ದೀಪಿಕಾಗೆ ವಾರ್ನಿಂಗ್ ಕೊಟ್ಟ ಅಭಿ: ಪಶ್ಚಾತಾಪದಲ್ಲಿ ಬೇಯುತ್ತಿರುವ ಸಮರ್ಥ್

By ಪ್ರಿಯಾ ದೊರೆ

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಸಮರ್ಥ್ ತಂಗಿ ಸಂಧ್ಯಾ ಮಾತನ್ನು ಕೇಳಿಕೊಂಡು ಅವರ ತಾಯಿ ತುಳಸಿಗೆ ಬೈದಿರುತ್ತಾನೆ. ಮಾಧವ್ ಜೊತೆಗೆ ಓಡಾಡುವ ವಿಚಾರಕ್ಕೆ ಬೇಸರ ವ್ಯಕ್ತಪಡಿಸಿರುತ್ತಾನೆ. ಇದರಿಂದಲೇ ಅಮ್ಮನಿಗೆ ಅಪಘಾತವಾಯ್ತು ಎಂದು ಮನೆಯಲ್ಲಿ ಎಲ್ಲರೂ ಸಮರ್ಥ್‌ಗೆ ಬೈದಿರುತ್ತಾರೆ. ಸಿರಿ ಕೂಡ ಸಮರ್ಥ್ ಜೊತೆಗೆ ಮಾತನಾಡದೇ ಕೋಪ ಮಾಡಿಕೊಂಡಿರುತ್ತಾಳೆ. ಇದೇ ಕಾರಣಕ್ಕೆ ಸಮರ್ಥ್‌ ಮನಸ್ಸಿಗೆ ಕಷ್ಟವಾಗುತ್ತಿರುತ್ತದೆ.

ಸಿರಿಯನ್ನು ಮಾತನಾಡಿಸಲು ಎಷ್ಟು ಪ್ರಯತ್ನಿಸದರೂ ಕೋಪ ಮಾಡಿಕೊಂಡೇ ಇರುತ್ತಾಳೆ. ಇದರಿಂದ ಸಮರ್ಥ್‌ಗೆ ಇನ್ನಷ್ಟು ಬೇಸರವಾಗುತ್ತದೆ. ಸಿರಿ ಬಹಳ ಕೋಪ ಮಾಡಿಕೊಂಡಿರುತ್ತಾಳೆ. ಆತನಿಗೆ ಬುದ್ಧಿ ಹೇಳುತ್ತಾಳೆ. ಅಮ್ಮಾನೇ ಮಾತನಾಡಿಸಲು ಬಂದರೂ ನೀನು ಯಾಕೆ ಮಾತನಾಡಲಿಲ್ಲ. ಪಾಪ ಅಮ್ಮ, ಅಷ್ಟೆಲ್ಲಾ ಆಗೋದಕ್ಕೆ ನೀನೇ ಕಾರಣ. ಇನ್ಶುರೆನ್ಸ್ ಕೂಡ ಕಟ್ಟಿಲ್ಲ. ಸಂಧ್ಯಾ ಮಾತನ್ನು ಕೇಳಿಸಿಕೊಂಡು ಹೀಗೆಲ್ಲಾ ಮಾಡಬಾರದಿತ್ತು ಎನ್ನುತ್ತಾಳೆ.

Shrirastu Shubhamasthu serial 05th June Episode Written Update

ಕೊನೆಗೆ ಸಮರ್ಥ್, ನನ್ನನ್ನು ಕ್ಷಮಿಸು ಸಿರಿ. ನಾನು ಬೇಕಂತ ಮಾಡಿದ್ದಲ್ಲ. ನನ್ನ ತಪ್ಪೆಲ್ಲಾ ಅರ್ಥವಾಗಿದೆ ಎಂದು ಹೇಳುತ್ತಾನೆ. ಸಮರ್ಥ ಬಹಳ ಪಶ್ಚಾತಾಪದಿಂದ ನೊಂದುಕೊಂಡಿರುತ್ತಾನೆ. ಸಿರಿಗೆ ಸಮರ್ಥ್ ನನ್ನು ನೋಡಿ ಬೇಸರವಾಗುತ್ತದೆ. ಆಗಿದ್ದೆಲ್ಲಾ ಆಗಿ ಹೋಯ್ತು. ಅಮ್ಮನ ಬಳಿ ಮಾತನಾಡು ಎಂದು ಹೇಳುತ್ತಾಳೆ. ಸಮರ್ಥ್ ತುಳಸಿ ಆಸ್ಪತ್ರೆ ಬಿಲ್ ನ ಸಾಲವನ್ನು ತಾನೇ ತೀರಿಸುವುದಾಗಿ ಹೇಳುತ್ತಾನೆ.

ಸಮರ್ಥ್ ಮಾತಿಗೆ ಅತ್ತ ತುಳಸಿ

ಇನ್ನು ಸಮರ್ಥ್ ಮತ್ತು ಸಿರಿ ಮಾತನಾಡುವುದನ್ನು ಕೇಳಿಸಿಕೊಳ್ಳುವ ತುಳಸಿ ಅಳುತ್ತಾಳೆ. ತನ್ನ ಮಗ ಪಶ್ಚಾತಾಪದಿಂದ ಒದ್ದಾಡುತ್ತಿದ್ದಾನಲ್ಲ ಎಂದು ನೊಂದುಕೊಳ್ಳುತ್ತಾಳೆ. ಪಾಪುಗೆ ನನ್ನ ಬಳಿ ಹಾಗೆಲ್ಲಾ ಮಾತನಾಡಿದ್ದು ಬೇಸರವಾಗಿದೆ. ಅವನಿಗೆ ನನಗೇನು ನೋವಾಗಿಲ್ಲ ಎಂಬುದನ್ನು ಹೇಳಬೇಕು ಎಂದು ಮನದಲ್ಲೇ ಅಂದುಕೊಳ್ಳುತ್ತಾಳೆ.

ಸಂಧ್ಯಾ ಮೇಲೆ ತಾತನಿಗೆ ಅನುಮಾನ

ಆಸ್ಪತ್ರೆಯಿಂದ ತುಳಸಿ ಬಂದು ಒಂದೇ ದಿನ ಆಗಿದ್ದು, ಅದಾಗಲೇ ತುಳಸಿ ಬೆಳಗ್ಗೆ ಬೇಗ ಎದ್ದು ಎಂದಿನಂತೆ ಮನೆಯ ಕೆಲಸವನ್ನೆಲ್ಲಾ ಮಾಡಿದ್ದಾಳೆ. ದತ್ತ ತಾತ ರೆಸ್ಟ್ ಮಾಡು ತುಳಸಿ ಎಂದು ಹೇಳುತ್ತಾನೆ. ಆದರೂ ತುಳಸಿ ಕೇಳುವುದಿಲ್ಲ. ತಾತನ ಮನಸ್ಸಿಗೆ ಸಮಾಧಾನವಾಗುತ್ತದೆ. ತುಳಸಿ ಬೇಗ ಹುಷಾರಾಗಿದ್ದಕ್ಕೆ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. ಇನ್ನು ತಿಂಡಿ ತಿನ್ನುವಾಗ ಸಮರ್ಥ್‌ಗೆ ತಾತ ಬುದ್ಧಿ ಹೇಳುತ್ತಾರೆ. ಸಮರ್ಥ್ ಕೆಲಸ ಇದೆ ಎಂದು ಬೇಗ ಆಫೀಸ್‌ಗೆ ಹೋಗುತ್ತಾನೆ. ಇತ್ತ ಸಂಧ್ಯಾ ಬೆಳಗ್ಗಿನಿಂದ ಫೋನ್ ರಿಸೀವ್ ಮಾಡದೇ ಸೈಲೆಂಟ್‌ಗೆ ಹಾಕಿರುತ್ತಾಳೆ. ಹೀಗಿರುವಾಗಲೇ ತಾತನಿಗೆ ಅನುಮಾನ ಬರುತ್ತದೆ.

Shrirastu Shubhamasthu serial 05th June Episode Written Update

ಭಾವಿ ಹೆಂಡತಿಗೆ ಅಭಿ ಎಚ್ಚರಿಕೆ

ಇತ್ತ ಪೂರ್ಣಿಮಾಗೆ ದೀಪಿಕಾ ಕೋಪದಲ್ಲಿ ಬೈದಿರುತ್ತಾಳೆ. ಅದಕ್ಕೆ ಮಾಧವ್ ಅವಳ ಬಗ್ಗೆ ಹಾಗೆಲ್ಲಾ ಮಾತನಾಡಬೇಡ. ಪೂರ್ಣಿಮಾಗೆ ನಾವೆಲ್ಲರೂ ಇದ್ದೀವಿ. ಮತ್ಯಾವತ್ತೂ ಹೀಗೆಲ್ಲಾ ಮಾತನಾಡಿ ಅವಳಿಗೆ ನೋವು ಮಾಡಬೇಡ ಎಂದು ಹೇಳುತ್ತಾರೆ. ಅಭಿ ಕೂಡ ಕೋಪದಲ್ಲಿ ದೀಪಿಕಾಳಿಗೆ ಬೈಯುತ್ತಾನೆ. ಅತ್ತಿಗೆಗೆ ನೀನು ಹಾಗೆಲ್ಲಾ ಬೈದಿದ್ದು ತಪ್ಪು. ನನ್ನ ಹಿಂದೆ ಬಿದ್ದು ಬಂದವಳು ನೀನು. ಈ ಮನೆಗೆ ಹೊಂದುಕೊಂಡು ಬದುಕು ಎಂದು ಖಡಕ್ ಅಗಿ ವಾರ್ನ್ ಮಾಡುತ್ತಾನೆ.

ದೀಪಿಕಾಗೆ ಬುದ್ಧಿ ಹೇಳಿದ ಶಾರ್ವರಿ

ಇದರಿಂದ ದೀಪಿಕಾಳಿಗೆ ಕೋಪ ಬರುತ್ತದೆ. ಊಟ ಮಾಡದೇ ಹೋದ ದೀಪಿಕಾಳನ್ನು ಶಾರ್ವರಿ ಹೋಗಿ ಕರೆದುಕೊಂಡು ಬರುತ್ತಾಳೆ. ಈ ವಿಚಾರದ ಬಗ್ಗೆ ನಾನು ಆಮೇಲೆ ಮಾತನಾಡುತ್ತೀನಿ ಮೊದಲು ಊಟ ಮಾಡು ಎನ್ನುತ್ತಾಳೆ. ಬೆಳಗ್ಗೆ ದೀಪಿಕಾ ಏಳುವ ಮುಂಚೆಯೇ ರೂಮ್‌ಗೆ ಹೋಗುವ ಶಾರ್ವರಿ, ಈ ಮನೆಯಲ್ಲಿ ಎಲ್ಲರನ್ನೂ ಇಂಪ್ರೆಸ್ ಮಾಡು ಎಂದು ಕರೆಸಿಕೊಂಡಿದ್ದು. ಆದರೆ ನೀನು ಜಗಳ ಮಾಡುತ್ತಿದ್ದೀಯಾ ಎಂದು ಬೈಯುತ್ತಾಳೆ. ಮೊದಲು ಹೋಗಿ ಪೂರ್ಣಿಮಾಳನ್ನು ಕ್ಷಮೆ ಕೇಳು ಎನ್ನುತ್ತಾಳೆ. ಆದರೆ, ದೀಪಿಕಾಗೆ ಇಷ್ಟವಾಗುವುದಿಲ್ಲ.

More from Filmibeat

English summary
Shrirastu Shubhamasthu serial 05th June Episode Written Update. here is detials about Datha thatha feels doubt on Sandhya. She is hiding something from others. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X