Shrirastu Shubhamasthu: ದೀಪಿಕಾಗೆ ವಾರ್ನಿಂಗ್ ಕೊಟ್ಟ ಅಭಿ: ಪಶ್ಚಾತ್ತಾಪದಲ್ಲಿ ಬೇಯುತ್ತಿರುವ ಸಮರ್ಥ್
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಂಧ್ಯಾ ಮನೆಯವರಿಂದ ಕದ್ದು ಮುಚ್ಚಿ ತನ್ನ ಗಂಡನನ್ನು ಭೇಟಿ ಮಾಡುತ್ತಾಳೆ. ಸಂಧ್ಯಾಳನ್ನು ಫಾಲೋ ಮಾಡಿದ ದತ್ತ ತಾತನಿಗೆ ಸತ್ಯ ಗೊತ್ತಾಗುತ್ತದೆ. ಕದ್ದು ಮುಚ್ಚಿ ಗಂಡನನ್ನು ಯಾಕೆ ಭೇಟಿ ಮಾಡುತ್ತೀಯಾ ಎಂದು ತಾತ ಬುದ್ಧಿವಾದ ಹೇಳಿ ಬರುತ್ತಾರೆ. ಆದರೆ, ಮನೆಯಲ್ಲಿ ದತ್ತ ತಾತ ಈ ವಿಚಾರವನ್ನು ಯಾರೊಂದಿಗೂ ಚರ್ಚೆ ಮಾಡುವುದಿಲ್ಲ.
ಈ ಬಗ್ಗೆ ಸಂಧ್ಯಾ ಯಾಕೆ ಎಂದು ಪ್ರಶ್ನೆ ಮಾಡಿದಾಗ ದತ್ತ ತಾತ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ತುಳಸಿಗೆ ಯೋಚನೆಯಾಗಬಾರದು ಎಂದು ಹೇಳಲಿಲ್ಲ ಎಂದು ಹೇಳುತ್ತಾರೆ. ಇತ್ತ ಸಮರ್ಥ್, ತುಳಸಿ ರೂಮಿಗೆ ಬಂದು ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಾನೆ. ನಾನು ಸಂಧ್ಯಾ ಮಾತನ್ನು ಕೇಳಿ ನಿನಗೆ ನೋವು ಮಾಡಿದೆ. ನಿನ್ನ ಹೆಸರನ್ನು ನಾನು ಇನ್ಶುರೆನ್ಸ್‌ನಿಂದ ತೆಗೆಸಿದ್ದೇನೆ. ಆಫೀಸಿನಲ್ಲಿ ನಾನು ಇನ್ನಷ್ಟು ಕೆಲಸ ಮಾಡಿ ಹೆಚ್ಚು ಸ್ಯಾಲರಿ ಪಡೆಯಬೇಕು ಎಂದು ಕೊಂಡೆ ಆದರೆ, ನನಗೆ ಆ ಕೆಲಸ ಸಿಗಲಿಲ್ಲ ಎಂದು ನೋವಿನಿಂದ ಹೇಳಿಕೊಳ್ಳುತ್ತಾನೆ.

ಆಗ ತುಳಸಿ ಮಗನನ್ನು ಕ್ಷಮಿಸಿ ನಿನ್ನದೇನು ತಪ್ಪಿಲ್ಲ ಬಿಡು ಪಾಪು ಎಂದು ಹೇಳುತ್ತಾಳೆ. ಅಮ್ಮ ತನ್ನನ್ನು ಕ್ಷಮಿಸಿದರು ಎಂದು ಸಮರ್ಥ್‌ಗೂ ಖುಷಿಯಾಗುತ್ತದೆ. ಇತ್ತ ದತ್ತ ತಾತ ಹಾಗೂ ಸಿರಿ ಕೂಡ ಇವರಿಬ್ಬರನ್ನು ನೋಡಿ ಖುಷಿಪಡುತ್ತಾರೆ.
ವೇದಾಂತ್‌ಗೆ ಫೋನ್ ಮಾಡಿದ ಮಾಧವ್
ಇತ್ತ ಮಾಧವ್ ಕ್ಷಣ ಕ್ಷಣವೂ ತುಳಸಿ ಬಗ್ಗೆ ಯೋಚಿಸುತ್ತಿದ್ದಾರೆ. ಹೀಗಾಗಿ ನಾನ್ಯಾಕೆ ತುಳಸಿ ಮೇಲೆ ಇಷ್ಟೋಂದು ಕಾಳಜಿ ವಹಿಸುತ್ತಿದ್ದೀನಿ. ತುಳಸಿ ಅವರಿಗೆ ಅಪಘಾತವಾದಾಗಿನಿಂದ ನಾನ್ಯಾಕೆ ಹೀಗೆ ಮಾಡುತ್ತಿದ್ದೀನಿ. ತುಳಸಿ ಅವರ ಬಗ್ಗೆ ನೆನಪು ಮಾಡಿಕೊಳ್ಳದೇ ನಾನು ಒಂದು ಕ್ಷಣವೂ ಇರುತ್ತಿಲ್ಲ. ಈ ಬಗ್ಗೆ ನಾನು ಯಾರ ಬಳಿ ಶೇರ್ ಮಾಡಿಕೊಳ್ಳಲಿ ಎಂದು ಯೋಚಿಸುತ್ತಾನೆ. ಆಗ ಮಾಧವ್‌ಗೆ ವೇದಾಂತ್ ನೆನಪಾಗುತ್ತದೆ.
ತಕ್ಷಣ ಮಾಧವ್ ವೇದಾಂತ್ ಗೆ ಫೋನ್ ಮಾಡಿ ತನಗಾಗುತ್ತಿರುವುದನ್ನೆಲ್ಲಾ ಹೇಳಿಕೊಳ್ಳುತ್ತಾನೆ. ಆಗ ವೇದಾಂತ್ ಮಾಧವ್‌ಗೆ ಸಲಹೆಯನ್ನು ಕೊಡುತ್ತಾನೆ. ಟಾಸ್ಕ್ ಅನ್ನು ಕೊಟ್ಟು ನಿಮ್ಮ ಮನದಲ್ಲಿನ ಗೊಂದಲವನ್ನು ಪರಿಹರಿಸಿಕೊಳ್ಳಿ ಎನ್ನುತ್ತಾನೆ.

ತುಳಸಿಯಿಂದ ದೂರ ಉಳಿದ ಮಾಧವ್
ಒಂದು ದಿನ ತುಳಸಿ ಅವರಿಂದ ದೂರ ಇರಿ. ಯಾವುದೇ ಕಾರಣಕ್ಕೂ ಅವರನ್ನು ಸಂಪರ್ಕಿಸಬೇಡಿ. ನೋಡದೇ, ಒಂದೂ ಮೆಸೇಜ್ ಮಾಡದೇ ಹಾಗೂ ಅವರ ಬಗ್ಗೆಯೂ ಯೋಚಿಸಕೂಡದು. ಹೀಗೆ ಮಾಡಿದರೆ ನಿಮಗೆ ಉತ್ತರ ಸಿಗುತ್ತೆ ಎಂದು ಹೇಳುತ್ತಾನೆ. ಈ ಮಾತನ್ನು ಕೇಳುವ ಮಾಧವ್ ಇದು ಬಹಳ ಸುಲಭ ಎನ್ನುತ್ತಾನೆ.
ಮಾಧವ್ ಅವರು ಈಗ ತುಳಸಿ ಜೊತೆಗೆ ಮಾತನಾಡದೇ ಯೋಚಿಸದಿರಲು ಪ್ರಯತ್ನಿಸುತ್ತಾನೆ. ತುಳಸಿ ಮೆಸೇಜ್ ಮಾಡಿದ ಕೂಡಲೇ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡುತ್ತಾನೆ. ಪೂರ್ಣಿಮಾ ಬಂದು ತುಳಸಿ ಆರೋಗ್ಯದ ಬಗ್ಗೆ ವಿಚಾರಿಸಿದಾಗಲೂ ಏನೂ ಹೇಳುವುದಿಲ್ಲ.
ತುಳಸಿ ಸಹಾಯಕ್ಕೆ ಬಂದ ಅವಿ
ಇತ್ತ ಕೆಫೆಗೆ ಹೊರಟ ತುಳಸಿ ರಸ್ತೆ ದಾಟಲಾಗದೇ, ಆಟೋಗಳು ಸಿಗದೇ ಒದ್ದಾಡುತ್ತಿರುತ್ತಾಳೆ. ಮನೆಯವರೆಲ್ಲಾ ಹೋಗಬೇಡ ಎಂದರೂ ನಾನು ಬಂದೆ ಈಗ ಏನು ಮಾಡುವುದು ಎಂದು ಯೋಚಿಸುತ್ತಿರುತ್ತಾಳೆ. ಅಷ್ಟರಲ್ಲಿ ತುಳಸಿ ಸಹಾಯಕ್ಕೆ ಅವಿ ಬರುತ್ತಾನೆ. ಎಲ್ಲಿಗೆ ಹೊರಟಿದ್ದೀರಾ ಡ್ರಾಪ್ ಮಾಡುತ್ತೇನೆ ಎಂದು ಕೇಳುತ್ತಾನೆ. ಅದಕ್ಕೆ ತುಳಸಿ ಬೇಡ, ಇಲ್ಲೇ ಆಟೋ ಸ್ಟ್ಯಾಂಡ್ ಇದೆ ಹೋಗುತ್ತೇನೆ ಎನ್ನುತ್ತಾಳೆ. ಅವಿ ಸರಿ ನಾನು ನಿಮ್ಮನ್ನ ರಸ್ತೆ ದಾಟಿಸುತ್ತೇನೆ ಎಂದು ಅವಿ ಕೈ ಹಿಡಿದುಕೊಂಡು ಹೋಗುತ್ತಾನೆ.


Click it and Unblock the Notifications











