Shrirastu Shubhamasthu: ಪೂರ್ಣಿಮಾ ತಾಯಿ ವನಜಾ? ಸದ್ಯದಲ್ಲೇ ಸಿಗಲಿದೆ ಉತ್ತರ!
ಪೂರ್ಣಿಮಾ ತಾಯಿ ಯಾರು ಎನ್ನುವುದೇ ಇದೀಗ ಎಲ್ಲರ ಪ್ರಶ್ನೆಯಾಗಿತ್ತು. ಆದರೆ ಇದೀಗ ಆ ಪ್ರಶ್ನೆಗೆ ಉತ್ತರ ಸಿಗುವ ಸಮಯ ಹತ್ತಿರ ಬಂದಂತೆ ಕಾಣುತ್ತಿದೆ. ಪೂರ್ಣಿಮಾ ತನ್ನ ಮನಸ್ಸಿನ ನಿರಾಳತೆಗೋಸ್ಕರ ದೇವಸ್ಥಾನಕ್ಕೆ ಹೋಗುತ್ತಾಳೆ.
ದೇವರ ದರ್ಶನ ಪಡೆದಾದರೂ ತನ್ನ ಮನಸ್ಸಿನಲ್ಲಿರುವ ನೋವು ಹೋಗುತ್ತದೆ ಎನ್ನುವುದು ಆಕೆಗೆ ಇರುವ ಒಂದು ಸಣ್ಣ ಯೋಚನೆ ಅದಕ್ಕೋಸ್ಕರ ದೇವರ ಮೊರೆ ಹೋಗುತ್ತಾಳೆ. ಎಲ್ಲರೂ ಕೂಡ ನಿನಗೆ ಮಗುವಿಲ್ಲ ನೀನು ಬಂಜೆ ಎಂದೆಲ್ಲ ಪೂರ್ಣಿಮಳನ್ನು ನಿಂದಿಸುತ್ತಾರೆ. ಅದಕ್ಕೆ ಪೂರ್ಣಿಮ ಬಹಳ ತಲೆ ಕೆಡಿಸಿಕೊಳ್ಳುತ್ತಾಳೆ. ಮನೆಯವರು ಎಲ್ಲರೂ ನನ್ನ ಜೊತೆ ಇದ್ದಾರೆ . ಆದರೆ ನನಗೆ ಎಲ್ಲರೂ ಇದ್ದು ಇಲ್ಲದ ಹಾಗೆ ಇದ್ದೇನೆ. ನನಗೆ ದೇವರ ದರ್ಶನ ಮಾಡಿದರೆ ಸ್ವಲ್ಪ ಮನಸ್ಸು ಹಗುರ ಆಗಬಹುದೇನೋ ಎಂದು ಅಂದುಕೊಳ್ಳುತ್ತಾಳೆ ಪೂರ್ಣಿಮಾ.

ದೇವಸ್ಥಾನಕ್ಕೆ ಹೋಗುವ ವೇಳೆ ಪೂರ್ಣಿಮಾಗೆ ವನಜಾ ಸಿಗುತ್ತಾಳೆ. ಆಕೆ ಪೂರ್ಣಿಮಾ ಆರೋಗ್ಯ ವಿಚಾರಣೆ ಮಾಡಿದ ಬಳಿಕ ಮಾತನಾಡುತ್ತಾಳೆ. ನನ್ನ ಮಗಳಿಂದ ನಿಮಗೆ ತುಂಬಾ ತೊಂದರೆ ಆಗುತ್ತಿದೆ ಎಂದು ನನಗೆ ಗೊತ್ತು. ಆದರೆ ನಾನು ಅದೆಷ್ಟೇ ಬುದ್ಧಿವಾದ ಹೇಳಿದರು ಆಕೆ ಕೇಳುತ್ತಿಲ್ಲ. ಕೆಟ್ಟ ಹಾದಿಯಲ್ಲಿ ಆಕೆಯ ತಂದೆ ಆಕೆಯನ್ನು ಬೆಳೆಸಿದ್ದಾರೆ. ಅದೇ ರೀತಿ ತಂದೆಗೆ ತಕ್ಕ ಹಾಗೆ ಕುಣಿಯುತ್ತಾಳೆ ಎಂದು ಮನ ಬೇಸರ ಹಂಚಿಕೊಳ್ಳುತ್ತಾಳೆ.
ನನ್ನ ಮಗಳು ದೀಪಿಕಾಳಿಂದಾ ನಿನಗೆ ಏನಾದರು ಸಮಸ್ಯೆ ಆಗಿದ್ದರೆ ಹೇಳು ಎಂದಾಗ ಪೂರ್ಣಿಮಾ, ನನಗೆ ನಿಮ್ಮ ನೋವು ಅರ್ಥ ಆಗುತ್ತದೆ. ನಾನು ಇದನ್ನೆಲ್ಲ ಸಹಿಸಿಕೊಳ್ಳುತ್ತೇನೆ. ಹಾಗೆಯೇ ಆಕೆಯನ್ನು ನಾನು ಪ್ರೀತಿ ಮಾಡುತ್ತೇನೆ ಎಂದಾಗ ವನಜಾಗೆ ಬಹಳ ಖುಷಿ ಆಗುತ್ತದೆ. ನಿನ್ನಂತಹ ಒಬ್ಬ ಮಗಳು ನನಗೆ ಸಿಕ್ಕಿದ್ದರೆ ನಾನು ಅದೆಷ್ಟು ಆನಂದ ಪಡುತ್ತಿದ್ದೇನೋ ಏನೋ ಎಂದು ಹೇಳಿ ಪೂರ್ಣಿಮಾಳನ್ನು ತಬ್ಬಿಕೊಂಡು ಕಣ್ಣೀರು ಇಡುತ್ತಾಳೆ. ಪೂರ್ಣಿಮಾಗೆ ತನ್ನ ತಾಯಿಯನ್ನೇ ತಬ್ಬಿಕೊಂಡಷ್ಟು ಮನಸ್ಸಿಗೆ ಖುಷಿ ಸಿಗುತ್ತದೆ. ಇತ್ತ ತುಳಸಿ ಮಕ್ಕಳ ಪ್ರೀತಿಯನ್ನು ಬಯಸುತ್ತಿರುತ್ತಾಳೆ .
ತುಳಸಿಗೆ ಮಕ್ಕಳನ್ನು ನೋಡುವ ಬಯಕೆ
ಸಮರ್ಥ್‌ನನ್ನು ನೋಡಬೇಕು ಆತನ ಜೊತೆ ಮಾತನಾಡಬೇಕು ಎಂದು ತುಳಸಿ ಆಸೆ ಇಟ್ಟುಕೊಂಡು ಇರುತ್ತಾಳೆ . ಆದರೆ ಸಮರ್ಥ್ ಬರುವ ಮುಂಚೆಯೇ ಅವಿನಾಶ್ ಬರುತ್ತಾನೆ. ಅವಿಯನ್ನು ನೋಡಿದ ತುಳಸಿಗೆ ಬಹಳ ಖುಷಿ ಆಗುತ್ತದೆ . ಅವಿ, ತುಳಸಿಯನ್ನು ಅಮ್ಮ ಎಂದೇ ತಿಳಿದುಕೊಂಡು ಆರೈಕೆ ಮಾಡುತ್ತಿದ್ದಾನೆ.

ದೀಪಿಕಾಗೆ ಅಭಿ ವಾರ್ನಿಂಗ್
ಇತ್ತ ಅಭಿ, ದೀಪಿಕಾಗೆ ಅನ್ನಬಾರದಾ ಮಾತುಗಳನ್ನು ಹೇಳಿ ಆಕೆಯ ಮನಸ್ಸಿಗೆ ನೋವು ನೀಡಿದ್ದಾನೆ. ಪೂರ್ಣಿಮಾಗೆ ದೀಪಿಕಾ ಇಲ್ಲಸಲ್ಲದ ಮಾತುಗಳಿಂದ ನಿಂದನೆ ಮಾಡುತ್ತಿರುತ್ತಾಳೆ. ಆಗ ಪೂರ್ಣಿಮಾ ಸೈಲೆಂಟ್ ಆಗಿಯೇ ಇರುತ್ತಾಳೆ. ಮನಸ್ಸಿಗೆ ನಾಟುವ ಹಾಗೆ ಮಾತನಾಡಿದಾಗ ಪೂರ್ಣಿಮಾಗೆ ನೋವಾಗುತ್ತದೆ. ಏನು ಮಾಡಬೇಕು ಎಂದು ತಿಳಿಯದಾಗುತ್ತದೆ. ಗರಂ ಆಗುತ್ತಾಳೆ. ಆಗ ಅಲ್ಲಿಗೆ ಬಂದ ಅಭಿ, ಇದರಲ್ಲಿ ನನ್ನ ಅತ್ತಿಗೆಯದ್ದು ಯಾವುದೇ ತಪ್ಪಿಲ್ಲ. ಇಲ್ಲಿ ತಪ್ಪಿರುವುದು ನಿನ್ನದೇ ದೀಪಿಕಾ ಎನ್ನುತ್ತಾನೆ.
ಅಭಿ ಮಾತಿಗೆ ದೀಪಿಕಾ ಶಾಕ್
ದೀಪಿಕಾ ನಿನ್ನ ಅಕ್ಕನಿಗೆ ಕ್ಷಮೆ ಕೇಳು ಎಂದು ಅಭಿ ಕಟುವಾಗಿ ಹೇಳುತ್ತಾನೆ. ಇದನ್ನು ಕೇಳಿದ ದೀಪಿಕಾ ನನ್ನನು ಕ್ಷಮಿಸಿ ಎಂದು ಅಲ್ಲಿಂದ ಮೆತ್ತಗೆ ಹೋಗುತ್ತಾಳೇ. ದೀಪಿಕಾಗೆ ಬಹಳ ಕೋಪ ಬರುತ್ತದೆ. ಹೇಗಾದರೂ ಮಾಡಿ ಅಭಿಯಿಂದ ಮನೆಯವರನ್ನೆಲ್ಲ ದೂರ ಮಾಡಲೇ ಬೇಕು. ಇಲ್ಲವಾದರೆ ಅಭಿ ಮತ್ತಷ್ಟು ಹೆಚ್ಚಿಕೊಳ್ಳುತ್ತಾನೆ ಎಂದು ಮನದಲ್ಲಿ ಹೇಳಿಕೊಳ್ಳುತ್ತಾಳೆ.


Click it and Unblock the Notifications











