Shrirastu Shubhamasthu: ಮಾಧವ್ - ತುಳಸಿ ಇಬ್ಬರನ್ನು ಒಂದು ಮಾಡಲು ಬಂದ ಜೋಡಿ

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಮನೆಗೆ ದೀಪಿಕಾ ಬಂದಿರುವುದಕ್ಕೆ ಪೂರ್ಣಿಮಾ ರೂಮಿನಲ್ಲಿ ಉಳಿದುಕೊಂಡಿದ್ದಾಳೆ. ಇದರಿಂದ ಅವಿಗೆ ಬೇಸರವಾಗಿದೆ. ಅಭಿ ರೂಮ್‌ನಲ್ಲಿ ಅವಿ ಮಲಗಿರುತ್ತಾನೆ. ಎಷ್ಟೊತ್ತಾದರೂ ನಿದ್ದೆ ಬರುವುದಿಲ್ಲ. ಒದ್ದಾಡಿ ಸಾಕಾದ ಅವಿ ಸೋಫಾ ಮೇಲೆ ಕುಳಿತು ತೂಕಡಿಸುತ್ತಿರುತ್ತಾನೆ. ಇತ್ತ ಪೂರ್ಣಿಮಾಳಿಗೂ ದೀಪಿಕಾಳ ಗೊರಕೆ ಶಬ್ದಕ್ಕೆ ನಿದ್ರೆಯೇ ಬರುವುದಿಲ್ಲ. ಅವಳು ಎದ್ದು ಹಾಲ್ ಗೆ ಬರುತ್ತಾಳೆ.

ಅವಿ ಕೂಡ ನಿದ್ದೆ ಬರದೇ ಇರುವುದನ್ನು ನೋಡಿ ಇಬ್ಬರು ಮಾತನಾಡುತ್ತ ಕೂರುತ್ತಾರೆ. ಬೆಳಗ್ಗೆ ತಿಂಡಿಗೆ ದೀಪಿಕಾಳದ್ದೇ ಮೆನು ಇರುತ್ತದೆ. ಮನೆಯ ನೆಮ್ಮದಿ ಅನ್ನು ಹಾಳು ಮಾಡಬೇಕು ಎಂದೇ ದೀಪಿಕಾ ಮನೆಗೆ ಬಂದಿದ್ದು, ಇದು ಯಾರಿಗೂ ಅರ್ಥವಾಗುತ್ತಿಲ್ಲ. ತಾನು ಹೇಳಿದ ಅಡುಗೆ ತಿಂಡಿಯೇ ಆಗಬೇಕು ಎಂಬಂತೆ ನಡೆದುಕೊಳ್ಳುತ್ತಿದ್ದಾಳೆ. ಇನ್ನು ಬೆಳಗ್ಗಿನ ತಿಂಡಿಗೆ ಬ್ರೆಡ್ ಟೋಸ್ಟ್ ಅನ್ನು ಮಾಡಿಸಿರುತ್ತಾಳೆ. ತಿಂಡಿಯನ್ನು ನೋಡಿ ಎಲ್ಲರಿಗೂ ಶಾಕ್ ಆಗುತ್ತದೆ. ಇದನ್ನು ತಿನ್ನಬೇಕಾ ಎಂದು ಎಲ್ಲರೂ ಮೂಗು ಮುರಿಯುತ್ತಾರೆ.

Shrirastu Shubhamasthu serial 05th May Episode Written Update

ಅವಿಗೆ ಬೇಸರವಾಗುತ್ತದೆ. ಆದರೆ ಪೂರ್ಣಿಮಾ ಏನನ್ನೂ ಮಾತನಾಡಬಾರದು ಎಂದು ಹೇಳುತ್ತಾಳೆ. ಹಾಗಾಗಿ ಅವಿ ತನಗೆ ಕಾಲ್ ಇದೆ ಎಂದು ಹೊರಟು ಬಿಡುತ್ತಾನೆ. ಇನ್ನು ಮಾಧವ್ ಹಾಗೂ ಪೂರ್ಣಿಮಾ ಇದನ್ನೆಲ್ಲಾ ತಿನ್ನಬೇಕಾ? ಎಂದು ಸನ್ನೆ ಮಾಡಿಕೊಂಡು ತಿನ್ನುತ್ತಾರೆ. ಇದನ್ನು ದೀಪಿಕಾ ನೋಡುತ್ತಾಳೆ. ಇತ್ತ ಸಂಧ್ಯಾ, ತಾತ ತನ್ನ ಮೇಲೆ ಅಷ್ಟೇಲ್ಲಾ ಜೋರು ಮಾಡಿದರೂ, ಅಮ್ಮ ಏನೂ ಮಾತನಾಡಲಿಲ್ಲ ಎಂದು ಬೇಸರ ಮಾಡಿಕೊಂಡಿರುತ್ತಾಳೆ. ತುಳಸಿ ಬಂದು ಸಂಧ್ಯಾಳನ್ನು ಸಮಾಧಾನ ಮಾಡುತ್ತಾಳೆ.

ಮಾರನೆಯ ದಿನ ತುಳಸಿ ಕೆಫೆಗೆ ಹೊರಟ ಮೇಲೆ ದತ್ತ ತಾತ ಸಿರಿಗೆ ಕಾಫಿ ಕೊಡುವಂತೆ ಕೇಳುತ್ತಾನೆ. ಅದೇ ವೇಳೆಗೆ ಸಂಧ್ಯಾ ಕೂಡ ತನಗೂ ಕಾಫಿ ಬೇಕು ಎಂದಾಗ ತಾತ ಕೆಲಸ ಮಾಡದೇ ಕೂತು ತಿನ್ನುವವಳು ಈ ಮನೆಯಲ್ಲಿ ನೀನೊಬ್ಬಳೆ. ನಿನಗೇನು ಬೇಕೋ ಅದನ್ನೇ ಮಾಡಿಕೋ. ನಿನ್ನ ಕೆಲಸ ನೀನು ನೋಡಿಕೋ ಎಂದು ಬುದ್ಧಿ ಹೇಳುತ್ತಾನೆ. ದತ್ತ ತಾತ ಸಂಧ್ಯಾಲಿಗೆ ಹೆಜ್ಜೆ ಹೆಜ್ಜೆಗೂ ಪಾಠ ಮಾಡುತ್ತಿದ್ದು, ಅವಳ ತಪ್ಪಿನ ಬಗ್ಗೆ ಅರ್ಥ ಮಾಡಿಸುತ್ತಿದ್ದಾನೆ. ಆದರೆ, ಸಂಧ್ಯಾಗೆ ತನ್ನ ತಪ್ಪು ಅರ್ಥವಾಗುತ್ತಿಲ್ಲ.

ಶಾರ್ವರಿಗೆ ಈಗ ಮಹೇಶ್‌ಗೆ ಸ್ವಾಧೀನ ಬರುತ್ತಿರುವುದೇ ದೊಡ್ಡ ತಲೆನೋವಾಗಿದೆ. 20 ವರ್ಷದಿಂದ ಮಹೇಶ್ ಸ್ವಾಧೀನ ಇಲ್ಲದ ಕಾರಣ ಶಾರ್ವರಿ ಇಡೀ ಮನೆಯನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದಳು. ಇನ್ನು ಮಹೇಶ್ ಗೆ ಆರೋಗ್ಯ ಸರಿ ಹೋಗಿ ಮೊದಲಿನಂತೆ ಆದರೆ ಶಾರ್ವರಿಗೆ ಯಾವುದೇ ಬೆಲೆ ಇರುವುದಿಲ್ಲ. ಹೀಗಾಗಿ ಶಾರ್ವರಿ ಈಗ ಮಹೇಶ್‌ನನ್ನು ಹೇಗೆ ಚೇತರಿಸಿಕೊಳ್ಳದಂತೆ ಮಾಡುವುದು ಎಂದು ತಲೆ ಕೆಡಿಸಿಕೊಂಡಿದ್ದಾಳೆ. ಆದರೆ ಪೂರ್ಣಿಮಾ ಮಾವನಿಗೆ ಎಲ್ಲಾ ನೆನಪಾಗಲಿ ಎಂದು ಹಳೆಯ ಆಲ್ಬಂಗಳನ್ನು ಹುಡುಕಿ ತಂದಿದ್ದಾಳೆ. ಮಾವನಿಗೆ ತೋರಿಸಲು ಮುಂದಾಗಿದ್ದಾಳೆ.

Shrirastu Shubhamasthu serial 05th May Episode Written Update

ಮಾಧವ್ ಮತ್ತು ತುಳಸಿ ಅನ್ನು ಒಂದು ಮಾಡಲು ಈಗ ಹೊಸ ಜೋಡಿ ಧಾರಾವಾಹಿಯಲ್ಲಿ ಎಂಟ್ರಿ ಕೊಟ್ಟಿದೆ. ಕೆಫೆಯಲ್ಲಿ ಸೀಟ್ ರಿಸರ್ವ್ ಮಾಡಿ, ಮೆನು ಕೂಡ ಆರ್ಡರ್ ಮಾಡಿದೆ. ಯಾವುದು ಆ ಹೊಸ ಜೋಡಿ ಎಂದು ಸದಾ ಯೋಚಿಸುತ್ತಿರುವಾಗಲೇ ಹಳೆಯ ಜೋಡಿ ಹೊಸ ಸಂಬಂಧವನ್ನು ಕಟ್ಟಿಕೊಂಡು ಬಂದಿದೆ. 50 ವರ್ಷ ದಾಟಿದವರು ಮದುವೆಯಾಗಿ ಬಂದಿದ್ದಾರೆ. ಈ ಜೋಡಿಯನ್ನು ನೋಡುತ್ತಿದ್ದಂತೆ ಮಾಧವ್‌ಗೆ ವೇದಾಂತ್ ಹೇಳಿದ ಮಾತುಗಳು ನೆನಪಾಗುತ್ತದೆ. ಈ ಜೋಡಿ ಆಗಮನದಿಂದ ಮಾಧವ್ ಮತ್ತು ತುಳಸಿ ಒಂದಾಗುತ್ತಾರಾ ಎಂಬ ಕುತೂಹಲ ಮೂಡಿದೆ.

More from Filmibeat

English summary
Shrirastu Shubhamasthu serial 05th May Episode Written Update. here is details about New couples enters madhav's cafe. These couples may support Tulasi and Madhav Love story. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X