Shrirastu Shubhamasthu: ತುಳಸಿಗೆ ಮಲ್ಲಿಗೆ ಹೂ ಕೊಡಿಸಿದ ಮಾಧವ್

By ಪ್ರಿಯಾ ದೊರೆ

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಶಾರ್ವರಿಗೆ ತುಳಸಿಯನ್ನು ಹುಡುಕುವುದು ದೊಡ್ಡ ಕೆಲಸವಾಗಿದೆ. ಪಕ್ಕದಲ್ಲೇ ಇದ್ದರೂ ಶಾರ್ವರಿ ಕಣ್ಣಿಗೆ ತುಳಸಿ ಬೀಳುತ್ತಿಲ್ಲ. ಇತ್ತ ಮಾಧವ್‌ಗೆ ವೇದಾಂತ್ ಹೇಳಿದ ಮಾತುಗಳೇ ಕಿವಿಯಲ್ಲಿ ಗೂಯ್ ಗುಡುತ್ತಿದೆ. ಹಾಗಾಗಿ ಮಾಧವ್ ಈಗ ಸದಾ ತುಳಸಿಯ ಸಾಂಗತ್ಯದ ಬಗ್ಗೆಯೇ ಯೋಚಿಸುತ್ತಿದ್ದಾನೆ. ಇದು ಮುಂದೆ ಯಾವ ಸ್ವರೂಪ ಪಡೆಯುತ್ತೋ ಕಾದು ನೋಡಬೇಕಿದೆ.

ಇನ್ನು ಸಂಧ್ಯಾ ಸುಮ್ಮನಿರಲಾರದೆ ಮೈಯೆಲ್ಲಾ ಪರಚಿಕೊಂಡಳು ಎಂಬಂತಾಗಿದೆ. ಗಂಡನ ಮನೆಯಲ್ಲಿ ಕಷ್ಟ ಅನುಭವಿಸಲಾಗದೇ, ಅಮ್ಮನ ಮನೆಗೆ ಬಂದು ತಾತನ ಕೈಯಲ್ಲಿ ಸಿಕ್ಕಿ ಬಿದ್ದಿದ್ದಾಳೆ. ಸಂಧ್ಯಾ ಕೊಬ್ಬನ್ನು ಕರಗಿಸಬೇಕು ಎಂದು ದತ್ತ ತಾತ ಡಿಸೈಡ್ ಮಾಡಿ ಬಿಟ್ಟಿದ್ದಾರೆ. ಹಾಗಾಗಿ ಸಂಧ್ಯಾ ಕೈಯಲ್ಲಿ ಎಲ್ಲಾ ಕೆಲಸವನ್ನೂ ಮಾಡಿಸುತ್ತಿದ್ದಾರೆ. ಸಂಧ್ಯಾ ಕೂಡ ತವರು ಮನೆಗೆ ಬಂದಿದ್ದೀನಿ ಎಂದು ಸುಮ್ಮನಿರದೇ ಅವರ ತಾಯಿಗೆ ಜೋರು ಮಾಡುತ್ತಾಳೆ. ತಡವಾಗಿ ಬಂದಿದ್ಯಾಕೆ, ಯಾರು ಮೆಸೇಜ್ ಮಾಡಿದ್ದು ಎಂದೆಲ್ಲಾ ಪ್ರಶ್ನೆ ಮಾಡುತ್ತಾಳೆ.

Shrirastu Shubhamasthu serial 03rd May Episode Written Update

ಇದನ್ನೆಲ್ಲಾ ಗಮನಿಸುವ ದತ್ತ ತಾತ, ಸಂಧ್ಯಾಳಿಗೆ ಬೆಂಡೆತ್ತುತ್ತಾನೆ. ಬೇಕಂತಲೇ ಸಂಧ್ಯಾಳನ್ನು ಮಾರ್ಕೆಟ್‌ಗೆ ಕರೆದುಕೊಂಡು ಬಂದಿದ್ದು, ಸಂಧ್ಯಾಳ ಕೈಯಲ್ಲಿ ಭಾರ ಹೊರಿಸಿಕೊಂಡು ನಡೆಸುತ್ತಿದ್ದಾನೆ. ಸಂಧ್ಯಾಳಿಗೆ ಪಾಠ ಕಲಿಸಲೇಬೇಕು ಎಂದು ದತ್ತ ತಾತ ಮುಂದಾಗಿದ್ದಾರೆ. ಇದಕ್ಕಾಗಿ ಹೆಚ್ಚಿಗೆ ತರಕಾರಿಯನ್ನೇ ತಾತ ತೆಗೆದುಕೊಳ್ಳುತ್ತಿದ್ದಾರೆ.

ಇನ್ನು ತುಳಸಿಯನ್ನು ನೋಡಬೇಕು ಎಂದು ಶಾರ್ವರಿ ಕೂಡ ಇಂದು ಮಾರ್ಕೆಟ್‌ಗೆ ಬಂದಿದ್ದಾಳೆ. ತುಳಸಿ ಮತ್ತು ಮಾಧವ್ ಸದಾ ಖುಷಿಯಾಗಿರುತ್ತಾರೆ. ಮಾಧವ್ ನೆಮ್ಮದಿಯನ್ನು ಹಾಳು ಮಾಡಬೇಕು ಎಂದಿರುವ ಶಾರ್ವರಿಗೆ ಈಗ ತುಳಸಿ ಅಡ್ಡ ಆಗಿದ್ದಾಳೆ. ಅದಕ್ಕಾಗಿ ಅವಳನ್ನು ಒಮ್ಮೆ ನೋಡಿ, ಇಬ್ಬರನ್ನೂ ದೂರ ಮಾಡಬೇಕು ಎಂದು ಹರಸಾಹಸ ಪಡುತ್ತಿದ್ದಾಳೆ.

Shrirastu Shubhamasthu serial 03rd May Episode Written Update

ಒಮ್ಮೆ ತುಳಸಿಯನ್ನು ನೋಡಲು ಮನೆಗೆ ಹೋದಾಗ ದತ್ತ ತಾತ ಮಕ್ಕಳ ಕಳ್ಳಿ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಮಾರ್ಕೆಟ್‌ನಲ್ಲೂ ಶಾರ್ವರಿಯನ್ನು ದತ್ತ ತಾತ ನೋಡಿದ್ದು, ಸಿಕ್ಕಿ ಬಿದ್ದಿದ್ದಾಳೆ. ತಾತನಿಂದ ಎಸ್ಕೇಪ್ ಆಗಲು ಶಾರ್ವರಿ ಸೊಪ್ಪು ಮಾರುವವಳಂತೆ ಮುಸುಕು ಧರಿಸಿ ಕೂರುವಂತಾಗಿದೆ. ತಾತ, ಶಾರ್ವರಿಗೆ ಬೆನ್ನತ್ತಿದ ಬೇತಾಳದಂತಾಗಿದ್ದಾರೆ.

ಇತ್ತ ಶಾರ್ವರಿ ಪತಿ ಮಹೇಶ್‌ಗೆ ಸ್ವಲ್ಪ ಸ್ವಲ್ಪವೇ ಸ್ವಾಧೀನ ಬರುತ್ತಿದ್ದು, ಇದು ಆಕೆಗೆ ಗೊತ್ತಾಗಿದೆ. ಹೇಗಾದರೂ ಮಾಡಿ ಮನೆಯವರಿಗೆ ತಿಳಿಯದಂತೆ ನೋಡಿಕೊಳ್ಳಬೇಕು ಎಂದು ಶಾರ್ವರಿ ಕೆಲಸದವರನ್ನು ಬಿಟ್ಟಿದ್ದಾಳೆ. ಆದರೆ, ಮಾವನಿಗೆ ನಾನೇ ಊಟ ಮಾಡಿಸುತ್ತೇನೆ ಎಂದು ಬಂದ ಪೂರ್ಣಿಮಾ ಕೈಯನ್ನು ಮಹೇಶ್ ಹಿಡಿದುಕೊಂಡಿದ್ದಾರೆ. ಇದರಿಂದ ಪೂರ್ಣಿಮಾ ಶಾಕ್ ಆಗಿದ್ದಾಳೆ. ಮನೆಯಲ್ಲಿ ಎಲ್ಲರಿಗೂ ಹೇಳಬೇಕು. ವೈದ್ಯರನ್ನು ಕರೆಸಬೇಕು ಎಂದು ಪೂರ್ಣಿಮಾ ಮುಂದಾಗಿದ್ದಾಳೆ. ಆದರೆ, ಶಾರ್ವರಿ ಈಗ ಏನು ಮಾಡುತ್ತಾಳೋ ಗೊತ್ತಿಲ್ಲ.

Shrirastu Shubhamasthu serial 03rd May Episode Written Update

ಮಾಧವ್ ಹಾಗೂ ತುಳಿಸಿ ಇಬ್ಬರೂ ಮಾರ್ಕೆಟ್‌ನಲ್ಲಿ ತರಕಾರಿ ಖರೀದಿಸಿದ್ದಾರೆ. ಈ ವೇಳೆ ಯಾರೋ ಮಾತನಾಡಿಸಿದ್ದು, ಐಡಿಯಲ್ ಕಪಲ್ಸ್ ಎಂದು ಹೇಳುತ್ತಾರೆ. ಇದರ ಅರ್ಥವನ್ನು ತುಳಸಿ, ಮಾಧವ್ ಬಳಿ ಕೇಳುತ್ತಾಳೆ. ಆಗ ಮಾಧವ್ ಆದರ್ಶ ದಂಪತಿ ಎಂದು ಹೇಳಲು ಮುಜುಗರಗೊಂಡು ಆದರ್ಶ ಜೋಡಿ ಎಂದು ಹೇಳುತ್ತಾನೆ. ಆದರೆ ಈ ಮಾತಿಗೆ ತುಳಸಿ ಏನೂ ತಪ್ಪಾಗಿ ತಿಳಿದುಕೊಳ್ಳುವುದಿಲ್ಲ.

ಇನ್ನು ತುಳಸಿ ಮಲ್ಲಿಗೆ ಹೂವನ್ನು ನೋಡಿ ಆಸೆ ಪಟ್ಟರು ಎಂದು ಮಾಧವ್ ಕೊಡಿಸುತ್ತಾರೆ. ಆದರೆ ತುಳಸಿ ತಾನು ಮಲ್ಲಿಗೆ ಹೂವನ್ನು ಮೂಡಿಯುವಂತಿಲ್ಲ ಎನ್ನುತ್ತಾಳೆ. ಆಗ ಮಾಧವ್ ನಮ್ಮಿಷ್ಟ ಮುಖ್ಯ ಬೇರೆಯವರ ಬಗ್ಗೆ ಯೋಚಿಸಬೇಡಿ ಎಂದು ಹೇಳುತ್ತಾನೆ. ಇದೇ ಸಂದರ್ಭದಲ್ಲಿ ಸಂಧ್ಯಾ ಹಾಗೂ ದತ್ತ ತಾತ ಇದನ್ನು ನೋಡುತ್ತಾರೆ. ಈಗ ಏನಾಗುತ್ತದೋ ಗೊತ್ತಿಲ್ಲ.

More from Filmibeat

English summary
Shrirastu Shubhamasthu serial 03rd May Episode Written Update. Here is Details Madhav buys jasmine flower for Tulasi. Datta thatha saw this. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X