Shrirasthu Shubhamasthu: ಹೊಸ ಸಂಬಂಧ ಬೆಸೆದುಕೊಳ್ಳುತ್ತಿದ್ದಂತೆ ಮಗನಿಂದ ದೂರಾದ ತುಳಸಿ
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಜನಾರ್ಧನ್ ಎಷ್ಟೇ ಹುಡುಕಿಸಿದರೂ ತುಳಸಿ ಮತ್ತು ಮಾಧವ್ ಸಿಗುವುದಿಲ್ಲ. ಇದರಿಂದ ಜನಾರ್ಧನ್ ಬೇಸರ ಮಾಡಿಕೊಳ್ಳುತ್ತಾನೆ.
ಶಾರ್ವರಿ ಏನೂ ಆಗಿಲ್ಲ. ಮಾಧವ್ ಭಾವ ಹೊರಗಡೆ ಹೋಗಿದ್ದಾರೆ ಅಷ್ಟೇ, ಇನ್ನೇನು ಮನೆಗೆ ಬರುತ್ತಾರೆ ಎಂದು ಅಂದುಕೊಂಡಿದ್ದಾಳೆ. ಆದರೆ ಅಲ್ಲಿ ಮಾಧವ್ ಮದುವೆ ನಡೆಯುತ್ತಿರುವ ಸುಳಿವೂ ಇಲ್ಲ.
ಇಡೀ ಮನೆಯೂ ಕೊನೆಯವರೆಗೂ ತನ್ನ ಕೈ ಅಡಿಯಲ್ಲೇ ಇರುತ್ತೆ ಎಂದು ಶಾರ್ವರಿ ಅರಾಮವಾಗಿದ್ದಾಳೆ. ಆದರೆ, ಮಹೇಶ್‌ಗೆ ಶಾರ್ವರಿ ಕಾಲ ಮುಗಿಯುತ್ತೆ ಎಂಬ ಸುಳಿವಿದ್ದು, ಅರಾಮಾಗಿದ್ದಾನೆ.

ಅಡಚಣೆ ಇಲ್ಲದೇ ನಡೀತು ಮದುವೆ
ದತ್ತ ತಾತ ಮಾಧವ್ ಹಾಗೂ ತುಳಸಿ ಮದುವೆಗೆ ಯಾವುದೇ ಅಡಚಣೆಯಾಗದಂತೆ ನೋಡಿಕೊಂಡಿದ್ದಾರೆ. ತಾವೇ ಕೈಯ್ಯಾರೆ ಮಾಂಗಲ್ಯವನ್ನು ಮಾಧವ್ ಕೈಗೆ ಕೊಟ್ಟು ತುಳಸಿಗೆ ಕಟ್ಟುವಂತೆ ಹೇಳಿದ್ದಾರೆ. ಮಾಂಗಲ್ಯವನ್ನು ನೋಡುತ್ತಿದ್ದಂತೆ ತುಳಸಿ ಹೆದರಿಕೊಳ್ಳುತ್ತಾಳೆ. ಬೇಡ ಎಂದು ಹೇಳಲು ಯತ್ನಿಸುತ್ತಾಳೆ. ಆದರೆ, ಅದೇಕೋ ಒಂದು ಚೂರು ಮಾತನಾಡದೇ ಮಾಧವ್ ಕೈನಲ್ಲಿ ತಾಳಿ ಕಟ್ಟಿಸಿಕೊಂಡು ಬಿಡುತ್ತಾಳೆ. ಮೌನವಾಗಿಯೇ ಈ ಮದುವೆಗೆ ಒಪ್ಪಿಕೊಂಡು ಸುಮ್ಮನಿದ್ದಾಳೆ. ಮಾಧವ್‌ಗೆ ತುಳಸಿ ಅನುಭವಿಸುತ್ತಿರುವ ಸಂಕಟ ಅರ್ಥವಾದರೂ ಕೂಡ ಒಂದು ಕಡೆ ದತ್ತ ತಾತನ ಮಾತಿಗೆ ಬೆಲೆಕೊಟ್ಟು, ತುಳಸಿಯಿಂದ ದೂರ ಇರಲಾಗದೇ ಈ ಮದುವೆ ಆಗಿದ್ದಾರೆ.
ಮುಜುಗರಗೊಂಡಿರುವ ತುಳಸಿ
ಇನ್ನು ಮಾಂಗಲ್ಯ ಧಾರಣೆ ಆದ ಮೇಲೆ ಕಾಲುಂಗರ ತೊಡಿಸಲು ಮಾಧವ್ ಮುಂದಾಗುತ್ತಾನೆ. ಆಗ ತುಳಸಿ ಮುಜುಗರದಿಂದ ಕಾಲು ಬೆರಳುಗಳನ್ನು ಮಾಡಿಸಿಕೊಳ್ಳುತ್ತಾಳೆ. ಆದರೆ, ದತ್ತ ತಾತ ತುಳಸಿಗೆ ಹಾಗೆಲ್ಲಾ ಮಾಡಬೇಡ ಎಂದು ಹೇಳುತ್ತಾರೆ. ಆಗ ತುಳಸಿ ಮಾವನ ಮುಖ ನೋಡಿಕೊಂಡು ಕಾಲುಂಗರವನ್ನು ತೊಡಿಸಿಕೊಳ್ಳುತ್ತಾಳೆ. ನಂತರ ಸಪ್ತಪದಿ ತುಳಿಯುವಾಗಲೂ ತುಳಸಿಗೆ ಒಪ್ಪಿಗೆ ಇರುವುದಿಲ್ಲ. ಆದರೆ, ದತ್ತ ತಾತ ಒಂದೊಂದು ಹೆಜ್ಜೆಗೂ ಅರ್ಥ ಹೇಳಿ ಸಪ್ತಪದಿ ತುಳಿಯುವಂತೆ ಮಾಡುತ್ತಾರೆ. ಅಗ್ನಿ ಪ್ರದಕ್ಷಿಣೆ ಎಲ್ಲವೂ ನಡೆ ಸುಸೂತ್ರವಾಗಿ ನಡೆಯುತ್ತದೆ. ಮದುವೆಗೆ ಯಾವುದೇ ಅಡಚಣೆ ಉಂಟಾಗುವುದಿಲ್ಲ.

ಮಾಧವ್‌ಗಾಗಿ ಕಾಯುತ್ತಿರುವ ಮನೆಯವರು
ಇತ್ತ ಮಾಧವ್ ಮನೆಯಲ್ಲಿ ಎಲ್ಲರೂ ಅಭಿ ಮದುವೆಗೆ ತಯಾರಾಗಿದ್ದಾರೆ. ರೆಸಾರ್ಟ್‌ಗೆ ಹೋಗಬೇಕಿದೆ. ಆದರೆ, ಮನೆಯಲ್ಲಿ ಮಾಧವ್ ಮಾತ್ರ ಕಾಣುತ್ತಿಲ್ಲ. ಪೂರ್ಣಿಮಾ ಶಾರ್ವರಿ ಬಳಿ ಮಾವ ಎಲ್ಲಿಗೆ ಹೋದರು ಎಂದು ಕೇಳುತ್ತಾಳೆ. ಶಾರ್ವರಿ ಗೊತ್ತಿಲ್ಲ ಅವರ ಫೋನ್ ನಾಟ್ ರೀಚಬಲ್ ಆಗಿದೆ ಎಂದು ಹೇಳುತ್ತಾಳೆ. ಅಭಿ ಅವರಿಗೆಲ್ಲಾ ಕಾದರೆ ಆಗೊಲ್ಲ. ನಮ್ಮ ಪಾಡಿಗೆ ನಾವು ಹೋಗೋಣ ಎಂದು ಹೇಳಿದಾಗ ಪೂರ್ಣಿಮಾ ಇದಕ್ಕೆ ಒಪ್ಪುವುದಿಲ್ಲ. ಅಭಿ ಎಂಗೇಜ್‌ಮೆಂಟ್ ಮಾವನಿಗೆ ಗೊತ್ತೇ ಇರಲಿಲ್ಲ. ಗಣಪತಿ ಹೋಮಕ್ಕೂ ಮಾವನನ್ನು ಕರೆಯಲಿಲ್ಲ. ಈಗ ಮದುವೆಗೂ ಅವರನ್ನು ಬಿಟ್ಟು ಹೋಗುವುದು ಬೇಡ ಎನ್ನುತ್ತಾಳೆ. ಇದಕ್ಕೆ ಅವಿ ಕೂಡ ಸ್ವಲ್ಪ ಹೊತ್ತು ಕಾಯೋಣ ಎಂದು ಹೇಳುತ್ತಾನೆ. ಮಾಧವ್ ಮನೆಗೆ ತುಳಸಿ ಜೊತೆಗೆ ಬರುತ್ತಾನಾ ಎಂದು ಕಾದು ನೋಡಬೇಕಿದೆ.
ಅಮ್ಮನ ಸಂಬಂಧ ಕಳೆದುಕೊಂಡ ಸಮರ್ಥ್
ಮದುವೆ ಮಂಟಪಕ್ಕೆ ಸಮರ್ಥ್ ಬರುತ್ತಾನೆ. ಅಮ್ಮನನ್ನು ನೋಡಿ ಶಾಕ್ ಆಗುತ್ತಾನೆ. ತುಳಸಿ ಕೂಡ ಸಮರ್ಥ್‌ನನ್ನು ನೋಡಿ ಪಾಪು ಎಂದು ಕರೆಯುತ್ತಾಳೆ. ಸಿರಿ ಸಮರ್ಥ್ ಕೈಗೆ ಅಕ್ಷತೆ ಕೊಡುತ್ತಾಳೆ. ಆದರೆ, ಸಮರ್ಥ್ ಎಷ್ಟು ಬೇಡ ಎಂದರೂ ಮದುವೆ ಆದೆ ಅಲ್ವಾ. ಇನ್ಮೇಲೆ ನೀನು ನನ್ನ ಪಾಪು ಅಂತ ಕರೆಯಬೇಡ. ನನ್ನ ನಿನ್ನ ಸಂಬಂಧ ಇಲ್ಲಿಗೆ ಮುಗೀತು ಎಂದು ಹೇಳಿ ಹೊರಟು ಬಿಡುತ್ತಾನೆ. ಇದರಿಂದ ತುಳಸಿಗೆ ಬಹಳ ನೋವಾಗುತ್ತದೆ.


Click it and Unblock the Notifications











