Shrirastu Shubhamasthu: ಶಾರ್ವರಿಯನ್ನು ಸಿಕ್ಕಿ ಬೀಳಿಸಿದ ಮಾತ್ರೆ: ತುಳಸಿ ಪ್ರಶ್ನೆಗೆ ಸಿಗುತ್ತಾ ಉತ್ತರ..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಂಧ್ಯಾ, ಸಿರಿ ಒಡವೆಗಳನ್ನು ಅಡವಿಟ್ಟು, ಡುಪ್ಲಿಕೇಟ್ ಒಡವೆಗಳನ್ನು ಮನೆಯಲ್ಲಿಟ್ಟಿದ್ದಾಳೆ ಎಂಬ ಸತ್ಯ ಪ್ರಸಾದ್‌ಗೂ ಗೊತ್ತಾಗಿದೆ.
ಸಮರ್ಥ್‌ಗೆ ಸತ್ಯ ಹೇಳುವುದಾಗಿ ಪ್ರಸಾದ್, ಸಂಧ್ಯಾಳನ್ನು ಬೆದರಿಸಿದ್ದು, ಸಂಧ್ಯಾ ಹಾಗೇನಾದರೂ ಮಾಡಿದರೆ, ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾಳೆ.
ಸಮರ್ಥ್ ಬೆಳಗ್ಗೆ ಬೇಗನೇ ಎದ್ದು, ಒಡವೆಗಳನ್ನು ಚಿನ್ನದ ಅಂಗಡಿಗೆ ತೆಗೆದುಕೊಂಡು ಹೋಗಿದ್ದಾನೆ. ಒಡವೆ ಅಡವಿಟ್ಟು, ಹಣ ಪಡೆಯಲು ಮುಂದಾಗಿದ್ದಾನೆ.

ಒಡವೆ ಅಡವಿಟ್ಟ ಸಮರ್ಥ್
ಚಿನ್ನದ ಅಂಗಡಿಯಲ್ಲಿ ಸಮರ್ಥ್ ಒಡವೆಗಳನ್ನು ಅಡವಿಟ್ಟಿದ್ದಾನೆ. ಆದರೆ, ಅಲ್ಲಿ ಒಡವೆಗಳನ್ನು ಪರೀಕ್ಷಿಸಿದ ಅಂಗಡಿಯವರು, ಸಮರ್ಥ್‌ಗೆ ಬೈದು ಅವಮಾನಿಸಿದ್ದಾರೆ. ಇದರಿಂದ ಕೋಪ ಮಾಡಿಕೊಂಡು ಸಮರ್ಥ್ ಮನೆಗೆ ಬಂದು ಸಿರಿಗೆ ಬೈದಿದ್ದಾನೆ. ನಕಲಿ ಒಡವೆಗಳನ್ನು ಯಾಕೆ ಕೊಟ್ಟು ಅವಮಾನ ಮಾಡಿಸಿದೆ ಎಂದು ಪ್ರಶ್ನೆ ಮಾಡುತ್ತಾನೆ. ಆಗ ಸಿರಿ ಇಲ್ಲ ಸಮರ್ಥ್ ಇದೆಲ್ಲವೂ ಒರಿಜಿನಲ್. ನಾನೇ ನನ್ನ ಅಪ್ಪನ ಜೊತೆಗೆ ಹೋಗಿ ತೆಗೆದುಕೊಂಡು ಬಂದಿದ್ದು ಎನ್ನುತ್ತಾಳೆ. ಆಗ ಸಮರ್ಥ್ ಅಂದರೆ, ನಮ್ಮ ಮನೆಯಲ್ಲೇ ಯಾರೋ ಇದನ್ನು ನಕಲಿ ಮಾಡಿಸಿ ಇಟ್ಟಿದ್ದಾರಾ? ಎಂದು ಪ್ರಶ್ನಿಸುತ್ತಾನೆ.
ಸಂಧ್ಯಾ ಬಣ್ಣ ಬಯಲಾಗುತ್ತಾ..?
ಸಮರ್ಥ್ ಹೀಗೆ ಪ್ರಶ್ನೆ ಮಾಡುವ ವೇಳೆಗೆ ಮನೆಯವರೆಲ್ಲರೂ ಸಂಧ್ಯಾಳ ಕಡೆ ನೋಡುತ್ತಾರೆ. ಇದು ಇವಳದ್ದೇ ಕೆಲಸವಿರಬೇಕು ಎಂದು ಅನುಮಾನಿಸುತ್ತಾರೆ. ಆಗ ಸಂಧ್ಯಾ ಅಯ್ಯೋ.. ನನ್ನನ್ನು ಯಾಕೆ ಹಾಗೆ ನೋಡುತ್ತೀರಾ? ನಾನು ಗರ್ಭಿಣಿ. ಹಾಗೆಲ್ಲಾ ನನ್ನ ಮೇಲೆ ಅನುಮಾನ ಪಡಬೇಡಿ ಎಂದು ಹೇಳುತ್ತಾಳೆ. ಆದರೆ, ಸಮರ್ಥ್ ಸತ್ಯ ಹೇಳದಿದ್ದರೆ, ನಿನ್ನನ್ನು ಸುಮ್ಮನೆ ಬಿಡುವ ಮಾತೇ ಇಲ್ಲ ಎಂದು ಹೇಳುತ್ತಾನೆ. ದತ್ತ ತಾತ, ಸಂಧ್ಯಾ ಬಾಯಿ ಬಿಡಿಸಲು ಮಾತೆಲ್ಲಾ ಸಾಲದು ಎಂದು ಹೇಳಿ, ಪ್ರಸಾದ್‌ಗೆ ದೇವರ ಮನೆಯಿಂದ ತಟ್ಟೆಗೆ ಕರ್ಪೂರ ಹಚ್ಚಿಕೊಂಡು ಬರಲು ಹೇಳುತ್ತಾನೆ. ಸಂಧ್ಯಾ ಬಣ್ಣ ಬಯಲಾಗುವುದಂತೂ ಪಕ್ಕಾ ಆಗಿದೆ.

ಶಾರ್ವರಿ ಆಫಿಸ್ ಕೆಲಸದಲ್ಲಿ ಬ್ಯುಸಿ
ಇತ್ತ ತುಳಸಿ, ಮಹೇಶ್‌ಗೆ ತಿಂಡಿ ತೆಗೆದುಕೊಂಡು ಹೋಗುತ್ತಾಳೆ. ಶಾರ್ವರಿ ಆಫಿಸ್ ಕೆಲಸದಲ್ಲಿ ಬ್ಯುಸಿ ಇರುತ್ತಾಳೆ. ಆದರೆ, ತುಳಸಿಗೆ ತಿಂಡಿ ತಿನ್ನಿಸಬೇಡಿ. ನಿಧಿ ಆ ಕೆಲಸ ಮಾಡುತ್ತಾಳೆ ಎನ್ನುತ್ತಾಳೆ. ತುಳಸಿ ರೂಮ್‌ಗೆ ಹೋಗಿರುವುದನ್ನು ನೋಡಿರುವ ಶಾರ್ವರಿಗೆ ಕೆಲಸದಲ್ಲಿ ಗಮನವೇ ಇರುವುದಿಲ್ಲ.
ಮಾತ್ರೆ ಬಗ್ಗೆ ಪ್ರಶ್ನಿಸಿದ ತುಳಸಿ
ಶಾರ್ವರಿ ಚಿಕ್ಕಮ್ಮನಲ್ಲಿ ಆದ ಬದಲಾವಣೆಯನ್ನು ಅಭಿ ಮತ್ತು ಅವಿನಾಶ್ ಇಬ್ಬರೂ ಬಹಳ ಹತ್ತಿರದಿಂದ ಗಮನಿಸುತ್ತಾರೆ. ತುಳಸಿ, ಮಹೇಶ್‌ಗೆ ತಿಂಡಿ ತಿನ್ನಿಸಿ ಯಾವ ಮಾತ್ರೆ ಕೊಡಬೇಕು ಎಂದು ಕೇಳಿದ್ದಕ್ಕೆ ನಿಧಿ ಹಳೆಯ ಮಾತ್ರೆಯನ್ನೇ ಕೊಡುತ್ತಾಳೆ. ಈ ಬಗ್ಗೆ ಶಾರ್ವರಿಗೆ ರೂಮಿಗೆ ಬರುತ್ತಿದ್ದಂತೆ ತುಳಸಿ ಪ್ರಶ್ನೆ ಮಾಡುತ್ತಾಳೆ.
ಸುಳ್ಳು ಹೇಳಿದ ಶಾರ್ವರಿ
ಈ ಮಾತ್ರೆಯನ್ನು ತೆಗೆದುಕೊಂಡರೆ ಮಹೇಶ್ ಅವರಿಗೆ ನಿದ್ದೆ ಬರುತ್ತದೆ. ಅಲ್ಲದೇ, ಅವರು ಚೇತರಿಸಿಕೊಳ್ಳಲು ಆಗುವುದಿಲ್ಲ ಎಂದು ವೈದ್ಯರು ಹೇಳಿದ್ದರೂ ಕೂಡ ನೀವು ಇದೇ ಮಾತ್ರೆಯನ್ನು ಯಾಕೆ ಕೊಡುತ್ತೀರಾ? ಎಂದು ಶಾರ್ವರಿಯನ್ನು ತುಳಸಿ ಪ್ರಶ್ನೆ ಮಾಡುತ್ತಾಳೆ. ತುಳಸಿ ಮನೆಯಲ್ಲಿ ಬೇರೆಯವರ ಬಳಿ ಈ ವಿಚಾರ ಹೇಳಬಾರದು ಎಂಬ ಕಾರಣಕ್ಕೆ, ನಾಟಕ ಮಾಡುತ್ತಾಳೆ. ಹೊಸ ಪ್ಲಾನ್ ಮಾಡಿ, ಮಹೇಶ್ ನೀವಂದುಕೊಂಡಂತೆ ಒಳ್ಳೆಯವನಲ್ಲ. ಅವನು ನನಗೆ ಚಿತ್ರ ಹಿಂಸೆ ಕೊಡುತ್ತಾನೆ ಎಂದು ಕಣ್ಣೀರು ಹಾಕಿದ್ದಾಳೆ. ತುಳಸಿ ಈಗ ಶಾರ್ವರಿ ಹೇಳುವ ಮಾತುಗಳನ್ನು ಕೇಳಿ ನಂಬುತ್ತಾಳಾ? ಎಂಬುದನ್ನು ಮುಂದೆ ನೋಡಬೇಕಿದೆ.


Click it and Unblock the Notifications











