Shrirastu Shubhamasthu: ಜನಾರ್ಧನ್ ಮಸಲತ್ತು, ಬಲಿಯಾಗುತ್ತಾಳ ಪೂರ್ಣಿಮಾ?

By Poorva

ಪೂರ್ಣಿಮಾಗೆ ದೀಪಿಕಾ ಅಂದರೆ ಬಹಳ ಪ್ರೀತಿ. ಆಕೆಗೆ ಅದ್ಯಾಕೋ ನನ್ನ ತಂಗಿನೇ ಈ ಮನೆಯ ಸೊಸೆಯಾಗಿ ಬಂದಿದ್ದಾಳೆ ಎನ್ನುವ ಖುಷಿ. ಆದರೆ ದೀಪಿಕಾಗೆ ಆಕೆಯನ್ನು ಕಂಡರೆ ಆಗುವುದಿಲ್ಲ. ಬೀದೀಲಿ ಹೋಗುವ ಅನಾಥೆ ಮನೆಗೆ ಸೊಸೆಯಾಗಿ ಬಂದಿದ್ದಾಳೆ ಎನ್ನುವ ಭಾವನೆ ಇದೆ. ಇದೀಗ ಜನಾರ್ಧನ್ ಆಸ್ತಿ ಆಸೆಗಾಗಿ ತನ್ನ ಸ್ವಾರ್ಥಕ್ಕಾಗಿ ಪೂರ್ಣಿಮಾಳನ್ನು ಬಳಸಿಕೊಳ್ಳುತ್ತಿದ್ದಾನೆ.

ಅವಿನಾಶ್ ಹಾಗೂ ಪೂರ್ಣಿಮಾ, ಜನಾರ್ಧನ್ ಮನೆಗೆ ಬಂದಾಗ ಖುಷಿಯಿಂದ ವನಜಾ ಮನೆಯ ಒಳಗೆ ಬನ್ನಿ ಎಂದು ಹೇಳುತ್ತಾಳೆ. ಹಾಗೆಯೇ ವನಜಾ, ದೀಪಿಕಾ ಹಾಗೂ ಆಭಿಯನ್ನು ಹೊಸ್ತಿಲಲ್ಲಿಯೇ ನಿಲ್ಲಿಸಿ ಆರತಿ ಎತ್ತಿ ಮನೆಗೆ ಕರೆದುಕೊಂಡು ಬಿಡಬೇಕು ಎನ್ನುತ್ತಾಳೆ.

Shrirastu Shubhamasthu kannada serial 13th may episode written update

ದೀಪಿಕಾ ಹಾಗೂ ಅಭಿಗೆ ಆರತಿಯನ್ನು ಎತ್ತುತ್ತಾಳೆ. ಇನ್ನೂ ಪೂರ್ಣಿಮಾ, ಅವಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವುದನ್ನು ನೋಡಿದ ದೀಪಿಕಾಗೆ ಏನು ಮಾಡಬೇಕು ಎಂದು ದಿಕ್ಕೇ ತೋಚದ ಹಾಗೆ ಆಗುತ್ತದೆ. ಹಾಗೆಯೇ ದೀಪಿಕಾ ತನ್ನ ತಂದೆಯ ಬಳಿ ಕೂಡ ಕಠೋರವಾಗಿ ಮಾತನಾಡುತ್ತಾಳೆ. ಇದನ್ನು ನೋಡಿದ ಜನಾರ್ಧನ್‌ಗೆ ಮಗಳಿಗೆ ಏನು ಹೇಳಬೇಕು ಎನ್ನುವುದೇ ತಿಳಿಯದಾಗುತ್ತದೆ.

Kavaya Shaiva: 'ಕೆಂಡಸಂಪಿಗೆ' ಬಿಟ್ಮೇಲೆ ಥೀಮ್ ಫೋಟೋಶೂಟ್‌ನಲ್ಲಿ ಬ್ಯುಸಿಯಾದ ಸುಮನಾ!

ನನಗೆ ಯಾಕೆ ಈ ಮನೆಯಲ್ಲಿ ಇಷ್ಟೊಂದು ಫಾರ್ಮಲಿಟಿಸ್ . ನನಗೆ ಹೇಗೆ ಇರಬೇಕು ಎಂದು ಗೊತ್ತು ಎಂದು ಹೇಳುತ್ತಾಳೆ. ಆ ಕೂಡಲೇ ಜನಾರ್ಧನ್ ಏನು ಮಾತನಾಡುವುದಿಲ್ಲ. ದೀಪಿಕಾನನ್ನು ನಾನು ಬಹಳ ಮುದ್ದಾಗಿ ಬೆಳೆಸಿದ್ದೇನೆ. ಆಕೆಗೆ ಸರಿ ತಪ್ಪು ಯಾವುದು ಗೊತ್ತಾಗುವುದಿಲ್ಲ. ನೀನೇ ಆಕೆಗೆ ತಿಳಿ ಹೇಳಬೇಕಮ್ಮ ಪೂರ್ಣಿಮಾ ಎಂದು ಜರ್ನಾಧನ್ ಹೇಳುತ್ತಾನೆ. ಇದರಿಂದ ದೀಪಿಕಾಗೆ ಮತ್ತಷ್ಟು ಕೋಪ ಬರುತ್ತದೆ.

Shrirastu Shubhamasthu kannada serial 13th may episode written update

ದೀಪಿಕಾ ಮಾತಿಗೆ ಜನಾರ್ಧನ್ ಬ್ರೇಕ್

ಅದಾದ ಬಳಿಕ ಜನಾರ್ಧನ್ ಮೆತ್ತಗೆ ದೀಪಿಕಾಳನ್ನು ಒಳಗೆ ಕರೆದುಕೊಂಡು ಬಂದು ಹೇಳುತ್ತಾನೆ. ದೀಪಿಕಾ, ಈ ಆಸ್ತಿಯನ್ನು ನಿಮ್ಮ ತಾತ ನಿನ್ನ ಅಕ್ಕನ ಹೆಸರಿಗೆ ಮಾಡಿದ್ದಾರೆ. ನಿಮ್ಮ ಅಕ್ಕನಿಗೆ 25 ವರ್ಷ ಆದ ಬಳಿಕ ಆಸ್ತಿ ಆಕೆಯ ಕೈ ಸೇರುತ್ತದೆ. ಒಂದು ವೇಳೆ ಆಕೆ ತೆಗೆದುಕೊಂಡಿಲ್ಲ ಎಂದಾದರೆ ಅದು ಅನಾಥ ಆಶ್ರಮಕ್ಕೆ ಸೇರುತ್ತದೆ. ಅದಕ್ಕೆ ನಾನು ಪೂರ್ಣಿಮಾಳನ್ನು ನಿನ್ನ ಅಕ್ಕ ಎಂದು ತೋರಿಸಬೇಕು ಅಂತ ಇದ್ದೇನೆ. ಆದರೆ ನೀನು ಅದಕ್ಕೆ ಆಸ್ಪದ ಮಾಡಿ ಕೊಡುತ್ತಿಲ್ಲ ಏಕೆ ಎನ್ನುತ್ತಾನೆ.

ದೀಪಿಕಾ ಆಟ ಶುರು

ಬಳಿಕ ದೀಪಿಕಾ ನನಗೆ ತಿಳಿದಿಲ್ಲ. ನೀವು ಆ ರೀತಿ ಅದಕ್ಕಾಗಿ ಅವಳ ಬಳಿ ಮಾತನಾಡಿದೀರಿ ಎಂದು. ನನಗೆ ಈಗ ಅರ್ಥ ಆಗುತ್ತಿದೆ. ಹೇಗಾದರೂ ಮಾಡಿ ಪೂರ್ಣಿಮಾ ಬ್ರೈನ್ ವಾಶ್ ಮಾಡಿ ಈ ಆಸ್ತಿಯನ್ನು ನಮ್ಮದಾಗಿಸಿಕೊಳ್ಳೋಣ . ಆಕೆಯ ಬ್ರೈನ್ ವಾಶ್ ಮಾಡುವ ಕೆಲಸ ನನಗೆ ಬಿಟ್ಟು ಬಿಡಿ ಎಂದು ಹೇಳುತ್ತಾಳೆ. ಆದರೂ ಜನಾರ್ಧನ್ ಗೆ ತನ್ನ ಮೊದಲ ಮಗಳನ್ನು ಹೇಗಾದರೂ ಮಾಡಿ ಪಡೆದುಕೊಳ್ಳಬೇಕು ಎನ್ನುವ ಆಸೆ ಆತನಿಗೆ ಇಲ್ಲ. ಆದರೆ ವನಜಾಗೆ ದೊಡ್ಡ ಮಗಳ ಬಗ್ಗೆ ಬಹಳ ಆಸೆ ಇರುತ್ತದೆ.

ಆಸ್ತಿಗಾಗಿ ದಾಳ ಉರುಳಿಸಿದ ಜನಾರ್ಧನ್

ಆಸ್ತಿಯ ಆಸೆಗಾದರೂ ನನ್ನ ಮಗಳನ್ನು ಯಜಮಾನರು ಮನೆಗೆ ಕರೆದುಕೊಂಡು ಬರುತ್ತಾರೆ ಎಂದುಕೊಂಡಿದ್ದೆ. ಆದರೆ ಇದೀಗ ಅದು ಕೂಡ ಸುಳ್ಳಾಗಿದೆ ಎಂದು ಮನದಲ್ಲಿ ವನಜಾ ನೊಂದುಕೊಂಡು ಇರುತ್ತಾಳೆ. ಇತ್ತ ದೀಪಿಕಾ, ಪೂರ್ಣಿಮಾ ಬಳಿ ಬಂದು ನನ್ನನ್ನು ಕ್ಷಮಿಸಿ ಬಿಡಿ ಅಕ್ಕ, ನಾನು ನಿಮ್ಮ ಬಗ್ಗೆ ತಪ್ಪು ತಿಳಿದುಕೊಂಡು ಬಿಟ್ಟಿದ್ದೇನೆ. ನನಗೆ ನೀವೇ ಅಕ್ಕ. ನಿಮ್ಮನ್ನು ಬಿಟ್ಟರೆ ನಮಗೆ ಯಾರಿದ್ದಾರೆ. ದುಡುಕಿನಿಂದ ನಿಮ್ಮ ಜೊತೆ ಮಾತನಾಡಿದ್ದೇನೆ. ನನ್ನನ್ನು ಕ್ಷಮಿಸಿ ಎಂದು ಪೂರ್ಣಿಮಾ ಬಳಿ ಕ್ಷಮೆ ಕೇಳುತ್ತಾಳೆ. ದೀಪಿಕಾಳನ್ನು ನೋಡಿದ ಅವಿಗೆ ಬಹಳ ಖುಷಿ ಆಗುತ್ತದೆ. ಆಕೆ ಬದಲಾಗಿದ್ದಾಳೆ ಎನ್ನುವ ಸಂತಸವು ಮನೆ ಮಾಡಿದೆ.

More from Filmibeat

English summary
Shrirastu Shubhamasthu kannada serial today episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X