಿಯಾಗುತ್ತಿದ್ದಾಳೆ. ಆದರೆ, ಇದರ ನಡುವೆ ಸಮರ್ಥ್ ಹಠ ತುಸು ಜೋರಾಗಿ ಇದೆ . ತನಗೆ ತಾಯಿಯನ್ನು ಬೇರೆಯವರ ಜೊತೆ ಹಂಚಿಕೊಳ್ಳಲು ಆತ ಇಷ್ಟ ಪಡುತ್ತಿಲ್ಲ. ಇದೆಲ್ಲವನ್ನು ಯಾವ ರೀತಿ ನಿಭಾಯಿಸುವುದು ಎನ್ನುವುದು ಸಮರ್ಥನಿಗೆ ತಿಳಿಯುತ್ತಿಲ್ಲ.

Shrirasthu Shubhamasthu serial September 18th episode update

ಮಾಧವಗೆ ಈಗ ಬಹಳ ಬೇಸರವಾಗುತ್ತದೆ. ಇನ್ನು ತುಳಸಿಯನ್ನು ಹೇಗಾದರೂ ಮಾಡಿ ಭೇಟಿ ಮಾಡಬೇಕು ಎನ್ನುವ ಮನಸ್ಥಿತಿ ಮಾಧವನದ್ದಾಗಿರುತ್ತೆ. ಮಾಧವ ತುಳಸಿಯನ್ನು ಭೇಟಿಯಾಗಲು ಆತನ ಮಕ್ಕಳೇ ಹೊಸ ಐಡಿಯಾವನ್ನು ರೂಪಿಸುತ್ತಾರೆ. ಆ ಪ್ರಕಾರವಾಗಿ ಮಾಧವ ಹಾಗೂ ಆತನ ಮಕ್ಕಳು ತುಳಸಿಯನ್ನು ಭೇಟಿಯಾಗಲು ದತ್ತನ ಮನೆಗೆ ಹೋಗುತ್ತಾರೆ. ಇನ್ನು ದತ್ತನಿಗೆ ಸಮರ್ಥ್ ಕೈಯಿಂದ ಮಾಧವನ ಫ್ಯಾಮಿಲಿ ಹೇಗೆ ರಕ್ಷಣೆ ಮಾಡುವುದು? ಮಾಧವನ ಕಣ್ಣಿಗೆ ಕಾಣದ ಹಾಗೆ ಹೇಗೆ ಭೇಟಿ ಮಾಡಿಸುವುದು? ಎನ್ನುವುದೇ ಆತಂಕ.

ದತ್ತನ ಮನೆಗೆ ಮಾಧವ ಎಂಟ್ರಿ

ಇನ್ನು ಮೆತ್ತಗೆ ಮಾಧವನ ಕುಟುಂಬ ದತ್ತನ ಮ್ಮನೆಗೆ ಬರುತ್ತಾರೆ. ತುಳಸಿ ಬೆಡ್‌ರೂಮ್‌ನಲ್ಲಿ ಕುಳಿತಿರುತ್ತಾಳೆ. ದತ್ತನ ಮನೆಗೆ ಬಂದ ಮಾಧವ ನೇರವಾಗಿ ತುಳಸಿಯ ರೂಮ್‌ಗೆ ಹೋಗುತ್ತಾನೆ. ಇನ್ನು ಅಭಿ, ಅವಿ ಹಾಗೆ ಪೂರ್ಣಿಮಾ ಮರೆಯಲಿ ನಿಂತು ನೋಡುತ್ತಿರುತ್ತಾರೆ. ಸಮರ್ಥ್ ಮಧ್ಯರಾತ್ರಿ ಜ್ಯೂಸ್ ಮಾಡಿಕೊಂಡು ಬರುತ್ತಾನೆ. ತನ್ನ ತಾಯಿ ಸಂಜೆಯಿಂದ ಏನನ್ನು ಸೇವಿಸಿಲ್ಲ. ಇದೀಗ ಜ್ಯೂಸ್ ಆದರೂ ಕುಡಿಯಲಿ ಎಂದು ಅಂದುಕೊಂಡು ಅಮ್ಮನಿಗಾಗಿ ಜ್ಯೂಸ್ ಮಾಡಿಕೊಂಡು ಆಕೆಯ ರೂಮ್‌ಗೆ ಹೋಗಲು ಮುಂದಾದಾಗ ದತ್ತ ಬಂದು ತಡೆಯುತ್ತಾರೆ.

Shrirasthu Shubhamasthu serial September 18th episode update

ಸಮರ್ಥ್‌ಗೆ ಮೂಡಿದೆ ಅನುಮಾನ

ಮಾಧವನ ಕುಟುಂಬದವರು ಮರೆಯಲಿ ಅಡಗಿ ಕುಳಿತುಕೊಳ್ಳುತ್ತಾರೆ. ಇನ್ನು ದತ್ತ ಸಮರ್ಥ ಬಳಿ ಅದೆಷ್ಟು ಬಾರಿ ಹೋಗಬೇಡ ಎಂದು ಹೇಳಿದರು ಕೂಡ ಸಮರ್ಥ್ ದತ್ತನ ಮಾತು ಕೇಳದೆ ಮೆತ್ತಗೆ ಬಾಗಿಲು ತೆಗೆದು ಹೋಗುತ್ತಾನೆ. ಆಗ ತುಳಸಿ ಸೋಫಾದ ಮೇಲೆ ಎದ್ದು ಕುಳಿತುಕೊಂಡಿರುತ್ತಾಳೆ. ಆಗ ಸಮರ್ಥ್‌ಗೆ ಬಹಳ ಶಾಕ್ ಆಗುತ್ತೆ. "ಇದೇನಮ್ಮ ರಾತ್ರಿ ಎದ್ದು ಕುಳಿತಿದ್ದೀಯಾ? ನೀನು ಇವತ್ತು ರಾತ್ರಿ ಊಟ ಮಾಡಿಲ್ಲ. ಆದ ಕಾರಣ ನಿನಗೆ ನಿದ್ದೆ ಬಂದಿಲ್ಲ ಎಂದು ಅನಿಸುತ್ತೆ. ತಗೋ ಈ ಜ್ಯೂಸ್ ಕೊಡಿ" ಎಂದು ಕೊಡುತ್ತಾನೆ.

ಅಮ್ಮನ ಬಳಿ ಕುಳಿತ ಸಮರ್ಥ್

"ಸರಿ ಅಮ್ಮ ನಿನ್ನ ಜೊತೆ ನಾನು ಇವತ್ತು ಇಲ್ಲಿ ಮಲಗುತ್ತೇನೆ ಎಂದು ಚಾಪೆ ತೆಗೆಯಲು ಹೋದಾಗ ತುಳಸಿ ಬೇಡ ಬೇಡ ಎಂದು ಹೇಳುತ್ತಿರುತ್ತಾಳೆ. ಏಕೆಂದರೆ ಮಾಧವ ಬಾತ್ರೂಮ್‌ನಲ್ಲಿ ಅಡಗಿ ಕುಳಿತಿರುತ್ತಾನೆ. ಮಾಧವನಿಗೆ ಇದನ್ನೆಲ್ಲವನ್ನು ನೋಡಿ ಆತಂಕ ಶುರುವಾಗುತ್ತದೆ. ಹಾಗೆ ಆತನಿಗೆ ಕೆಮ್ಮು ಕೂಡ ಬರುತ್ತದೆ ಬಾತ್‌ರೂಮ್‌ನಿಂದ ಒಮ್ಮೆಲೇ ಕೆಮ್ಮಿದ ಶಬ್ದ ಬಂದ ಕೂಡಲೇ ಸಮರ್ಥ ಅಲರ್ಟ್ ಆಗುತ್ತದೆ. ಆ ಕೂಡಲೇ ತುಳಸಿ ಕೂಡ ಕೆಮ್ಮು ಬಂದ ಹಾಗೆ ನಟನೆ ಮಾಡುತ್ತಾಳೆ.

ಮೊಬೈಲ್ ರಿಂಗ್ ಕೇಳಿ ಶಾಕ್

ಇನ್ನು ತಾಯಿಗೆ ನೀರು ತೆಗೆದುಕೊಂಡು ಬರಲು ಹೋದ ಸಮರ್ಥಿಗೆ ಫೋನ್ ರಿಂಗ್ ಆಗಿದ್ದು ಕೇಳಿ ಶಾಕ್ ಆಗುತ್ತೆ. ಆಗ ಮಾಧವನ ಕುಟುಂಬದವರು ಕೂಡ ತನ್ನ ಮನೆಗೆ ಬಂದಿದ್ದಾರೆ ಎಂದು ಆತನಿಗೆ ತಿಳಿಯುತ್ತದೆ. ಇನ್ನು ಮಾಧವ ಹಾಗೂ ಆತನ ಕುಟುಂಬದವರೆಲ್ಲರೂ ಕೂಡ ವಾಪಸ್ ಸಪ್ಪೆ ಮುಖ ಮಾಡಿಕೊಂಡು ಮನೆಗೆ ಬರುತ್ತಾರೆ. ಮಹೇಶ "ಅಣ್ಣ ನೀನು ನನ್ನ ಬಳಿ ಒಂದು ಮಾತು ಹೇಳಿದರೆ, ನಾನು ಕೂಡ ಅಲ್ಲಿಗೆ ಬರುತ್ತಿದ್ದೆ" ಎಂದು ಹೇಳುತ್ತಾನೆ. ಇದನ್ನು ಕೇಳಿದ ಮಾಧವ "ನೀನು ಬಾರದೆ ಇದ್ದಿದ್ದೆ ಒಳ್ಳೆಯದು" ಎಂದು ಹೇಳುತ್ತಾನೆ. ಈಗ ತುಳಸಿ ಇಲ್ಲದ ಜೀವನ ಮಾಧವನಿಗೆ ಸಪ್ಪೆಯಂತಾಗಿದೆ.

More from Filmibeat

English summary
Shrirasthu Shubhamasthu serial September 18th episode update:
Read more about: serial sudharani poorva
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X