Shrirastu Shubhamasthu: ಮಾಧವ್ ಕೆಫೆ ತುಂಬಿ ಹೋಯ್ತು: ಜನಾರ್ಧನ್ ಸೋಲುವುದು ಗ್ಯಾರೆಂಟಿ ಆಯ್ತು
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಅಭಿ ಮತ್ತು ಜನಾರ್ಧನ್ ಸೇರಿ ಮಾಧವ್ ವಿರುದ್ಧ ಮಾಡಿದ ಚಾಲೆಂಜ್‌ನಲ್ಲಿ ಸೋಲುವ ಭೀತಿ ಇತ್ತು. ಆದರೆ, ಈಗ ಆ ಭೀತಿ ದೂರಾಗಿದೆ. ಅಷ್ಟೇ ಅಲ್ಲದೇ, ಚಿಕ್ಕ ವಯಸ್ಸಿನಿಂದಲೇ ಅಪ್ಪನ ಮೇಲೆ ದ್ವೇಷ ಬೆಳಸಿಕೊಂಡಿದ್ದ ಅವಿ ಕೂಡ ಈಗ ಪರೋಕ್ಷವಾಗಿ ತನ್ನ ತಂದೆಯನ್ನು ಸಪೋರ್ಟ್ ಮಾಡುತ್ತಿದ್ದಾನೆ.
ಮಾಧವ್ ಗೆಲ್ಲಲು ಎಲ್ಲಾ ಐಡಿಯಾಗಳನ್ನು ಕೂಡ ಅವಿನಾಶ್ ನೀಡುತ್ತಿದ್ದಾನೆ. ಇದರಿಂದ ಪೂರ್ಣಿಮಾಗೆ ಖುಷಿಯಾಗಿದೆ. ಆದರೆ ಇದ್ಯಾವುದೂ ಅಭಿ, ಜನಾರ್ಧನ್ ಹಾಗೂ ಶಾರ್ವರಿಯ ಗಮನಕ್ಕೆ ಬಂದೇ ಇಲ್ಲ. ಅಭಿ ಚಾನೆಲ್‌ನಲ್ಲಿ ಆಹಾರ ಮೇಳದ ಪ್ರೋಮೋ ನೀಡಿ, ಗ್ರಾಹಕರನ್ನು ಸೆಳೆಯಲು ಸಹಾಯ ಮಾಡಿರುತ್ತಾನೆ. ಪ್ರೋಮೋ ನೋಡಿ ಖುಷಿಯಾಗಿದ್ದ ತುಳಸಿಗೆ, ಸಿರಿ ಮೂಲಕ ಮಾಧವ್ ತೊಂದರೆಯಲ್ಲಿ ಇರುವುದು ತಿಳಿಯುತ್ತದೆ.

ಆಹ್ವಾನವಿಲ್ಲದಿದ್ದರೂ ತುಳಸಿ ಮತ್ತು ಆಕೆಯ ಜೊತೆಗಾರರು ಅಡುಗೆ ಮಾಡಲು ಮಾಧವ್‌ನ ಕೆಫೆಗೆ ಬಂದಿದ್ದಾರೆ. ಅಲ್ಲದೇ, ಚಿತ್ರಾನ್ನ, ವಾಗೀಬಾತ್, ಪೊಂಗಲ್, ಬಿಸಿಬೇಳೆ ಬಾತ್, ಪುಳಿಯೋಗರೆ ಹಾಗೂ ಹೋಳಿಗೆಯಂತಹ ಸಾಮಾನ್ಯ ತಿಂಡಿಗಳ ಮೂಲಕವೇ ಗ್ರಾಹಕರನ್ನು ಸೆಳೆಯಲು ಪ್ಲ್ಯಾನ್ ಮಾಡಿದ್ದಾಳೆ. ಮಾಧವ್‌ಗೆ ಇದರಿಂದ ಖುಷಿಯ ಜೊತೆಗೆ ಸಮಾಧಾನವೂ ಸಿಕ್ಕಿದೆ.
ಸರ್ವ್ ಮಾಡಲು ಕೂಡ ಅವಿನಾಶ್ ಕೆಲದವರನ್ನು ಕಳಿಸಿಕೊಟ್ಟಿದ್ದಾನೆ. ಈಗ ಇದನ್ನೆಲ್ಲಾ ಪೂರ್ಣಿಮಾ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು, ಸರ್ವ್ ಮಾಡುವವರಿಗೆ, ಸದಾ ಹಾಗೂ ಸಿರಿಗೆ ಕೆಲಸಗಳನ್ನು ವಹಿಸಿದ್ದಾಳೆ. ಸರ್ವ್ ಮಾಡಲು ಕೆಲಸದವರನ್ನು ಕಳಿಸಿದ್ದಕ್ಕೆ ಅವಿಗೆ ಧನ್ಯವಾದವನ್ನು ಕೂಡ ತಿಳಿಸಿದ್ದಾಳೆ. ಇತ್ತ ಜನಾರ್ಧನ್ ಫೋನ್ ಅನ್ನು ಬಿಟ್ಟು ಹೋದಾಗ ತೆಗೆದುಕೊಂಡ ಅವಿ ಜನಾರ್ಧನ್ ಯಾರು ಯಾರಿಗೆ ಕಾಲ್ ಮಾಡಿದ್ದಾನೆ ಎಂಬ ಮಾಹಿತಿಯನ್ನು ಪಡೆದಿದ್ದಾನೆ.

ಯಾವುದೇ ಕಾರಣಕ್ಕೂ ಜನಾರ್ಧನ್ ಗೆಲ್ಲಬಾರದು ಎಂದು ಅವಿ ನಿರ್ಧರಿಸಿದ್ದಾನೆ. ಹೀಗಾಗಿ ತನಗೇ ತಿಳಿಯದ ಹಾಗೆ ತನ್ನ ತಂದೆ ಮಾಧವ್ ಗೆ ಸಹಾಯ ಮಾಡುತ್ತಿದ್ದಾನೆ. ಕೆಫೆಗೆ ಜನಸಾಗರವೇ ಬಂದಿದ್ದು, ಎಲ್ಲರೂ ಖುಷಿಯಾಗಿದ್ದಾರೆ.
ಇತ್ತ ಜನಾರ್ಧನ್ ಪಬ್ ಹೇಗೆ ವಿನ್ಯಾಸ ಮಾಡಬೇಕು ಎಂದು ಪ್ಲ್ಯಾನ್ ಮಾಡುತ್ತಿದ್ದಾನೆ. ಆದರೆ ಅಭಿಗೆ ತಾವು ಈ ಚಾಲೆಂಜ್‌ನಲ್ಲಿ ಗೆಲ್ಲುತ್ತೀವಿ ಎಂಬ ನಂಬಿಕೆಯೇ ಇಲ್ಲ. ಆದರೆ, ಜನಾರ್ಧನ್ ಓವರ್ ಕಾನ್ಫಿಡೆನ್ಸ್‌ನಲ್ಲಿ ಇದ್ದಾನೆ. ಆದರೆ ಅಭಿ, ಜನಾರ್ಧನ್ ಮಾತುಗಳನ್ನು ನೆಗಲೆಕ್ಟ್ ಮಾಡುತ್ತಿದ್ದಾನೆ. ಅಲ್ಲದೇ, ಕೆಫೆ ಬಳಿ ಕ್ರೌಡ್ ಇದೆ ಎಂಬುದನ್ನು ತಿಳಿದು ಅಭಿ ನಂಬಿಕೆ ಮತ್ತಷ್ಟು ಕುಗ್ಗಿದೆ. ಈ ಚಾಲೆಂಜ್‌ನಲ್ಲಿ ಸೋಲುತ್ತೇನೆ ಎಂಬ ಆತಂಕದಲ್ಲಿ ಅಭಿ ಇದ್ದಾನೆ.
ಇತ್ತ ದತ್ತ ತಾತ, ಶಾರ್ವರಿಯನ್ನು ಮನೆಯಲ್ಲಿ ಕೂಡಿ ಹಾಕಿ ಜನರನ್ನು ಕರೆದುಕೊಂಡು ಬಂದಿದ್ದಾನೆ. ಶಾರ್ವರಿ ಯಾಕೆ ಬಾಗಿಲು ಹಾಕಿದ್ದಾರೆ ಎಂದು ಯೋಚಿಸುತ್ತಿದ್ದಾಳೆ. ಅಷ್ಟರಲ್ಲಿ ದತ್ತ ತಾತ ಬಾಗಿಲು ತೆಗೆದು ಇವಳೇ ಮಕ್ಕಳ ಕಳ್ಳಿ ಎಂದು ಹೇಳಿದ್ದಾನೆ. ದತ್ತನ ಮಾತನ್ನು ಕೇಳಿದ ಶಾರ್ವರಿಗೆ ಶಾಕ್ ಆಗುತ್ತದೆ. ದತ್ತ ತಾತ ಈಗ ಪೊಲೀಸರನ್ನು ಕರೆಸುತ್ತಿದ್ದೇನೆ. ಈಗಲೇ ನೀನು ಮಕ್ಕಳ ಕಳ್ಳಿ ಎಂಬುದನ್ನು ಒಪ್ಪಿಕೋ ಎಂದು ಹೇಳುತ್ತಾನೆ.
ಶಾರ್ವರಿ ದತ್ತ ತಾತನ ಮೇಲೆ ರೇಗಾಡುತ್ತಾಳೆ. ಅಷ್ಟರಲ್ಲಿ ನಂದಿನಿ ಈ ಗಲಾಟೆಯನ್ನು ನೋಡುತ್ತಾಳೆ. ಶಾರ್ವರಿ ಅಂದು ಇದೇನಾ ತುಳಸಿ ಮನೆ ಎಂದು ಕೇಳಿದ್ದು ನೆನಪಾಗುತ್ತದೆ. ನಂದಿನಿ ಬಂದು ನೀವ್ಯಾಕೆ ಇಲ್ಲಿದ್ದೀರಾ ಎಂದು ಮಾತನಾಡಿಸುತ್ತಾಳೆ. ಇವರು ಮಕ್ಕಳ ಕಳ್ಳಿ ಅಲ್ಲ. ನನಗೆ ಪರಿಚಯದವರು ಎಂದು ಹೇಳಿ ಬಚಾವ್ ಮಾಡುತ್ತಾಳೆ.


Click it and Unblock the Notifications











