Shrirastu Shubhamasthu: ತುಳಸಿಗಾಗಿ ಮಿಡಿದ ಮಾಧವ: ಸಿರಿ ಮಾತು ಯಾರ ಪರ..?

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಮರ್ಥ್ ಹಾಗೂ ಸಂಧ್ಯಾ ಇಬ್ಬರೂ ಸೇರಿ ಮನೆಯಲ್ಲಿ ಪಂಚಾಯ್ತಿ ಮಾಡಿದ್ದಾರೆ. ಅಮ್ಮನಿಗೆ ದತ್ತ ತಾತ, ಮಾಧವ್ ಜೊತೆಗೆ ಮದುವೆ ಮಾಡಿಸುತ್ತಿರುವುದು ಸರಿಯಲ್ಲ ಎಂದು ಪ್ರಶ್ನಿಸಿದ್ದಾರೆ. ಮೊಮ್ಮಕ್ಕಳ ಆರ್ಭಟಕ್ಕೆ ಜಗ್ಗದ ದತ್ತ ತಾತ, ಪಂಚಾಯ್ತಿ ಮಾಡಲು ಬಂದವರ ಮುಖಕ್ಕೆ ಮಂಗಳಾರತಿ ಮಾಡಿದ್ದಾರೆ.

ನೀವು ಯಾರು ಏನೇ ಅಂದರೂ ನನ್ನ ಮಗಳು ತುಳಸಿ ಮದುವೆ ಮಾಧವ್ ಜೊತೆಗೆ ಮಾಡುತ್ತೇನೆ ಎಂದಿದ್ದಾರೆ. ಅವಮಾನದಿಂದ ಮನೆಗೆ ಬಂದ ಸಂಧ್ಯಾ ಅಮ್ಮನ ವಿಚಾರಕ್ಕೆ ತಲೆ ಕೆಡಿಸಿಕೊಂಡಿದ್ದಾಳೆ. ಸಮಾಜದಲ್ಲಿ ತಲೆ ತಗ್ಗಿಸಬೇಕು ಎಂದು ಆತಂಕಗೊಂಡಿದ್ದಾಳೆ. ಆದರೆ, ಸೊಸೆ ಜೊತೆಗೆ ಜುಗ್ಗ ಮಾವ ಸೇರಿಕೊಂಡಿದ್ದು ಹೊಸ ಪ್ಲಾನ್ ಮಾಡುತ್ತಿದ್ದಾರೆ.

Shrirastu Shubhamasthu serial 07th August episode written update

ಅತ್ತೆ ಪರ ನಿಂತ ಸೊಸೆ ಸಿರಿ

ಇನ್ನು ಸಮರ್ಥ್‌ಗೆ ದತ್ತ ತಾತ ಬೈದು ಬುದ್ದಿ ಹೇಳಿದ್ದಕ್ಕೆ, ಈಗ ಮನೆಯಿಂದ ಹೊರಟಿದ್ದಾನೆ. ತನ್ನ ಮಾತಿಗೆ ಬೆಲೆ ಕೊಡದ ಮನೆಯಲ್ಲಿ ಇರುವುದಿಲ್ಲ ಎಂದು ಹೇಳಿದ್ದಾನೆ. ಸಿರಿಯನ್ನು ಕೂಡ ಹೊರಡಿಸುತ್ತಿದ್ದಾನೆ. ಆದರೆ ಸಿರಿ ಸುತಾರಾಂ ಸಮರ್ಥ್ ಮಾತನ್ನು ಕೇಳುತ್ತಿಲ್ಲ. ದತ್ತ ತಾತ ಮಾಡಿರುವ ನಿರ್ಧಾರದಲ್ಲಿ ತಪ್ಪಿಲ್ಲ. ಅಮ್ಮನ ಬದುಕು ಖುಷಿಯಾಗಿರಬೇಕು ಎಂದರೆ ಈ ಮದುವೆ ನಡೆಯಲೇಬೇಕು. ನಿನ್ನ ಮಾತನ್ನು ನಾನು ಒಪ್ಪುವುದಿಲ್ಲ. ನಾನು ಈ ಮನೆಯಲ್ಲೇ ಇರುತ್ತೇನೆ ಎಂದು ಹೇಳುತ್ತಾಳೆ. ಸಮರ್ಥ್ ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿಲ್ಲ. ಆದರೆ, ಸಮರ್ಥ್ ಪರ ಯಾರೂ ಇಲ್ಲದ ಕಾರಣ, ಏನು ಮಾಡಬೇಕು ಎಂದು ತಿಳಿಯದೆ, ಮನೆಯಿಂದ ಹೊರಗೆ ಹೋಗಲು ಸಿದ್ಧನಾಗಿದ್ದಾನೆ.

ಗೊಂದಲಕ್ಕೆ ಸಿಲುಕಿದ ತುಳಸಿ

ಆದರೆ, ತುಳಸಿ ಇದೆಲ್ಲಾ ನೋಡಿ ಬೇಸರಗೊಂಡಿದ್ದು, ತನ್ನ ವಿಚಾರಕ್ಕೆ ಯಾರೂ ಎಲ್ಲೂ ಹೋಗುವುದು ಬೇಡ. ಜಗಳ ಮಾಡುವುದೂ ಬೇಡ. ಎಲ್ಲರೂ ಮನೆಯಲ್ಲಿ ಸುಮ್ಮನಿರಿ ಎಂದು ಏರು ಧ್ವನಿಯಲ್ಲಿ ಮಾತನಾಡಿದ್ದಾಳೆ. ಸಮರ್ಥ್‌ನನ್ನು ರೂಮಿಗೆ ಕಳಿಸಿ, ತನ್ನ ಬದುಕು ಹೀಗೆಲ್ಲಾ ಆಯ್ತಲ್ಲಾ ಎಂದು ಕಣ್ಣೀರು ಹಾಕುತ್ತಿದ್ದಾಳೆ. ತನ್ನಿಂದ ಮನೆ ಇಬ್ಭಾಗವಾಗುತ್ತಿದೆಯಾ ಎಂಬ ಗೊಂದಲದಲ್ಲಿದ್ದಾಳೆ.

ಜನಾರ್ಧನ್ ಬಾಯಿಗೆ ಬೀಗ

ವಿಪರ್ಯಾಸ ಎಂದರೆ, ಸಮರ್ಥ್ ತನ್ನ ತಾಯಿಗೆ ಮದುವೆ ಮಾಡಿಸಲು ಕರೆದ ತಂದಿದ್ದ ವ್ಯಕ್ತಿ ಹೆಸರು ಜಗದೀಶ್. ಅದೂ ಕೂಡ ಆತ ಅಭಿ, ಮಾವ ಜನಾರ್ಧನನ ಸ್ನೇಹಿತ. ಈಗ ಮಾಧವ್ ಮನೆಯಲ್ಲಿ ಮೆಹಂದಿ ಶಾಸ್ತ್ರ ನಡೆಯುತ್ತಿದ್ದು, ಈಗ ಜನಾರ್ಧನ್ ಜೊತೆಗೆ ಜಗದೀಶ್ ಕೂಡ ಬಂದಿದ್ದಾನೆ. ತಾನು ಎರಡನೇ ಮದುವೆಯಾಗಲು ತುಳಸಿಯನ್ನು ನೋಡಲು ಹೋಗಿದ್ದ ವಿಚಾರವನ್ನು ಹೇಳಿದ್ದಾನೆ. ಫೋಟೋ ನೋಡಿದ ಜನಾರ್ಧನ್ ಬೇಕಂತಲೇ ಮಾಧವ್‌ನನ್ನು ಛೇಡಿಸಿದ್ದಾನೆ. ಇದರಿಂದ ಮಾಧವ್ ಕೋಪ ನೆತ್ತಿಗೇರಿದೆ. ಪದೇ ಪದೇ, ಮಾತು ಮಾತಿನಲ್ಲೂ ತುಳಸಿಯ ಬಗ್ಗೆ ಜನಾರ್ಧನ್ ವ್ಯಂಗ್ಯವಾಗಿ ಮಾತನಾಡುತ್ತಾನೆ. ಸುಮ್ಮನಿರದೇ ಮಾಧವ್‌ನನ್ನು ಕರೆದುಕೊಂಡು ಬಂದು ಕಾಲು ಕೆರೆದುಕೊಂಡು ತಗಾದೆ ತೆಗೆಯುತ್ತಾನೆ.

Shrirastu Shubhamasthu serial 07th August episode written update

ತುಳಸಿಗಾಗಿ ಮಿಡಿದ ಮಾಧವ

ತನ್ನ ವಿಚಾರದಲ್ಲಿ ಯಾರು ಏನೇ ಅಂದರೂ ಸುಮ್ಮನಿರುವ ಮಾಧವ್, ತುಳಸಿ ವಿಚಾರಕ್ಕೆ ಬಂದರೆ, ಕೋಪ ಮಾಡಿಕೊಳ್ಳುತ್ತಾನೆ. ಮಾಧವ್ ಮನೆಯಲ್ಲಿ ನಡೆಯುತ್ತಿರುವ ಶುಭ ಕಾರ್ಯಕ್ಕೆ ಸಮಸ್ಯೆ ಆಗಬಾರದು ಎಂದು ತಾಳ್ಮೆಯಿಂದ ಇರುತ್ತಾನೆ. ಆದರೆ, ಅಭಿ ತುಳಸಿ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾನೆ. ಹಣಕ್ಕೋಸ್ಕರ ಶ್ರೀಮಂತರನ್ನು ಈ ವಯಸ್ಸಲ್ಲಿ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದಾಳೆ ಎನ್ನುತ್ತಾನೆ. ಈ ಮಾತು ಕೇಳಿಸಿಕೊಂಡು ಸಹಿಸಿಕೊಳ್ಳದ ಮಾಧವ್, ಅಭಿ ಕೆನ್ನೆಗೆ ಹೊಡೆದು ವಾರ್ನಿಂಗ್ ಕೊಡುತ್ತಾನೆ. ಅಭಿ ಕೂಡ ಮಾಧವ್‌ಗೆ ವಾಪಸ್ ಬೈದು, ನಿನ್ನಿಂದ ನನಗೆ ಅವಮಾನ ಆಯ್ತು ಎಂದು ಹೇಳುತ್ತಾನೆ. ಈಗ ಮಾಧವ್ ಮುಂದೇ ಮಾಡುತ್ತಾನೋ ಕಾದು ನೋಡಬೇಕಿದೆ.

More from Filmibeat

English summary
Shrirastu Shubhamasthu kananda serial today Episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X