Shrirastu Shubhamasthu: ತುಳಸಿ ಮಾಡಿದ ಕಿಚಡಿ ಸವಿದ ಅಭಿ: ವರ್ಕ್ ಆಯ್ತು ದತ್ತ ತಾತನ ಪ್ಲ್ಯಾನ್

By ಪ್ರಿಯಾ ದೊರೆ

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಮಾಧವ್, ಅವಿ ಕೊಟ್ಟ ಆಫರ್ ಅನ್ನು ರಿಜೆಕ್ಟ್ ಮಾಡುತ್ತಾನೆ. ಇದರಿಂದ ಮಾಧವ್‌ಗೂ ಬೇಸರವಾಗಿರುತ್ತದೆ. ಮಕ್ಕಳು ತನ್ನನ್ನು ಒಪ್ಪಿಕೊಳ್ಳಲಿ ಎಂದು ಇಷ್ಟು ವರ್ಷ ಪರದಾಡುತ್ತಿದ್ದರು. ಆದರೆ, ಈಗ ಅವಿ ಆಗಿರುವ ತಪ್ಪನ್ನು ಸರಿ ಮಾಡಲೆಂದು ಅವಿ ಕೊಟ್ಟಿರುವ ಆಫರ್ ಮಾಧವ್‌ಗೆ ನೋವು ಕೊಟ್ಟಿದೆ.

ಮಾಧವ್‌ನನ್ನು ಕ್ಷಮಿಸಬೇಕು ಎಂದರೆ, ತುಳಸಿಯನ್ನು ಮದುವೆಯಾಗಿದ್ದರೂ ಕೂಡ ದೂರ ಮಾಡಬೇಕು ಎಂದು ಅವಿ ತನ್ನ ತಂದೆಯ ಬಳಿ ಕೇಳುತ್ತಾನೆ. ಈ ಮಾತಿಗೆ ಒಂದು ಕ್ಷಣವೂ ಯೋಚಿಸದೇ ಮಾಧವ್ ರಿಜೆಕ್ಟ್ ಮಾಡುತ್ತಾರೆ. ನನ್ನನ್ನು ನಂಬಿ ಬಂದಿರುವ ತುಳಸಿ ಅವರನ್ನು ದೂರ ಮಾಡಲು ಸಾಧ್ಯವಿಲ್ಲ. ಇದು ಬಿಟ್ಟು ಬೇರೆ ಏನೇ ಹೇಳಿದರೂ ಮಾಡುತ್ತೀನಿ ಎನ್ನುತ್ತಾರೆ.

shrirastu-shubhamasthu-serial

ಮಾಧವ್ ಮಾತಿಗೆ ಅವಿ ಬೇಸರ ಮಾಡಿಕೊಂಡು ಹೋಗುತ್ತಾನೆ. ಶಾರ್ವರಿ ಬಳಿ ಹೋಗಿ ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾದ ಆ ಒಂದು ತಪ್ಪನ್ನು ಸರಿ ಮಾಡಲು ಪ್ರಯತ್ನಿಸಿದರೂ ಆಗಲಿಲ್ಲ ಎಂದು ತನ್ನ ಬೇಸರವನ್ನು ಹೇಳಿಕೊಳ್ಳುತ್ತಾನೆ. ಇತ್ತ ಮಾಧವ್ ಕೂಡ ಇದಕ್ಕೆ ಬೇಸರ ಮಾಡಿಕೊಂಡು ಪೂರ್ಣಿಮಾ ಬಳಿ ಹೇಳಿಕೊಳ್ಳುತ್ತಿರುತ್ತಾನೆ. ಆಗ ಪೂರ್ಣಿಮಾ ಎಲ್ಲಾ ಸರಿ ಹೋಗುತ್ತೆ. ಸ್ವಲ್ಪ ದಿನ. ಅವಿಗೂ ಕೋಪವಿದೆ. ಈಗ ಮಾತನಾಡಿದರೆ, ಕಷ್ಟ. ಮುಂದೆ ನೋಡೋಣ ಎಂದು ಸಮಾಧಾನ ಮಾಡುತ್ತಾಳೆ.

ದತ್ತ ತಾತನ ಪ್ಲ್ಯಾನ್ ಸಕ್ಸಸ್

ಇನ್ನು ದತ್ತ ತಾತ ಸಿರಿ ಹಾಗೂ ಸಮರ್ಥ್ ಒಂದಾಗಲಿ ಎಂದು ಸಿನಿಮಾಗೆ ಕಳುಹಿಸುವ ಪ್ಲ್ಯಾನ್ ಮಾಡಿದ್ದರು. ಅದು ಫ್ಲಾಪ್ ಆದ ಕಾರಣ ಈಗ ಮನೆಯಲ್ಲಿ ಕ್ಯಾಂಡಲ್ ಲೈಟ್ ಡಿನ್ನರ್ ಅನ್ನು ಅರೇಂಜ್ ಮಾಡಿದ್ದಾರೆ. ಇಬ್ಬರನ್ನೇ ಮನೆಯಲ್ಲಿ ಬಿಟ್ಟು ದತ್ತ ತಾತ ಹಾಗೂ ರವಿ ಇಬ್ಬರೂ ಹೊರಗೆ ಹೋಗಿದ್ದಾರೆ.

shrirastu-shubhamasthu-serial

ಒಂದಾದ ಸಿರಿ ಮತ್ತು ಸಮರ್ಥ್

ಮೊದಲೇ ಊಟ ಮಾಡಿದೇ ಹಸಿದಿದ್ದ ಸಿರಿ ಮತ್ತು ಸಮರ್ಥ್ ಹಸಿವಿನಿಂದ ಒಟ್ಟಿಗೆ ಕೂತು ಊಟ ಮಾಡಿದ್ದು, ಸ್ವಲ್ಪ ನಗು ನಗುತಾ ಮಾತನಾಡಿದ್ದಾರೆ. ಅಷ್ಟರಲ್ಲಿ ತುಳಸಿ ಸಿರಿಗೆ ಫೋನ್ ಮಾಡಿದ ಕಾರಣ ಮತ್ತೆ ಸಮರ್ಥ್ ಬೇಸರ ಮಾಡಿಕೊಂಡಿದ್ದರೂ ಕೂಡ ಈಗ ಸಮರ್ಥ್‌ಗೆ ಸಿರಿಯ ಮೇಲೆ ಕೊಂಚವೂ ಕೋಪವಿಲ್ಲ. ದತ್ತ ತಾತ ಮಾಡಿದ ಪ್ಲ್ಯಾನ್ ಸಕ್ಸಸ್ ಆಗಿದ್ದು, ಇಬ್ಬರೂ ಒಂದಾಗಿದ್ದಾರೆ.

ತುಳಸಿ ಮಾಡಿದ ಕಿಚಡಿ ಸವಿದ ಅಭಿ

ಇನ್ನು ಅಭಿ ಎಲ್ಲರ ಮೇಲೂ ಕೋಪ ಮಾಡಿಕೊಂಡಿದ್ದು, ಊಟವನ್ನೂ ಮಾಡದೇ ರೂಮ್ ಸೇರಿದ್ದಾನೆ. ಪಾಪಮ್ಮ ಊಟವನ್ನು ತೆಗೆದುಕೊಂಡು ರೂಮ್‌ಗೆ ಹೋಗಿ ಕೊಟ್ಟರೂ ಅಭಿ ರೇಗಾಡಿದ್ದಾನೆ. ಇದನ್ನು ಗಮನಿಸಿದ ತುಳಸಿ, ಅಭಿಗೆಂದು ಕಿಚಡಿಯನ್ನು ಮಾಡಿಕೊಂಡು ಬಂದಿದ್ದಾಳೆ. ಇದಕ್ಕೆ ತುಪ್ಪ ಮತ್ತು ಬೆಳ್ಳುಳ್ಳಿ ಒಗ್ಗರಣೆ ಹಾಕಿದ್ದು, ಪಾಪಮ್ಮ ರೂಮಿನಲ್ಲಿ ಇಟ್ಟು ಬರುತ್ತಾರೆ. ಕಿಚಡಿಯ ಸುವಾಸನೆಗೆ ಹಸಿವು ತಾಳಲಾರದೇ, ಅಭಿ ಊಟ ಮಾಡಿದ್ದಾನೆ. ಇದನ್ನು ನೋಡಿದ ತುಳಸಿ ಹಾಗೂ ಪಾಪಮ್ಮ ಖುಷಿ ಪಡುತ್ತಾರೆ.

ತುಳಸಿ ಮೇಲೆ ಅವಿ ಕೋಪ ಕಮ್ಮಿಯಾಯ್ತ?

ಅವಿ ಕೂಡ ಅಭಿ ಊಟ ಮಾಡುವುದನ್ನು ನೋಡುತ್ತಾನೆ. ಆಗ ಪಾಪಮ್ಮ ನಡೆದ ಘಟನೆಯನ್ನು ಹೇಳುತ್ತಾರೆ. ದೊಡ್ಡ ಅಮ್ಮವರು ಮಾಡಿದ ಕಿಚಡಿಯನ್ನು ತಿನ್ನುತ್ತಿದ್ದಾರೆ ಎಂದು ಪಾಪಮ್ಮ ಹೇಳಿದರೂ ಅವಿ ಕೋಪ ಮಾಡಿಕೊಳ್ಳದೇ, ತಮ್ಮ ಊಟ ಮಾಡುತ್ತಿದ್ದಾನಲ್ಲ ಎಂದು ಸಮಾಧಾನ ಪಟ್ಟುಕೊಳ್ಳುತ್ತಾನೆ.

More from Filmibeat

English summary
Shrirastu Shubhamasthu Kannada serial today Episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X