ಮನೆಯ ಯಜಮಾನಿ ಪಟ್ಟಕ್ಕಾಗಿ ದೀಪಿಕಾ ಮಸಲತ್ತು; ನಂಬಿ ಕೆಟ್ಟ ಶಾರ್ವರಿ ಮುಂದೇನು ಮಾಡುತ್ತಾಳೆ?

By ಪೂರ್ವ

ಮನೆಯ ಯಜಮಾನಿ ಪಟ್ಟ ದೀಪಿಕಾಗೆ ಬರಬೇಕು ಎಂದು ದೀಪಿಕಾ ಮಸಲತ್ತು ಮಾಡುತ್ತಿದ್ದಾಳೆ. ಆದರೆ, ಇದು ಶಾರ್ವರಿಯ ಗಮನಕ್ಕೆ ಬಂದಿಲ್ಲ ಶಾರ್ವರಿಗೆ ಮನೆಯ ಯಜಮಾನಿ ಪಟ್ಟಬೇಕು ಸಿಗಲೇಬೇಕು ಎಂದು ದೀಪಿಕಾ ಹಾಗೂ ಶಾರ್ವರಿ ಸೇರಿ ಮಾಧವ ಅವರ ಅಮ್ಮನ ಸರವನ್ನು ಕದಿಯುತ್ತಾರೆ. ಆ ಕದ್ದ ಸರವನ್ನು ದೀಪಿಕಾ ಶಾರ್ವರಿಯ ಕಬೋರ್ಡ್‌ನಲ್ಲಿ ಇಟ್ಟು ಬಿಡುತ್ತಾಳೆ. ಶಾರ್ವರಿಗೆ ಕಳ್ಳತನದ ಪಟ್ಟ ಸಿಗಬೇಕು ಎಂದು ದೀಪಿಕಾ ಇಷ್ಟೆಲ್ಲ ಡ್ರಾಮ ಮಾಡಿ ಇರುತ್ತಾಳೆ.

ಆದರೆ, ಇದು ಯಾವುದೂ ಶಾರ್ವರಿಯ ಗಮನಕ್ಕೆ ಸ್ವಲ್ಪ ಕೂಡ ಬಂದಿಲ್ಲ. ಹೇಗಾದರೂ ಮಾಡಿ ತುಳಸಿ ಕೈಯಲ್ಲಿ ಇದ್ದ ಬೀಗದ ಕೀಯನ್ನು ತಾನು ಪಡೆದುಕೊಳ್ಳಬೇಕೆಂದು ದೀಪಿಕಾ ಅಂದುಕೊಂಡು ಇರುತ್ತಾಳೆ. ಆ ಪ್ರಕಾರವಾಗಿ ತುಳಸಿ ಜೊತೆ ಇದ್ದ ಬೀಗದ ಗೊಂಚಲನ್ನು ಎಲ್ಲಿಯೋ ಬಿಸಾಡಿ ಬಿಡುತ್ತಾರೆ. ಆ ಆಪಾಧನೆಯನ್ನು ಸಮರ್ಥ್ ಮೇಲೆ ಹಾರಿಸುತ್ತಾರೆ. ಆದರೆ, ಇದರಿಂದ ತುಳಸಿಗೆ ಬಹಳ ನೋವು ಆಗುತ್ತದೆ. ಕೊನೆಗೆ ಬೀಗದ ಕೀ ಗೊಂಚಲು ಮಾಧವನಿಗೆ ಸಿಗುತ್ತದೆ. ಆತ ಮಾತ್ರ ಮನೆಯವರನ್ನೆಲ್ಲ ಕರೆದು ಯಾರು ಏನು ಅಂದುಕೊಳ್ಳಬೇಡಿ. ಬೀಗದ ಕೀ ನಮ್ಮ ಬಳಿಯೇ ಇದೆ ಎಂದು ಹೇಳುತ್ತಾರೆ.

Shrirasthu Shubhamasthu serial update on march 21st episode

ದೀಪಿಕಾ ಹಾಗೂ ಶಾರ್ವರಿ ಪ್ಲಾನ್ ಮಾಡಿಕೊಂಡು ಇರುತ್ತಾರೆ. ಹೇಗಾದರೂ ಮಾಡಿ ಆಹಾರ ಮನೆಯಲ್ಲಿ ಕಾಣಿಸುತ್ತಿಲ್ಲ ಎಂಬುವುದು ಎಲ್ಲರಿಗೆ ತಿಳಿಯಬೇಕು. ಇದಕ್ಕೆ ಕಾರಣ ತುಳಸಿ ಎಂದು ಎಲ್ಲರಿಗೆ ತಿಳಿದರೆ ಮಾತ್ರ ನನ್ನಷ್ಟು ಖುಷಿ ಪಡುವವರು ಇಲ್ಲ ಎಂದು ಶಾರ್ವರಿ, ದೀಪಿಕಾ ಬಳಿ ಹೇಳುತ್ತಿರುತ್ತಾರೆ. ಆ ಬಳಿಕ ಮಹೇಶ ಹಾಗೂ ಶಾರ್ವರಿ ದೇವರಿಗೆ ಪೂಜೆ ಮಾಡಬೇಕು ಎಂದು ಹೇಳುತ್ತಾರೆ. ಹಾಗೆಯೇ ಮಾಧವನ ಜೊತೆ ಮಹೇಶ ಹೇಳುತ್ತಾನೆ. ಅಮ್ಮನ ಸರ ಕಾಣುತ್ತಿಲ್ಲ ಅಣ್ಣ ಎಂದಾಗ ಮಾಧವಗೆ ಶಾಕ್ ಆಗುತ್ತದೆ.

ಅಮ್ಮನ ಸರ ಕಾಣದೆ ಮಂಕಾದ ಮಾಧವ

ಎಲ್ಲಾ ಸರ ಇದೆ. ಆದರೆ ಅಮ್ಮನ ಸರ ಇಲ್ಲ ಎಂದಾದರೆ ಏನು ಅರ್ಥ. ಮನೆಯವರು ಯಾರು ತೆಗೆದುಕೊಂಡು ಇದ್ದಾರೆ ಎನ್ನುವ ಅನುಮಾನ ಮೂಡುತ್ತದೆ. ತುಳಸಿ ಮಾತ್ರ ಮಾಧವನ ಬಳಿಗೆ ಬಂದು ಹೇಳುತ್ತಾಳೆ. ಮಾಧವ ಅವರೇ ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ದಯವಿಟ್ಟು ನೀವು ಅವನಿಗೆ ಆಪಾಧನೆ ಮಾಡಬೇಡಿ ಎಂದು ಹೇಳಿದಾಗ ಮಾಧವ ತುಳಸಿಯನ್ನು ಸಮಾಧಾನ ಮಾಡುತ್ತಾನೆ.

ಮಗಳ ಮಾತು ಕೇಳಿ ಶಾರ್ವರಿ ಶಾಕ್

ಮನೆಯವರೆಲ್ಲ ಹಾರದ ಬಗ್ಗೆ ಮಾತನಾಡುತ್ತಾ ಇರಬೇಕಾದರೆ ಶಾರ್ವರಿ ಹಾಗೂ ದೀಪಿಕಾ ಮನದಲ್ಲಿ ನಗುತ್ತಾ ಇರುತ್ತಾರೆ. ಮನೆಯವರೆಲ್ಲ ಮಾತನಾಡುತ್ತಾ ಇರಬೇಕಾದರೆ ಶಾರ್ವರಿ ಮಗಳು ಮೆತ್ತಗೆ ಹೇಳುತ್ತಾಳೆ. ಅಜ್ಜಿ ಸರವನ್ನು ನಾನು ಅಮ್ಮನ ಕಬೋರ್ಡ್‌ನಲ್ಲಿ ನೋಡಿದೆ ಎಂದಾಗ ಮನೆ ಮಂದಿಗೆ ಶಾಕ್ ಆಗುತ್ತದೆ. "ಅದು ಹೇಗೆ ಸಾಧ್ಯ ನನ್ನ ಕಬೋರ್ಡ್ ಒಳಗೆ ಹೇಗೆ ಬರಲು ಸಾಧ್ಯ. ಸಾಧ್ಯನೇ ಇಲ್ಲ" ಎಂದು ಶಾರ್ವರಿ ಹೇಳಿದಾಗ ಮನೆ ಮಂದಿ ಶಾರ್ವರಿ ರೂಮ್‌ಗೆ ಹೋಗಿ ಚೆಕ್ ಮಾಡುತ್ತಾರೆ. ಆದರೆ, ದೀಪಿಕಾ ಮಾಡಿದ ಮಾಸ್ಟರ್ ಪ್ಲಾನ್‌ಗೆ ಶಾರ್ವರಿ ಮಾತ್ರ ತಬ್ಬಿಬ್ಬಾಗಿದ್ದಾರೆ.

Shrirasthu Shubhamasthu serial update on march 21st episode

ಮನೆ ಮಂದಿ ಎದುರು ತಲೆ ತಗ್ಗಿಸುತ್ತಾಳಾ ಶಾರ್ವರಿ?

"ಇನ್ನೂ ದೇವರು ಬಂದರು ಶಾರ್ವರಿಯನ್ನು ಬಚಾವ್ ಮಾಡಲು ಆಗುವುದಿಲ್ಲ" ಎಂದು ದೀಪಿಕಾ ಅಂದುಕೊಂಡು ಇರುತ್ತಾಳೆ. ಇತ್ತ "ಶಾರ್ವರಿ ಮಾಡಿದ ಮನೆಹಾಳ್ ಐಡಿಯಾಗೆ ಸಿಕ್ಕ ಪ್ರತಿಫಲ" ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ.

More from Filmibeat

English summary
Shrirasthu Shubhamasthu serial update on march 21st episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X