Shrirasthu Shubhamasthu: ಅವಮಾನವಾದ ಶಾರ್ವರಿಗೆ ತುಳಸಿ ಮಾಡಿದ್ದೇನು ಗೊತ್ತಾ..?
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಸಂಧ್ಯಾ, ದತ್ತ ತಾತ ಎಲ್ಲರೂ ತುಳಸಿ ಮನೆಗೆ ದಸರಾ ಹಬ್ಬಕ್ಕೆಂದು ಆಗಮಿಸಿದ್ದಾರೆ. ಇದು ಮನೆಯವರಿಗೆ ಕೊಂಚ ಮುಜುಗರವನ್ನು ಉಂಟು ಮಾಡಿದೆ.
ದತ್ತ ತಾತ ಅಭಿ ಅನ್ನು ಮನೆಬಿಟ್ಟು ಹೊರಗೆ ಹೋಗದಂತೆ ತಡೆದಿದ್ದಾರೆ. ಹಬ್ಬದಲ್ಲಿ ಅಭಿ ಕೂಡ ಎಲ್ಲರ ಜೊತೆಗೆ ಇದ್ದು ಆಚರಣೆಯಲ್ಲಿ ಭಾಗಿಯಾಗುವಂತೆ ನೋಡಿಕೊಂಡಿದ್ದಾರೆ.

ಅಭಿಗೆ ಅವಿ ಪಂಚೆ ಉಡಿಸಲು ಹೋಗಿ ಎಡವಟ್ಟನ್ನು ಮಾಡಿಕೊಂಡಿದ್ದಾನೆ. ಹೇಗೇಗೋ ಪಂಚೆ ಉಡಿಸಿದ್ದು, ಇದನ್ನು ದತ್ತ ತಾತಾ ನೋಡಿ ತಮಾಷೆ ಮಾಡಿದ್ದಾರೆ.
ಗೊಂಬೆ ಹಬ್ಬ ಜೋರಾಗಿ ನಡೀತು
ಕೊನೆಗೆ ದತ್ತ ತಾತನೇ ಅಭಿಗೆ ಪಂಚೆಯನ್ನು ಉಡಿಸಿಕೊಟ್ಟಿದ್ದಾರೆ. ಇತ್ತ ಸಂಧ್ಯಾ ಅಭಿ ತನ್ನ ಬಟ್ಟೆಯ ಬಗ್ಗೆ ಆಡಿಕೊಂಡ ಎಂಬ ಕಾರಣಕ್ಕೆ ಪೂರ್ಣಿಮಾಳನ್ನು ಸೀರೆ ಕೊಡಲು ಕೇಳಿದ್ದಾಳೆ. ಪೂರ್ಣಿಮಾ ಸೀರೆ ಹಾಗೂ ಒಡವೆಗಳಿಂದ ಸಂಧ್ಯಾಳನ್ನು ಸಿಂಗರಿಸಿ ಕರೆದುಕೊಂಡು ಬಂದಿದ್ದಾಳೆ. ಇದನ್ನು ನೋಡಿ ತುಳಸಿ ಸಂಧ್ಯಾಳಿಗೆ ಬೈದು, ಒಡವೆಗಳನ್ನು ವಾಪಸ್ ಕೊಡು ಎಂದು ಎಷ್ಟು ಹೇಳಿದರೂ ಕೇಳುವುದಿಲ್ಲ. ಸಂಧ್ಯಾ ತಾನು ಹಿಡಿದ ಹಠವನ್ನು ಬಿಡದೇ ಅಮ್ಮನಿಗೆ ಎದುರು ಮಾತನಾಡುತ್ತಾಳೆ. ಇನ್ನು ತುಳಸಿ ದಸರಾ ಹಬ್ಬಕ್ಕೆ ಎಲ್ಲಾ ತಯಾರಿಯನ್ನು ಮಾಡಿಕೊಡುತ್ತಾಳೆ. ಮಾಧವ್ ಮನೆಯಲ್ಲಿ ಗೊಂಬೆ ಹಬ್ಬ ಅದ್ಧೂರಿಯಾಗಿ ನಡೆಯುತ್ತದೆ.
ಪರಿಪೂರ್ಣ ಕುಟುಂಬದ ಗೊಂಬೆಗಳು
ದಸರಾ ಹಬ್ಬವನ್ನು ಯಾಕೆ ಆಚರಿಸುತ್ತಾರೆ. ಯಾರೆಲ್ಲಾ ಆಚರಿಸುತ್ತಾರೆ ಎಂದು ತಿಳಿಸಿಕೊಡುವ ತುಳಸಿ, ಧನ್ಯವಾದಗಳನ್ನು ತಿಳಿಸಲು ಕೂಡ ಗೊಂಬೆಗಳನ್ನು ಜೋಡಿಸಬಹುದು. ವರ್ಷ ವರ್ಷ ತಮಗೆ ಇಷ್ಟವಾಗುವಂತಹ ಗೊಂಬೆಗಳನ್ನು ಜೋಡಿಸುವ ಪದ್ಧತಿ ಇದೆ ಎಂದು ಹೇಳುತ್ತಾಳೆ. ಬಳಿಕ ಮಾಧವ್ ಕುಟುಂಬವನ್ನು ಅಂದರೆ, ಮಾಧವ್, ಮಹೇಶ್, ಶಾರ್ವರಿ, ಅವಿ, ಪೂರ್ಣಿಮಾ, ಅಭಿ ಹಾಗೂ ನಿಧಿ ಹೆಸರಿನ ಗೊಂಬೆಗಳನ್ನು ಜೋಡಿಸುತ್ತಾಳೆ. ಪೂರ್ಣಮಾ ತುಳಸಿ ಗೊಂಬೆಯನ್ನು ನಿಲ್ಲಿಸಿ ಇದು ಪರಿಪೂರ್ಣ ಕುಟುಂಬ ಎನ್ನುತ್ತಾಳೆ. ಮಾಧವ್ ಬಂದು ಸಮರ್ಥ್, ಸಂಧ್ಯಾ, ಸಿರಿ ಹಾಗೂ ದತ್ತ ತಾತನ ಗೊಂಬೆಗಳನ್ನಿಟ್ಟು ಇದು ಪರಿಪೂರ್ಣ ಕುಟುಂಬ ಎಂದು ಹೇಳುತ್ತಾನೆ.

ಶಾರ್ವರಿಗೆ ಅವಮಾನವಾಯ್ತು
ಇದೆಲ್ಲವನ್ನೂ ಗಮನಿಸುವ ಶಾರ್ವರಿಗೆ ಕೋಪ ಬರುತ್ತದೆ. ಆದರೆ, ಎಲ್ಲರ ಮುಂದೂ ತನ್ನ ಕೋಪವನ್ನು ತೋರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವಿಯ ಮುಂದೆ ದುಃಖದಲ್ಲಿ ನಿಂತು, ತನ್ನ ಅಸ್ತಿತ್ವಕ್ಕೆ ಈ ಮನೆಯಲ್ಲಿ ಬೆಲೆ ಇಲ್ಲ ಎಂಬಂತೆ ನಡೆದುಕೊಳ್ಳುತ್ತಾಳೆ. ಆಗ ಅವಿ ತುಳಸಿ ಬಳಿ ಹೋಗಿ ಶಾರ್ವರಿ ಚಿಕ್ಕಮ್ಮನಿಗೆ ಈ ಮನೆಯಲ್ಲಿ ಹೆಚ್ಚಿನ ಸ್ಥಾನ ಇರುವುದು ಎಂದು ಹೇಳುತ್ತಾನೆ. ಆದರೆ, ಶಾರ್ವರಿಗೆ ಹೆಜ್ಜೆ ಹೆಜ್ಜೆಗೂ ಅವಮಾನವಾಗುತ್ತಿರುತ್ತದೆ. ಪುರೋಹಿತರು ಪಂಚಪಾತ್ರೆಯನ್ನು ಕೇಳಿದಾಗ ಶಾರ್ವರಿ ಹರಿವಾಣ ತಂದು ಕೊಡುತ್ತಾಳೆ. ಪಂಚಪಾತ್ರೆ ಯಾವುದು ಎಂದು ತಿಳಿಯದೆ ಅವಮಾನಕ್ಕೊಳಗಾಗುತ್ತಾಳೆ.
ಪರಿಸ್ಥಿತಿ ಅರಿತ ತುಳಸಿ
ಶಾರ್ವರಿಗೆ ಇದು ಬಹಳ ನೋವುಂಟು ಮಾಡುತ್ತದೆ. ಆಗ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ತುಳಸಿ ಶಾರ್ವರಿಗೆ ಈ ಮನೆಯಲ್ಲಿ ಹೆಚ್ಚಿನ ಸ್ಥಾನ ಇರುವುದು. ಆಕೆಯೇ ಮೊದಲ ಪೂಜೆಯನ್ನು ಮಾಡಲಿ. ನಾನು ಇತ್ತೀಚೆಗೆ ಬಂದವಳು ಎಂದು ಹೇಳಿ, ಶಾರ್ವರಿಯೇ ಪೂಜೆ ಮಾಡಲು ಅವಕಾಶವನ್ನು ಮಾಡಿಕೊಡುತ್ತಾಳೆ. ಆಗ ಶಾರ್ವರಿಗೆ ಖುಷಿಯೂ ಆಗುತ್ತದೆ. ಪೂಜೆಯೂ ನಡೆಯುತ್ತದೆ. ಅವಿಗೆ ತುಳಸಿ ಮೇಲೆ ಗೌರವ ಹೆಚ್ಚಾಗುತ್ತದೆ. ಆದರೆ, ಶಾರ್ವರಿ ತಾನು ಮಾಡಿದ ಪ್ಲಾನ್‌ಗಳೆಲ್ಲವೂ ತುಳಸಿಯ ಒಳ್ಳೆಯತನದಿಂದಲೇ ಫ್ಲಾಪ್ ಆಗುತ್ತಿರುತ್ತದೆ. ಇದು ನಿಧಿಯನ್ನು ತನ್ನ ತಾಯಿಯ ಸ್ಥಾನ ಈ ಮನೆಯಲ್ಲಿ ಮುಗೀತು ಎಂಬ ಸೂಚನೆಯನ್ನು ಕೊಡುತ್ತಿದೆ.


Click it and Unblock the Notifications











