Shrirastu Shubhamasthu: ಮಾಧವ್‌ನನ್ನು ಅಣ್ಣ ಎಂದು ಕರೆದ ಮಹೇಶ್
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಸಿರಿಗೆ ನಂದಿನಿಯ ನಡವಳಿಕೆಯೇ ಇಷ್ಟವಾಗುವುದಿಲ್ಲ. ಸದಾ ಫೇಕ್ ಆಗಿ ನಡೆದುಕೊಳ್ಳುವ ನಂದಿನಿಯನ್ನು ನೋಡಿದಾಗಲೆಲ್ಲಾ ಸಿರಿ ಸಿಟ್ಟು ಮಾಡಿಕೊಳ್ಳುತ್ತಾಳೆ. ಅದರಲ್ಲೂ ನಂದಿನಿ ಬೇಕಂತಲೇ ತುಳಸಿ ಜೊತೆಗೆ ಬೀದಿಯಲ್ಲಿ ಜಗಳ ಮಾಡಿದಾಗಿನಿಂದ ಸಿರಿಗೆ ಅವಳ ಮೇಲೆ ಮತ್ತಷ್ಟು ಕೋಪ ಹೆಚ್ಚಾಗಿದೆ. ಆದರೆ ನಂದಿನಿ ಈಗೀಗ ಮತ್ತೆ ತುಳಸಿ ಮನೆಗೆ ಬರುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದಾಳೆ.
ಇದು ಸಿರಿಗೆ ಇರಿಟೇಟ್ ಮಾಡಿದ್ದು, ನಂದಿನಿಗೆ ನೇರವಾಗಿ ತನ್ನ ಮನದ ಮಾತುಗಳನ್ನು ಹೇಳಿದ್ದಾಳೆ. ಫೇಕ್ ಆಗಿ ನಡೆದುಕೊಳ್ಳುವ ನಂದಿನಿಯನ್ನು ಆದಷ್ಟು ದೂರ ಇಡಲು ಪ್ರಯತ್ನಿಸಿದ್ದಾಳೆ. ಶಾರ್ವರಿ ಪ್ರತಿ ಬಾರಿ ತುಳಸಿಯನ್ನು ನೋಡಲು ಹೋದಾಗೆಲ್ಲಾ ಏನಾದರೂ ಒಂದು ಸಮಸ್ಯೆ ಎದುರಾಗುತ್ತದೆ. ಮಾರ್ಕೆಟ್‌ನಲ್ಲೂ ತುಳಸಿಯನ್ನು ನೋಡಲು ಸಾಧ್ಯವಾಗದ ಕಾರಣ ಬೇಸರದಿಂದ ಮನೆಗೆ ಬಂದಿದ್ದಾಳೆ.

ಮನೆಗೆ ಬಂದ ಕೂಡಲೇ ಪೂರ್ಣಿಮಾ ಹಾಗೂ ಪಾಪಮ್ಮ ಬಂದು ಶಾರ್ವರಿಗೆ ಮಹೇಶ್ ವಿಚಾರ ತಿಳಿಸಿದ್ದಾರೆ. ಅವರಿಗೆ ಈಗ ಪ್ರಜ್ಞೆ ಬರುತ್ತಿದೆ ಎಂದು ಹೇಳುತ್ತಾಳೆ. ಇದಕ್ಕೋಸ್ಕರ ವೈದ್ಯರನ್ನೂ ಕರೆಸುವುದಾಗಿ ತಿಳಿಸುತ್ತಾಳೆ. ಆಗ ಶಾರ್ವರಿ ತಾನು ಮುಚ್ಚಿಡಬೇಕು ಎಂದುಕೊಂಡಿದ್ದ ವಿಚಾರ ತಿಳಿಯಿತಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾಳೆ. ವೈದ್ಯರನ್ನು ಕರೆಸುವುದು ವ್ಯರ್ಥ ಪೂರ್ಣಿಮಾ. ಈ ಸಣ್ಣಪುಟ್ಟ ಮೂವ್‌ಮೆಂಟ್ಸ್ ಮೊದಲಿನಿಂದಲೂ ಇದೆ. ಆದರೆ ಇದು ಪ್ರಯೋಜನವಿಲ್ಲ.
ನಾನು ಈ ರೀತಿ ಸುಮಾರು ಸಲ ಖುಷಿ ಪಟ್ಟಿದ್ದೀನಿ. ಈ ವಿಚಾರವನ್ನು ಯಾವುದೇ ಕಾರಣಕ್ಕೂ ಮಾಧವ್ ಭಾವನಿಗೆ ಹೇಳಬೇಡ. ಅವರು ಕೂಡ ಬೇಸರ ಮಾಡಿಕೊಳ್ಳುತ್ತಾರೆ ಎಂದು ಹೇಳುತ್ತಾಳೆ. ಇದಕ್ಕೆ ಪೂರ್ಣಿಮಾ ಸರಿ ಎಂದು ಹೇಳುತ್ತಾಳೆ.

ದತ್ತ ತಾತ, ಮಾಧವ್‌ನನ್ನು ನೋಡಿ ಮಾತನಾಡಿಸುತ್ತಾನೆ. ಆದರೆ, ಮಾಧವ್‌ಗೆ ಗಾಬರಿಯಾಗುತ್ತದೆ. ತುಳಸಿಗೆ ಹೂವು ಕೊಟ್ಟಾಗಲೇ ಬಂದ ಕಾರಣ ಮಾಧವ್ ಭಯಪಡುತ್ತಾನೆ. ತುಳಸಿ ಕೂಡ ಮಾವ ಬಂದಿದ್ದನ್ನು ನೋಡಿ ಗಾಬರಿಯಾಗುತ್ತಾಳೆ. ಆದರೆ ದತ್ತ ತಾತ, ಮಾಧವ್‌ನನ್ನು ಮ್ಯಾಚ್ ನೋಡಲು ಯಾಕೆ ಬರಲಿಲ್ಲ ಎಂದು ಗದರಿಸುತ್ತಾನೆ. ಆಗ ಮಾಧವ್ ಹಾಗೂ ತುಳಸಿಗೆ ಸಮಾಧಾನವಾಗುತ್ತದೆ. ಆದರೆ ಈ ವಿಚಾರ ಸಂಧ್ಯಾಳಿಗೆ ಸಿಟ್ಟು ಬರುವಂತೆ ಮಾಡುತ್ತದೆ.
ಮನೆಯಲ್ಲಿ ಸಂಧ್ಯಾ ಬೇಕಂತಲೇ ಜಗಳ ತೆಗೆಯುತ್ತಾಳೆ. ಕೆಲಸಕ್ಕೆ ಎಂದು ಹೇಳಿ ಮಾರ್ಕೆಟ್‌ನಲ್ಲಿ ಸುತ್ತಾಡುತ್ತಿದ್ದೆ ಎಂದೆಲ್ಲಾ ಪ್ರಶ್ನೆ ಮಾಡುತ್ತಾಳೆ. ಆಗ ದತ್ತ ತಾತನಿಗೆ ಕೋಪ ಬರುತ್ತದೆ. ಎಲ್ಲಿ ಬಚ್ಚಿಟ್ಟಿದ್ದೀಯಾ ಹೂವು ಎಂದೆಲ್ಲಾ ವ್ಯಂಗ್ಯವಾಗಿ ಮಾತನಾಡುತ್ತಾಳೆ. ದತ್ತ ತಾತ ನೀನು ಮಾಡಿದ ಸಾಲವನ್ನು ತೀರಿಸುವ ಸಲುವಾಗಿ ಅವಳು ಕೆಲಸಕ್ಕೆ ಹೋಗುತ್ತಿದ್ದಾಳೆ. ನೀನು ನೋಡಿದರೆ ಅವಳನ್ನು ಹೀಯಾಳಿಸುತ್ತಿದ್ದೀಯಾ. ಮೊದಲು ನಿನ್ನ ಮನಸ್ಸನ್ನು ಶುದ್ಧವಾಗಿಟ್ಟುಕೋ ಎನ್ನುತ್ತಾನೆ.
ಸಂಧ್ಯಾ ಬಾಯಿ ಮುಚ್ಚದೆ, ಕೆಲಸಕ್ಕೆ ಹೋಗುವ ನೆಪದಲ್ಲಿ ತಿರುಗಾಡುತ್ತಾರೆ ಎಂದಾಗ ದತ್ತ ತಾತನಿಗೆ ಕೋಪ ಬರುತ್ತದೆ. ಮಾಧವ್ ನಮ್ಮ ಮನೆಯ ಹಿತೈಷಿ, ಅವನಿಗೆ ತುಳಸಿ ಹೂ ಮುಡಿಯುವುದಿಲ್ಲ ಎಂಬುದು ಗೊತ್ತಿಲ್ಲ ಅನಿಸುತ್ತೆ. ಇನ್ನೊಂದು ದಿನ ತುಳಸಿ ಬಗ್ಗೆ ಕೆಟ್ಟದಾಗಿ ಮಾತನಾಡಬೇಡ ಎಂದು ಬೈದು ಕಳಿಸುತ್ತಾನೆ.
ಇನ್ನು ಮಾಧವ್, ಮಹೇಶ್ ಜೊತೆಗೆ ಮಾತನಾಡಬೇಕು ಎಂದು ರೂಮಿಗೆ ಬರುತ್ತಾನೆ. ತುಲಸಿಯ ಜೊತೆಗೆ ದಿನ ಹೇಗಿತ್ತು ಎಂಬುದನ್ನು ಖುಷಿಯಾಗಿ ಹಂಚಿಕೊಳ್ಳುತ್ತಾನೆ. ಆದರೆ, ಶಾರ್ವರಿಗೆ ಮಹೇಶ್‌ಗೆ ಸ್ವಾಧೀನ ಬರುತ್ತಿರುವುದು ಮಾಧವ್‌ಗೆ ಎಲ್ಲಿ ಗೊತ್ತಾಗುತ್ತದೋ ಎಂದು ಭಯದಲ್ಲಿರುತ್ತಾಳೆ. ಮಹೇಶ್, ಮಾಧವ್‌ನನ್ನು ಅಣ್ಣ ಎಂದು ಕರೆದಾಗಲೇ ಶಾರ್ವರಿ ಬೇಕಂತಲೇ ಬಾವ ಎಂದು ಕೂಗುತ್ತಾಳೆ. ಆದರೆ, ಮಾಧವ್‌ಗೆ ಮಹೇಶ್ ಧ್ವನಿ ಕೇಳಿಸಿದೆಯೋ ಇಲ್ಲವೋ ಎಂಬುದು ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.


Click it and Unblock the Notifications











