Shrirastu Shubhamasthu: ಅಭಿ ಮಾತು ಕೇಳಿ ತುಳಸಿಗೆ ಬೇಸರ; ತುಳಸಿಗೆ ದೀಪಿಕಾ ಅಡ್ಡಿಯಾಗುತ್ತಾಳ?
ಅಭಿ ಹುಟ್ಟುಹಬ್ಬಕ್ಕೆ ತುಳಸಿಗೆ ವಿಶೇಷವಾದ ಉಡುಗೊರೆಯೇ ಸಿಕ್ಕಿದೆ. ತುಳಸಿ ಮಾನ ಹರಾಜು ಹಾಕಬೇಕು ದೀಪಿಕಾಗೆ ಅವಮಾನವೇ ಆಗಿದೆ. ದೀಪಿಕಾಗೆ ಹೇಗಾದರೂ ಅಭಿ ಮನದಲ್ಲಿ ವಿಷದ ಬೀಜ ಬಿತ್ತಿ ಆತನನ್ನಯ ಮನೆಯವರ ವಿರುದ್ದ ಎತ್ತಿ ಕಟ್ಟುವ ಆಲೋಚನೆ. ಆದರೆ ಆಕೆ ಅಭಿ ಮನಸ್ಸನ್ನು ಕದಡಿಸುವ ಪ್ರಯತ್ನ ಪಡುತ್ತಾಳೆ. ಆದರೆ ಅದು ಸಾಧ್ಯ ಆಗದೇ ಇರುವುದನ್ನು ನೋಡಿ ಕೋಪಗೊಂಡು ಇರುತ್ತಾಳೆ.
ಕೊನೆಯ ಪ್ರಯತ್ನ ಎಂಬಂತೆ ಅಭಿ ಕೇಕ್ ಕಟ್ ಮಾಡುತ್ತಾನೆ. ಕಟ್ ಮಾಡಿದ ಕೇಕ್ ಪೀಸ್ ಅನ್ನು ಅಭಿ ಶಾರ್ವರಿಗೆ ತಿನ್ನಿಸಬೇಕು ಎನ್ನುವಷ್ಟರಲ್ಲಿ ಆತನ ಗೆಳೆಯರು ದಯವಿಟ್ಟು ಆ ಕೇಕ್ ಅನ್ನು ನಿನ್ನ ಅಮ್ಮನಿಗೆ ಕೊಡು ಎಂದು ಹೇಳುತ್ತಾರೆ. ಇದನ್ನು ಕೇಳಿದ ಅಭಿ ಮಾತ್ರ ಬಹಳ ಕೋಪ ಮಾಡಿಕೊಳ್ಳುತ್ತಾನೆ. ಇವರು ಯಾವತ್ತೂ ನನ್ನ ಅಮ್ಮ ಆಗಲು ಸಾಧ್ಯವೇ ಇಲ್ಲ, ನನ್ನ ಅಮ್ಮ ಎಂದರೆ ಎಷ್ಟು ಗತ್ತೂ ಗಾಂಭೀರ್ಯ ಇತ್ತು ಎನ್ನುತ್ತಾನೆ.

ಆಫೀಸ್‌ನಲ್ಲಿ ಅವರಷ್ಟು ಚೆಂದ ಇಂಗ್ಲೀಷ್ ಯಾರು ಮಾತನಾಡುತ್ತಾ ಇರಲಿಲ್ಲ. ಆದರೆ ಇದೀಗ ಅವರು ಇಲ್ಲ ಅವರನ್ನು ಕಳೆದುಕೊಂಡ ದುಃಖ ನನಗಿದೆ, ಅವರ ಸ್ಥಾನದಲ್ಲಿ ಇವರನ್ನು ಒಪ್ಪಿಕೊಳ್ಳಲು ನನ್ನಿಂದ ಸಾಧ್ಯ ಇಲ್ಲ, ಯಾಕೆಂದರೆ ಇವರಲ್ಲಿ ಅಮ್ಮನಲ್ಲಿ ಇರುವ ಒಂದು ಗುಣ ಕೂಡ ಇಲ್ಲ ಎಂದು ಎಲ್ಲರೆದುರು ಜೋರಾಗಿ ಹೇಳುತ್ತಾನೆ. ಇದನ್ನು ಕೇಳಿದ ತುಳಸಿಗೆ ಕೊಂಚ ಆಘಾತ ಆಗುತ್ತದೆ, ನಾನು ಯಾವತ್ತೂ ನನ್ನನ್ನು ಅಮ್ಮ ಎಂದು ಅಂದುಕೊಳ್ಳಿ ಎಂದುಕೊಂಡಿಲ್ಲ.
ತುಳಸಿಗೆ ಅವಮಾನ ಮಾಡಿದ ಅಭಿ
ನಾನು ನನ್ನ ಮಕ್ಕಳ ಹಾಗೆ ನಿಮ್ಮನ್ನು ನೋಡುತ್ತಿದ್ದೇನೆ, ನನ್ನ ಮಕ್ಕಳ ಮೇಲೆ ಎಷ್ಟು ಪ್ರೀತಿ ಕಾಳಜಿ ಇದೆಯೋ ಅಷ್ಟು ನಿಮ್ಮ ಮೇಲಿದೆ ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ. ತುಳಸಿಗೆ ಅಭಿ ಆ ರೀತಿ ಮಾತನಾಡಿದ್ದನ್ನು ನೋಡಿ ಮನೆಯವರಿಗೆಲ್ಲ ನೋವು ಆಗುತ್ತದೆ. ತುಳಸಿ ಅಮ್ಮ ನಮ್ಮ ಮನೆಗೆ ಏನೆಲ್ಲ ಮಾಡಿದ್ದಾರೆ. ಆದರೆ ನೀವು ಈ ರೀತಿ ಹೇಳುವುದು ತಪ್ಪು ಎಂದು ಪೂರ್ಣಿಮಾ ಹೇಳುತ್ತಾಳೆ.

ಅಭಿಯ ನಿಲುವೇನು?
ಅಭಿ ಮಾತ್ರ ನಾನೇನು ತಪ್ಪೇ ಮಾಡಿಲ್ಲ ಎನ್ನುವ ಹೇಗೆ ಇರುತ್ತಾನೆ. ಇದನ್ನೆಲ್ಲ ನೋಡಿದ ದೀಪಿಕಾಗೆ ಖುಷಿ ಆಗುತ್ತದೆ. ಆಕೆ ಹಚ್ಚಿದ ಬೆಂಕಿ ನಿಧಾನವಾಗಿ ಮನೆಯನ್ನೇ ಸುಡುತ್ತಿದೆ ಎಂದು ಖುಷಿಯಲ್ಲಿ ಇರುತ್ತಾಳೆ. ಜನಾರ್ಧನ್ ಕೂಡ ಇದನ್ನೆಲ್ಲ ನೋಡಿ ಎಂಜಾಯ್ ಮಾಡುತ್ತಿದ್ದಾನೆ. ಒಟ್ಟಿನಲ್ಲಿ ಅಭಿ ಕೋಪದಿಂದಾಗಿ ಬರ್ತ್‌ಡೇ ಚೆನ್ನಾಗಿ ಆಚರಣೆ ಮಾಡಿದ್ದರು. ಆದರೆ ಮನಸಿಗೆ ಯಾರಿಗೆ ಕೂಡ ಖುಷಿ ಇರಲಿಲ್ಲ.
ಒಬ್ಬಂಟಿಯಾಗಿ ಕುಳಿತ ತುಳಸಿ
ಇನ್ನೂ ರೂಮ್‌ನಲ್ಲಿ ಕುಳಿತುಕೊಂಡು ತುಳಸಿ ನಡೆದುದರ ಬಗ್ಗೆ ಯೋಚನೆ ಮಾಡುತ್ತಾಳೆ. ಹಾಗೆಯೇ ಆಕೆಗೆ ತಾನು ಬದಲಾಗಬೇಕು ಎನ್ನುವ ಮನೋಭಾವ ಕೂಡ ಮೂಡುತ್ತದೆ. ನಾನು ಬದಲಾಗಬೇಕು ಇಲ್ಲವಾದರೆ ಬಹಳ ಕಷ್ಟ ಆಗುತ್ತದೆ ನನಗೆ ಈ ಮನೆಯಲ್ಲಿ ಇರಲು, ಮನೆಯಲ್ಲಿ ಇರುವವರಿಗೆ ನನ್ನಿಂದಾಗಿ ಎಷ್ಟೆಲ್ಲ ಹಿಂಸೆ, ಎಂದುಕೊಳ್ಳುವ ವೇಳೆಗೆ ಮಾಧವ ಬರುತ್ತಾನೆ.
ಮಾಧವನ ಮಾತಿಗೆ ಖುಷಿಪಟ್ಟ ತುಳಸಿ
ತುಳಸಿ ಬಳಿ ಬಂದ ಮಾಧವ, ಸ್ವಾರಿ ತುಳಸಿಯವರೇ, ಅಭಿ ಆ ರೀತಿ ಮಾತನಾಡಬಾರದಾಗಿತ್ತು. ಆದರೆ ಏನು ಮಾಡುವುದು ಆ ತರ ಮಾತನಾಡುವುದು ರೂಢಿಸಿಕೊಂಡು ಇದ್ದಾನೆ. ನೀವೇನು ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ತುಳಸಿ, ನಾನು ಬದಲಾಗಬೇಕು ಅಂದುಕೊಂಡಿದ್ದೇನೆ. ನನ್ನಿಂದಾಗಿ ಈ ಮನೆಯವರಿಗೆ ಬಹಳ ತೊಂದರೆ ಆಗುತ್ತದೆ ಎನ್ನುತ್ತಾಳೆ. ನೀವು ಹೀಗೆಯೇ ಇರಿ ತುಳಸಿ ಅವರೇ, ಸುಮತಿ ಹುಟ್ಟಿ ಬೆಳೆದ ರೀತಿ ಬೇರೆ. ಆದುದರಿಂದ ಆಕೆ ಹಾಗೆ ಇದ್ದಳು, ನೀವು ಬೆಳೆದ ರೀತಿಯೇ ಬೇರೆ ಎಂದಾಗ ತುಳಸಿ ನಾನು ನನಗಾಗಿ ಬದಲಾಗಬೇಕು ಅಂದುಕೊಂಡಿದ್ದೇನೆ ಎನ್ನುತ್ತಾಳೆ. ಆಗ ಮಾಧವ ಖುಷಿಯಿಂದಲೇ ಒಪ್ಪಿಗೆ ಸೂಚಿಸುತ್ತಾನೆ.


Click it and Unblock the Notifications











