Shrirastu Shubhamasthu: ಆಸ್ತಿ ಆಸೆಗೆ ಪೂರ್ಣಿಮಾ ದೊಡ್ಡ ಮಗಳು ಎಂದ ಜನಾರ್ಧನ್, ಪ್ಲಾನ್ ವರ್ಕ್ ಆಗುತ್ತಾ?
ಪೂರ್ಣಿಮಾಗೆ ತಾನು ಅನಾಥೆ ಅಲ್ಲ ನನಗೂ ತಂದೆ ತಾಯಿ ಇದ್ದಾರೆ ಎಂದು ತಿಳಿದಿತ್ತು. ಆದರೆ ಅವರು ಹೇಗಿದ್ದಾರೆ ಎಲ್ಲಿದ್ದಾರೆ ಎಂಬ ಅರಿವು ಆಕೆಗೆ ಇರಲಿಲ್ಲ. ತನ್ನ ಜೀವನದುದ್ದಕ್ಕೂ ಒಬ್ಬೊಂಟಿಯಾಗಿ ಬಂದ ಪೂರ್ಣಿಮಾ ಮದುವೆ ಬಳಿಕ ತುಂಬು ಕುಟುಂಬಕ್ಕೆ ಕಾಲಿಡುತ್ತಾಳೆ. ಪೂರ್ಣಿಮಾಳ ಒಳ್ಳೆ ಮನಸ್ಸಿಗೆ ಆಕೆಯ ಕಾಳಜಿಗೆ ಎಲ್ಲರೂ ಮನಸೋತಿದ್ದಾರೆ.
ಪೂರ್ಣಿಮಾಗೆ ಆಕೆಯ ತನ್ನ ಮಾವ ಹಾಗೂ ಗಂಡನೇ ಧೈರ್ಯ. ಈಗ ಸಾಥ್ ನೀಡಲು ಆಕೆಯ ಅತ್ತೆ ತುಳಸಿ ಕೂಡ ಇದ್ದಾಳೆ. ದೀಪಿಕಾ ಪೂರ್ಣಿಮಾ ಬಳಿ ಆಗಾಗ ಮಾತನಾಡುತ್ತಾ ನೀನು ಅನಾಥೆ ಎನ್ನುವ ಯೋಚನೆ ಆಕೆಗೆ ಮೂಡುವ ಹಾಗೆ ಮಾಡಿದ್ದಾಳೆ. ಪೂರ್ಣಿಮಾಗೆ ಜನಾರ್ಧನ್ ಹಾಗೂ ವನಜಾನ ತನ್ನ ಹೆತ್ತ ತಂದೆ ತಾಯಿ ಎನ್ನುವುದು ಗೊತ್ತಿರುವುದಿಲ್ಲ.

ಜನಾರ್ಧನ್‌ಗೆ ಈ ವಿಚಾರ ತಿಳಿದಿದೆಯೋ ಗೊತ್ತಿಲ್ಲ. ಆದರೆ ವನಜಾ ಮಾತ್ರ ನನ್ನ ಮಗಳು ಇದೀಗ ಏನಗಿದ್ದಾಳೋ ಏನೋ, ಸಣ್ಣ ಮಗುವನ್ನು ದೇವಾಲಯದಲ್ಲಿ ಬಿಟ್ಟು ಹೋಗುವ ಪರಿಸ್ಥಿತಿ ಬಂದಿತ್ತು. ಮೊಮ್ಮಗಳಿಗೆ ಆಕೆಯ ಹೆತ್ತವರಿಂದ ಕಂಟಕ ಇದೆ ನನ್ನ ಅಪ್ಪನಿಗೆ ತಿಳಿದಿತ್ತು ಅನಿಸುತ್ತದೆ. ಅದಕ್ಕಾಗಿ ವಿಲ್‌ನಲ್ಲಿ ನನ್ನ ದೊಡ್ಡ ಮಗಳ ಹೆಸರಿಗೆ ಬರೆದಿಟ್ಟು ಸತ್ತಿದ್ದಾರೆ . ಅದರಲ್ಲೂ ಆಕೆಗೆ 25 ವರುಷ ತುಂಬಿದ ಬಳಿಕ ಆಸ್ತಿ ಆಕೆಯ ಕೈ ಸೇರುತ್ತದೆ. ಇಲ್ಲವಾದರೆ ಆಸ್ತಿಯಲ್ಲ ಅನಾಥ ಆಶ್ರಮಕ್ಕೆ ಸೇರುತ್ತದೆ ಎಂದು ವಿಲ್‌ನಲ್ಲಿ ಬರೆದಿರುತ್ತದೆ.
ವಿಷಯ ತಿಳಿದ ಬಳಿಕ ಜನಾರ್ಧನ್‌ಗೆ ಏನು ಮಾಡುವುದು ಎಂದು ದಿಕ್ಕೇ ತೋಚದಂತಾಗುತ್ತದೆ. ಜನಾರ್ಧನ್ ಮಡದಿಯನ್ನು ಕರೆಯುತ್ತಾನೆ. ಅವಿ, ಪೂರ್ಣಿಮಾ ಹಾಗೂ ದೀಪಿಕಾ, ಅಭಿ ದಂಪತಿಯನ್ನು ಮನೆಗೆ ಕರೆಯಿಸುತ್ತಾನೆ. ದೀಪಿಕಾ, ಅಭಿ ಮನೆಗೆ ಬಂದಾಗ ಆರತಿ ಬೆಳಗಿ ದೃಷ್ಟಿ ತೆಗೆದು ಒಳಗೆ ಬರಲು ಹೇಳುತ್ತಾರೆ. ದೀಪಿಕಾ ಬರುವ ಮುಂಚೆಯೇ ಪೂರ್ಣಿಮಾ, ಅವಿ ಬಂದಿರುತ್ತಾರೆ. ಅವರಿಬ್ಬರನ್ನು ನೋಡಿದ ದೀಪಿಕಾಗೆ ಕೊಂಚ ಶಾಕ್ ಆಗುತ್ತದೆ.

ತವರು ಮನೆಗೆ ಆಗಮಿಸಿದ ದೀಪಿಕಾ
ಇವರಿಬ್ಬರ ಜೊತೆಗೆ ನಮ್ಮನ್ನು ಡ್ಯಾಡಿ ಯಾಕೆ ಕರೆಸಿದರು ಎಂದು ದೀಪಿಕಾ ಆಲೋಚನೆ ಮಾಡುತ್ತಿರುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಲಾಯರ್ ಬರುತ್ತಾರೆ. ಜನಾರ್ಧನ್ ಹಾಗೂ ಲಾಯರ್ ಇಬ್ಬರು ಮಾತುಕತೆ ಮಾಡುತ್ತಿರುತ್ತಾರೆ. ಲಾಯರ್ ಹೇಳುತ್ತಾರೆ. ಅಲ್ಲಯ್ಯ ನಾನು ಹೇಳಿದ್ದೇನು ನೀನು ಮಾಡಿದ್ದೇನು. ನಾನು ಬರ ಹೇಳಿದ್ದು ನಿಮ್ಮ ಚಿಕ್ಕ ಮಗಳನ್ನಲ್ಲ. ಆಕೆಗೆ ಈ ಆಸ್ತಿ ಸಿಗುವುದು ಇಲ್ಲ. ಜನಾರ್ಧನ್ ನಾನು ಹೇಳಿದ್ದು ನಿಮ್ಮ ದೊಡ್ಡ ಮಗಳು ಬರಲಿ ಎಂದು . ಆಗ ನೀನು ಯಾವುದೋ ಜ್ಯೋತಿಷ್ಯದವನು ಆಕೆಯನ್ನು ನೋಡಿ ಕಂಟಕ ಇದೆ. ಆಕೆಯನ್ನು ದೇವಾಲಯದಲ್ಲಿ ಬಿಟ್ಟು ಹೋಗಿದ್ದೆ ಎಂದು ಹೇಳುತ್ತಾರೆ ಲಾಯರ್.
ಲಾಯರ್ ಮಾತಿಗೆ ತಬ್ಬಿಬ್ಬಾದ ಜನಾರ್ಧನ್
ಇದೀಗ ನಿನ್ನ ಇಡೀ ಆಸ್ತಿಗೆ ವಾರಸುದಾರಳು ಆಕೆ. ಏನು ವಿಚಿತ್ರ ಅಲ್ವಾ ಜನಾರ್ಧನ್ ಎಂದು ಹೇಳುತ್ತಾನೆ. ಇದನ್ನು ಕೇಳಿ ಜನಾರ್ಧನ್‌ಗೆ ಏನು ಹೇಳಬೇಕು ಎಂದು ತಿಳಿಯದಾಗುತ್ತದೆ. ನಾನು ನನ್ನ ಮೊದಲ ಮಗಳನ್ನೆ ಕರೆದುಕೊಂಡು ಬಂದಿದ್ದೇನೆ. ನೋಡಿ ಅವಳೇ ನನ್ನ ಮೊದಲ ಮಗಳು ಎಂದು ಹೇಳುತ್ತಾನೆ. ಇದನ್ನು ಕೇಳಿದ ಲಾಯರ್‌ಗೆ ಕೂಡ ಶಾಕ್ ಆಗುತ್ತದೆ.
ಪೂರ್ಣಿ ಕಂಡರೆ ಆಗದ ದೀಪಿಕಾ
ದೀಪಿಕಾ ಹಾಗೂ ಪೂರ್ಣಿಮಾ ನಿಜವಾಗಿಯೂ ಅಕ್ಕ ತಂಗಿಯರು. ಆದರೆ ಅವರಿಬ್ಬರಿಗೂ ಅಕ್ಕ ತಂಗಿಯರು ಎಂಬುವುದು ತಿಳಿದಿರುವುದಿಲ್ಲ. ಹಾಗೆಯೇ ದೀಪಿಕಾ ಹಾಗೂ ಪೂರ್ಣಿಮಾ ಗುಣಗಳು ತದ್ವಿರುದ್ಧವಾಗಿದೆ.


Click it and Unblock the Notifications











