ಕಳ್ಳತನದ ಆರೋಪದಿಂದ ಶಾರ್ವರಿಯನ್ನು ತಪ್ಪಿಸಿದ ತುಳಸಿ; ದೀಪಿಕಾ ಕುತಂತ್ರಕ್ಕೆ ತಿರುಗೇಟು ಕೊಡ್ತಾರಾ?

By ಪೂರ್ವ

ಮನೆಯಲ್ಲಿ ಹಿರಿಯರ ಒಡವೆಗಳು ಕಾಣಿಸುತ್ತಿಲ್ಲ ಎಂದು ಎಲ್ಲರೂ ಆತಂಕಕ್ಕೆ ಒಳಗಾಗಿದ್ದಾರೆ. ಅದನ್ನು ದೇವರಿಗೆ ಇಟ್ಟು ಯಾವತ್ತೂ ಪೂಜೆಯನ್ನು ಮಾಡುತ್ತಿರುತ್ತಾರೆ. ಆದರೆ, ಇದೀಗ ಮಾಧವನ ಮನೆಯಲ್ಲಿ ಪೂಜೆ ಮಾಡಬೇಕು ಎನ್ನುವ ನೆಪ ಇಟ್ಟುಕೊಂಡು ಶಾರ್ವರಿ ಮುಂದೆ ಮುಂದೆ ಹೋಗುತ್ತಿರುತ್ತಾರೆ. ಆಕೆಗೆ ತುಳಸಿ ಬಳಿ ಹಿರಿಯರ ಸರ ಇಲ್ಲ ಎನ್ನುವುದು ಮಾತ್ರ ತಿಳಿದಿತ್ತು. ಆದರೆ ಆಕೆಗೆ ಆ ಸರ ತನ್ನದೇ ಕಬೋರ್ಡ್‌ನಲ್ಲಿ ಇದೆ ಎಂದು ತಿಳಿದಿಲ್ಲ.

ಹಿರಿಯರ ಒಡವೆಗಳನ್ನು ಕೊಡಲು ನೋಡಿದಾಗ ಆ ಹಾರ ಕಾಣಿಸುತ್ತಿಲ್ಲ. ಬೇರೆ ಎಲ್ಲಾ ಒಡವೆಗಳು ಕಬೋರ್ಡ್‌ನಲ್ಲಿ ಇದೆ. ಆದರೆ, ಆ ಹಾರ ಮಾತ್ರ ಇಲ್ಲ ಯಾಕೆ ಎನ್ನುವುದು ಮಾಧವನ ಪ್ರಶ್ನೆ ಆಗಿರುತ್ತದೆ. ಆತನಿಗೆ ಇದ್ದದ್ದು ಯಾರು ಆ ಸರವನ್ನು ಎತ್ತಿಹಿಟ್ಟುಕೊಂಡು ಇರುವುದು ಅನ್ನೋದೊಂದೇ ಅನುಮಾನ. ಇನ್ನೂ ಮನೆಯವರೆಲ್ಲರೂ ಚರ್ಚೆ ಶುರು ಮಾಡಿರಬೇಕಾದರೆ, ತನ್ನ ತಾಯಿಯ ಕಬೋರ್ಡ್‌ನಲ್ಲಿ ನಾನು ಆ ಸರವನ್ನು ನೋಡಿದ ನೆನಪು ನನಗೆ ಎಂದು ಹೇಳಿದ ಕೂಡಲೇ ಮಹೇಶ ತನ್ನ ರೂಮ್‌ಗೆ ಹೋಗಿ ಕಬೋರ್ಡ್ ಚೆಕ್ ಮಾಡುತ್ತಾನೆ.

Shrirasthu Shubhamasthu serial update on march 22nd episode

ಆಗ ಹಿರಿಯರ ಸರ ಸಿಗುತ್ತದೆ. ಅದನ್ನು ನೋಡಿ ಮಹೇಶನಿಗೆ ಶಾಕ್ ಆಗುತ್ತದೆ. ಆತ ಆ ಸರ ಮನೆಯವರೆಲ್ಲರ ಎದುರು ತೆಗೆದುಕೊಂಡು ಬರುತ್ತಾನೆ. ಇದನ್ನು ನೋಡಿದ ಶಾರ್ವರಿ ಗಂಡನ ಬಳಿ ಪ್ರಶ್ನೆ ಮಾಡುತ್ತಾಳೆ. "ರೀ ಇದು ಹೇಗೆ ನಮ್ಮ ರೂಮ್‌ನಲ್ಲಿ ಸಿಗಲು ಸಾಧ್ಯ?" ಎಂದಾಗ ಮಹೇಶ ಕೊಂಚ ಏರು ಧ್ವನಿಯಲ್ಲಿ ಹೇಳುತ್ತಾನೆ. ಅದನ್ನು "ನೀನು ಹೇಳಬೇಕು ಶಾರ್ವರಿ. ಇದು ನಿನ್ನ ಕೋಣೆಯಲ್ಲಿ ಹೇಗೆ ಬಂತು?" ಎಂದು ಕೇಳಿದಾಗ ಶಾರ್ವರಿಗೆ ಶಾಕ್ ಆಗುತ್ತದೆ.

ಶಾಕ್‌ನಲ್ಲಿ ಇರುವ ಶಾರ್ವರಿ

"ತಾನು ಆ ಹಾರವನ್ನು ತೆಗೆದುಕೊಳ್ಳಬೇಕು ಎಂದಾದರೆ ಈ ರೀತಿ ತೆಗೆದುಕೊಳ್ಳುವ ಅಗತ್ಯ ಇಲ್ಲ. ನಾನು ಅದನ್ನು ಎಲ್ಲರ ಎದುರಲ್ಲೇ ತೆಗೆದುಕೊಂಡು ಬರುತ್ತಿದ್ದೆ. ಹೀಗೆ ಕದ್ದು ತರುವ ಅಗತ್ಯ ನನಗಿಲ್ಲ" ಎಂದು ಹೇಳುತ್ತಾರೆ. ಇದನ್ನು ಕೇಳಿದ ಅವಿನಾಶ್ ಹಾಗೂ ಅಭಿ ಕೂಡ "ಇದರಲ್ಲಿ ಚಿಕ್ಕಮ್ಮ ಯಾವುದೇ ತಪ್ಪು ಮಾಡಿರಲು ಸಾಧ್ಯವೇ ಇಲ್ಲ. ಏನೋ ಆಗಿದೆ ಇಲ್ಲಿ" ಎಂದು ಅನುಮಾನ ವ್ಯಕ್ತಪಡಿಸುತ್ತಾರೆ.

ಪೂರ್ಣಿಮಾ ಮೇಲೆ ಶಾರ್ವರಿಗೆ ಅನುಮಾನ

ಹಾಗೆಯೇ ಪೂರ್ಣಿಮಾ ಕೂಡಾ ಅದೇ ಮಾತನ್ನು ಆಡುತ್ತಾಳೆ. "ಯಾರೋ ನಮ್ಮ ನಮ್ಮ ಮಧ್ಯೆ ತಂದಿಡುವ ಕೆಲಸ ಮಾಡುತ್ತಿದ್ದಾರೆ. ಇದು ನನಗೆ ಯಾಕೋ ಸಮಾಧಾನ ತರುತ್ತಿಲ್ಲ. ಮನೆಯಲ್ಲಿಯೇ ಕಳ್ಳರು ಇರುವ ಶಂಕೆ ಮೂಡುತ್ತಿದೆ" ಎನ್ನುವ ಅನುಮಾನ ಇದೆ ಎಂದಾಗ ದೀಪಿಕಾಗೆ ಏನು ಮಾಡಬೇಕು ಎಂದು ತಿಳಿಯದಾಗುತ್ತೆ.

Shrirasthu Shubhamasthu serial update on march 22nd episode

ಶಾರ್ವರಿಗೆ ಸಾಂತ್ವನ ಹೇಳಿದ ತುಳಸಿ

ಇಷ್ಟೆಲ್ಲ ಆದರೂ ಏನೂ ಮಾತನಾಡದೆ ಸುಮ್ಮನೆ ಇರುತ್ತಾರೆ. ಇನ್ನೂ ತುಳಸಿ ಶಾರ್ವರಿಯನ್ನು ಬಚಾವ್ ಮಾಡಲು ನೋಡುತ್ತಾಳೆ. ಹೇಗಾದರೂ ಮಾಡಿ ಈ ಕಂಟಕದಿಂದ ಪಾರು ಮಾಡಬೇಕು ಎಂದು ಆಲೋಚಿಸಿ ತುಳಸಿಗೆ ಹೇಳುತ್ತಾಳೆ. "ನಾನು ಶಾರ್ವರಿ ಅವರ ರೂಮ್‌ಗೆ ಹೋಗಿದ್ದೆ. ನನಗೆ ಯಾವ ಹಾರ ಎಂದು ತಿಳಿಯಲಿಲ್ಲ. ಅದಕ್ಕೆ ಅವರ ಬಳಿ ತೋರಿಸಲು ಹೋಗಿದ್ದೆ. ಆ ವೇಳೆ ಅವರು ರೂಮ್‌ನಲ್ಲಿ ಇಲ್ಲದೆ ಇರುವುದನ್ನು ನೋಡಿ ನಾನು ಅಲ್ಲಿಯೇ ಮರೆತು ಇಟ್ಟು ಬಂದಿರಬೇಕು" ಎಂದು ಹೇಳಿ ಶಾರ್ವರಿಯನ್ನು ಬಚಾವ್ ಮಾಡುತ್ತಾರೆ. ಇನ್ನು ಮುಂದೇನಾಗುತ್ತೆ ಅನ್ನೋದನ್ನು ನೋಡಬೇಕಿದೆ.

More from Filmibeat

English summary
Shrirasthu Shubhamasthu serial update on march 22nd episode:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X