Shrirasthu Shubhamasthu:ತವರು ಮನೆಗೆ ಹೋದ ತುಳಸಿ; ಅಮ್ಮನ ಮೇಲಿನ ಪ್ರೀತಿ ತೋರಿಸಿಕೊಳ್ಳದ ಸಮರ್ಥ್

By ಪೂರ್ವ

ಪೂರ್ಣಿಮಾ ಹಾಗೂ ವನಜಾ ಅಮ್ಮ-ಮಗಳು ಎನ್ನುವ ವಿಚಾರವನ್ನು ತುಳಸಿ ಮುಚ್ಚಿಟ್ಟಿದ್ದಾಳೆ. ಆದರೆ, ವನಜಾಗೆ ಪೂರ್ಣಿಮಾ ಕತ್ತಲಿರುವ ಸರದ ಮೇಲೆಯೇ ಕಣ್ಣಿದೆ. ನನ್ನ ಮಗು ಚಿಕ್ಕ ಪಾಪು ಇರಬೇಕಾದರೆ, ಆಕೆಗೆ ಹಾಕಿದ ಸರ ಇದು. ಆದರೆ, ಇದು ಪೂರ್ಣಿಮಾ ಕತ್ತಿಗೆ ಹೇಗೆ ಬಂತು? ಎಂದು ವನಜಗೆ ಬಹಳ ಆಶ್ಚರ್ಯವಾಗುತ್ತೆ. ಇನ್ನು ಪೂರ್ಣಿಮಾ ವನಜಾ ಮಗಳು ಎನ್ನುವುದು ತುಳಸಿಗೆ ತಿಳಿದಿರುತ್ತೆ. ಇನ್ನು ಗೌರಿ-ಗಣೇಶ ಹಬ್ಬ ಬಹಳ ಸಂಭ್ರಮದಿಂದ ನಡೆದಿದೆ. ತುಳಸಿ ಗಣೇಶ ಹಬ್ಬದ ದಿನದಂದು ಬಹಳ ಖುಷಿಯಲ್ಲಿ ಇರುತ್ತಾಳೆ.

ಮನೆಯಲ್ಲಿ ಬಹಳ ಅದ್ದೂರಿಯಾಗಿ ಗಣೇಶ ಹಬ್ಬ ನಡೆಯುತ್ತಿರುತ್ತೆ. ತುಳಸಿಗೆ ಎರಡು ಮನೆ. ಒಂದು ಗಂಡನ ಮನೆ. ಇನ್ನೊಂದು ಮಾವನ ಮನೆ. ಅಲ್ಲಿ ತನ್ನ ಮಕ್ಕಳು ಹಾಗೂ ಮಾವ ಇದ್ದಾರೆ. ಅವರೆಲ್ಲರ ಜೊತೆ ಗಣೇಶ ಹಬ್ಬ ಮಾಡುತ್ತಿರುವ ದಿನಗಳು ನೆನಪು ಆಗುತ್ತೆ. ಇನ್ನೂ ಗಣೇಶ ಹಬ್ಬಕ್ಕೆ ತಾಯಿಯನ್ನು ಮನೆಗೆ ಬರುವಂತೆ ಸಮರ್ಥ್ ಹೇಳಿದಾಗ , ಮಾಧವನ ಮನೆಯವರು ಬಿಲ್‌ಕುಲ್ ಇದಕ್ಕೆ ಒಪ್ಪಿಗೆ ಸೂಚಿಸುವುದಿಲ್ಲ. "ಗಣೇಶ ಹಬ್ಬಕ್ಕೆ ತುಳಸಿ ಮನೆಯಲ್ಲಿಯೇ ಇರಬೇಕು. ಹಾಗೇಯೆ ಅವರಿಲ್ಲದೆ ಇಲ್ಲಿ ಹಬ್ಬ ನಡೆದರೆ ಅದು ಪರಿಪೂರ್ಣ ಆಗುವುದಿಲ್ಲ" ಎಂದು ಹೇಳುತ್ತಾರೆ. ಅವಿ.

Shrirasthu Shubhamasthu serial September 7th episode update

ಇದನ್ನು ಕೇಳಿ ಸಮರ್ಥಗೆ ಬಹಳ ಕೋಪ ಬರುತ್ತೆ. "ನನ್ನ ಅಮ್ಮನನ್ನ ನನ್ನ ಮನೆಗೆ ಕರೆಯೋದೇ ಇದೀಗ ಬಹಳ ದೊಡ್ಡ ತಪ್ಪು ಎನ್ನುವ ಹಾಗಾಗಿದೆ" ಎಂದು ಸಮರ್ಥ್ ಬಹಳ ಬೇಸರ ಮಾಡಿಕೊಳ್ಳುತ್ತಾನೆ. ಸಮರ್ಥ್ ಮನದಲ್ಲಿರುವ ಬೇಸರವನ್ನು ಹೊರಗಡೆ ಹಾಕಲು ಆಗದೆ ಅಲ್ಲಿಯೇ ನಿಂತಿರುತ್ತಾನೆ. ಮಾಧವನ ಮನೆಯಲ್ಲಿ ಬಹಳ ಅದ್ದೂರಿಯಾಗಿ ಗಣೇಶೋತ್ಸವ ನಡೆಯುತ್ತದೆ. ಇನ್ನು ಮಾಧವ ತುಳಸಿಯ ಬಳಿ "ನೀವು ನಮ್ಮ ಜೊತೆ ಹೇಗೆ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದೀರೋ ಅದೇ ರೀತಿ ದತ್ತ ಅವರ ಮನೆಯಲ್ಲಿಯೂ ಕೂಡ ಈ ಹಬ್ಬವನ್ನು ಆಚರಣೆ ಮಾಡಿ ಎಲ್ಲರಿಗೂ ಖುಷಿ ಹಂಚಿ" ಎಂದು ಮಾಧವ ಹೇಳುತ್ತಾರೆ.

ದತ್ತನ ಮನೆಗೆ ಹೋಗಲು ರೆಡಿ ಆದ ತುಳಸಿ

ತುಳಸಿ ಮಾವ ದತ್ತನ ಮನೆಗೆ ಹೋಗಲು ರೆಡಿ ಆಗುತ್ತಾರೆ. ಆ ವೇಳೆ ಅಭಿ, ದತ್ತನ ಮನೆಗೆ ತುಳಸಿಯವರನ್ನು ಡ್ರಾಪ್ ಮಾಡುವುದಾಗಿ ಹೇಳಿ ಕರೆದುಕೊಂಡು ಹೋಗುತ್ತಾನೆ. ಅರ್ಧ ದಾರಿಯಲ್ಲಿ ಬರಬೇಕಾದರೆ, ತುಳಸಿಗೆ ಬಿಕ್ಕಳಿಕೆ ಬರುತ್ತದೆ. ಆ ವೇಳೆ ತುಳಸಿಯವರಿಗೆ ಅಭಿ ಎಳೆ ನೀರನ್ನು ಕುಡಿಯಲು ಕೊಡುತ್ತಾನೆ. ಈ ವೇಳೆ ತುಳಸಿ ತಾನೇ ಹಣ ಕೊಡುವುದಾಗಿ ಪರ್ಸ್ ತೆಗಿಯುತ್ತಾಳೆ. ಅದರಲ್ಲಿ ಸಮರ್ಥ್, ಅಭಿ, ಸಂಧ್ಯಾ, ಅವಿ ಫೋಟೋಗಳು ಇರುತ್ತದೆ.

Shrirasthu Shubhamasthu serial September 7th episode update

ತುಳಸಿ ಬಳಿ ಫೋಟೋ ಕಂಡು ಅಭಿಗೆ ಆಶ್ಚರ್ಯ

ತುಳಸಿ ಪರ್ಸ್‌ನಲ್ಲಿ ಅಭಿ ನೋಡಿ ಅವರ ಪ್ರೀತಿ ಅರ್ಥವಾಗುತ್ತೆ. ಇನ್ನು ಸಮರ್ಥ್‌ ಮನೆಗೆ ಹೋದ ಅಭಿ ಹಾಗೂ ತುಳಸಿಗೆ ದತ್ತದಿಂದ ಬಹಳ ಅದ್ದೂರಿಯದ ಸ್ವಾಗತ ಸಿಗುತ್ತದೆ. ಇನ್ನು ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ತುಳಸಿ ನಾನೇ ಮಾಡುತ್ತೇನೆ ಎಂದು ಹೇಳಿದಾಗಂತೂ ದತ್ತನಿಗೆ ಖುಷಿಯೋ ಖುಷಿ. "ಅದೆಷ್ಟು ದಿನದಿಂದ ತುಳಸಿಯ ಕೈ ಅಡುಗೆಯನ್ನು ತಿನ್ನಬೇಕು ಎಂದುಕೊಂಡಿದ್ದೆ. ಆದರೆ, ಕಾಲ ಕೂಡಿ ಬರಲಿಲ್ಲ. ಇದೀಗ ತುಳಸಿ ಮಾಡುವ ಅಡುಗೆಯ ರುಚಿಯನ್ನು ಸವಿಯಬೇಕು" ಎಂದು ದತ್ತ ಖುಷಿಯಾಗಿರುತ್ತಾರೆ.

ಮನೆ ಮಂದಿಗೆ ಹಬ್ಬದೂಟ

ಇನ್ನು ಮನೆಯವರಿಗೆಲ್ಲಾ ತುಳಸಿ ಹಬ್ಬದ ಊಟವನ್ನು ತಯಾರು ಮಾಡುತ್ತಾರೆ. ಊಟ ಮಾಡಿದ ಮನೆ ಮಂದಿ ತುಳಸಿ ಅಡುಗೆಗೆ ಬಹಳ ಮೆಚ್ಚುಗೆಯನ್ನು ಸೂಚಿಸುತ್ತಾರೆ. ಅಭಿಗೆ ತುಳಸಿಯ ಕೈ ಅಡುಗೆ ಬಹಳ ಮೆಚ್ಚುಗೆಯಾಗುತ್ತದೆ. ಆದರೆ, ಸಮರ್ಥ್‌ ಮಾತ್ರ ತುಳಸಿ ಅಡುಗೆ ಮೆಚ್ಚುಗೆಯಾದರೂ ಅದನ್ನು ಹೊರಗಡೆ ತೋರಿಸಿಕೊಳ್ಳುವುದಿಲ್ಲ.

More from Filmibeat

English summary
Shrirasthu Shubhamasthu serial September 7th episode update
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X