Shrirastu Shubhamasthu: ಪೂರ್ಣಿಮಾಗೆ ಎದುರು ಮಾತನಾಡಿದ ದೀಪಿಕಾ

By ಪ್ರಿಯಾ ದೊರೆ

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ತುಳಸಿ ಅನ್ನು ನೋಡಲೆಂದು ಬಂದ ಶಾರ್ವರಿ ಮನೆಯಿಂದ ಫೋನ್ ಬಂತೆಂದು ವಾಪಸ್ ಹೋಗುತ್ತಾಳೆ. ಈ ಸಲವೂ ಶಾರ್ವರಿಗೆ ತುಳಸಿ ಯಾರು ಎಂದು ನೋಡಲು ಆಗುವುದಿಲ್ಲ. ಶಾರ್ವರಿ, ತುಳಸಿಯನ್ನು ನೋಡಬಾರದು ಎನ್ನುವ ಕಾರಣಕ್ಕೆ ಮಹೇಶ್ ಈಗ ಬೇಕಂತಲೇ ಮಂಚದಿಂದ ಕೆಳಗೆ ಬೀಳುತ್ತಾರೆ. ಹೀಗಾಗಿ ಶಾರ್ವರಿ ಮನೆಗೆ ವಾಪಸ್ ಬರುವಂತೆ ಆಗಿದೆ.

ಮಹೇಶ್ ಮೂವ್‌ಮೆಂಟ್ಸ್ ಮಾಡುತ್ತಿರುವುದು ಈಗ ಅವಿ, ಪೂರ್ಣಿಮಾ, ಮಾಧವ್ ಎಲ್ಲರಿಗೂ ಗೊತ್ತಾಗಿದೆ. ಇದರಿಂದ ತಮ್ಮ ಹುಷಾರಾಗುತ್ತಿದ್ದಾನೆ ಎಂದು ಮಾಧವ್‌ಗೆ ಫುಲ್ ಖುಷಿಯಾಗಿದೆ. ತುಳಸಿಗೆ ಆಸ್ಪತ್ರೆಯಲ್ಲಿ ಪ್ರಜ್ಞೆ ಬಂದಿದ್ದು, ಅವಳನ್ನು ಮನೆಗೆ ಕರೆದುಕೊಂಡು ಬಂದಾಗಿದೆ. ತುಳಸಿ ಬಗ್ಗೆ ಬಹಳ ಮುತುವರ್ಜಿ ವಹಿಸಿ ಮಾಧವ್ ನೋಡಿಕೊಂಡಿದ್ದಾನೆ. ತುಳಸಿಯ ಆಸ್ಪತ್ರೆ ಬಿಲ್ ಅನ್ನು ಕೂಡ ಮಾಧವ್ ಕಟ್ಟಿದ್ದಾನೆ.

Shrirastu Shubhamasthu serial 02nd June Episode Written Update

ದತ್ತ ತಾತನ ಬಳಿ ಈಗ ಹಣವೂ ಇಲ್ಲ. ಇದರಿಂದಾಗಿ ಮಾಧವ್ ಗೆ ಹಣವನ್ನು ವಾಪಸ್ ಮಾಡಲು ಆಗುತ್ತಿಲ್ಲ. ಹಾಗಾಗಿ ಮಾಧವ್ ಬಳೀ ಹಣವನ್ನು ಹಿಂದಿರುಗಿಸಲು ಸಮಯ ಕೇಳಿದ್ದಾನೆ. ಮಾಧವ್ ಈ ಹಣ ತನಗೆ ಬೇಡ ಎಂದರೂ ದತ್ತ ತಾತ ಕೇಳುತ್ತಿಲ್ಲ. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಆಗಬಾರದು. ಸ್ವಲ್ಪ ಸಮಯ ಕೊಡು ನಿನ್ನ ಹಣವನ್ನು ಹಿಂದಿರುಗಿಸುತ್ತೇನೆ ಎಂದು ಒತ್ತಾಯ ಮಾಡುತ್ತಾರೆ. ಬೇರೆ ದಾರಿ ಇಲ್ಲದೇ ಮಾಧವ್ ಕೂಡ ಸರಿ ಎಂದು ಹೇಳುತ್ತಾರೆ.

ಮೊಮ್ಮಕ್ಕಳಿಗೆ ಬೈದ ದತ್ತ ತಾತ

ಇನ್ನು ಸಂಧ್ಯಾ ಮತ್ತು ಸಮರ್ಥ್ ಇಬ್ಬರೂ ತುಳಸಿಗೆ ಬೈದಿದ್ದಕ್ಕೆ ಹೀಗೆಲ್ಲಾ ಆಗಿದೆ. ಸಮರ್ಥ್‌ಗೆ ತಾನು ಮಾಡಿದ್ದರ ಬಗ್ಗೆ ಪಶ್ಚಾತಾಪವಿದೆ. ಆದರೆ, ಸಂಧ್ಯಾ ಮತ್ತೆ ಸಮರ್ಥ್ ಕಿವಿಯನ್ನು ಊದುತ್ತಿದ್ದಾಳೆ. ಅಮ್ಮನಿಗೆ ಹೀಗೆಲ್ಲಾ ಆಗುವುದಕ್ಕೆ ಮಾದವ್ ಕಾರಣ. ಅಮ್ಮನಿಗೆ ಈ ವಯಸ್ಸಲ್ಲಿ ಇದೆಲ್ಲಾ ಬೇಕಿರಲಿಲ್ಲ ಎಂದು ಹೇಳುತ್ತಿರುತ್ತಾಳೆ. ಇದನ್ನು ಕೇಳಿಸಿಕೊಂಡು ಬರುವ ದತ್ತ ತಾತ ಮತ್ತೆ ಮೊಮ್ಮಕ್ಕಳಿಗೆ ಬೈಯುತ್ತಾರೆ. ಅಮ್ಮನನ್ನು ನೋಡಿಕೊಳ್ಳುವ ಬದಲು ಬೇಡದ ಮಾತುಗಳನ್ನು ಆಡುತ್ತಿದ್ದೀರಾ. ತುಳಸಿಗೆ ಹೀಗಾಗಲು ನೀವುಗಳೇ ಕಾರಣ. ಅವಳು ಬದುಕಿರಲು ಮಾಧವ್ ಕಾರಣ ಎಂದು ಹೇಳುತ್ತಾರೆ.

Shrirastu Shubhamasthu serial 02nd June Episode Written Update

ನಿಲ್ಲದ ದೀಪಿಕಾ ಅಭಿ - ಜಗಳ

ಅಭಿ ಆಫಿಸ್ ಟೆನ್ಷನ್‌ನಲ್ಲಿ ಇದ್ದಾನೆ. ಆದರೆ, ದೀಪಿಕಾಳಿಗೆ ತನ್ನ ಬಗ್ಗೆ ಅಭಿ ಗಮನ ಹರಿಸುತ್ತಿಲ್ಲ ಎನ್ನುವುದೇ ದೊಡ್ಡ ವಿಚಾರವಾಗಿದೆ. ಹೀಗಾಗಿ ಇಬ್ಬರೂ ಪದೇ ಪದೇ ಜಗಳ ಮಾಡುತ್ತಿದ್ದಾರೆ. ಶಾಪಿಂಗ್‌ನಿಂದ ಬಂದ ದೀಪಿಕಾ ಸುಮ್ಮನಿರದೇ ಮತ್ತೆ ಜಗಳ ತೆಗೆದಿದ್ದಾಳೆ. ನಿನಗೆ ನನ್ನ ಬಗ್ಗೆ ಕಾಳಜಿ ಇಲ್ಲ ಎಂದು ಅಭಿಯನ್ನು ದೂರಿದ್ದಾಳೆ. ಅಭಿ ಕೂಡ ತಾಳ್ಮೆ ಮೀರಿ ದೀಪಿಕಾಳನ್ನು ಬೈಯುತ್ತಾನೆ. ಇಬ್ಬರೂ ಮನೆಯ ಹಾಲ್‌ನಲ್ಲಿ ಜಗಳ ಮಾಡುತ್ತಿರುತ್ತಾರೆ. ಇದೇ ಸಂದರ್ಭದಲ್ಲಿ ಅಲ್ಲಿಗೆ ಪೂರ್ಣಿಮಾ ಬರುತ್ತಾಳೆ. ಇದರಿಂದ ಅಭಿ ಹಾಗೂ ದೀಪಿಕಾಳಿಗೆ ಮತ್ತಷ್ಟು ಮುಜುಗರವಾಗುತ್ತದೆ.

ದೀಪಿಕಾಳಿಗೆ ಬುದ್ಧಿ ಹೇಳಿದ ಪೂರ್ಣಿಮಾ

ಊಟಕ್ಕೆ ದೀಪಿಕಾ ಬಂದಾಗ ಪೂರ್ಣಿ ಸಲುಗೆಯಿಂದ ಬುದ್ಧಿಯನ್ನು ಹೇಳುತ್ತಾಳೆ. ಇದು ಕೂಡು ಕುಟುಂಬ. ಅಭಿ ನಿನ್ನನ್ನು ತುಂಬಾ ಪ್ರೀತಿಸುತ್ತಾನೆ. ಅವನು ಈಗ ಹೊಸ ಬಿಸಿನೆಸ್‌ ಮಾಡುವ ತಲೆ ಬಿಸಿಯಲ್ಲಿದ್ದಾನೆ. ಇಂಥಹ ಸಂದರ್ಭದಲ್ಲಿ ನೀನು ಅವನಿಗೆ ಸಪೋರ್ಟಿವ್ ಆಗಿರಬೇಕು ಎಂದು ಹೇಳುತ್ತಾಳೆ. ಕೋಪ ಮಾಡಿಕೊಂಡ ದೀಪಿಕಾ ನನಗೆ ಬುದ್ಧಿ ಹೇಳುವುದಕ್ಕೆ ಅಪ್ಪ-ಅಮ್ಮ ಇದ್ದಾರೆ. ನಿನ್ನ ತರಹ ಯಾರು ಇಲ್ಲದವಳಲ್ಲ ಎಂದು ಹೇಳುತ್ತಾಳೆ. ಆಗ ದೀಪಿಕಾ ಮಾತನ್ನು ಮನೆಯವರೆಲ್ಲಾ ಕೇಳಿಸಿಕೊಳ್ಳುತ್ತಾರೆ.

More from Filmibeat

English summary
Shrirastu Shubhamasthu serial 02nd June Episode Written Update. here is details about Tulasi comes home from hospital. Datha asks time to return money for madhav. know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X