Shrirastu Shubhamasthu: ಮಾಧವ್ ಎಲ್ಲೋದರೂ ಬಿಡದ ತುಳಸಿ
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ತುಳಸಿ ಹಾಗೂ ಮಾಧವ್ ನಿಧಾನವಾಗಿ ಒಬ್ಬರಿಗೊಬ್ಬರು ಕನೆಕ್ಟ್ ಆಗುತ್ತಿದ್ದಾರೆ. ಇಬ್ಬರೂ ಒಬ್ಬರನ್ನೊಬ್ಬರು ಬಹಳ ಬೇಗನೇ ಅರ್ಥ ಮಾಡಿಕೊಂಡಿದ್ದಾರೆ. ತುಳಸಿ ನಿಮ್ಮ ಸಂಗಾತಿ ಎಂದು ಮಾಧವ್ ಬಳಿ ವೇದಾಂತ್ ಹೇಳಿದಾಗಿನಿಂದ ಆಕೆಯ ಮೇಲಿನ ಕಾಳಜಿ, ಪ್ರೀತಿ ಎಲ್ಲವೂ ಹೆಚ್ಚಾಗಿದೆ. ತನಗೇ ತಿಳಿದಂತೆ ತನ್ನ ಮನಸ್ಸಿನಾಳದಲ್ಲಿ ತುಳಸಿ ಎಂಬ ಬೇರು ಗಟ್ಟಿಯಾಗುತ್ತಿದೆ.
ಮಾಧವ್‌ಗೆ ತುಳಸಿ ಬಗ್ಗೆ ಇರುವ ಕಾಳಜಿ ಬಗ್ಗೆ ದತ್ತ ತಾತ ಸ್ವಲ್ಪ ಸ್ವಲ್ಪವಾಗಿಯೇ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲ ಸಮಯದಲ್ಲೇ ದತ್ತ ತಾತ ಇಬ್ಬರನ್ನೂ ಒಂದು ಮಾಡುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ತುಳಸಿಯನ್ನು ರಸ್ತೆಯಲ್ಲಿ ನೋಡಿ ಕಾರ್ ನಿಲ್ಲಿಸಿ ಬರುವ ಅವಿ, ಮಾತನಾಡಿಸುತ್ತಾನೆ. ತುಳಸಿಯನ್ನು ಡ್ರಾಪ್ ಮಾಡುವುದಾಗಿ ಹೇಳುತ್ತಾನೆ. ತುಳಸಿ ಬೇಡ ಎಂದಿದ್ದಕ್ಕೆ ಅವಿ ರಸ್ತೆಯನ್ನು ದಾಟಿಸುತ್ತಾನೆ.

ತುಳಸಿ ಜಯನಗರಕ್ಕೆ ಹೋಗಲು ಆಟೋವನ್ನು ಕೇಳುತ್ತಾಳೆ. ಯಾವ ಆಟೋಗಳೂ ಬರುವುದಿಲ್ಲ. ಆಗ ಅವಿ ಜಯನಗರದಲ್ಲಿ ಎಲ್ಲಿ ಎಂದು ಹೇಳಿ ನಾನೇ ಆಟೋ ಬುಕ್ ಮಾಡುತ್ತೇನೆ ಎಂದು ಕೇಳುತ್ತಾನೆ. ಆಗ ತುಳಸಿ ಮೊದಲಿಗೆ ಬೇಡ ಎಂದು ಹೇಳುತ್ತಾಳೆ. ತಾನು ಮಾಡಿದ ಕೊಬ್ಬರಿ ಮಿಠಾಯಿ ಅನ್ನು ಕೂಡುತ್ತಾಳೆ. ಆಟೋ ಬುಕ್ ಮಾಡಿ ಅವಿ ಕಳಿಸುತ್ತಾನೆ. ಆದರೆ, ತುಳಸಿ ಯಾರೆಂದು ತಿಳಿಯದ ಅವಿ ಆಫೀಸಿನಲ್ಲಿ ವಿಚಾರಿಸಲು ಶುರು ಮಾಡಿದ್ದಾನೆ.
ಕೆಫೆಯಲ್ಲೂ ತುಳಸಿ ರಾಗ
ಈಗ ಮಾಧವ್ ತನ್ನಲ್ಲಿನ ಗೊಂದಲವನ್ನು ಸರಿ ಮಾಡಿಕೊಳ್ಳಲು ಮುಂದಾಗಿದ್ದಾನೆ. ಹಾಗಾಗಿ ಆದಷ್ಟು ತುಳಸಿಯಿಂದ ದೂರ ಉಳಿದಿದ್ದಾನೆ. ಕೆಫೆಗೆ ಬಂದ ಮಾಧವ್ ಬಳಿ ಮ್ಯಾಗಿ ಮೆನು ಬಗ್ಗೆ ಮಾತನಾಡುತ್ತಾ ಪ್ರತಿಯೊಂದರಲ್ಲೂ ತುಳಸಿ ಅವರ ಹೆಸರನ್ನೇ ಹೇಳುತ್ತಾಳೆ. ಇದರಿಂದ ಮಾಧವ್ ತನ್ನ ಟಾಸ್ಕ್ ಅನ್ನು ಕಂಪ್ಲೀಟ್ ಮಾಡಲು ಆಗುತ್ತಿಲ್ಲ. ಮ್ಯಾಗಿ, ತುಳಸಿ ಬಗ್ಗೆ ಹೇಳುತ್ತಿದ್ದಂತೆ ಮಾಧವ್ ಆಲೋಚನೆ ತುಳಸಿಯ ಜೊತೆಗಿನ ಒಡನಾಟಕ್ಕೆ ತಿರುಗುತ್ತದೆ.

ದೇವಸ್ಥಾನದಲ್ಲೂ ತುಳಸಿ ಕಾರುಬಾರು
ಹೀಗಾಗಿ ಮಾಧವ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿದ್ದು, ಕೆಫೆಯಲ್ಲೇ ಬಿಟ್ಟು ದೇವಸ್ಥಾನಕ್ಕೆ ಹೋಗಿ ಧ್ಯಾನ ಮಾಡಲು ಶುರು ಮಾಡುತ್ತಾನೆ. ಮನಸ್ಸನ್ನು ಸ್ವಲ್ಪ ಶಾಂತ ಮಾಡಿಕೊಂಡ ಬಳಿಕ ಮಂಗಳಾರತಿಯನ್ನು ಪಡೆದಾಗ ದೇವಸ್ಥಾನದ ಅರ್ಚಕರು ಕೂಡ ತುಳಸಿಯನ್ನು ನೀಡುತ್ತಾರೆ. ಇದು ಮಾಧವ್‌ನನ್ನು ಇನ್ನಷ್ಟು ಗೊಂದಲಕ್ಕೆ ದೂಡುತ್ತದೆ.
ತುಳಸಿ ಬಗ್ಗೆ ಯೋಚಿಸ ಬಾರದು ಎಂದರೂ ಆಗುತ್ತಿಲ್ಲವಲ್ಲ ಎಂದು ಯೋಚಿಸುತ್ತಿರುತ್ತಾರೆ. ಈಗ ಮಾಧವ್‌ಗೆ ಗೊಂದಲ ಪರಿಹಾರವಾಗುತ್ತಾ ಎಂಬ ಪ್ರಶ್ನೆ ಮೂಡಿದೆ.


Click it and Unblock the Notifications











